Check out the new design

ترجمهٔ معانی قرآن کریم - ترجمه‌ى كنادى ـ بشير ميسورى * - لیست ترجمه ها


ترجمهٔ معانی سوره: نحل   آیه:
وَیَعْبُدُوْنَ مِنْ دُوْنِ اللّٰهِ مَا لَا یَمْلِكُ لَهُمْ رِزْقًا مِّنَ السَّمٰوٰتِ وَالْاَرْضِ شَیْـًٔا وَّلَا یَسْتَطِیْعُوْنَ ۟ۚ
ಅಲ್ಲಾಹನ ಹೊರತು ಆಕಾಶಗಳಿಂದಾಗಲೀ, ಭೂಮಿಯಿಂದಾಗಲೀ ಅವರಿಗೆ ಜೀವನಾಧಾರವನ್ನು ಕೊಡುವ ಅಧಿಕಾರವಿಲ್ಲದ ಒಂದಿಷ್ಟೂ ಸಾಮರ್ಥ್ಯವಿಲ್ಲದವ ರನ್ನು ಅವರು ಆರಾಧಿಸುತ್ತಿದ್ದಾರೆ.
تفسیرهای عربی:
فَلَا تَضْرِبُوْا لِلّٰهِ الْاَمْثَالَ ؕ— اِنَّ اللّٰهَ یَعْلَمُ وَاَنْتُمْ لَا تَعْلَمُوْنَ ۟
ಇನ್ನು ನೀವು ಅಲ್ಲಾಹನಿಗೆ ಉಪಮೆಗಳನ್ನು ಕಲ್ಪಿಸಬೇಡಿರಿ. ನಿಶ್ಚಯವಾಗಿಯು ಅಲ್ಲಾಹನು ಅರಿಯುತ್ತಾನೆ ಮತ್ತು ನೀವು ಅರಿಯುವುದಿಲ್ಲ.
تفسیرهای عربی:
ضَرَبَ اللّٰهُ مَثَلًا عَبْدًا مَّمْلُوْكًا لَّا یَقْدِرُ عَلٰی شَیْءٍ وَّمَنْ رَّزَقْنٰهُ مِنَّا رِزْقًا حَسَنًا فَهُوَ یُنْفِقُ مِنْهُ سِرًّا وَّجَهْرًا ؕ— هَلْ یَسْتَوٗنَ ؕ— اَلْحَمْدُ لِلّٰهِ ؕ— بَلْ اَكْثَرُهُمْ لَا یَعْلَمُوْنَ ۟
ಅಲ್ಲಾಹನು ಒಂದು ಉಪಮೆಯನ್ನು ಕೊಡುತ್ತಾನೆ: ಪರಾಧೀನನಾದ ಯಾವ ಅಧಿಕಾರವೂ ಹೊಂದಿಲ್ಲದ ಒಬ್ಬ ಗುಲಾಮ ಮತ್ತು ನಾವು ನಮ್ಮ ಬಳಿಯಿಂದ ಉತ್ತಮ ಜೀವನಾಧಾರವನ್ನು ದಯಪಾಲಿಸಿದ್ದು ಅವನು ಅದರಿಂದ ರಹಸ್ಯವಾಗಿಯು, ಬಹಿರಂಗವಾಗಿಯು ಖರ್ಚು ಮಾಡುವ ಮತ್ತೊಬ್ಬ. ಏನು ಇವರಿಬ್ಬರೂ ಸಮಾನರಾಗುವರೇ? ಅಲ್ಲಾಹನಿಗೇ ಸರ್ವಸ್ತುತಿಯು ಮೀಸಲು. ಅದರೆ, ಅವರ ಪೈಕಿ ಹೆಚ್ಚಿನವರು ಅರಿಯುವುದಿಲ್ಲ.
تفسیرهای عربی:
وَضَرَبَ اللّٰهُ مَثَلًا رَّجُلَیْنِ اَحَدُهُمَاۤ اَبْكَمُ لَا یَقْدِرُ عَلٰی شَیْءٍ وَّهُوَ كَلٌّ عَلٰی مَوْلٰىهُ ۙ— اَیْنَمَا یُوَجِّهْهُّ لَا یَاْتِ بِخَیْرٍ ؕ— هَلْ یَسْتَوِیْ هُوَ ۙ— وَمَنْ یَّاْمُرُ بِالْعَدْلِ ۙ— وَهُوَ عَلٰی صِرَاطٍ مُّسْتَقِیْمٍ ۟۠
ಅಲ್ಲಾಹನು ಇಬ್ಬರು ಪುರುಷರ ಇನ್ನೊಂದು ಉಪಮೆಯನ್ನು ಉದಾಹರಿಸುತ್ತಾನೆ; ಅವರಲ್ಲೊಬ್ಬನು ಯಾವುದಕ್ಕೂ ಸಾಮರ್ಥ್ಯವಿಲ್ಲದ ಮೂಕನು, ಅವನು ತನ್ನ ಯಜಮಾನನಿಗೆ ಭಾರವಾಗಿರುತ್ತಾನೆ. ಇವನು ಅವನನ್ನು ಎಲ್ಲಿಗೆ ಕಳುಹಿಸಿದರೂ ಅವನು ಯಾವುದೇ ಒಳಿತನ್ನು ತರುವುದಿಲ್ಲ. ಏನು ಅವನು ಮತ್ತು ನ್ಯಾಯಪಾಲನೆಯನ್ನು ಆದೇಶಿಸುವ ಮತ್ತು ಋಜುವಾದ ಮಾರ್ಗದಲ್ಲೇ ಇರುವ ಇನ್ನೊಬ್ಬನು ಸಮಾನರಾಗುವರೇ?
تفسیرهای عربی:
وَلِلّٰهِ غَیْبُ السَّمٰوٰتِ وَالْاَرْضِ ؕ— وَمَاۤ اَمْرُ السَّاعَةِ اِلَّا كَلَمْحِ الْبَصَرِ اَوْ هُوَ اَقْرَبُ ؕ— اِنَّ اللّٰهَ عَلٰی كُلِّ شَیْءٍ قَدِیْرٌ ۟
ಆಕಾಶಗಳ ಮತ್ತು ಭೂಮಿಯ ಅಗೋಚರ ಜ್ಞಾನವು ಅಲ್ಲಾಹನಿಗೆ ಮಾತ್ರವಿದೆ. ಮತ್ತು ಪ್ರಳಯ ಸಮಯವು ಕಣ್ಣಿನ ರೆಪ್ಪೆ ಬಡಿದಂತೆಯೇ ಅಥವಾ ಅದಕ್ಕಿಂತಲೂ ಅತಿ ಸಮೀಪದಲ್ಲಿದೆ. ನಿಸ್ಸಂಶಯವಾಗಿಯು ಅಲ್ಲಾಹನು ಪ್ರತಿಯೊಂದು ವಸ್ತುವಿನ ಮೇಲೂ ಸಮರ್ಥನಿದ್ದಾನೆ.
تفسیرهای عربی:
وَاللّٰهُ اَخْرَجَكُمْ مِّنْ بُطُوْنِ اُمَّهٰتِكُمْ لَا تَعْلَمُوْنَ شَیْـًٔا ۙ— وَّجَعَلَ لَكُمُ السَّمْعَ وَالْاَبْصَارَ وَالْاَفْـِٕدَةَ ۙ— لَعَلَّكُمْ تَشْكُرُوْنَ ۟
ಅಲ್ಲಾಹನು ನಿಮ್ಮ ತಾಯಂದಿರ ಹೊಟ್ಟೆಗಳಿಂದ ನೀವೇನೂ ಅರಿಯದಂತಹ ಸ್ಥಿತಿಯಲ್ಲಿ ನಿಮ್ಮನ್ನು ಹೊರ ತಂದನು ಅವನೇ ನಿಮಗೆ ಕಿವಿಯನ್ನೂ, ಕಣ್ಣುಗಳನ್ನೂ, ಹೃದಯಗಳನ್ನೂ ನೀಡಿದನು. ಬಹುಶಃ ನೀವು ಕೃತಜ್ಞತೆ ತೋರಬಹುದು.
تفسیرهای عربی:
اَلَمْ یَرَوْا اِلَی الطَّیْرِ مُسَخَّرٰتٍ فِیْ جَوِّ السَّمَآءِ ؕ— مَا یُمْسِكُهُنَّ اِلَّا اللّٰهُ ؕ— اِنَّ فِیْ ذٰلِكَ لَاٰیٰتٍ لِّقَوْمٍ یُّؤْمِنُوْنَ ۟
ಆಜ್ಞಾವಿಧೇಯರಾಗಿ ಅಂತರಿಕ್ಷದಲ್ಲಿರುವ ಹಕ್ಕಿಗಳನ್ನು ಅವರು ನೋಡಲಿಲ್ಲವೇ? ಅವುಗಳನ್ನು ಅಲ್ಲಾಹನ ಹೊರತು ಯಾರೂ ಆಧರಿಸಿ ಹಿಡಿದಿರುವುದಿಲ್ಲ. ನಿಸ್ಸಂದೇಹವಾಗಿಯೂ ಸತ್ಯವಿಶ್ವಾಸವಿಡುವ ಜನರಿಗೆ ಇದರಲ್ಲಿ ಅನೇಕ ನಿದರ್ಶನಗಳಿವೆ.
تفسیرهای عربی:
 
ترجمهٔ معانی سوره: نحل
فهرست سوره ها شماره صفحه
 
ترجمهٔ معانی قرآن کریم - ترجمه‌ى كنادى ـ بشير ميسورى - لیست ترجمه ها

مترجم: شیخ بشیر میسوری. تحت نظارت مرکز ترجمه‌ى رواد توسعه یافته است.

بستن