Check out the new design

আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী * - অনুবাদসমূহৰ সূচীপত্ৰ


অৰ্থানুবাদ ছুৰা: আত-তাওবাহ   আয়াত:
اِنَّمَا النَّسِیْٓءُ زِیَادَةٌ فِی الْكُفْرِ یُضَلُّ بِهِ الَّذِیْنَ كَفَرُوْا یُحِلُّوْنَهٗ عَامًا وَّیُحَرِّمُوْنَهٗ عَامًا لِّیُوَاطِـُٔوْا عِدَّةَ مَا حَرَّمَ اللّٰهُ فَیُحِلُّوْا مَا حَرَّمَ اللّٰهُ ؕ— زُیِّنَ لَهُمْ سُوْٓءُ اَعْمَالِهِمْ ؕ— وَاللّٰهُ لَا یَهْدِی الْقَوْمَ الْكٰفِرِیْنَ ۟۠
ಆದರಣೀಯ ತಿಂಗಳುಗಳನ್ನು ಹಿಂದೆ ಮುಂದೆ ಮಾಡುವುದು ಸತ್ಯನಿಷೇಧದಲ್ಲಿ ಹೆಚ್ಚಳವಾಗಿದೆ. ತನ್ಮೂಲಕ ಸತ್ಯನಿಷೇಧಿಗಳು ಪಥ ಭ್ರಷ್ಟತೆಗೊಳಿಸಲೆಂದಾಗಿದೆ. ಮತ್ತು ಒಂದು ವರ್ಷ ಒಂದು ಆದರಣಿಯ ತಿಂಗಳನ್ನು ಧರ್ಮಸಮ್ಮತಗೊಳಿಸುತ್ತಾರೆ. ಮತ್ತೊಂದು ವರ್ಷ ಅದನ್ನು ನಿಷಿದ್ಧಗೊಳಿಸುತ್ತಾರೆ. ಅಲ್ಲಾಹನು ಪವಿತ್ರಗೊಳಿಸಿದ ಮಾಸವನ್ನು ಗಣನೆಯಲ್ಲಿ ಸರಿಹೊಂದಿಸಿ ಅನಂತರ ಅವರು ಅಲ್ಲಾಹನು ನಿಷಿದ್ಧಗೊಳಿಸಿದುದನ್ನು ಧರ್ಮ ಸಮ್ಮತಗೊಳಿಸಲೆಂದಾಗಿದೆ. ಅವರ ದುಷ್ಕರ್ಮಗಳನ್ನು ಅವರಿಗೆ ಮನಮೋಹಕಗೊಳಿಸಲಾಗಿದೆ. ಮತ್ತು ಸತ್ಯನಿಷೇಧಿ ಜನತೆಯನ್ನು ಅಲ್ಲಾಹನು ಸನ್ಮಾರ್ಗದಲ್ಲಿ ಮುನ್ನಡೆಸುವುದಿಲ್ಲ.
আৰবী তাফছীৰসমূহ:
یٰۤاَیُّهَا الَّذِیْنَ اٰمَنُوْا مَا لَكُمْ اِذَا قِیْلَ لَكُمُ انْفِرُوْا فِیْ سَبِیْلِ اللّٰهِ اثَّاقَلْتُمْ اِلَی الْاَرْضِ ؕ— اَرَضِیْتُمْ بِالْحَیٰوةِ الدُّنْیَا مِنَ الْاٰخِرَةِ ۚ— فَمَا مَتَاعُ الْحَیٰوةِ الدُّنْیَا فِی الْاٰخِرَةِ اِلَّا قَلِیْلٌ ۟
ಓ ಸತ್ಯವಿಶ್ವಾಸಿಗಳೇ, ನಿಮಗೇನಾಗಿ ಬಿಟ್ಟಿದೆ? ‘ಅಲ್ಲಾಹನ ಮಾರ್ಗದಲ್ಲಿ (ಅನ್ಯಾಯ ವಿರುದ್ಧ) ಹೋರಡಿರಿ' ಎಂದು ನಿಮ್ಮೊಂದಿಗೆ ಹೇಳಲಾದರೆ ನೀವು ಭೂಮಿಗೆ ಅಂಟಿಕೊಳ್ಳುತ್ತೀರಿ! ಪರಲೋಕದ ಬದಲಿಗೆ ಐಹಿಕ ಜೀವನವನ್ನು ನೆಚ್ಚಿಕೊಂಡಿದ್ದೀರಾ? ತಿಳಿಯಿರಿ! ಐಹಿಕ ಜೀವನವು ಪರಲೋಕದ ಮುಂದೆ ಅತಿತುಚ್ಛವಾಗಿದೆ.
আৰবী তাফছীৰসমূহ:
اِلَّا تَنْفِرُوْا یُعَذِّبْكُمْ عَذَابًا اَلِیْمًا ۙ۬— وَّیَسْتَبْدِلْ قَوْمًا غَیْرَكُمْ وَلَا تَضُرُّوْهُ شَیْـًٔا ؕ— وَاللّٰهُ عَلٰی كُلِّ شَیْءٍ قَدِیْرٌ ۟
ನೀವು (ಅತ್ಯಾಚಾರದ ವಿರುದ್ಧ) ಹೋರಾಡದಿದ್ದರೆ ಅಲ್ಲಾಹನು ನಿಮಗೆ ವೇದನಾಜನಕ ಶಿಕ್ಷೆಯನ್ನು ನೀಡುವನು ಮತ್ತು ನಿಮ್ಮ ಹೊರತಾದ ಬೇರೆ ಜನಾಂಗವನ್ನು ನಿಮ್ಮ ಬದಲಿಗೆ ತರುವನು (ಅವರು ಆಜ್ಞಾನುಸರಣಿಗಳಾಗಿರುವರು). ನೀವು ಅಲ್ಲಾಹನಿಗೆ ಯಾವುದೇ ನಷ್ಟವನ್ನುಂಟು ಮಾಡಲಾರಿರಿ. ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
আৰবী তাফছীৰসমূহ:
اِلَّا تَنْصُرُوْهُ فَقَدْ نَصَرَهُ اللّٰهُ اِذْ اَخْرَجَهُ الَّذِیْنَ كَفَرُوْا ثَانِیَ اثْنَیْنِ اِذْ هُمَا فِی الْغَارِ اِذْ یَقُوْلُ لِصَاحِبِهٖ لَا تَحْزَنْ اِنَّ اللّٰهَ مَعَنَا ۚ— فَاَنْزَلَ اللّٰهُ سَكِیْنَتَهٗ عَلَیْهِ وَاَیَّدَهٗ بِجُنُوْدٍ لَّمْ تَرَوْهَا وَجَعَلَ كَلِمَةَ الَّذِیْنَ كَفَرُوا السُّفْلٰی ؕ— وَكَلِمَةُ اللّٰهِ هِیَ الْعُلْیَا ؕ— وَاللّٰهُ عَزِیْزٌ حَكِیْمٌ ۟
ನೀವು ಪೈಗಂಬರರಿಗೆ ಸಹಾಯ ಮಾಡದಿದ್ದರೆ ತಿಳಿದುಕೊಳ್ಳಿರಿ: ಅಲ್ಲಾಹನು ಅವರಿಗೆ ಸತ್ಯನಿಷೇಧಿಗಳು ಅವರನ್ನು (ಮಕ್ಕಾದಿಂದ) ಗಡಿಪಾರು ಮಾಡಿದ ಸಂದರ್ಭದಲ್ಲಿ ಸಹಾಯ ಮಾಡಿದ್ದನು, ಅವರು (ವಲಸೆ ಹೋಗುವ) ಆ ಇಬ್ಬರಲ್ಲಿ ಒಬ್ಬರಾಗಿದ್ದರು ಅವರಿಬ್ಬರೂ (ಮುಹಮ್ಮದ್ ಮತ್ತು ಅಬೂಬಕ್ಕರ್) ಗುಹೆಯಲ್ಲಿದ್ದ ಸಂದರ್ಭದಲ್ಲಿ ಅವರು ತನ್ನ ಸಂಗಡಿಗರೊAದಿಗೆ (ಅಬೂಬಕ್ಕರ್‌ರವರಿಗೆ) 'ವ್ಯಥೆಪಡಬೇಡ, ಖಂಡಿತ ಅಲ್ಲಾಹನು ನಮ್ಮ ಜೊತೆಗಿದ್ದಾನೆ' ಎಂದು ಹೇಳಿದರು. ಹೀಗೆ ಅಲ್ಲಾಹನು ಅವರ ಮೇಲೆ ತನ್ನ ಕಡೆಯಿಂದ ಶಾಂತಿಯನ್ನು ಇಳಿಸಿದನು. ನೀವು ಕಾಣದಂತಹ (ಮಲಕ್‌ಗಳ) ಸೈನ್ಯಗಳೊಂದಿಗೆ ಅವರ ಸಹಾಯ ಮಾಡಿದನು. ಸತ್ಯನಿಷೇಧಿಗಳ ಮಾತನ್ನು ನಿಂದ್ಯಗೊಳಿಸಿದನು ಮತ್ತು ಅಲ್ಲಾಹನ ವಚನವೇ ಅತ್ಯುನ್ನತವೂ, ಪ್ರಬಲವೂ ಅಗಿದೆ. ಅಲ್ಲಾಹನು ಪ್ರತಾಪಶಾಲಿಯೂ, ಯುಕ್ತಿವಂತನೂ ಆಗಿದ್ದಾನೆ.
আৰবী তাফছীৰসমূহ:
 
অৰ্থানুবাদ ছুৰা: আত-তাওবাহ
ছুৰাৰ তালিকা পৃষ্ঠা নং
 
আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী - অনুবাদসমূহৰ সূচীপত্ৰ

শ্বেইখ বশীৰ মাইছুৰীয়ে অনুবাদ কৰিছে। মৰ্কজ ৰুৱাদুত তাৰ্জামাৰ তত্ত্বাৱধানত ইয়াক উন্নীত কৰা হৈছে।

বন্ধ