Check out the new design

আল-কোৰআনুল কাৰীমৰ অৰ্থানুবাদ - কানাড়া অনুবাদ- হামঝাহ বাতৌৰ * - অনুবাদসমূহৰ সূচীপত্ৰ

PDF XML CSV Excel API
Please review the Terms and Policies

অৰ্থানুবাদ ছুৰা: চ'দ   আয়াত:
وَمَا خَلَقْنَا السَّمَآءَ وَالْاَرْضَ وَمَا بَیْنَهُمَا بَاطِلًا ؕ— ذٰلِكَ ظَنُّ الَّذِیْنَ كَفَرُوْا ۚ— فَوَیْلٌ لِّلَّذِیْنَ كَفَرُوْا مِنَ النَّارِ ۟ؕ
ನಾವು ಆಕಾಶ, ಭೂಮಿ ಮತ್ತು ಅವುಗಳ ನಡುವೆಯಿರುವ ವಸ್ತುಗಳನ್ನು ವ್ಯರ್ಥವಾಗಿ ಸೃಷ್ಟಿಸಿಲ್ಲ. ಅದು ಸತ್ಯನಿಷೇಧಿಗಳ ಊಹೆಯಾಗಿದೆ. ಸತ್ಯನಿಷೇಧಿಗಳಿಗೆ ನರಕ ಶಿಕ್ಷೆಯ ವಿನಾಶ ಕಾದಿದೆ.
আৰবী তাফছীৰসমূহ:
اَمْ نَجْعَلُ الَّذِیْنَ اٰمَنُوْا وَعَمِلُوا الصّٰلِحٰتِ كَالْمُفْسِدِیْنَ فِی الْاَرْضِ ؗ— اَمْ نَجْعَلُ الْمُتَّقِیْنَ كَالْفُجَّارِ ۟
ನಾವು ಸತ್ಯವಿಶ್ವಾಸಿಗಳನ್ನು ಮತ್ತು ಸತ್ಕರ್ಮವೆಸಗಿದವರನ್ನು ಭೂಮಿಯಲ್ಲಿ ನಿರಂತರ ಕಿಡಿಗೇಡಿತನ ಹರಡುವವರಂತೆ ಮಾಡುವೆವೇ? ಅಥವಾ ನಾವು ದೇವಭಯವುಳ್ಳವರನ್ನು ದುಷ್ಕರ್ಮಿಗಳಂತೆ ಮಾಡುವೆವೇ?
আৰবী তাফছীৰসমূহ:
كِتٰبٌ اَنْزَلْنٰهُ اِلَیْكَ مُبٰرَكٌ لِّیَدَّبَّرُوْۤا اٰیٰتِهٖ وَلِیَتَذَكَّرَ اُولُوا الْاَلْبَابِ ۟
ಇದು ನಾವು ನಿಮಗೆ ಅವತೀರ್ಣಗೊಳಿಸಿದ ಸಮೃದ್ಧಪೂರ್ಣ ಗ್ರಂಥವಾಗಿದೆ. ಇದರಲ್ಲಿರುವ ವಚನಗಳ ಬಗ್ಗೆ ಅವರು ಆಲೋಚಿಸುವುದಕ್ಕಾಗಿ ಮತ್ತು ಬುದ್ಧಿವಂತರು ಉಪದೇಶ ಪಡೆಯುವುದಕ್ಕಾಗಿ.
আৰবী তাফছীৰসমূহ:
وَوَهَبْنَا لِدَاوٗدَ سُلَیْمٰنَ ؕ— نِعْمَ الْعَبْدُ ؕ— اِنَّهٗۤ اَوَّابٌ ۟ؕ
ನಾವು ದಾವೂದರಿಗೆ ಸುಲೈಮಾನರನ್ನು ದಯಪಾಲಿಸಿದೆವು. ಅತ್ಯುತ್ತಮ ದಾಸ! ಅವರು ಅತ್ಯಧಿಕ ಪಶ್ಚಾತ್ತಾಪಪಡುವವರಾಗಿದ್ದರು.
আৰবী তাফছীৰসমূহ:
اِذْ عُرِضَ عَلَیْهِ بِالْعَشِیِّ الصّٰفِنٰتُ الْجِیَادُ ۟ۙ
ಸಂಜೆ ಅವರ ಮುಂದೆ ವೇಗವಾಗಿ ಓಡುವ ವಿಶಿಷ್ಟ ಕುದುರೆಗಳನ್ನು ಹಾಜರುಪಡಿಸಿದ ಸಂದರ್ಭ!
আৰবী তাফছীৰসমূহ:
فَقَالَ اِنِّیْۤ اَحْبَبْتُ حُبَّ الْخَیْرِ عَنْ ذِكْرِ رَبِّیْ ۚ— حَتّٰی تَوَارَتْ بِالْحِجَابِ ۟۫
ಅವರು ಹೇಳಿದರು: “ನಾನು ನನ್ನ ಪರಿಪಾಲಕನ (ಅಲ್ಲಾಹನ) ಸ್ಮರಣೆಗಿಂತಲೂ ಈ ಕುದುರೆಗಳಿಗೆ ಪ್ರಾಶಸ್ತ್ಯ ನೀಡಿದೆನು; ಎಲ್ಲಿಯವರೆಗೆಂದರೆ ಸೂರ್ಯ ಮುಳುಗುವ ತನಕ.”
আৰবী তাফছীৰসমূহ:
رُدُّوْهَا عَلَیَّ ؕ— فَطَفِقَ مَسْحًا بِالسُّوْقِ وَالْاَعْنَاقِ ۟
(ಅವರು ಹೇಳಿದರು): “ಅವುಗಳನ್ನು ನನ್ನ ಬಳಿಗೆ ಮರಳಿ ತನ್ನಿ.” ನಂತರ ಅವರು (ಅವುಗಳ) ಕಣಕಾಲು ಮತ್ತು ಕತ್ತುಗಳನ್ನು ಸವರಲು ಆರಂಭಿಸಿದರು.
আৰবী তাফছীৰসমূহ:
وَلَقَدْ فَتَنَّا سُلَیْمٰنَ وَاَلْقَیْنَا عَلٰی كُرْسِیِّهٖ جَسَدًا ثُمَّ اَنَابَ ۟
ನಾವು ಸುಲೈಮಾನರನ್ನು ಪರೀಕ್ಷಿಸಿದೆವು. ನಾವು ಅವರ ಸಿಂಹಾಸನದ ಮೇಲೆ ಒಂದು ದೇಹವನ್ನು ಹಾಕಿದೆವು. ನಂತರ ಅವರು ವಿನಮ್ರತೆಯಿಂದ ಮರಳಿದರು.
আৰবী তাফছীৰসমূহ:
قَالَ رَبِّ اغْفِرْ لِیْ وَهَبْ لِیْ مُلْكًا لَّا یَنْۢبَغِیْ لِاَحَدٍ مِّنْ بَعْدِیْ ۚ— اِنَّكَ اَنْتَ الْوَهَّابُ ۟
ಅವರು ಹೇಳಿದರು: “ನನ್ನ ಪರಿಪಾಲಕನೇ! ನನ್ನನ್ನು ಕ್ಷಮಿಸು. ನನ್ನ ಬಳಿಕ ಯಾರಿಗೂ ಹೊಂದಿಕೆಯಾಗದಂತಹ ಒಂದು ಸಾಮ್ರಾಜ್ಯವನ್ನು ನನಗೆ ಕರುಣಿಸು. ನಿಶ್ಚಯವಾಗಿಯೂ ನೀನು ಅತ್ಯಧಿಕ ಉದಾರಿಯಾಗಿರುವೆ.”
আৰবী তাফছীৰসমূহ:
فَسَخَّرْنَا لَهُ الرِّیْحَ تَجْرِیْ بِاَمْرِهٖ رُخَآءً حَیْثُ اَصَابَ ۟ۙ
ನಾವು ಅವರಿಗೆ ಗಾಳಿಯನ್ನು ಅಧೀನಗೊಳಿಸಿದೆವು. ಅದು ಅವರ ಆಜ್ಞೆಯಂತೆ ಅವರು ಬಯಸಿದ ಕಡೆಗೆ ಅವರನ್ನು ಮೃದುವಾಗಿ ಒಯ್ಯುತ್ತಿತ್ತು.
আৰবী তাফছীৰসমূহ:
وَالشَّیٰطِیْنَ كُلَّ بَنَّآءٍ وَّغَوَّاصٍ ۟ۙ
ಕಟ್ಟಡ ನಿರ್ಮಾಣಗಾರು ಮತ್ತು ಮುಳುಗುಗಾರರಾದ ಎಲ್ಲಾ ಶೈತಾನರನ್ನು (ನಾನು ಅವರಿಗೆ ಅಧೀನಗೊಳಿಸಿದೆವು).
আৰবী তাফছীৰসমূহ:
وَّاٰخَرِیْنَ مُقَرَّنِیْنَ فِی الْاَصْفَادِ ۟
ಸಂಕೋಲೆಗಳಲ್ಲಿ ಬಂಧಿಸಲಾದ ಇತರ ಕೆಲವು (ಶೈತಾನರನ್ನೂ ಅಧೀನಗೊಳಿಸಿದೆವು).
আৰবী তাফছীৰসমূহ:
هٰذَا عَطَآؤُنَا فَامْنُنْ اَوْ اَمْسِكْ بِغَیْرِ حِسَابٍ ۟
“ಇದು ನಮ್ಮ ಉಡುಗೊರೆಯಾಗಿದೆ. ನೀವು ಉಪಕಾರ ಮಾಡಿರಿ ಅಥವಾ ತಡೆದುಕೊಳ್ಳಿರಿ. ಯಾವುದೇ ಲೆಕ್ಕ ನೀಡಬೇಕಾಗಿಲ್ಲ.”[1]
[1] ಈ ಮಹಾ ಸಾಮ್ರಾಜ್ಯವು ನಮ್ಮ ಉಡುಗೊರೆಯಾಗಿದೆ. ನೀವು ಬಯಸುವವರಿಗೆ ಇದನ್ನು ನೀಡಬಹುದು. ನೀವು ಬಯಸದವರಿಗೆ ನೀಡದೇ ಇರಬಹುದು. ಈ ಬಗ್ಗೆ ನಾವು ನಿಮ್ಮೊಡನೆ ಯಾವುದೇ ಲೆಕ್ಕ ಕೇಳುವುದಿಲ್ಲ.
আৰবী তাফছীৰসমূহ:
وَاِنَّ لَهٗ عِنْدَنَا لَزُلْفٰی وَحُسْنَ مَاٰبٍ ۟۠
ನಿಶ್ಚಯವಾಗಿಯೂ ಅವರಿಗೆ ನಮ್ಮ ಬಳಿ ಸಾಮೀಪ್ಯವಿದೆ ಮತ್ತು ಅತ್ಯುತ್ತಮವಾದ ಠಿಕಾಣಿಯಿದೆ.
আৰবী তাফছীৰসমূহ:
وَاذْكُرْ عَبْدَنَاۤ اَیُّوْبَ ۘ— اِذْ نَادٰی رَبَّهٗۤ اَنِّیْ مَسَّنِیَ الشَّیْطٰنُ بِنُصْبٍ وَّعَذَابٍ ۟ؕ
ನಮ್ಮ ದಾಸರಾದ ಅಯ್ಯೂಬರನ್ನು ಸ್ಮರಿಸಿರಿ. ಅವರು ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿದ ಸಂದರ್ಭ: “ಶೈತಾನನು ನನಗೆ ಬಳಲಿಕೆ ಮತ್ತು ದುಃಖವುಂಟಾಗುವಂತೆ ಮಾಡಿದ್ದಾನೆ.”
আৰবী তাফছীৰসমূহ:
اُرْكُضْ بِرِجْلِكَ ۚ— هٰذَا مُغْتَسَلٌۢ بَارِدٌ وَّشَرَابٌ ۟
(ನಾವು ಹೇಳಿದೆವು): “ನಿಮ್ಮ ಕಾಲಿನಿಂದ (ನೆಲಕ್ಕೆ) ಬಡಿಯಿರಿ. ಇದು ತಂಪಾದ ಸ್ನಾನದ ನೀರು ಮತ್ತು ಕುಡಿಯುವ ನೀರಾಗಿದೆ.”[1]
[1] ಅಯ್ಯೂಬ್ (ಅವರ ಮೇಲೆ ಶಾಂತಿಯಿರಲಿ) ಕಾಲನ್ನು ನೆಲಕ್ಕೆ ಬಡಿದಾಗ, ಅಲ್ಲಿ ಒಂದು ಚಿಲುಮೆ ಚಿಮ್ಮಿ ಹರಿಯಿತು. ಅವರು ಅದರ ನೀರನ್ನು ಕುಡಿದಾಗ ಅವರ ಆಂತರಿಕ ರೋಗಗಳು ಗುಣವಾದವು ಮತ್ತು ಅದರಲ್ಲಿ ಸ್ನಾನ ಮಾಡಿದಾಗ ಹೊರಗಿನ ರೋಗಗಳು ಗುಣವಾದವು.
আৰবী তাফছীৰসমূহ:
 
অৰ্থানুবাদ ছুৰা: চ'দ
ছুৰাৰ তালিকা পৃষ্ঠা নং
 
আল-কোৰআনুল কাৰীমৰ অৰ্থানুবাদ - কানাড়া অনুবাদ- হামঝাহ বাতৌৰ - অনুবাদসমূহৰ সূচীপত্ৰ

মহম্মদ হামজাৰ দ্বাৰা অনুবাদ কৰা হৈছে। মৰ্কজ ৰুৱাদুত তাৰ্জামাৰ তত্ত্বাৱধানত ইয়াক উন্নীত কৰা হৈছে।

বন্ধ