Check out the new design

Translation of the Meanings of the Noble Qur'an - Kannada language - Sh. Bashir Misuri * - Translations’ Index


Translation of the meanings Surah: Al-A‘rāf   Ayah:
وَقَطَّعْنٰهُمُ اثْنَتَیْ عَشْرَةَ اَسْبَاطًا اُمَمًا ؕ— وَاَوْحَیْنَاۤ اِلٰی مُوْسٰۤی اِذِ اسْتَسْقٰىهُ قَوْمُهٗۤ اَنِ اضْرِبْ بِّعَصَاكَ الْحَجَرَ ۚ— فَانْۢبَجَسَتْ مِنْهُ اثْنَتَا عَشْرَةَ عَیْنًا ؕ— قَدْ عَلِمَ كُلُّ اُنَاسٍ مَّشْرَبَهُمْ ؕ— وَظَلَّلْنَا عَلَیْهِمُ الْغَمَامَ وَاَنْزَلْنَا عَلَیْهِمُ الْمَنَّ وَالسَّلْوٰی ؕ— كُلُوْا مِنْ طَیِّبٰتِ مَا رَزَقْنٰكُمْ ؕ— وَمَا ظَلَمُوْنَا وَلٰكِنْ كَانُوْۤا اَنْفُسَهُمْ یَظْلِمُوْنَ ۟
ಮತ್ತು ನಾವು ಅವರನ್ನು ಹನ್ನೆರಡು ಗೋತ್ರಗಳಲ್ಲಿ ವಿಂಗಡಿಸಿ ಪ್ರತ್ಯೇಕ ಪಂಗಡಗಳನ್ನಾಗಿ ಮಾಡಿದೆವು. ಮೂಸಾರವರೊಂದಿಗೆ ಅವನ ಜನತೆಯು ನೀರನ್ನು ಕೇಳಿದಾಗ ನಾವು ಅವರಿಗೆ ಆದೇಶ ನೀಡಿದೆವು ತನ್ನ ಬೆತ್ತದಿಂದ ಆ ಬಂಡೆಯ ಮೇಲೆ ಹೊಡಯಿರೆಂದು, ಆಗ ಅದರಿಂದ ಹನ್ನೆರಡು ಚಿಲುಮೆಗಳು ಹೊರಬಂದವು. ಪ್ರತಿಯೊಂದು ಪಂಗಡವು ತಮ್ಮ ಕುಡಿಯುವ ಘಟಕವನ್ನು ಅರಿತುಕೊಂಡಿತು ಮತ್ತು ನಾವು ಅವರ ಮೇಲೆ ಮೋಡದ ನೆರಳನ್ನು ನೀಡಿದೆವು ಮತ್ತು ಅವರಿಗೆ ಮನ್ನಃ(ಸಿಹಿಪದಾರ್ಥ) ಹಾಗೂ ಲಾವಕ್ಕಿಗಳನ್ನು ಇಳಿಸಿಕೊಟ್ಟೆವು ಮತ್ತು ನಾವು ನಿಮಗೆ ನೀಡಿರುವ ಶುದ್ಧ ವಸ್ತುಗಳನ್ನು ತಿನ್ನಿರಿ ಎಂದೆವು ಮತ್ತು ಅವರು ನಮ್ಮ ಮೇಲೆ ಅಕ್ರಮವೇನೂ ಎಸಗಲಿಲ್ಲ. ಅವರು ಸ್ವತಃ ತಮ್ಮ ಮೇಲೆಯೇ ಅಕ್ರ‍್ರಮವೆಸಗುತ್ತಿದ್ದರು.
Arabic explanations of the Qur’an:
وَاِذْ قِیْلَ لَهُمُ اسْكُنُوْا هٰذِهِ الْقَرْیَةَ وَكُلُوْا مِنْهَا حَیْثُ شِئْتُمْ وَقُوْلُوْا حِطَّةٌ وَّادْخُلُوا الْبَابَ سُجَّدًا نَّغْفِرْ لَكُمْ خَطِیْٓـٰٔتِكُمْ ؕ— سَنَزِیْدُ الْمُحْسِنِیْنَ ۟
ಅವರು ಈ ಆಹಾರದಿಂದ ಸಂತೃಪ್ತರಾಗಿರಲಿಲ್ಲ ನೀವು ಆ ಪಟ್ಟಣದಲ್ಲಿ ನೆಲೆಸಿರಿ ಮತ್ತು ನೀವಿಚ್ಛಿಸುವಲ್ಲಿಂದ ಯಥೇಷ್ಟವಾಗಿ ತಿನ್ನಿರಿ ಮತ್ತು ಪಶ್ಚಾತ್ತಾಪದಿಂದ ಮರಳಿರುವೆವು ಎನ್ನುತ್ತಾ ಹೋಗಿರಿ ಹಾಗೂ ತಲೆಬಾಗಿದವರಾಗಿ ದ್ವಾರವನ್ನು ಪ್ರವೇಶಿಸಿರಿ. ನಾವು ನಿಮ್ಮ ಪಾಪಗಳನ್ನು ಕ್ಷಮಿಸುವೆವು. ಸತ್ಕರ್ಮಗಳನ್ನು ಮಾಡುವವರಿಗೆ ಇನ್ನಷ್ಟು ಅಧಿಕ ನೀಡುವೆವು ಎಂದು ನಾವು ಅವರಿಗೆ ಆದೇಶ ನೀಡಲಾದ ಸಂದರ್ಭವನ್ನು ಸ್ಮರಿಸಿರಿ.
Arabic explanations of the Qur’an:
فَبَدَّلَ الَّذِیْنَ ظَلَمُوْا مِنْهُمْ قَوْلًا غَیْرَ الَّذِیْ قِیْلَ لَهُمْ فَاَرْسَلْنَا عَلَیْهِمْ رِجْزًا مِّنَ السَّمَآءِ بِمَا كَانُوْا یَظْلِمُوْنَ ۟۠
ಆದರೆ ಆ ಅಕ್ರಮಿಗಳು ತಮಗೆ ಹೇಳಲಾದ ಮಾತಿನ ಬದಲಿಗೆ ಬೇರೆ ಮಾತನ್ನು ಹೇಳಿಬಿಟ್ಟರು. ಅವರ ಅಕ್ರಮದ ಫಲವಾಗಿ ನಾವು ಅವರಿಗೆ ಆಕಾಶದ ವಿಪತ್ತನ್ನು ಎರಗಿಸಿದೆವು.
Arabic explanations of the Qur’an:
وَسْـَٔلْهُمْ عَنِ الْقَرْیَةِ الَّتِیْ كَانَتْ حَاضِرَةَ الْبَحْرِ ۘ— اِذْ یَعْدُوْنَ فِی السَّبْتِ اِذْ تَاْتِیْهِمْ حِیْتَانُهُمْ یَوْمَ سَبْتِهِمْ شُرَّعًا وَّیَوْمَ لَا یَسْبِتُوْنَ ۙ— لَا تَاْتِیْهِمْ ۛۚ— كَذٰلِكَ ۛۚ— نَبْلُوْهُمْ بِمَا كَانُوْا یَفْسُقُوْنَ ۟
ನೀವು ಅವರೊಂದಿಗೆ ಸಮುದ್ರ ತೀರದಲ್ಲಿದ್ದ ಆ ಪಟ್ಟಣದವರ ಕುರಿತು ವಿಚಾರಿಸಿರಿ; ಶನಿವಾರದ ಕುರಿತು ಅವರು ಅತಿಕ್ರಮ ತೋರುತ್ತಿದ್ದ ಸಂದರ್ಭ ಶನಿವಾರದ ದಿನ ಮೀನುಗಳು ಪ್ರತ್ಯಕ್ಷವಾಗಿ ಅವರ ಮುಂದೆ ಬರುತ್ತಿದ್ದವು ಮತ್ತು ಬೇರೆ ದಿನಗಳಲ್ಲಿ ಅವು ಅವರ ಮುಂದೆ ಬರುತ್ತಿರಲಿಲ್ಲ. ಇದೇ ಪ್ರಕಾರ ನಾವು ಅವರನ್ನು ಅವರು ಧಿಕ್ಕಾರ ತೋರುತ್ತಿದ್ದುದರ ಫಲವಾಗಿ ಪರೀಕ್ಷಿಸುತ್ತಿದ್ದೆವು.
Arabic explanations of the Qur’an:
 
Translation of the meanings Surah: Al-A‘rāf
Surahs’ Index Page Number
 
Translation of the Meanings of the Noble Qur'an - Kannada language - Sh. Bashir Misuri - Translations’ Index

Translated by Sh. Bashir Misuri and developed under the supervision of Rowwad Translation Center

close