Check out the new design

Translation of the Meanings of the Noble Qur'an - Kannada translation - Hamza Butur * - Translations’ Index

PDF XML CSV Excel API
Please review the Terms and Policies

Translation of the meanings Surah: At-Tahrīm   Ayah:

ಅತ್ತಹ್ರೀಮ್

یٰۤاَیُّهَا النَّبِیُّ لِمَ تُحَرِّمُ مَاۤ اَحَلَّ اللّٰهُ لَكَ ۚ— تَبْتَغِیْ مَرْضَاتَ اَزْوَاجِكَ ؕ— وَاللّٰهُ غَفُوْرٌ رَّحِیْمٌ ۟
ಓ ಪ್ರವಾದಿಯವರೇ! ಅಲ್ಲಾಹು ನಿಮಗೆ ಧರ್ಮಸಮ್ಮತಗೊಳಿಸಿದ ವಸ್ತುವನ್ನು ನೀವೇಕೆ ನಿಷಿದ್ಧಗೊಳಿಸುತ್ತೀರಿ? ನೀವು ನಿಮ್ಮ ಪತ್ನಿಯರ ಸಂಪ್ರೀತಿಯನ್ನು ಪಡೆಯಲು ಬಯಸುತ್ತೀರಾ? ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.[1]
[1] ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಪತ್ನಿ ಝೈನಬ್ ಬಿಂತ್ ಜಹ್ಶ್ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ರವರ ಮನೆಯಲ್ಲಿ ಸ್ವಲ್ಪ ಹೊತ್ತು ತಂಗಿ ಅಲ್ಲಿ ಜೇನು ಸವಿಯುತ್ತಿದ್ದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಝೈನಬರ ಮನೆಯಲ್ಲಿ ಹೆಚ್ಚು ತಂಗುವುದನ್ನು ನಿಲ್ಲಿಸಲು ಆಯಿಶ ಮತ್ತು ಹಫ್ಸ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ಒಂದು ಉಪಾಯ ಹೂಡಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇವರಿಬ್ಬರಲ್ಲಿ ಯಾರ ಬಳಿಗೆ ಮೊದಲು ಬಂದರೂ ಅವರ ಬಾಯಿಂದ ಒಂದು ರೀತಿಯ ಕೆಟ್ಟ ಪರಿಮಳ ಬರುತ್ತದೆ ಎಂದು ಹೇಳಬೇಕು ಎಂದು ಇವರಿಬ್ಬರು ನಿರ್ಧರಿಸಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಂದಾಗ ಅವರು ಇದೇ ರೀತಿ ಹೇಳಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ನಾನು ಝೈನಬರ ಮನೆಯಲ್ಲಿ ಸ್ವಲ್ಪ ಜೇನು ಸವಿದಿದ್ದೆ. ಇನ್ನು ಮುಂದೆ ನಾನು ಅದನ್ನು ಕುಡಿಯುವುದಿಲ್ಲವೆಂದು ಆಣೆ ಮಾಡುತ್ತೇನೆ. ಆದರೆ ಈ ವಿಷಯವನ್ನು ನೀನು ಯಾರಿಗೂ ತಿಳಿಸಬಾರದು.”
Arabic explanations of the Qur’an:
قَدْ فَرَضَ اللّٰهُ لَكُمْ تَحِلَّةَ اَیْمَانِكُمْ ۚ— وَاللّٰهُ مَوْلٰىكُمْ ۚ— وَهُوَ الْعَلِیْمُ الْحَكِیْمُ ۟
ಅಲ್ಲಾಹು ನಿಮಗೆ ನಿಮ್ಮ ಆಣೆಗಳ ವಿಮುಕ್ತತೆಯನ್ನು ಈಗಾಗಲೇ ನಿಶ್ಚಯಿಸಿದ್ದಾನೆ.[1] ಅಲ್ಲಾಹು ನಿಮ್ಮ ರಕ್ಷಕನಾಗಿದ್ದಾನೆ. ಅವನು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.
[1] ಅಂದರೆ ಆಣೆಯನ್ನು ಉಲ್ಲಂಘಿಸಿದರೆ ಅದಕ್ಕೆ ನೀಡಬೇಕಾದ ಪರಿಹಾರವನ್ನು ಅಲ್ಲಾಹು ಈಗಾಗಲೇ ನಿಶ್ಚಯಿಸಿದ್ದಾನೆ.
Arabic explanations of the Qur’an:
وَاِذْ اَسَرَّ النَّبِیُّ اِلٰی بَعْضِ اَزْوَاجِهٖ حَدِیْثًا ۚ— فَلَمَّا نَبَّاَتْ بِهٖ وَاَظْهَرَهُ اللّٰهُ عَلَیْهِ عَرَّفَ بَعْضَهٗ وَاَعْرَضَ عَنْ بَعْضٍ ۚ— فَلَمَّا نَبَّاَهَا بِهٖ قَالَتْ مَنْ اَنْۢبَاَكَ هٰذَا ؕ— قَالَ نَبَّاَنِیَ الْعَلِیْمُ الْخَبِیْرُ ۟
ಪ್ರವಾದಿಯವರು ತಮ್ಮ ಪತ್ನಿಯರಲ್ಲಿ ಒಬ್ಬಳಿಗೆ ಗುಟ್ಟಾಗಿ ಒಂದು ಮಾತನ್ನು ಹೇಳಿದ ಸಂದರ್ಭ(ವನ್ನು ಸ್ಮರಿಸಿ).[1] ಅವಳು ಅದನ್ನು (ಇನ್ನೊಬ್ಬ ಪತ್ನಿಗೆ) ತಿಳಿಸಿದಾಗ ಮತ್ತು ಅಲ್ಲಾಹು ತನ್ನ ಪ್ರವಾದಿಗೆ ಅದನ್ನು ಬಹಿರಂಗಪಡಿಸಿದಾಗ, ಅವರು ಅದರ ಕೆಲವು ಭಾಗಗಳನ್ನು (ಪತ್ನಿಗೆ) ತಿಳಿಸಿ ಕೆಲವು ಭಾಗಗಳನ್ನು ನಿರ್ಲಕ್ಷಿಸಿದರು. ನಂತರ ಅವರು ಅದನ್ನು ಪತ್ನಿಗೆ ತಿಳಿಸಿದಾಗ ಅವಳು ಕೇಳಿದಳು: “ನಿಮಗೆ ಇದನ್ನು ತಿಳಿಸಿದ್ದು ಯಾರು?” ಅವರು ಉತ್ತರಿಸಿದರು: “ಸರ್ವಜ್ಞನು ಮತ್ತು ಸೂಕ್ಷ್ಮಜ್ಞಾನಿಯಾದ ಅಲ್ಲಾಹು ನನಗೆ ತಿಳಿಸಿದನು.”
[1] ನಾನು ಇನ್ನು ಮುಂದೆ ಜೇನು ಸೇವಿಸುವುದಿಲ್ಲವೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪತ್ನಿ ಹಫ್ಸರಿಗೆ ತಿಳಿಸಿದ್ದರು. ಅವರು ಅದನ್ನು ಆಯಿಶರಿಗೆ ತಿಳಿಸಿದರು.
Arabic explanations of the Qur’an:
اِنْ تَتُوْبَاۤ اِلَی اللّٰهِ فَقَدْ صَغَتْ قُلُوْبُكُمَا ۚ— وَاِنْ تَظٰهَرَا عَلَیْهِ فَاِنَّ اللّٰهَ هُوَ مَوْلٰىهُ وَجِبْرِیْلُ وَصَالِحُ الْمُؤْمِنِیْنَ ۚ— وَالْمَلٰٓىِٕكَةُ بَعْدَ ذٰلِكَ ظَهِیْرٌ ۟
(ಪ್ರವಾದಿಯ ಇಬ್ಬರು ಪತ್ನಿಯರೇ!) ನೀವು ಅಲ್ಲಾಹನ ಮುಂದೆ ಪಶ್ಚಾತ್ತಾಪಪಡುವುದಾದರೆ (ಅದು ಉತ್ತಮವಾಗಿದೆ). ನಿಶ್ಚಯವಾಗಿಯೂ ನಿಮ್ಮ ಹೃದಯಗಳು ವಕ್ರವಾಗಿವೆ. ಆದರೆ ನೀವು ಪ್ರವಾದಿಯ ವಿರುದ್ಧ ಪರಸ್ಪರ ಸಹಾಯ ಮಾಡುವುದಾದರೆ ನಿಶ್ಚಯವಾಗಿಯೂ ಅಲ್ಲಾಹು ಅವರ ರಕ್ಷಕನಾಗಿದ್ದಾನೆ. ಜಿಬ್ರೀಲ್, ನೀತಿವಂತರಾದ ಸತ್ಯವಿಶ್ವಾಸಿಗಳು ಮತ್ತು ಅವರೆಲ್ಲರ ಹೊರತಾಗಿ ದೇವದೂತರು‍ಗಳು ಕೂಡ ಅವರಿಗೆ ಸಹಾಯ ಮಾಡಲಿದ್ದಾರೆ.
Arabic explanations of the Qur’an:
عَسٰی رَبُّهٗۤ اِنْ طَلَّقَكُنَّ اَنْ یُّبْدِلَهٗۤ اَزْوَاجًا خَیْرًا مِّنْكُنَّ مُسْلِمٰتٍ مُّؤْمِنٰتٍ قٰنِتٰتٍ تٰٓىِٕبٰتٍ عٰبِدٰتٍ سٰٓىِٕحٰتٍ ثَیِّبٰتٍ وَّاَبْكَارًا ۟
ಅವರು ನಿಮಗೆ ವಿಚ್ಛೇದನೆ (ತಲಾಕ್) ನೀಡಿದರೆ, ಅವರ ಪರಿಪಾಲಕನು (ಅಲ್ಲಾಹು) ಅವರಿಗೆ ನಿಮಗಿಂತಲೂ ಉತ್ತಮ ಪತ್ನಿಯರನ್ನು ಬದಲಿಯಾಗಿ ನೀಡುವನು. ಅವರು ಮುಸ್ಲಿಮರು, ಸತ್ಯವಿಶ್ವಾಸಿಗಳು, ದೇವಭಯವುಳ್ಳವರು, ಪಶ್ಚಾತ್ತಾಪಪಡುವವರು, ಆರಾಧನೆಯಲ್ಲಿ ಮಗ್ನರಾಗುವವರು, ಉಪವಾಸ ಆಚರಿಸುವವರು, ವಿಧವೆಗಳು ಮತ್ತು ಕನ್ಯೆಯರಾಗಿರುವರು.
Arabic explanations of the Qur’an:
یٰۤاَیُّهَا الَّذِیْنَ اٰمَنُوْا قُوْۤا اَنْفُسَكُمْ وَاَهْلِیْكُمْ نَارًا وَّقُوْدُهَا النَّاسُ وَالْحِجَارَةُ عَلَیْهَا مَلٰٓىِٕكَةٌ غِلَاظٌ شِدَادٌ لَّا یَعْصُوْنَ اللّٰهَ مَاۤ اَمَرَهُمْ وَیَفْعَلُوْنَ مَا یُؤْمَرُوْنَ ۟
ಓ ಸತ್ಯವಿಶ್ವಾಸಿಗಳೇ! ನೀವು ನಿಮ್ಮನ್ನು ಮತ್ತು ನಿಮ್ಮ ಮನೆಯವರನ್ನು ನರಕಾಗ್ನಿಯಿಂದ ಪಾರು ಮಾಡಿರಿ. ಅದರ ಇಂಧನವು ಮನುಷ್ಯರು ಮತ್ತು ಕಲ್ಲುಗಳಾಗಿವೆ. ಅದರ ಮೇಲೆ ಕಠೋರ ಹೃದಯದ ಬಲಿಷ್ಠ ದೇವದೂತರು‍ಗಳಿದ್ದಾರೆ. ಅಲ್ಲಾಹನ ಯಾವುದೇ ಆಜ್ಞೆಯನ್ನೂ ಅವರು ಧಿಕ್ಕರಿಸುವುದಿಲ್ಲ. ಅವರಿಗೆ ಆಜ್ಞಾಪಿಸಲಾಗುವುದೆಲ್ಲವನ್ನೂ ಅವರು ನಿರ್ವಹಿಸುತ್ತಾರೆ.
Arabic explanations of the Qur’an:
یٰۤاَیُّهَا الَّذِیْنَ كَفَرُوْا لَا تَعْتَذِرُوا الْیَوْمَ ؕ— اِنَّمَا تُجْزَوْنَ مَا كُنْتُمْ تَعْمَلُوْنَ ۟۠
ಓ ಸತ್ಯನಿಷೇಧಿಗಳೇ! ಇಂದು ನೀವು ನೆಪಗಳನ್ನು ಹೇಳಬೇಡಿ. ನಿಮಗೆ ನಿಮ್ಮ ಕರ್ಮಗಳ ಪ್ರತಿಫಲವನ್ನು ಮಾತ್ರ ನೀಡಲಾಗುವುದು.
Arabic explanations of the Qur’an:
 
Translation of the meanings Surah: At-Tahrīm
Surahs’ Index Page Number
 
Translation of the Meanings of the Noble Qur'an - Kannada translation - Hamza Butur - Translations’ Index

Translated by Muhammad Hamza Batur and developed under the supervision of Rowwad Translation Center

close