Check out the new design

ترجمهٔ معانی قرآن کریم - ترجمه‌ى كنادى ـ بشير ميسورى * - لیست ترجمه ها


ترجمهٔ معانی سوره: کهف   آیه:
قَالَ اَلَمْ اَقُلْ لَّكَ اِنَّكَ لَنْ تَسْتَطِیْعَ مَعِیَ صَبْرًا ۟
ಅವರು ಹೇಳಿದರು: ನಿಮಗೆ ನನ್ನ ಜೊತೆ ಸಹನೆವಹಿಸಲು ಸಾಧ್ಯವಿಲ್ಲವೆಂದು ನಾನು ನಿಮಗೆ ಹೇಳಿರಲಿಲ್ಲವೇ?
تفسیرهای عربی:
قَالَ اِنْ سَاَلْتُكَ عَنْ شَیْ بَعْدَهَا فَلَا تُصٰحِبْنِیْ ۚ— قَدْ بَلَغْتَ مِنْ لَّدُنِّیْ عُذْرًا ۟
ಆಗ ಮೂಸಾ ವಿನಂತಿಸಿದರು: ಇನ್ನು ನಾನು ಇದರ ನಂತರ ನಿಮ್ಮಿಂದ ಯಾವುದೇ ವಿಷಯದ ಬಗ್ಗೆ ಪ್ರಶ್ನಿಸಿದರೆ ನೀವು ನನ್ನನ್ನು ಸಂಗಡವಿರಿಸಬೇಡಿರಿ. ನಿಶ್ಚಯವಾಗಿಯು ಈಗಂತೂ ನೀವು ನನ್ನ ಬಳಿಯ ಅಂತಿಮ ನೆಪಕ್ಕೆ ತಲುಪಿರುವಿರಿ.
تفسیرهای عربی:
فَانْطَلَقَا ۫— حَتّٰۤی اِذَاۤ اَتَیَاۤ اَهْلَ قَرْیَةِ ١سْتَطْعَمَاۤ اَهْلَهَا فَاَبَوْا اَنْ یُّضَیِّفُوْهُمَا فَوَجَدَا فِیْهَا جِدَارًا یُّرِیْدُ اَنْ یَّنْقَضَّ فَاَقَامَهٗ ؕ— قَالَ لَوْ شِئْتَ لَتَّخَذْتَ عَلَیْهِ اَجْرًا ۟
ಅನಂತರ ಅವರಿಬ್ಬರೂ ಮುಂದೆ ಸಾಗಿದರು. ಕೊನೆಗೆ ಅವರು ಒಂದು ಗ್ರಾಮದ ನಿವಾಸಿಗಳೆಡೆಗೆ ಬಂದು ಅವರಿಂದ ಊಟ ಕೇಳಿದರು. ಆಗ ಅವರು ಅವರ ಅತಿಥ್ಯ ವಹಿಸಲು ನಿರಾಕರಿಸಿದರು. ಅವರಿಬ್ಬರೂ ಅಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿದ್ದ ಗೋಡೆಯೊಂದನ್ನು ಕಂಡರು. ಆಗ ಅವರು ಅದನ್ನು ದುರಸ್ಥಿ ಮಾಡಿದರು. ಮೂಸಾ ಹೇಳಿದರು: ನೀವು ಇಚ್ಛಿಸಿರುತ್ತಿದ್ದರೆ ಈ ಕಾರ್ಯದ ಪ್ರತಿಫಲ ಪಡೆಯಬಹುದಿತ್ತು.
تفسیرهای عربی:
قَالَ هٰذَا فِرَاقُ بَیْنِیْ وَبَیْنِكَ ۚ— سَاُنَبِّئُكَ بِتَاْوِیْلِ مَا لَمْ تَسْتَطِعْ عَّلَیْهِ صَبْرًا ۟
ಅವರು ಹೇಳಿದರು: ಇದು ನನ್ನ ಮತ್ತು ನಿಮ್ಮ ನಡುವಿನ ಅಗಲುವಿಕೆಯ ಸಮಯವಾಗಿದೆ. ನಿಮಗೆ ಸಹನೆ ವಹಿಸಲಾಗದಂತಹ ವಿಷಯಗಳ ವಾಸ್ತವಿಕತೆಯನ್ನು ನಾನೀಗ ನಿಮಗೆ ತಿಳಿಸಿಕೊಡುವೆನು.
تفسیرهای عربی:
اَمَّا السَّفِیْنَةُ فَكَانَتْ لِمَسٰكِیْنَ یَعْمَلُوْنَ فِی الْبَحْرِ فَاَرَدْتُّ اَنْ اَعِیْبَهَا وَكَانَ وَرَآءَهُمْ مَّلِكٌ یَّاْخُذُ كُلَّ سَفِیْنَةٍ غَصْبًا ۟
ಆ ಹಡಗು ಸಮುದ್ರದಲ್ಲಿ ದುಡಿಯುತ್ತಿದ್ದಂತಹ ಕೆಲವು ಬಡ ಜನರದ್ದಾಗಿತ್ತು. ನಾನು ಅದರಲ್ಲಿ ದೋಷವನ್ನುಂಟು ಮಾಡಲು ಇಚ್ಛಿಸಿದೆನು. ಏಕೆಂದರೆ ಅವರ ಪ್ರದೇಶದ ನಂತರ ಎಲ್ಲಾ ಉತ್ತಮ ಹಡಗುಗಳನ್ನು ಅಕ್ರಮವಾಗಿ ವಶಪಡಿಸಿ ಕೊಳ್ಳಿತ್ತಿದ್ದ ಒಬ್ಬ ರಾಜನಿದ್ದನು.
تفسیرهای عربی:
وَاَمَّا الْغُلٰمُ فَكَانَ اَبَوٰهُ مُؤْمِنَیْنِ فَخَشِیْنَاۤ اَنْ یُّرْهِقَهُمَا طُغْیَانًا وَّكُفْرًا ۟ۚ
ಮತ್ತು ಆ ಬಾಲಕ, ಅವನ ತಂದೆ-ತಾಯಿಗಳು ಸತ್ಯವಿಶ್ವಾಸಿಗಳಾಗಿದ್ದರು. ಆದರೆ ಅವನು ದೊಡ್ಡವನಾಗಿ ಅವರಿಬ್ಬರನ್ನೂ ತನ್ನ ಅತಿಕ್ರಮ ಮತ್ತು ಸತ್ಯನಿಷೇಧಕ್ಕೆ ದೂಡಿಬಿಡಬಹುದೆಂದು ನಾವು ಭಯಪಟ್ಟೆವು.
تفسیرهای عربی:
فَاَرَدْنَاۤ اَنْ یُّبْدِلَهُمَا رَبُّهُمَا خَیْرًا مِّنْهُ زَكٰوةً وَّاَقْرَبَ رُحْمًا ۟
ಆದ್ದರಿಂದ ಅವರಿಗೆ ಅವರ ಪ್ರಭುವು ಅವನ ಬದಲಿಗೆ ಅವನಿಗಿಂತ ಉತ್ತಮ ಪರಿಶುದ್ಧತೆ ಮತ್ತು ಹೆಚ್ಚು ಕರುಣೆಯುಳ್ಳ ಮಗನನ್ನು ಕರುಣಿಸಲೆಂದು ನಾವು ಬಯಸಿದೆವು.
تفسیرهای عربی:
وَاَمَّا الْجِدَارُ فَكَانَ لِغُلٰمَیْنِ یَتِیْمَیْنِ فِی الْمَدِیْنَةِ وَكَانَ تَحْتَهٗ كَنْزٌ لَّهُمَا وَكَانَ اَبُوْهُمَا صَالِحًا ۚ— فَاَرَادَ رَبُّكَ اَنْ یَّبْلُغَاۤ اَشُدَّهُمَا وَیَسْتَخْرِجَا كَنْزَهُمَا ۖۗ— رَحْمَةً مِّنْ رَّبِّكَ ۚ— وَمَا فَعَلْتُهٗ عَنْ اَمْرِیْ ؕ— ذٰلِكَ تَاْوِیْلُ مَا لَمْ تَسْطِعْ عَّلَیْهِ صَبْرًا ۟ؕ۠
ಆ ಗೋಡೆ, ಪಟ್ಟಣದ ಇಬ್ಬರು ಅನಾಥ ಬಾಲಕರದ್ದಾಗಿತ್ತು. ಅವರಿಗಾಗಿ ನಿಧಿಯು ಆ ಗೋಡಯ ಅಡಿಯಲ್ಲಿ ಹೂತಿಡಲಾಗಿತ್ತು ಮತ್ತು ಅವರ ತಂದೆಯು ಒಬ್ಬ ಸಜ್ಜನ ವ್ಯಕ್ತಿಯಾಗಿದ್ದರು. ನಿಮ್ಮ ಪ್ರಭುವು ಅವರಿಬ್ಬರೂ ತಮ್ಮ ಯೌವ್ವನಕ್ಕೆ ತಲುಪಿ ತಮ್ಮ ನಿಧಿಯನ್ನು ಹೊರತೆಗೆಯಲೆಂದು ಬಯಸಿದನು. ಇದು ನಿಮ್ಮ ಪ್ರಭುವಿನ ಕೃಪೆಯಾಗಿತ್ತು, ಮತ್ತು ಇದನ್ನು ನಾನು ನನ್ನ ಅಭಿಪ್ರಾಯದ ಮೇರೆಗೆ ಮಾಡಿರುವುದಿಲ್ಲ. ನಿಮಗೆ ಸಹನೆ ವಹಿಸಲಾಗದಂತಹ ವಿಚಾರಗಳ ವಾಸ್ತವಿಕತೆಯು ಇದಾಗಿದೆ.
تفسیرهای عربی:
وَیَسْـَٔلُوْنَكَ عَنْ ذِی الْقَرْنَیْنِ ؕ— قُلْ سَاَتْلُوْا عَلَیْكُمْ مِّنْهُ ذِكْرًا ۟ؕ
ಓ ಪೈಗಂಬರರೇ, ಅವರು ನಿಮ್ಮೊಡನೆ ‘ಜುಲ್ಖರ್‌ನೈನ್'ನ ಬಗ್ಗೆ ಕೇಳುತ್ತಾರೆ. ಸಧ್ಯವೇ, ನಾನು ನಿಮಗೆ ಆತನ ಕೆಲವು ವಿಷಯಗಳನ್ನು ಓದಿ ತಿಳಿಸುವೆನು ಎಂದು ಹೇಳಿರಿ.
تفسیرهای عربی:
 
ترجمهٔ معانی سوره: کهف
فهرست سوره ها شماره صفحه
 
ترجمهٔ معانی قرآن کریم - ترجمه‌ى كنادى ـ بشير ميسورى - لیست ترجمه ها

مترجم: شیخ بشیر میسوری. تحت نظارت مرکز ترجمه‌ى رواد توسعه یافته است.

بستن