Check out the new design

ترجمهٔ معانی قرآن کریم - ترجمه‌ى كنادى ـ بشير ميسورى * - لیست ترجمه ها


ترجمهٔ معانی سوره: هود   آیه:
قَالَتْ یٰوَیْلَتٰۤی ءَاَلِدُ وَاَنَا عَجُوْزٌ وَّهٰذَا بَعْلِیْ شَیْخًا ؕ— اِنَّ هٰذَا لَشَیْءٌ عَجِیْبٌ ۟
ಅವರು ಹೇಳಿದರು ಅಯ್ಯೋ ನನ್ನ ಪಾಡೇ ನನಗೆ ಮಗು ಹುಟ್ಟುವುದಾದರೂ ಹೇಗೆ? ನಾನಂತೂ ಹಣ್ಣು ಮುದುಕಿ ಮತ್ತು ಈ ನನ್ನ ಪತಿಯೂ ಸಹ ವಯೋವೃದ್ಧರಾಗಿದ್ದಾರೆ! ನಿಜವಾಗಿಯೂ ಇದೊಂದು ಅದ್ಭುತ ಸಂಗತಿಯಾಗಿದೆ.
تفسیرهای عربی:
قَالُوْۤا اَتَعْجَبِیْنَ مِنْ اَمْرِ اللّٰهِ رَحْمَتُ اللّٰهِ وَبَرَكٰتُهٗ عَلَیْكُمْ اَهْلَ الْبَیْتِ ؕ— اِنَّهٗ حَمِیْدٌ مَّجِیْدٌ ۟
ಮಲಕ್‌ಗಳು ಹೇಳಿದರು; ಅಲ್ಲಾಹನ ವಿಧಿಯ ಬಗ್ಗೆ ನೀವು ಆಶ್ಚರ್ಯ ಪಡುತ್ತಿರುವಿರಾ ? ಮನೆಯವರೇ ನಿಮ್ಮ ಮೇಲೆ ಅಲ್ಲಾಹನ ಕೃಪೆಯು ಅವನ ಸಮೃದ್ಧಿಯೂ ಉಂಟಾಗಲಿ. ನಿಸ್ಸಂಶಯವಾಗಿಯೂ ಅಲ್ಲಾಹನು ಸ್ತುತ್ಯಾರ್ಹನು ಮಹಿಮಾವಂತನೂ ಆಗಿರುವನು.
تفسیرهای عربی:
فَلَمَّا ذَهَبَ عَنْ اِبْرٰهِیْمَ الرَّوْعُ وَجَآءَتْهُ الْبُشْرٰی یُجَادِلُنَا فِیْ قَوْمِ لُوْطٍ ۟ؕ
ಇಬ್ರಾಹೀಮರಿಂದ ಭಯವು ದೂರವಾದಾಗ ಮತ್ತು ಅವರಿಗೆ ಶುಭವಾರ್ತೆಯು ಸಹ ತಲುಪಿದಾಗ ಅವರು ನಮ್ಮೊಂದಿಗೆ ಲೂತರÀ ಜನಾಂಗದ ಬಗ್ಗೆ ವಾಗ್ವಾದ ಮಾಡತೊಡಗಿದರು.
تفسیرهای عربی:
اِنَّ اِبْرٰهِیْمَ لَحَلِیْمٌ اَوَّاهٌ مُّنِیْبٌ ۟
ನಿಜವಾಗಿಯೂ ಇಬ್ರಾಹೀಮ್ ಅತ್ಯಂತ ಸಹನಶೀಲರೂ ಸಹಾನುಭೂತಿಯುಳ್ಳವರು ಮತ್ತು ಅಲ್ಲಾಹನೆಡೆಗೆ ದೈನ್ಯರಾಗುವವರು ಆಗಿದ್ದರು.
تفسیرهای عربی:
یٰۤاِبْرٰهِیْمُ اَعْرِضْ عَنْ هٰذَا ۚ— اِنَّهٗ قَدْ جَآءَ اَمْرُ رَبِّكَ ۚ— وَاِنَّهُمْ اٰتِیْهِمْ عَذَابٌ غَیْرُ مَرْدُوْدٍ ۟
ಓ ಇಬ್ರಾಹೀಮ್ ನೀವು ನಿಮ್ಮ ಈ ವಾಗ್ವಾದ ನಿಲ್ಲಿಸಿರಿ. ತಮ್ಮ ಪ್ರಭುವಿನ ಆದೇಶವು ಬಂದಾಯಿತು. ನಿಶ್ಚಯವಾಗಿಯೂ ಅವರ ಮೇಲೆ ತಡೆಯಲಾಗದಂತಹ ಯಾತನೆಯೊಂದು ಬರಲಿದೆ.
تفسیرهای عربی:
وَلَمَّا جَآءَتْ رُسُلُنَا لُوْطًا سِیْٓءَ بِهِمْ وَضَاقَ بِهِمْ ذَرْعًا وَّقَالَ هٰذَا یَوْمٌ عَصِیْبٌ ۟
ನಮ್ಮ ದೂತರು ಲೂತ್‌ರವರ ಬಳಿಗೆ ಬಂದಾಗ ಅವರು ಅವರ ನಿಮಿತ್ತ ಮಹಾ ಸಂಕಟಕ್ಕೊಳಗಾದರು ಮತ್ತು ಅವರ ಮನಸ್ಸು ಸಂಕುಚಿತಗೊAಡಿತು ಮತ್ತು ಇಂದಿನ ದಿನ ಮಹಾ ಕಠಿಣ ದಿನವಾಗಿದೆ ಎಂದರು.
تفسیرهای عربی:
وَجَآءَهٗ قَوْمُهٗ یُهْرَعُوْنَ اِلَیْهِ ؕ— وَمِنْ قَبْلُ كَانُوْا یَعْمَلُوْنَ السَّیِّاٰتِ ؕ— قَالَ یٰقَوْمِ هٰۤؤُلَآءِ بَنَاتِیْ هُنَّ اَطْهَرُ لَكُمْ فَاتَّقُوا اللّٰهَ وَلَا تُخْزُوْنِ فِیْ ضَیْفِیْ ؕ— اَلَیْسَ مِنْكُمْ رَجُلٌ رَّشِیْدٌ ۟
ಲೂತರ ಬಳಿ ಅವರ ಜನಾಂಗದವರು ಧಾವಿಸುತ್ತಾ ಬಂದರು ಅವರು ಮೊದಲೇ ನೀಚ ಕೃತ್ಯದಲ್ಲಿ ಮುಳುಗಿದವರಾಗಿದ್ದರು. ಲೂತ್‌ರು ಹೇಳಿದರು, ಓ ನನ್ನ ಜನಾಂಗದವರೇ ಇವರು ನನ್ನ ಹೆಣ್ಣುಮಕ್ಕಳು, ಇವರು ನಿಮಗೆ ಅತಿ ಪರಿಶುದ್ಧರಾಗಿದ್ದಾರೆ, ನೀವು ಅಲ್ಲಾಹನನ್ನು ಭಯಪಡಿರಿ, ಮತ್ತು ನನ್ನ ಅತಿಥಿಗಳ ವಿಷಯದಲ್ಲಿ ನನ್ನನ್ನು ಅವಮಾನಿಸಬೇಡಿರಿ. ನಿಮ್ಮಲ್ಲಿ ಸಜ್ಜನ ವ್ಯಕ್ತಿ ಯಾರೂ ಇಲ್ಲವೇ ?
تفسیرهای عربی:
قَالُوْا لَقَدْ عَلِمْتَ مَا لَنَا فِیْ بَنَاتِكَ مِنْ حَقٍّ ۚ— وَاِنَّكَ لَتَعْلَمُ مَا نُرِیْدُ ۟
ಅವರು ಉತ್ತರಿಸಿದರು; ನಿಮ್ಮ ಹೆಣ್ಣು ಮಕ್ಕಳಲ್ಲಿ ನಮಗೆ ಯಾವ ಆಸಕ್ತಿ ಇಲ್ಲವೆಂಬುದನ್ನು ನೀವು ಚೆನ್ನಾಗಿ ಅರಿತಿರುವಿರಿ ಮತ್ತು ನಾವು ಬಯಸುವುದೇನೆಂಬುವುದನ್ನೂ ನಿಮಗೆ ಚೆನ್ನಾಗಿ ತಿಳಿದಿದೆ.
تفسیرهای عربی:
قَالَ لَوْ اَنَّ لِیْ بِكُمْ قُوَّةً اَوْ اٰوِیْۤ اِلٰی رُكْنٍ شَدِیْدٍ ۟
ಲೂತ್‌ರು ಹೇಳಿದರು ನಿಮ್ಮ ವಿರುದ್ಧ ನನಗೆ ಶಕ್ತಿ ಇರುತ್ತಿದ್ದರೆ ಅಥವ ನಾನು ಯಾವುದಾದರೊಂದು ಬಲಿಷ್ಠ ಆಸರೆಯನ್ನು ಹೊಂದಿರುತ್ತಿದ್ದರೆ! (ಬಡಿದು ಓಡಿಸುತ್ತಿದ್ದೆ)
تفسیرهای عربی:
قَالُوْا یٰلُوْطُ اِنَّا رُسُلُ رَبِّكَ لَنْ یَّصِلُوْۤا اِلَیْكَ فَاَسْرِ بِاَهْلِكَ بِقِطْعٍ مِّنَ الَّیْلِ وَلَا یَلْتَفِتْ مِنْكُمْ اَحَدٌ اِلَّا امْرَاَتَكَ ؕ— اِنَّهٗ مُصِیْبُهَا مَاۤ اَصَابَهُمْ ؕ— اِنَّ مَوْعِدَهُمُ الصُّبْحُ ؕ— اَلَیْسَ الصُّبْحُ بِقَرِیْبٍ ۟
ಆಗ ದೇವಚರರು ಹೇಳಿದರು ಓ ಲೂತ್ ನಾವು ನಿಮ್ಮ ಪ್ರಭುವಿನ ದೂತರು. ಅವರು ನಿಮ್ಮಲ್ಲಿಗೆ ಎಂದು ತಲುಪಲಾರರು ಇನ್ನು ನೀವು ರಾತ್ರಿಯು ಒಂದಿಷ್ಟು ಉಳಿದಿರುವಾಗ ನಿಮ್ಮ ಕುಟುಂಬದವರನ್ನು ಕರೆದುಕೊಂಡು ಹೊರಟುಬಿಡಿ. ಆದರೆ ನಿಮ್ಮ ಪತ್ನಿಯ ಹೊರತು ನಿಮ್ಮಲ್ಲಿ ಯಾರು ತಿರುಗಿಯೂ ನೋಡದಿರಲಿ. ಏಕೆಂದರೆ ಅವರೆಲ್ಲರಿಗೂ ಬಾಧಿಸಲಿರುವಂತಹದ್ದು ಅವಳಿಗೂ ಬಾಧಿಸುವುದು, ನಿಶ್ಚಯವಾಗಿಯೂ ಅವರ ವಿನಾಶಕ್ಕಾಗಿ ನಿಶ್ಚಿತ ಸಮಯವು ಪ್ರಭಾತವಾಗಿದೆ. ಪ್ರಭಾತವು ಸಮೀಪವಿಲ್ಲವೇ ?
تفسیرهای عربی:
 
ترجمهٔ معانی سوره: هود
فهرست سوره ها شماره صفحه
 
ترجمهٔ معانی قرآن کریم - ترجمه‌ى كنادى ـ بشير ميسورى - لیست ترجمه ها

مترجم: شیخ بشیر میسوری. تحت نظارت مرکز ترجمه‌ى رواد توسعه یافته است.

بستن