Check out the new design

ترجمهٔ معانی قرآن کریم - ترجمه‌ى كنادى ـ بشير ميسورى * - لیست ترجمه ها


ترجمهٔ معانی سوره: اسراء   آیه:
وَمَنْ یَّهْدِ اللّٰهُ فَهُوَ الْمُهْتَدِ ۚ— وَمَنْ یُّضْلِلْ فَلَنْ تَجِدَ لَهُمْ اَوْلِیَآءَ مِنْ دُوْنِهٖ ؕ— وَنَحْشُرُهُمْ یَوْمَ الْقِیٰمَةِ عَلٰی وُجُوْهِهِمْ عُمْیًا وَّبُكْمًا وَّصُمًّا ؕ— مَاْوٰىهُمْ جَهَنَّمُ ؕ— كُلَّمَا خَبَتْ زِدْنٰهُمْ سَعِیْرًا ۟
ಯಾರಿಗೆ ಅಲ್ಲಾಹನು ಸನ್ಮಾರ್ಗದಲ್ಲಿ ಮುನ್ನಡೆಸುತ್ತನೋ ಅವನೇ ಸನ್ಮಾರ್ಗ ಪಡೆಯುತ್ತಾನೆ. ಮತ್ತು ಅವನು ಯಾರನ್ನು ದಾರಿಗೆಡಿಸುತ್ತಾನೋ ಇಂತಹವರಿಗೆ ಖಂಡಿತವಾಗಿಯೂ ನೀವು ಅಲ್ಲಾಹನ ಹೊರತು ಅವನ ಸಹಾಯಕ ಮಿತ್ರನಾಗಿ ಇನ್ನಾರನ್ನು ಪಡೆಯಲಾರಿರಿ. ಅಂತಹವರನ್ನು ನಾವು ಪ್ರಳಯ ದಿನದಂದು ಕುರುಡರು, ಮೂಗರು, ಕಿವುಡರನ್ನಾಗಿ ಮಾಡಿ ಅಧೋಮುಕಿಗಳನ್ನಾಗಿ ಒಟ್ಟು ಸೇರಿಸುವೆವು. ಅವರ ನೆಲೆಯು ನರಕವಾಗಿರುವುದು. ಅದರ ಅಗ್ನಿಯು ಮಂದವಾದಾಗಲೆಲ್ಲಾ ನಾವು ಅವರ ಮೇಲೆ ಅದನ್ನು ಭುಗಿಲೆಬ್ಬಿಸುತ್ತಿರುವೆವು.
تفسیرهای عربی:
ذٰلِكَ جَزَآؤُهُمْ بِاَنَّهُمْ كَفَرُوْا بِاٰیٰتِنَا وَقَالُوْۤا ءَاِذَا كُنَّا عِظَامًا وَّرُفَاتًا ءَاِنَّا لَمَبْعُوْثُوْنَ خَلْقًا جَدِیْدًا ۟
ಇದು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದಕ್ಕಾಗಿ ಮತ್ತು ನಾವು ಎಲುಬುಗಳಾಗಿ, ಚೂರು ಚೂರಾದ ಬಳಿಕವೂ ಹೊಸ ಸೃಷ್ಟಿಯಲ್ಲಿ ಎಬ್ಬಿಸಲ್ಪಡುತ್ತೇವೆಯೇ? ಎಂದು ಅವರು ಹೇಳುತ್ತಿದ್ದುದರ ಪ್ರತಿಫಲವಾಗಿದೆ.
تفسیرهای عربی:
اَوَلَمْ یَرَوْا اَنَّ اللّٰهَ الَّذِیْ خَلَقَ السَّمٰوٰتِ وَالْاَرْضَ قَادِرٌ عَلٰۤی اَنْ یَّخْلُقَ مِثْلَهُمْ وَجَعَلَ لَهُمْ اَجَلًا لَّا رَیْبَ فِیْهِ ؕ— فَاَبَی الظّٰلِمُوْنَ اِلَّا كُفُوْرًا ۟
ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದ ಅಲ್ಲಾಹನು ಖಂಡಿತವಾಗಿಯೂ ಅವರಂತಿರುವವರನ್ನು ಸೃಷ್ಟಿಸಲು ಶಕ್ತನಾಗಿದ್ದಾನೆಂದು ಅವರು ನೋಡುವುದಿಲ್ಲವೇ? ಮತ್ತು ಅವನು ಅವರಿಗೆ ಒಂದು ಕಾಲಾವಧಿಯನ್ನು ನಿಶ್ಚಯಿಸಿದನು: ಅದರಲ್ಲಿ ಸಂಶಯವಿಲ್ಲ. ಆದರೆ ಅಕ್ರಮಿಗಳು ನಿಷೇಧವನ್ನು ತಾಳದೇ ಇರುವುದಿಲ್ಲ.
تفسیرهای عربی:
قُلْ لَّوْ اَنْتُمْ تَمْلِكُوْنَ خَزَآىِٕنَ رَحْمَةِ رَبِّیْۤ اِذًا لَّاَمْسَكْتُمْ خَشْیَةَ الْاِنْفَاقِ ؕ— وَكَانَ الْاِنْسَانُ قَتُوْرًا ۟۠
ಓ ಪೈಗಂಬರರೇ ಹೇಳಿರಿ: ನೀವು ನನ್ನ ಪ್ರಭುವಿನ ಕಾರುಣ್ಯದ ಭಂಡಾರಗಳ ಒಡೆಯರಾಗಿರುತ್ತಿದ್ದರೂ ಅದು ಖರ್ಚಾಗಿಬಿಡುವ ಭಯದಿಂದ ನೀವದನ್ನು ತಡೆದಿರಿಸಿಕೊಳ್ಳುತ್ತಿದ್ದಿರಿ ಮತ್ತು ಮನುಷ್ಯನು ಬಲು ಜಿಪುಣನೇ ಆಗಿದ್ದಾನೆ.
تفسیرهای عربی:
وَلَقَدْ اٰتَیْنَا مُوْسٰی تِسْعَ اٰیٰتٍۢ بَیِّنٰتٍ فَسْـَٔلْ بَنِیْۤ اِسْرَآءِیْلَ اِذْ جَآءَهُمْ فَقَالَ لَهٗ فِرْعَوْنُ اِنِّیْ لَاَظُنُّكَ یٰمُوْسٰی مَسْحُوْرًا ۟
(ಓ ಪೈಗಂಬರರೇ) ನಾವು ಮೂಸಾರವರಿಗೆ ಸುಸ್ಪಷ್ಟವಾದ ಒಂಬತ್ತು ದೃಷ್ಟಾಂತಗಳನ್ನು ದಯಪಾಲಿಸಿದೆವು. ಇನ್ನು ನೀವು ಇಸ್ರಾಯೀಲ್ ಸಂತತಿಗಳೊAದಿಗೆ ಕೇಳಿರಿ: ಅವರು (ಮೂಸಾರವರು) ಅವರೆಡೆಗೆ ಬಂದಾಗ ಫಿರ್‌ಔನ್ ಹೇಳಿದನು: ಓ ಮೂಸಾ, ಖಂಡಿತವಾಗಿಯು ನೀನೊಬ್ಬ ಮಾಟಬಾಧಿತನೆಂದು ನಾನು ಭಾವಿಸುತ್ತೇನೆ.
تفسیرهای عربی:
قَالَ لَقَدْ عَلِمْتَ مَاۤ اَنْزَلَ هٰۤؤُلَآءِ اِلَّا رَبُّ السَّمٰوٰتِ وَالْاَرْضِ بَصَآىِٕرَ ۚ— وَاِنِّیْ لَاَظُنُّكَ یٰفِرْعَوْنُ مَثْبُوْرًا ۟
ಮೂಸಾ ಉತ್ತರಿಸಿದರು: ಈ ದೃಷ್ಟಾಂತಗಳನ್ನು(ಸತ್ಯವನ್ನು) ನಿನಗೆ ಮನವರಿಕೆ ಮಾಡಿಕೊಡಲು ಆಕಾಶಗಳ ಮತ್ತು ಭೂಮಿಯ ಪ್ರಭುವೇ ಇಳಿಸಿಕೊಟ್ಟಿರುವನೆಂದು ನಿನಗೆ ಚೆನ್ನಾಗಿ ತಿಳಿದಿದೆ. ಓ ಫಿರ್‌ಔನ್ ನಿಶ್ಚಯವಾಗಿಯೂ ನೀನು ನಾಶಕ್ಕೊಳಗಾಗಿರುವೆ ಎಂದು ನಾನು ಭಾವಿಸುತ್ತೇನೆ.
تفسیرهای عربی:
فَاَرَادَ اَنْ یَّسْتَفِزَّهُمْ مِّنَ الْاَرْضِ فَاَغْرَقْنٰهُ وَمَنْ مَّعَهٗ جَمِیْعًا ۟ۙ
ಕೊನೆಗೆ ಫಿರ್‌ಔನ್ ಅವರನ್ನು ಭೂಮುಖದಿಂದಲೇ ಕಿತ್ತೆಸೆಯಲಿಕ್ಕಾಗಿ ನಿರ್ಧರಿಸಿದನು. ಆದರೆ ನಾವು ಅವನನ್ನು ಮತ್ತು ಅವನ ಜೊತೆಯಿದ್ದವರನ್ನು ಮುಳಿಗಿಸಿಬಿಟ್ಟೆವು.
تفسیرهای عربی:
وَّقُلْنَا مِنْ بَعْدِهٖ لِبَنِیْۤ اِسْرَآءِیْلَ اسْكُنُوا الْاَرْضَ فَاِذَا جَآءَ وَعْدُ الْاٰخِرَةِ جِئْنَا بِكُمْ لَفِیْفًا ۟ؕ
ಅವನ ನಾಶದ ನಂತರ ನಾವು ಇಸ್ರಾಯೀಲ್ ಸಂತತಿಗಳಿಗೆ ಹೇಳಿದೆವು: ನೀವು ಈ ಭೂಪ್ರದೇಶದಲ್ಲಿ (ಫಲಸ್ತೀನ್) ವಾಸಿಸಿರಿ. ಇನ್ನು ಪರಲೋಕದ ವಾಗ್ದಾನವು ಬಂದುಬಿಟ್ಟರೆ ನಾವು ನಿಮ್ಮನ್ನು ಒಟ್ಟುಗೂಡಿಸಿ ತರುವೆವು.
تفسیرهای عربی:
 
ترجمهٔ معانی سوره: اسراء
فهرست سوره ها شماره صفحه
 
ترجمهٔ معانی قرآن کریم - ترجمه‌ى كنادى ـ بشير ميسورى - لیست ترجمه ها

مترجم: شیخ بشیر میسوری. تحت نظارت مرکز ترجمه‌ى رواد توسعه یافته است.

بستن