Check out the new design

Translation of the Meanings of the Noble Qur'an - Kannada language - Sh. Bashir Misuri * - Translations’ Index


Translation of the meanings Surah: Nūh   Ayah:

ನೂಹ್

اِنَّاۤ اَرْسَلْنَا نُوْحًا اِلٰی قَوْمِهٖۤ اَنْ اَنْذِرْ قَوْمَكَ مِنْ قَبْلِ اَنْ یَّاْتِیَهُمْ عَذَابٌ اَلِیْمٌ ۟
ಖಂಡಿತವಾಗಿಯೂ ನಾವು ನೂಹ್ರನ್ನು ಅವರ ಜನಾಂಗದೆಡೆಗೆ ನೀವು ತಮ್ಮ ಜನತೆಗೆ ವೇದನಾಜನಕ ಶಿಕ್ಷೆಯು ಅವರ ಬಳಿ ಬರುವ ಮೊದಲು ಎಚ್ಚರಿಕೆ ನೀಡಿರಿ ಎಂಬ ಸಂದೇಶದೊಂದಿಗೆ ಕಳುಹಿಸಿದೆವು.
Arabic explanations of the Qur’an:
قَالَ یٰقَوْمِ اِنِّیْ لَكُمْ نَذِیْرٌ مُّبِیْنٌ ۟ۙ
ನೂಹ್ರವರು ಹೇಳಿದರು; ಓ ನನ್ನ ಜನಾಂಗದವರೇ ನಾನು ನಿಮಗೆ ಸುಸ್ಪಷ್ಟ ಮುನ್ನೆಚ್ಚರಿಕೆ ಕೊಡುವವನಾಗಿದ್ದೇನೆ.
Arabic explanations of the Qur’an:
اَنِ اعْبُدُوا اللّٰهَ وَاتَّقُوْهُ وَاَطِیْعُوْنِ ۟ۙ
ನೀವು ಅಲ್ಲಾಹನನ್ನು ಆರಾಧಿಸಿರಿ ಮತ್ತು ಅವನನ್ನೇ ಭಯಪಡಿರಿ ಹಾಗು ನನ್ನನ್ನು ಅನುಸರಿಸಿರಿ.
Arabic explanations of the Qur’an:
یَغْفِرْ لَكُمْ مِّنْ ذُنُوْبِكُمْ وَیُؤَخِّرْكُمْ اِلٰۤی اَجَلٍ مُّسَمًّی ؕ— اِنَّ اَجَلَ اللّٰهِ اِذَا جَآءَ لَا یُؤَخَّرُ ۘ— لَوْ كُنْتُمْ تَعْلَمُوْنَ ۟
ಹಾಗಿದ್ದರೆ ಅವನು ನಿಮ್ಮ ಪಾಪಗಳನ್ನು ಕ್ಷಮಿಸುವನು, ಮತ್ತು ನಿಶ್ಚಿತ ಅವಧಿಯವರೆಗೆ ನಿಮಗೆ ಕಾಲಾವಕಾಶ ನೀಡುವನು. ಖಂಡಿತವಾಗಿಯೂ ಅಲ್ಲಾಹನ ಅವಧಿಯು ಬಂದರೆ ಅದು ಮುಂದೂಡಲಾಗದು, ನೀವು ಅರಿಯುತ್ತಿದ್ದರೆ!
Arabic explanations of the Qur’an:
قَالَ رَبِّ اِنِّیْ دَعَوْتُ قَوْمِیْ لَیْلًا وَّنَهَارًا ۟ۙ
ನೂಹ್ರರು ಹೇಳಿದರು; ಖಂಡಿತವಾಗಿಯೂ ನನ್ನ ಪ್ರಭೂ, ನಾನು ನನ್ನ ಜನತೆಯನ್ನು ರಾತ್ರಿ ಹಗಲೆನ್ನದೆ ಕರೆದೆನು.
Arabic explanations of the Qur’an:
فَلَمْ یَزِدْهُمْ دُعَآءِیْۤ اِلَّا فِرَارًا ۟
ಆದರೆ ನನ್ನ ಕರೆಯು ಅವರ ಪಲಾಯನವನ್ನೇ ಹೆಚ್ಚಿಸಿತು,
Arabic explanations of the Qur’an:
وَاِنِّیْ كُلَّمَا دَعَوْتُهُمْ لِتَغْفِرَ لَهُمْ جَعَلُوْۤا اَصَابِعَهُمْ فِیْۤ اٰذَانِهِمْ وَاسْتَغْشَوْا ثِیَابَهُمْ وَاَصَرُّوْا وَاسْتَكْبَرُوا اسْتِكْبَارًا ۟ۚ
ನೀನು ಅವರನ್ನು ಕ್ಷಮಿಸಲೆಂದು ನಾನು ಅವರನ್ನು ಕರೆದಾಗಲೆಲ್ಲಾ ಅವರು ತಮ್ಮ ಬೆರಳುಗಳನ್ನು ತಮ್ಮ ಕಿವಿಗಳೊಳಗೆ ತೂರಿಸಿದರು ಮತ್ತು ತಮ್ಮ ಉಡುಪುಗಳನ್ನು ಹೊದ್ದುಕೊಂಡರು, ಮತ್ತು ಅಸತ್ಯದಲ್ಲಿ ಹಠಸಾಧಿಸಿ ನಿಂತರು ಮಾತ್ರವಲ್ಲದೇ ಮಹಾ ಅಹಂಕಾರವನ್ನು ತೋರಿದರು.
Arabic explanations of the Qur’an:
ثُمَّ اِنِّیْ دَعَوْتُهُمْ جِهَارًا ۟ۙ
ತರುವಾಯ ನಾನು ಅವರನ್ನು ಉಚ್ಛಸ್ವರದೊಂದಿಗೆ ಆಹ್ವಾನಿಸಿದೆನು.
Arabic explanations of the Qur’an:
ثُمَّ اِنِّیْۤ اَعْلَنْتُ لَهُمْ وَاَسْرَرْتُ لَهُمْ اِسْرَارًا ۟ۙ
ಮತ್ತು ನಿಸ್ಸಂದೇಹವಾಗಿಯೂ ನಾನು ಅವರಿಗೆ ಬಹಿರಂಗವಾಗಿಯು, ರಹಸ್ಯವಾಗಿಯು ಹೇಳಿದೆನು.
Arabic explanations of the Qur’an:
فَقُلْتُ اسْتَغْفِرُوْا رَبَّكُمْ ۫— اِنَّهٗ كَانَ غَفَّارًا ۟ۙ
ಹಾಗು ನಾನು ಹೇಳಿದೆನು; ನೀವು ನಿಮ್ಮ ಪ್ರಭುವಿನೊಡನೆ ಕ್ಷಮೆ ಯಾಚಿಸಿರಿ, ಖಂಡಿತವಾಗಿಯು ಅವನು ಮಹಾ ಕ್ಷಮಾಶೀಲನಾಗಿದ್ದಾನೆ.
Arabic explanations of the Qur’an:
 
Translation of the meanings Surah: Nūh
Surahs’ Index Page Number
 
Translation of the Meanings of the Noble Qur'an - Kannada language - Sh. Bashir Misuri - Translations’ Index

Translated by Sh. Bashir Misuri and developed under the supervision of Rowwad Translation Center

close