Check out the new design

Translation of the Meanings of the Noble Qur'an - Kannada language - Sh. Bashir Misuri * - Translations’ Index


Translation of the meanings Surah: Al-Anfāl   Ayah:
وَاِنْ یُّرِیْدُوْۤا اَنْ یَّخْدَعُوْكَ فَاِنَّ حَسْبَكَ اللّٰهُ ؕ— هُوَ الَّذِیْۤ اَیَّدَكَ بِنَصْرِهٖ وَبِالْمُؤْمِنِیْنَ ۟ۙ
ಇನ್ನು ಅವರು ನಿಮ್ಮನ್ನು ವಂಚಿಸಲು ಬಯಸಿದರೆ ನಿಮಗೆ ಅಲ್ಲಾಹನೇ ಸಾಕು. ಅವನು ತನ್ನ ಸಹಾಯದಿಂದ ಮತ್ತು ವಿಶ್ವಾಸಿಗಳಿಂದ ನಿಮಗೆ ಬೆಂಬಲವನ್ನು ನೀಡಿರುವನು.
Arabic explanations of the Qur’an:
وَاَلَّفَ بَیْنَ قُلُوْبِهِمْ ؕ— لَوْ اَنْفَقْتَ مَا فِی الْاَرْضِ جَمِیْعًا مَّاۤ اَلَّفْتَ بَیْنَ قُلُوْبِهِمْ ۙ— وَلٰكِنَّ اللّٰهَ اَلَّفَ بَیْنَهُمْ ؕ— اِنَّهٗ عَزِیْزٌ حَكِیْمٌ ۟
ಅವನು ಅವರ ಹೃದಯಗಳನ್ನು ಪರಸ್ಪರ ಬೆಸೆದನು. ಭೂಮಿಯಲ್ಲಿ ಇರುವುದೆಲ್ಲವನ್ನೂ ವ್ಯಯಿಸಿದರೂ ನಿಮಗೆ ಅವರÀ ಹೃದಯಗಳನ್ನು ಪರಸ್ಪರ ಬೆಸೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಅಲ್ಲಾಹನು ತನ್ನ ಕೃಪೆಯಿಂದ ಅವರ ಹೃದಯಗಳನ್ನು ಪರಸ್ಪರ ಬೆಸೆದನು. ಖಂಡಿತವಾಗಿಯು ಅವನು ಪ್ರತಾಪಶಾಲಿಯು, ಯುಕ್ತಿವಂತನು ಆಗಿದ್ದಾನೆ.
Arabic explanations of the Qur’an:
یٰۤاَیُّهَا النَّبِیُّ حَسْبُكَ اللّٰهُ وَمَنِ اتَّبَعَكَ مِنَ الْمُؤْمِنِیْنَ ۟۠
ಓ ಪೈಗಂಬರರೇ, ನಿಮಗೆ ಮತ್ತು ನಿಮ್ಮನ್ನು ಅನುಸರಿಸಿದ ವಿಶ್ವಾಸಿಗಳಿಗೆ ಅಲ್ಲಾಹನೇ ಸಾಕು.
Arabic explanations of the Qur’an:
یٰۤاَیُّهَا النَّبِیُّ حَرِّضِ الْمُؤْمِنِیْنَ عَلَی الْقِتَالِ ؕ— اِنْ یَّكُنْ مِّنْكُمْ عِشْرُوْنَ صٰبِرُوْنَ یَغْلِبُوْا مِائَتَیْنِ ۚ— وَاِنْ یَّكُنْ مِّنْكُمْ مِّائَةٌ یَّغْلِبُوْۤا اَلْفًا مِّنَ الَّذِیْنَ كَفَرُوْا بِاَنَّهُمْ قَوْمٌ لَّا یَفْقَهُوْنَ ۟
ಓ ಪೈಗಂಬರರೇ, ನೀವು ಸತ್ಯವಿಶ್ವಾಸಿಗಳನ್ನು ಯುದ್ಧಕ್ಕೆ ಹುರಿದುಂಬಿಸಿರಿ. ನಿಮ್ಮ ಪೈಕಿ ಸಹನಾಶೀಲರಾದ ಇಪ್ಪತ್ತು ಮಂದಿ ಇದ್ದರೆ ಅವರು ಇನ್ನೂರು ಮಂದಿಯ ಮೇಲೆ ಜಯ ಸಾಧಿಸುವರು. ಇನ್ನು ನಿಮ್ಮ ಪೈಕಿ ನೂರು ಮಂದಿಯಿದ್ದರೆ ಅವರು ಒಂದು ಸಾವಿರ ಸತ್ಯನಿಷೇಧಿಗಳ ಮೇಲೆ ಜಯ ಸಾಧಿಸುವರು. ಇದೇಕೆಂದರೆ ಅವರು ಅರಿವಿಲ್ಲದ ಜನರಾಗಿದ್ದಾರೆ.
Arabic explanations of the Qur’an:
اَلْـٰٔنَ خَفَّفَ اللّٰهُ عَنْكُمْ وَعَلِمَ اَنَّ فِیْكُمْ ضَعْفًا ؕ— فَاِنْ یَّكُنْ مِّنْكُمْ مِّائَةٌ صَابِرَةٌ یَّغْلِبُوْا مِائَتَیْنِ ۚ— وَاِنْ یَّكُنْ مِّنْكُمْ اَلْفٌ یَّغْلِبُوْۤا اَلْفَیْنِ بِاِذْنِ اللّٰهِ ؕ— وَاللّٰهُ مَعَ الصّٰبِرِیْنَ ۟
ಇದೀಗ ಅಲ್ಲಾಹನು ನಿಮ್ಮ ಭಾರವನ್ನು ಹಗುರಗೊಳಿಸಿರುವನು. ನಿಮ್ಮಲ್ಲಿ ಬಲಹೀನತೆಯಿದೆಯೆಂಬುದನ್ನು ಅವನು ಚೆನ್ನಾಗಿ ಅರಿತಿದ್ದಾನೆ. ಇನ್ನು ನಿಮ್ಮ ಪೈಕಿ ನೂರು ಮಂದಿ ಸಹನಾಶೀಲರಿದ್ದರೆ ಅವರು ಇನ್ನೂರು ಮಂದಿಯ ಮೇಲೆ ಜಯಸಾಧಿಸುವರು. ಇನ್ನು ನಿಮ್ಮಲ್ಲಿ ಒಂದು ಸಾವಿರ ಜನರಿದ್ದರೆ ಅವರು ಅಲ್ಲಾಹನ ಅಪ್ಪಣೆಯಿಂದ ಎರಡು ಸಾವಿರ ಮಂದಿಯ ಮೇಲೆ ಜಯಸಾಧಿಸುವರು. ಅಲ್ಲಾಹನು ಸಹನಾಶೀಲರೊಂದಿಗಿದ್ದಾನೆ.
Arabic explanations of the Qur’an:
مَا كَانَ لِنَبِیٍّ اَنْ یَّكُوْنَ لَهٗۤ اَسْرٰی حَتّٰی یُثْخِنَ فِی الْاَرْضِ ؕ— تُرِیْدُوْنَ عَرَضَ الدُّنْیَا ۖۗ— وَاللّٰهُ یُرِیْدُ الْاٰخِرَةَ ؕ— وَاللّٰهُ عَزِیْزٌ حَكِیْمٌ ۟
ನಾಡಿನಲ್ಲಿ ಮಹಾ ಕ್ರಾಂತಿಯ ಯುದ್ಧ ನಡೆಯುವವರೆಗೂ ಪೈಗಂಬರರ ವಶದಲ್ಲಿ ಕೈದಿಗಳಿರುವುದು ಶೋಭಿಸುವುದಿಲ್ಲ. ನೀವು ಇಹಲೋಕವನ್ನು ಬಯಸುತ್ತೀರಿ ಮತ್ತು ಅಲ್ಲಾಹನು ಪರಲೋಕವನ್ನು ಬಯಸುತ್ತಾನೆ ಮತ್ತು ಅಲ್ಲಾಹನು ಪ್ರತಾಪಶಾಲಿಯೂ, ಯುಕ್ತಿವಂತನೂ ಆಗಿದ್ದಾನೆ.
Arabic explanations of the Qur’an:
لَوْلَا كِتٰبٌ مِّنَ اللّٰهِ سَبَقَ لَمَسَّكُمْ فِیْمَاۤ اَخَذْتُمْ عَذَابٌ عَظِیْمٌ ۟
ಅಲ್ಲಾಹನ ಕಡೆಯಿಂದ ಮೊದಲೇ ಕ್ಷಮೆ ದಾಖಲಾಗಿಲ್ಲದಿರುತ್ತಿದ್ದರೆ ನೀವು ಪಡೆದ ಪರಿಹಾರಧನದ ನಿಮಿತ್ತ ನಿಮಗೆ ಭೀಕರ ಶಿಕ್ಷೆಯು ಸಿಗುತ್ತಿತ್ತು.
Arabic explanations of the Qur’an:
فَكُلُوْا مِمَّا غَنِمْتُمْ حَلٰلًا طَیِّبًا ۖؗ— وَّاتَّقُوا اللّٰهَ ؕ— اِنَّ اللّٰهَ غَفُوْرٌ رَّحِیْمٌ ۟۠
ಆದ್ದರಿಂದ ನೀವು ಪಡೆದಿರುವ ಧರ್ಮಸಮ್ಮತ ಹಾಗೂ ಶುದ್ಧವಾದ ಯುದ್ಧಾರ್ಜಿತ ಸೊತ್ತನ್ನು ತಿನ್ನಿರಿ ಮತ್ತು ಅಲ್ಲಾಹನನ್ನು ಭಯಪಡಿರಿ ಖಂಡಿತವಾಗಿಯು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ ಕರುಣಾನಿಧಿಯೂ ಆಗಿದ್ದಾನೆ.
Arabic explanations of the Qur’an:
 
Translation of the meanings Surah: Al-Anfāl
Surahs’ Index Page Number
 
Translation of the Meanings of the Noble Qur'an - Kannada language - Sh. Bashir Misuri - Translations’ Index

Translated by Sh. Bashir Misuri and developed under the supervision of Rowwad Translation Center

close