Check out the new design

Traducción de los significados del Sagrado Corán - Traducción al Canarés - Bashir Maisuri * - Índice de traducciones


Traducción de significados Capítulo: An-Najm   Versículo:
اِنَّ الَّذِیْنَ لَا یُؤْمِنُوْنَ بِالْاٰخِرَةِ لَیُسَمُّوْنَ الْمَلٰٓىِٕكَةَ تَسْمِیَةَ الْاُ ۟
ನಿಸ್ಸಂಶವಾಗಿಯೂ ಪರಲೋಕದಲ್ಲಿ ವಿಶ್ವಾಸವಿಡದವರು ದೇವದೂತರಿಗೆ ಸ್ತಿçÃಯರ ನಾಮವನ್ನಿಡುತ್ತಾರೆ.
Las Exégesis Árabes:
وَمَا لَهُمْ بِهٖ مِنْ عِلْمٍ ؕ— اِنْ یَّتَّبِعُوْنَ اِلَّا الظَّنَّ ۚ— وَاِنَّ الظَّنَّ لَا یُغْنِیْ مِنَ الْحَقِّ شَیْـًٔا ۟ۚ
ವಸ್ತುತಃ ಅವರಿಗೆ ಈ ಬಗ್ಗೆ ಯಾವ ಜ್ಞಾನವೂ ಇಲ್ಲ, ಅವರು ಕೇವಲ ಊಹೆಯನ್ನು ಮಾತ್ರ ಅನುಸರಿಸುತ್ತಾರೆ. ಮತ್ತು ನಿಸ್ಸಂಶಯವಾಗಿಯೂ ಊಹೆಯು ಸತ್ಯದ ಎದುರಿಗೆ ಯಾವ ಪ್ರಯೋಜನಕ್ಕೂ ಬಾರದು.
Las Exégesis Árabes:
فَاَعْرِضْ عَنْ مَّنْ تَوَلّٰی ۙ۬— عَنْ ذِكْرِنَا وَلَمْ یُرِدْ اِلَّا الْحَیٰوةَ الدُّنْیَا ۟ؕ
ಆದ್ದರಿಂದ ನಮ್ಮ ಸ್ಮರಣೆಯಿಂದ ವಿಮುಖನಾಗುವವನ, ಇಹಲೋಕ ಜೀವನದ ಹೊರತು ಬೇರೆನನ್ನೂ ಉದ್ದೇಶಿಸದವನನ್ನು ನೀವು ಕಡೆಗಣಿಸಿರಿ.
Las Exégesis Árabes:
ذٰلِكَ مَبْلَغُهُمْ مِّنَ الْعِلْمِ ؕ— اِنَّ رَبَّكَ هُوَ اَعْلَمُ بِمَنْ ضَلَّ عَنْ سَبِیْلِهٖ وَهُوَ اَعْلَمُ بِمَنِ اهْتَدٰی ۟
ಅವರ ಜ್ಞಾನದ ಬಂಡವಾಳವಿಷ್ಟೇ, ನಿಮ್ಮ ಪ್ರಭು ಅವನ ಮಾರ್ಗದಿಂದ ತಪ್ಪಿದವರನ್ನು ಅರಿಯುತ್ತಾನೆ, ಹಾಗೂ ಸನ್ಮಾರ್ಗ ಪಡೆದವನನ್ನೂ ಚೆನ್ನಾಗಿ ಬಲ್ಲನು.
Las Exégesis Árabes:
وَلِلّٰهِ مَا فِی السَّمٰوٰتِ وَمَا فِی الْاَرْضِ ۙ— لِیَجْزِیَ الَّذِیْنَ اَسَآءُوْا بِمَا عَمِلُوْا وَیَجْزِیَ الَّذِیْنَ اَحْسَنُوْا بِالْحُسْنٰی ۟ۚ
ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹನದ್ದಾಗಿದೆ. ಇದು ಅವನು ದುಷ್ಕರ್ಮವೆಸಗುವವರಿಗೆ ಅವರ ಕರ್ಮಗಳಿಗೆ ತಕ್ಕ ಪ್ರತಿಫಲ ನೀಡಲೆಂದು ಮತ್ತು ಒಳಿತನ್ನು ಮಾಡುವವರಿಗೆ ಅತ್ಯುತ್ತಮ ಪ್ರತಿಫಲ ನೀಡಲೆಂದಾಗಿದೆ.
Las Exégesis Árabes:
اَلَّذِیْنَ یَجْتَنِبُوْنَ كَبٰٓىِٕرَ الْاِثْمِ وَالْفَوَاحِشَ اِلَّا اللَّمَمَ ؕ— اِنَّ رَبَّكَ وَاسِعُ الْمَغْفِرَةِ ؕ— هُوَ اَعْلَمُ بِكُمْ اِذْ اَنْشَاَكُمْ مِّنَ الْاَرْضِ وَاِذْ اَنْتُمْ اَجِنَّةٌ فِیْ بُطُوْنِ اُمَّهٰتِكُمْ ۚ— فَلَا تُزَكُّوْۤا اَنْفُسَكُمْ ؕ— هُوَ اَعْلَمُ بِمَنِ اتَّقٰی ۟۠
ಅಂದರೆ ಮಹಾಪಾಪಗಳಿಂದ, ಅಶ್ಲೀಲ ಕೃತ್ಯಗಳಿಂದ ದೂರವಿರುವವರು, ಆದರೆ ಸಣ್ಣ ಪಾಪಗಳ ಹೊರತು, ನಿಸ್ಸಂಶಯವಾಗಿಯೂ ನಿಮ್ಮ ಪ್ರಭುವು ವಿಶಾಲವಾದ ಕ್ಷಮೆವುಳ್ಳವನಾಗಿದ್ದಾನೆ, ಅವನು ನಿಮ್ಮನ್ನು ಭೂಮಿಯಿಂದ ಸೃಷ್ಟಿಸಿದಾಗಲೂ, ನೀವು ನಿಮ್ಮ ತಾಯಂದಿರ ಗರ್ಭಗಳಲ್ಲಿ ಭ್ರೂಣದಲ್ಲಿದ್ದಾಗಲೂ ನಿಮ್ಮನ್ನುಚೆನ್ನಾಗಿ ಬಲ್ಲನು. ಆದ್ದರಿಂದ ನೀವು ಆತ್ಮಪ್ರಶಂಸೆಯನ್ನು ಮಾಡದಿರಿ. ಖಂಡಿತವಾಗಿಯೂ ಅವನು ಭಯ ಭಕ್ತಿಯಿರಿಸಿದವರನ್ನು ಚೆನ್ನಾಗಿ ಬಲ್ಲವನಾಗಿದ್ದಾನೆ.
Las Exégesis Árabes:
اَفَرَءَیْتَ الَّذِیْ تَوَلّٰی ۟ۙ
(ಓ ಪೈಗಂಬರರೇ) ನೀವು ವಿಮುಖನಾದವನನ್ನು ನೋಡಿದಿರಾ?
Las Exégesis Árabes:
وَاَعْطٰی قَلِیْلًا وَّاَكْدٰی ۟
ಅವನು ಸ್ವಲ್ಪ ಮಾತ್ರ ಕೊಟ್ಟನು ಮತ್ತು ತಡೆ ಹಿಡಿದನು.
Las Exégesis Árabes:
اَعِنْدَهٗ عِلْمُ الْغَیْبِ فَهُوَ یَرٰی ۟
ಅವನ ಬಳಿ ಅಗೋಚರ ಜ್ಞಾನವಿದೆಯೇ ? ಹೀಗೆ ಅವನು (ಎಲ್ಲವನ್ನು) ಕಾಣುತ್ತಿದ್ದಾನೆಯೇ?
Las Exégesis Árabes:
اَمْ لَمْ یُنَبَّاْ بِمَا فِیْ صُحُفِ مُوْسٰی ۟ۙ
ಮೂಸಾರ ಗ್ರಂಥದಲ್ಲಿರುವುದನ್ನು ಅವನಿಗೆ ತಿಳಿಸಲಾಗಿಲ್ಲವೇ ?
Las Exégesis Árabes:
وَاِبْرٰهِیْمَ الَّذِیْ وَ ۟ۙ
ಮತ್ತು ಪ್ರಾಮಾಣಿಕರಾದ ಇಬ್ರಾಹೀಮ್‌ರವರ ಗ್ರಂಥಗಳಲ್ಲಿರುವುದನ್ನು ಸಹ. (ಅವರು ದೌತ್ಯದ ಬಾದ್ಯತೆಯನ್ನು ಪೂರ್ಣಗೊಳಿಸಿದರು)
Las Exégesis Árabes:
اَلَّا تَزِرُ وَازِرَةٌ وِّزْرَ اُخْرٰی ۟ۙ
ಆ ವಿಷಯ ಪಾಪ ಭಾರಹೊರುವ ಯಾವೊಬ್ಬ ವ್ಯಕ್ತಿಯೂ ಇನ್ನೊಬ್ಬ ವ್ಯಕ್ತಿಯ ಭಾರವನ್ನು ಹೊರಲಾರನು.
Las Exégesis Árabes:
وَاَنْ لَّیْسَ لِلْاِنْسَانِ اِلَّا مَا سَعٰی ۟ۙ
ಮನುಷ್ಯನಿಗೆ ತಾನು ಪರಿಶ್ರಮಿಸಿದುದರ ಹೊರತು ಬೇರೇನೂ ಇಲ್ಲವೆಂದು.
Las Exégesis Árabes:
وَاَنَّ سَعْیَهٗ سَوْفَ یُرٰی ۟
ಅವನ ಪರಿಶ್ರಮವನ್ನು ಸದ್ಯದಲ್ಲೇ ನೋಡಲಾಗುವುದು.
Las Exégesis Árabes:
ثُمَّ یُجْزٰىهُ الْجَزَآءَ الْاَوْفٰی ۟ۙ
ತರುವಾಯ ಅವನಿಗೆ ಸಂಪೂರ್ಣ ಪ್ರತಿಫಲವನ್ನು ನೀಡಲಾಗುವುದು.
Las Exégesis Árabes:
وَاَنَّ اِلٰی رَبِّكَ الْمُنْتَهٰی ۟ۙ
ನಿಸ್ಸಂಶಯವಾಗಿಯೂ (ಕೊನೆಗೆ) ಸಕಲರಿಗೂ ತಮ್ಮ ಪ್ರಭುವಿನೆಡೆಗೇ ತಲುಪಲಿಕ್ಕಿರುವುದು.
Las Exégesis Árabes:
وَاَنَّهٗ هُوَ اَضْحَكَ وَاَبْكٰی ۟ۙ
ನಿಶ್ಚಯವಾಗಿ ಅವನೇ (ಅಲ್ಲಾಹನು) ನಗಿಸುತ್ತಾನೆ ಹಾಗು ಅವನೇ ಅಳುವಂತೆ ಮಾಡುತ್ತಾನೆ.
Las Exégesis Árabes:
وَاَنَّهٗ هُوَ اَمَاتَ وَاَحْیَا ۟ۙ
ನಿಶ್ಚಯವಾಗಿ ಅವನೇ ಮರಣ ಕೊಡುತ್ತಾನೆ ಮತ್ತು ಜೀವ ನೀಡುತ್ತಾನೆ.
Las Exégesis Árabes:
 
Traducción de significados Capítulo: An-Najm
Índice de Capítulos Número de página
 
Traducción de los significados del Sagrado Corán - Traducción al Canarés - Bashir Maisuri - Índice de traducciones

Traducida por el Sheikh Bashir Maisuri. Desarrollada bajo la supervisión del Centro Rowad Al-Taryamah.

Cerrar