Check out the new design

Traducción de los significados del Sagrado Corán - Traducción al Canarés - Bashir Maisuri * - Índice de traducciones


Traducción de significados Capítulo: Qaaf   Versículo:
وَلَقَدْ خَلَقْنَا الْاِنْسَانَ وَنَعْلَمُ مَا تُوَسْوِسُ بِهٖ نَفْسُهٗ ۖۚ— وَنَحْنُ اَقْرَبُ اِلَیْهِ مِنْ حَبْلِ الْوَرِیْدِ ۟
ನಿಶ್ಚಯವಾಗಿಯೂ ನಾವು ಮಾನವನನ್ನು ಸೃಷ್ಟಿಸಿದ್ದೇವೆ, ಅವನ ಮನಸ್ಸಿನಲ್ಲಿ ಉದ್ಭವಿಸುವ ದುರ್ಭಾವನೆಗಳ ಬಗ್ಗೆ ನಾವು ಅರಿಯುತ್ತೇವೆ ಮತ್ತು ನಾವು ಅವನ ಕಂಠನಾಡಿಗಿAತಲೂ ಹೆಚ್ಚು ಸಮೀಪವಾಗಿದ್ದೇವೆ.
Las Exégesis Árabes:
اِذْ یَتَلَقَّی الْمُتَلَقِّیٰنِ عَنِ الْیَمِیْنِ وَعَنِ الشِّمَالِ قَعِیْدٌ ۟
ಈರ್ವ (ಲೇಖಕ) ದೂತರು ಬಲಭಾಗ ಮತ್ತು ಎಡಭಾಗದಲ್ಲಿ ಕುಳಿತುಕೊಂಡು ಕರ್ಮಗಳನ್ನು ದಾಖಲಿಸುತ್ತಿರುವ ಸಂದರ್ಭ.
Las Exégesis Árabes:
مَا یَلْفِظُ مِنْ قَوْلٍ اِلَّا لَدَیْهِ رَقِیْبٌ عَتِیْدٌ ۟
ಮಾನವನು ತನ್ನ ಬಾಯಿಂದ ಯಾವುದೇ ಮಾತು ಹೊರಡಿಸುವುದೇ ತಡ (ಬರೆಯಲು) ಅವನ ಬಳಿ ಒಬ್ಬದೇವದೂತನು ಸಿದ್ಧನಿರುತ್ತಾನೆ.
Las Exégesis Árabes:
وَجَآءَتْ سَكْرَةُ الْمَوْتِ بِالْحَقِّ ؕ— ذٰلِكَ مَا كُنْتَ مِنْهُ تَحِیْدُ ۟
ಮರಣ ಸಂಕಟವು ಸತ್ಯಸಹಿತ ಬಂದುಬಿಟ್ಟಿದೆ, ನೀನು ಯಾವುದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀಯೋ ಅದುವೇ ಇದು,
Las Exégesis Árabes:
وَنُفِخَ فِی الصُّوْرِ ؕ— ذٰلِكَ یَوْمُ الْوَعِیْدِ ۟
ಪ್ರಳಯದ ಕಹಳೆಯನ್ನು ಊದಲಾಗುವುದು (ಮತ್ತು ಹೀಗೆ ಹೇಳಲಾಗುವುದು) ಎಚ್ಚರಿಕೆ ನೀಡಲ್ಪಟ್ಟ ದಿನ ಇದುವೇ ಆಗಿದೆ.
Las Exégesis Árabes:
وَجَآءَتْ كُلُّ نَفْسٍ مَّعَهَا سَآىِٕقٌ وَّشَهِیْدٌ ۟
ಪ್ರತಿಯೊಬ್ಬ ವ್ಯಕ್ತಿಯು ಓರ್ವ ಅಟ್ಟುವವ ಹಾಗು ಓರ್ವ ಸಾಕ್ಷಿಗಾರನಜೊತೆ ಬರುವನು.
Las Exégesis Árabes:
لَقَدْ كُنْتَ فِیْ غَفْلَةٍ مِّنْ هٰذَا فَكَشَفْنَا عَنْكَ غِطَآءَكَ فَبَصَرُكَ الْیَوْمَ حَدِیْدٌ ۟
(ಹೇಳಲಾಗುವುದು) ಖಂಡಿತವಾಗಿಯೂ ನೀನು ಇದರ ಕುರಿತು ಅಲಕ್ಷö್ಯತೆಯಲ್ಲಿದ್ದೆ. ಆದರೆ ನಾವು ನಿನ್ನ ಮುಂದಿದ್ದ ತೆರೆಯನ್ನು ಸರಿಸಿಬಿಟ್ಟಿದ್ದೇವೆ, ಆದುದರಿಂದ ಇಂದು ನಿನ್ನ ದೃಷ್ಟಿಯು ತೀಕ್ಷ÷್ಣವಾಗಿಬಿಟ್ಟಿದೆ.
Las Exégesis Árabes:
وَقَالَ قَرِیْنُهٗ هٰذَا مَا لَدَیَّ عَتِیْدٌ ۟ؕ
ಅವನ ಜೊತೆಗಾರ ದೇವದೂತ ಹೇಳುವನು; ನನ್ನ ಬಳಿಯಿದ್ದ ಅವನ ಕರ್ಮಪತ್ರ ಇಗೋ ಹಾಜರಿದೆ.
Las Exégesis Árabes:
اَلْقِیَا فِیْ جَهَنَّمَ كُلَّ كَفَّارٍ عَنِیْدٍ ۟ۙ
ಪ್ರತಿಯೊಬ್ಬ ಆಜ್ಞೋಲ್ಲಂಘಕ ಸತ್ಯನಿಷೇಧಿಯನ್ನು ನೀವು ನರಕಾಗ್ನಿಗೆ ಎಸೆಯಿರಿ.
Las Exégesis Árabes:
مَّنَّاعٍ لِّلْخَیْرِ مُعْتَدٍ مُّرِیْبِ ۟ۙ
ಅವನು ಒಳಿತಿನಿಂದ ತಡೆಯುವವನು, ಅತಿಕ್ರಮಿಯೂ ಹಾಗು (ಧರ್ಮದಲ್ಲಿ) ಸಂಶಯಗ್ರಸ್ತನಾಗಿದ್ದನು.
Las Exégesis Árabes:
١لَّذِیْ جَعَلَ مَعَ اللّٰهِ اِلٰهًا اٰخَرَ فَاَلْقِیٰهُ فِی الْعَذَابِ الشَّدِیْدِ ۟
ಅವನು ಅಲ್ಲಾಹನೊಂದಿಗೆ ಇತರೆ ಆರಾಧ್ಯರನ್ನು ನಿಶ್ಚಯಿಸಿದ್ದನು, ಆದ್ದರಿಂದ ಅವನನ್ನು ನೀವು ಕಠಿಣ ಶಿಕ್ಷೆಗೆ ಹಾಕಿಬಿಡಿರಿ.
Las Exégesis Árabes:
قَالَ قَرِیْنُهٗ رَبَّنَا مَاۤ اَطْغَیْتُهٗ وَلٰكِنْ كَانَ فِیْ ضَلٰلٍۢ بَعِیْدٍ ۟
ಅವನ ಸಹಚರ(ಶೈತಾನ)ನು ಹೇಳುವನು; ನಮ್ಮ ಪ್ರಭೂ! ನಾನವನನ್ನು ದಾರಿಗೆಡಿಸಿಲ್ಲ, ಆದರೆ ಸ್ವತಃ ಅವನೇ ದೂರವಾದ ದುರ್ಮಾರ್ಗದಲ್ಲಿದ್ದನು.
Las Exégesis Árabes:
قَالَ لَا تَخْتَصِمُوْا لَدَیَّ وَقَدْ قَدَّمْتُ اِلَیْكُمْ بِالْوَعِیْدِ ۟
ಅಲ್ಲಾಹನು ಹೇಳುವನು;ನೀವು ನನ್ನ ಮುಂದೆ ಜಗಳವಾಡಬೇಡಿರಿ, ನಾನಂತು ನಿಮಗೆ ಮೊದಲೇ ಶಿಕ್ಷೆಯ ಎಚ್ಚೆರಿಕೆ ನೀಡಿದ್ದೆನು.
Las Exégesis Árabes:
مَا یُبَدَّلُ الْقَوْلُ لَدَیَّ وَمَاۤ اَنَا بِظَلَّامٍ لِّلْعَبِیْدِ ۟۠
ನನ್ನ ಬಳಿ ಮಾತು ಬದಲಾಗದು, ನಾನು ದಾಸರ ಮೇಲೆ ಒಂದಿಷ್ಟೂ ಅನ್ಯಾಯ ಮಾಡುವವನಲ್ಲ.
Las Exégesis Árabes:
یَوْمَ نَقُوْلُ لِجَهَنَّمَ هَلِ امْتَلَاْتِ وَتَقُوْلُ هَلْ مِنْ مَّزِیْدٍ ۟
ಅಂದು ನಾವು ನರಕದೊಂದಿಗೆ ಹೇಳುವೆವು; ‘ನೀನು ತುಂಬಿಬಿಟ್ಟೆಯಾ?' ಆಗ ಅದು ‘ಇನ್ನಷ್ಟು ಇದೆಯೇ?' ಎಂದು ಕೇಳುವುದು.
Las Exégesis Árabes:
وَاُزْلِفَتِ الْجَنَّةُ لِلْمُتَّقِیْنَ غَیْرَ بَعِیْدٍ ۟
ಭಯಭಕ್ತಿ ಪಾಲಿಸುವವರಿಗೆ ಸ್ವರ್ಗವನ್ನು ಅತ್ಯಂತ ಸಮೀಪಕ್ಕೆ ತರಲಾಗುವುದು, ಅದು ಸ್ವಲ್ಪವೂ ದೂರವಿರಲಾರದು,
Las Exégesis Árabes:
هٰذَا مَا تُوْعَدُوْنَ لِكُلِّ اَوَّابٍ حَفِیْظٍ ۟ۚ
ನಿಮಗೆ ವಾಗ್ದಾನ ಮಾಡಲಾಗುತ್ತಿದ್ದುದು (ಸ್ವರ್ಗ) ಇದುವೇ ಆಗಿದೆ. ಇದು ಪಶ್ಚಾತಾಪ ಪಟ್ಟು ಮರಳುವ ಹಾಗೂ ಜಾಗರೂಕತೆ ವಹಿಸುತ್ತಿದ್ದ ಪ್ರತಿಯೊಬ್ಬ ವ್ಯಕ್ತಿಗಾಗಿದೆ.
Las Exégesis Árabes:
مَنْ خَشِیَ الرَّحْمٰنَ بِالْغَیْبِ وَجَآءَ بِقَلْبٍ مُّنِیْبِ ۟ۙ
ಯಾರು ಪರಮದಯಾಮಯನನ್ನು ಕಣ್ಣಾರೆ ಕಾಣದೆ ಭಯಪಟ್ಟು ಮತ್ತು ಪಶ್ಚಾತಾಪ ಪಡುವ ಹೃದಯದೊಂದಿಗೆ ಮರಳಿದವನಿಗಾಗಿ.
Las Exégesis Árabes:
١دْخُلُوْهَا بِسَلٰمٍ ؕ— ذٰلِكَ یَوْمُ الْخُلُوْدِ ۟
ನೀವು ಶಾಂತಿಯೊAದಿಗೆ ಅದರಲ್ಲಿ (ಸ್ವರ್ಗದಲ್ಲಿ) ಪ್ರವೇಶಿಸಿರಿ. ಇದು ಶಾಶ್ವತವಾದ (ಜೀವನದ) ದಿನವಾಗಿದೆ.
Las Exégesis Árabes:
لَهُمْ مَّا یَشَآءُوْنَ فِیْهَا وَلَدَیْنَا مَزِیْدٌ ۟
ಅಲ್ಲಿ ಅವರು ಬಯಸುವುದೆಲ್ಲವೂ ಅವರಿಗೆ ಸಿಗುವುದು, (ಮಾತ್ರವಲ್ಲ) ನಮ್ಮ ಬಳಿ ಇನ್ನೂ ಅಧಿಕವಿದೆ.
Las Exégesis Árabes:
 
Traducción de significados Capítulo: Qaaf
Índice de Capítulos Número de página
 
Traducción de los significados del Sagrado Corán - Traducción al Canarés - Bashir Maisuri - Índice de traducciones

Traducida por el Sheikh Bashir Maisuri. Desarrollada bajo la supervisión del Centro Rowad Al-Taryamah.

Cerrar