Check out the new design

Translation of the Meanings of the Noble Qur'an - Kannada language - Sh. Bashir Misuri * - Translations’ Index


Translation of the meanings Surah: As-Sāffāt   Ayah:
فَلَمَّاۤ اَسْلَمَا وَتَلَّهٗ لِلْجَبِیْنِ ۟ۚ
ಕೊನೆಗೆ ಅವರಿಬ್ಬರೂ ವಿಧೇಯರಾದಾಗ (ತಂದೆಯು) ( ಮಗನನ್ನು) ಅಧೋಮುಖಿಯಾಗಿ ಮಲಗಿಸಿದರು..
Arabic explanations of the Qur’an:
وَنَادَیْنٰهُ اَنْ یّٰۤاِبْرٰهِیْمُ ۟ۙ
ಆಗ ನಾವು ಕೂಗಿ ಕರೆದೆವು: ಓ ಇಬ್ರಾಹೀಮ್
Arabic explanations of the Qur’an:
قَدْ صَدَّقْتَ الرُّءْیَا ۚ— اِنَّا كَذٰلِكَ نَجْزِی الْمُحْسِنِیْنَ ۟
ನಿಶ್ಚಯವಾಗಿಯೂ ನೀವು ನಿನ್ನ ಕನಸನ್ನು ನಿಜ ಮಾಡಿ ತೋರಿಸಿರುವಿರಿ. ನಿಸ್ಸಂಶಯವಾಗಿಯು ನಾವು ಪುಣ್ಯ ಕಾರ್ಯವೆಸಗುವವರಿಗೆ ಹೀಗೆಯೇ ಪ್ರತಿಫಲ ನೀಡುತ್ತೇವೆ.
Arabic explanations of the Qur’an:
اِنَّ هٰذَا لَهُوَ الْبَلٰٓؤُا الْمُبِیْنُ ۟
ವಾಸ್ತವದಲ್ಲಿ ಇದೊಂದು ಸುಸ್ಪಷ್ಟ ಪರೀಕ್ಷೆಯಾಗಿತ್ತು.
Arabic explanations of the Qur’an:
وَفَدَیْنٰهُ بِذِبْحٍ عَظِیْمٍ ۟
ಮತ್ತು ನಾವು ಅವರ ಪ್ರಾಯಶ್ಚಿತ್ತವಾಗಿ ಮೃಗವೊಂದನ್ನು ಬಲಿ ನೀಡಿದೆವು.
Arabic explanations of the Qur’an:
وَتَرَكْنَا عَلَیْهِ فِی الْاٰخِرِیْنَ ۟ؗ
ಮತ್ತು ನಾವು ಅವರ ಸತ್ಕೀರ್ತಿಯನ್ನು ನಂತರದ ತಲೆಮಾರುಗಳಲ್ಲಿ ಉಳಿಸಿಬಿಟ್ಟೆವು.
Arabic explanations of the Qur’an:
سَلٰمٌ عَلٰۤی اِبْرٰهِیْمَ ۟
ಇಬ್ರಾಹೀಮರ ಮೇಲೆ ಶಾಂತಿ ಇರಲಿ.
Arabic explanations of the Qur’an:
كَذٰلِكَ نَجْزِی الْمُحْسِنِیْنَ ۟
ನಾವು ಪುಣ್ಯ ಕಾರ್ಯವೆಸಗುವವರಿಗೆ ಹೀಗೆಯೇ ಪ್ರತಿಫಲ ನೀಡುತ್ತೇವೆ.
Arabic explanations of the Qur’an:
اِنَّهٗ مِنْ عِبَادِنَا الْمُؤْمِنِیْنَ ۟
ನಿಸ್ಸಂಶಯವಾಗಿಯು ಅವರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಾಗಿದ್ದರು.
Arabic explanations of the Qur’an:
وَبَشَّرْنٰهُ بِاِسْحٰقَ نَبِیًّا مِّنَ الصّٰلِحِیْنَ ۟
ಮತ್ತು ನಾವು ಅವರಿಗೆ ಸಜ್ಜನರ ಪÉÊಕಿ ಪ್ರವಾದಿಯಾಗಿ ಬರಲಿರುವ ಇಸ್‌ಹಾಕರ ಸುವಾರ್ತೆಯನ್ನು ನೀಡಿದೆವು.
Arabic explanations of the Qur’an:
وَبٰرَكْنَا عَلَیْهِ وَعَلٰۤی اِسْحٰقَ ؕ— وَمِنْ ذُرِّیَّتِهِمَا مُحْسِنٌ وَّظَالِمٌ لِّنَفْسِهٖ مُبِیْنٌ ۟۠
ಮತ್ತು ನಾವು ಇಬ್ರಾಹೀಮ್ ಮತ್ತು ಇಸ್‌ಹಾಕರ ಮೇಲೆ ಸಮೃದ್ಧಿಯನ್ನು ದಯಪಾಲಿಸಿದೆವು ಮತ್ತು ಅವರಿಬ್ಬರ ಸಂತಾನಗಳಲ್ಲಿ ಕೆಲವರು ಒಳಿತಿನ ಪಾಲಕರಾಗಿದ್ದಾರೆ ಮತ್ತು ಕೆಲವರು ತಮ್ಮ ಮೇಲೆಯೇ ಸ್ಪಷ್ಟ ಅಕ್ರಮವೆಸಗುವವರಿದ್ದಾರೆ.
Arabic explanations of the Qur’an:
وَلَقَدْ مَنَنَّا عَلٰی مُوْسٰی وَهٰرُوْنَ ۟ۚ
ಮತ್ತು ನಿಜವಾಗಿಯೂ ನಾವು ಮೂಸಾ ಮತ್ತು ಹಾರೂನ್‌ರವರ ಮೇಲೆ ಮಹಾ ಉಪಕಾರವನ್ನು ಮಾಡಿದೆವು.
Arabic explanations of the Qur’an:
وَنَجَّیْنٰهُمَا وَقَوْمَهُمَا مِنَ الْكَرْبِ الْعَظِیْمِ ۟ۚ
ಮತ್ತು ನಾವು ಅವರನ್ನು ಮತ್ತು ಅವರ ಜನತೆಯನ್ನು ಮಹಾ ವಿಪತ್ತಿನಿಂದ ರಕ್ಷಿಸಿದೆವು.
Arabic explanations of the Qur’an:
وَنَصَرْنٰهُمْ فَكَانُوْا هُمُ الْغٰلِبِیْنَ ۟ۚ
ಮತ್ತು ನಾವು ಅವರಿಗೆ ಸಹಾಯ ಮಾಡಿದಾಗ ಅವರೇ ಮೇಲುಗÉÊ ಸಾಧಿಸಿದರು.
Arabic explanations of the Qur’an:
وَاٰتَیْنٰهُمَا الْكِتٰبَ الْمُسْتَبِیْنَ ۟ۚ
ಮತ್ತÄ ನಾವು ಅವರಿಬ್ಬರಿಗೆ ಸುವ್ಯಕ್ತಗ್ರಂಥವನ್ನು ದಯಪಾಲಿಸಿದೆವು.
Arabic explanations of the Qur’an:
وَهَدَیْنٰهُمَا الصِّرَاطَ الْمُسْتَقِیْمَ ۟ۚ
ಮತ್ತು ಅವರಿಬ್ಬರನ್ನು ಋಜುವಾದ ಮಾರ್ಗದಲ್ಲಿ ಮುನ್ನಡೆಸಿದೆವು.
Arabic explanations of the Qur’an:
وَتَرَكْنَا عَلَیْهِمَا فِی الْاٰخِرِیْنَ ۟ۙۖ
ಮತ್ತು ನಾವು ನಂತರದ ತಲೆಮಾರುಗಳಲ್ಲಿ ಅವರ ಕೀರ್ತಿಯನ್ನು ಉಳಿಸಿದೆವು.
Arabic explanations of the Qur’an:
سَلٰمٌ عَلٰی مُوْسٰی وَهٰرُوْنَ ۟
ಮೂಸಾ ಮತ್ತು ಹಾರೂನರ ಮೇಲೆ ಶಾಂತಿಯಿರಲಿ
Arabic explanations of the Qur’an:
اِنَّا كَذٰلِكَ نَجْزِی الْمُحْسِنِیْنَ ۟
ನಿಸ್ಸಂದೇಹವಾಗಿಯೂ ನಾವು ಒಳಿತಿನ ಪಾಲಕರಿಗೆ ಹೀಗೆಯೇ ಪ್ರತಿಫಲ ನೀಡುತ್ತೇವೆ.
Arabic explanations of the Qur’an:
اِنَّهُمَا مِنْ عِبَادِنَا الْمُؤْمِنِیْنَ ۟
ನಿಜವಾಗಿಯು ಅವರಿಬ್ಬರೂ ನಮ್ಮ ಸಜ್ಜನದಾಸರಲ್ಲಾಗಿದ್ದರು.
Arabic explanations of the Qur’an:
وَاِنَّ اِلْیَاسَ لَمِنَ الْمُرْسَلِیْنَ ۟ؕ
ನಿಸ್ಸಂಶಯವಾಗಿಯೂ ಇಲ್ಯಾಸ್‌ರವರು ಸಂದೇಶವಾಹಕ ರಲ್ಲಾಗಿದ್ದರು.
Arabic explanations of the Qur’an:
اِذْ قَالَ لِقَوْمِهٖۤ اَلَا تَتَّقُوْنَ ۟
ಅವರು ತನ್ನ ಜನಾಂಗಕ್ಕೆ ಹೇಳಿದ ಸಂದರ್ಭ : ನೀವು ಅಲ್ಲಾಹನ್ನು ಭಯಪಡುವುದಿಲ್ಲವೇ ?
Arabic explanations of the Qur’an:
اَتَدْعُوْنَ بَعْلًا وَّتَذَرُوْنَ اَحْسَنَ الْخَالِقِیْنَ ۟ۙ
125&126
Arabic explanations of the Qur’an:
اللّٰهَ رَبَّكُمْ وَرَبَّ اٰبَآىِٕكُمُ الْاَوَّلِیْنَ ۟
ನೀವು ಬಾಲ್(ವಿಗ್ರಹ)ನನ್ನು ಪೂಜಿಸುತ್ತಾ ತಮ್ಮ ಅತ್ಯುತ್ತಮ ಸೃಷ್ಟಿಕರ್ತನನ್ನು, ನಿಮ್ಮ ಪ್ರಭುವಾದ ಮತ್ತು ನಿಮ್ಮ ಪೂರ್ವಿಕರ ಪ್ರಭುವಾದ ಅಲ್ಲಾಹನ್ನು ಬಿಟ್ಟಿಬಿಡುತ್ತೀರಾ?
Arabic explanations of the Qur’an:
 
Translation of the meanings Surah: As-Sāffāt
Surahs’ Index Page Number
 
Translation of the Meanings of the Noble Qur'an - Kannada language - Sh. Bashir Misuri - Translations’ Index

Translated by Sh. Bashir Misuri and developed under the supervision of Rowwad Translation Center

close