Check out the new design

আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী * - অনুবাদসমূহৰ সূচীপত্ৰ


অৰ্থানুবাদ ছুৰা: আল-হাদীদ   আয়াত:
لَقَدْ اَرْسَلْنَا رُسُلَنَا بِالْبَیِّنٰتِ وَاَنْزَلْنَا مَعَهُمُ الْكِتٰبَ وَالْمِیْزَانَ لِیَقُوْمَ النَّاسُ بِالْقِسْطِ ۚ— وَاَنْزَلْنَا الْحَدِیْدَ فِیْهِ بَاْسٌ شَدِیْدٌ وَّمَنَافِعُ لِلنَّاسِ وَلِیَعْلَمَ اللّٰهُ مَنْ یَّنْصُرُهٗ وَرُسُلَهٗ بِالْغَیْبِ ؕ— اِنَّ اللّٰهَ قَوِیٌّ عَزِیْزٌ ۟۠
ನಿಶ್ಚಯವಾಗಿಯು ನಾವು ನಮ್ಮ ಸಂದೇಶವಾಹಕರನ್ನು ಸುಸ್ಪಷ್ಟ ಪುರಾವೆಗಳೊಂದಿಗೆ ಕಳುಹಿಸಿದ್ದೇವೆ ಜನರು ನ್ಯಾಯದೊಂದಿಗೆ ಸ್ಥಿರವಾರಗಿಲೆಂದು ನಾವು ಅವರೊಂದಿಗೆ ಗ್ರಂಥವನ್ನೂ, ತಕ್ಕಡಿಯನ್ನೂ, ಅವತೀರ್ಣಗೊಳಿಸಿದೆವು. ಹಾಗು ನಾವು ಕಬ್ಬಿಣವನ್ನು ಇಳಿಸಿದೆವು, ಅದರಲ್ಲಿ ಪ್ರಬಲವಾದ ಶಕ್ತಿಯಿದೆ ಮತ್ತು ಜನರಿಗೆ ಇನ್ನೂ ಅನೇಕ ಪ್ರಯೋಜನಗಳಿವೆ, ಇದು ಯಾರು ಅಲ್ಲಾಹನನ್ನು ಕಾಣದೇ ಅವನಿಗೆ ಮತ್ತು ಅವನ ಸಂದೇಶವಾಹಕರಿಗೆ ಸಹಾಯ ಮಾಡುತ್ತಾನೆಂದು ತಿಳಿಯಲೆಂದಾಗಿದೆ. ನಿಸ್ಸಂಶಯವಾಗಿಯು ಅಲ್ಲಾಹನು ಸರ್ವಶಕ್ತನೂ ಪ್ರತಾಪಶಾಲಿಯೂ ಆಗಿದ್ದಾನೆ.
আৰবী তাফছীৰসমূহ:
وَلَقَدْ اَرْسَلْنَا نُوْحًا وَّاِبْرٰهِیْمَ وَجَعَلْنَا فِیْ ذُرِّیَّتِهِمَا النُّبُوَّةَ وَالْكِتٰبَ فَمِنْهُمْ مُّهْتَدٍ ۚ— وَكَثِیْرٌ مِّنْهُمْ فٰسِقُوْنَ ۟
ನಿಸ್ಸಂಶಯವಾಗಿಯೂ ನಾವು ನೂಹರನ್ನು ಮತ್ತು ಇಬ್ರಾಹೀಮರನ್ನು ಸಂದೇಶವಾಹಕರಾಗಿ ಕಳುಹಿಸಿದೆವು, ಮತ್ತು ಅವರಿಬ್ಬರ ಸಂತತಿಗಳಲ್ಲಿ ದೌತ್ಯವನ್ನು, ಗ್ರಂಥವನ್ನು ನಿಶ್ಚಯಿಸಿದೆವು. ಅವರ ಪೈಕಿ ಕೆಲವರು ಸನ್ಮಾರ್ಗಿಗಳಾದರೆ ಅವರಲ್ಲಿ ಅಧಿಕ ಮಂದಿ ದುರಾಚಾರಿಗಳಾದರು.
আৰবী তাফছীৰসমূহ:
ثُمَّ قَفَّیْنَا عَلٰۤی اٰثَارِهِمْ بِرُسُلِنَا وَقَفَّیْنَا بِعِیْسَی ابْنِ مَرْیَمَ وَاٰتَیْنٰهُ الْاِنْجِیْلَ ۙ۬— وَجَعَلْنَا فِیْ قُلُوْبِ الَّذِیْنَ اتَّبَعُوْهُ رَاْفَةً وَّرَحْمَةً ؕ— وَرَهْبَانِیَّةَ ١بْتَدَعُوْهَا مَا كَتَبْنٰهَا عَلَیْهِمْ اِلَّا ابْتِغَآءَ رِضْوَانِ اللّٰهِ فَمَا رَعَوْهَا حَقَّ رِعَایَتِهَا ۚ— فَاٰتَیْنَا الَّذِیْنَ اٰمَنُوْا مِنْهُمْ اَجْرَهُمْ ۚ— وَكَثِیْرٌ مِّنْهُمْ فٰسِقُوْنَ ۟
ಅವರ ಬಳಿಕ ನಾವು ಒಬ್ಬರ ನಂತರ ಒಬ್ಬರಂತೆ ನಮ್ಮ ಸಂದೇಶವಾಹಕರನ್ನು ಕಳುಹಿಸಿದೆವು ಹಾಗು ಮರ್ಯಮಳ ಪುತ್ರ ಈಸಾರವರನ್ನೂ ಕಳುಹಿಸಿದೆವು ನಾವು ಅವರಿಗೆ ಇಂಜೀಲ(ಗ್ರAಥ)ನ್ನು ದಯಪಾಲಿಸಿದೆವು ಮತ್ತು ಅವರನ್ನು ಅನುಸರಿಸುವವರ ಹೃದಯಗಳಲ್ಲಿ ಅನುಕಂಪವನ್ನೂ ಕಾರುಣ್ಯವನ್ನುಂಟು ಮಾಡಿದೆವು. ಆದರೆ ಅವರು ಅಲ್ಲಾಹನ ಸಂತೃಪ್ತಿಯನ್ನು ಹಂಬಲಿಸುತ್ತಾ ಸನ್ಯಾಸತ್ವವನ್ನು ಹೊಸದಾಗಿ ಉಂಟು ಮಾಡಿಕೊಂಡರು. ವಸ್ತುತಃ ನಾವು ಅದನ್ನು ಅವರ ಮೇಲೆ ವಿಧಿಸಿರಲಿಲ್ಲ. ಆದರೆ ಅವರದನ್ನು ಪಾಲಿಸಬೇಕಾದ ರೀತಿಯಲ್ಲಿ ಪಾಲಿಸಲಿಲ್ಲ, ಆ ಬಳಿಕವೂ ನಾವು ಅವರ ಪೈಕಿ ವಿಶ್ವಾಸವಿರಿಸಿದವರಿಗೆ ಅವರ ಪ್ರತಿಫಲವನ್ನು ಕರುಣಿಸಿದೆವು ಮತ್ತು ಅವರಲ್ಲಿ ಅಧಿಕ ಮಂದಿ ದುರಾಚಾರಿಗಳಾಗಿರುವರು.
আৰবী তাফছীৰসমূহ:
یٰۤاَیُّهَا الَّذِیْنَ اٰمَنُوا اتَّقُوا اللّٰهَ وَاٰمِنُوْا بِرَسُوْلِهٖ یُؤْتِكُمْ كِفْلَیْنِ مِنْ رَّحْمَتِهٖ وَیَجْعَلْ لَّكُمْ نُوْرًا تَمْشُوْنَ بِهٖ وَیَغْفِرْ لَكُمْ ؕ— وَاللّٰهُ غَفُوْرٌ رَّحِیْمٌ ۟ۙ
ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡಿರಿ. ಅವನು ತನ್ನ ಕಾರುಣ್ಯದಿಂದ ಇಮ್ಮಡಿ ಪಾಲನ್ನು ನಿಮಗೆ ದಯಪಾಲಿಸುವನು. ಮತ್ತು ಪ್ರಕಾಶವನ್ನು ನೀಡುವನು, ಅದರ ಬೆಳಕಿನಲ್ಲಿ ನೀವು ಮುಂದೆ ಸಾಗುವಿರಿ, ಮತ್ತು ನಿಮ್ಮ ಪಾಪವನ್ನೂ ಕ್ಷಮಿಸುವನು, ಅಲ್ಲಾಹನು ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುವನು.
আৰবী তাফছীৰসমূহ:
لِّئَلَّا یَعْلَمَ اَهْلُ الْكِتٰبِ اَلَّا یَقْدِرُوْنَ عَلٰی شَیْءٍ مِّنْ فَضْلِ اللّٰهِ وَاَنَّ الْفَضْلَ بِیَدِ اللّٰهِ یُؤْتِیْهِ مَنْ یَّشَآءُ ؕ— وَاللّٰهُ ذُو الْفَضْلِ الْعَظِیْمِ ۟۠
ಇದು ಗ್ರಂಥದವರು ತಾವು ಅಲ್ಲಾಹನ ಅನುಗ್ರಹದ ಯಾವುದೇ ಪಾಲನ್ನೂ ಸಹ ತಮ್ಮ ಅಧೀನದಲ್ಲಿರಿಸಿಕೊಳ್ಳಲು ತಮಗೆ ಸಾಧ್ಯವಾಗದು ಎಂಬುದನ್ನು ಅರಿತುಕೊಳ್ಳಲೆಂದಾಗಿದೆ, ಮತ್ತು ಸಕಲ ಅನುಗ್ರಹವು ಅಲ್ಲಾಹನ ಕೈಯಲ್ಲಿದೆ ಅವನು ಇಚ್ಚಿಸುವವರಿಗೆ ಅದನ್ನು ನೀಡುವನು ಅಲ್ಲಾಹನು ಮಹಾ ಅನುಗ್ರಹದಾತನಾಗಿರುವನು.
আৰবী তাফছীৰসমূহ:
 
অৰ্থানুবাদ ছুৰা: আল-হাদীদ
ছুৰাৰ তালিকা পৃষ্ঠা নং
 
আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী - অনুবাদসমূহৰ সূচীপত্ৰ

শ্বেইখ বশীৰ মাইছুৰীয়ে অনুবাদ কৰিছে। মৰ্কজ ৰুৱাদুত তাৰ্জামাৰ তত্ত্বাৱধানত ইয়াক উন্নীত কৰা হৈছে।

বন্ধ