Check out the new design

ترجمهٔ معانی قرآن کریم - ترجمه‌ى كنادى ـ بشير ميسورى * - لیست ترجمه ها


ترجمهٔ معانی سوره: بقره   آیه:
وَقَالُوْا كُوْنُوْا هُوْدًا اَوْ نَصٰرٰی تَهْتَدُوْا ؕ— قُلْ بَلْ مِلَّةَ اِبْرٰهٖمَ حَنِیْفًا ؕ— وَمَا كَانَ مِنَ الْمُشْرِكِیْنَ ۟
ನೀವು ಯಹೂದರು ಅಥವಾ ಕ್ರೆöÊಸ್ತರಾದರೆ ಮಾತ್ರ ಸನ್ಮಾರ್ಗ ಪಡೆಯುತ್ತೀರಿ ಎಂದು ಅವರು ಹೇಳುತ್ತಾರೆ. ಹೇಳಿರಿ (ಓ ಪೈಗಂಬರರೇ) (ನಾವಂತೂ) ಸತ್ಯದಲ್ಲಿ ಏಕಾಗ್ರಚಿತ್ತರಾಗಿದ್ದ, ಇಬ್ರಾಹೀಮ(ಅ)ರ ಮಾರ್ಗವನ್ನು ಅನುಸರಿಸುತ್ತೇವೆ. ಮತ್ತು ಅವರು ಬಹುದೇವಾರಾಧಕರಾಗಿರಲಿಲ್ಲ.
تفسیرهای عربی:
قُوْلُوْۤا اٰمَنَّا بِاللّٰهِ وَمَاۤ اُنْزِلَ اِلَیْنَا وَمَاۤ اُنْزِلَ اِلٰۤی اِبْرٰهٖمَ وَاِسْمٰعِیْلَ وَاِسْحٰقَ وَیَعْقُوْبَ وَالْاَسْبَاطِ وَمَاۤ اُوْتِیَ مُوْسٰی وَعِیْسٰی وَمَاۤ اُوْتِیَ النَّبِیُّوْنَ مِنْ رَّبِّهِمْ ۚ— لَا نُفَرِّقُ بَیْنَ اَحَدٍ مِّنْهُمْ ؗ— وَنَحْنُ لَهٗ مُسْلِمُوْنَ ۟
(ಓ ಸತ್ಯವಿಶ್ವಾಸಿಗಳೇ) ಹೇಳಿರಿ; ನಾವು ಅಲ್ಲಾಹನಲ್ಲೂ, ನಮ್ಮ ಕಡೆಗೆ ಅವತೀರ್ಣಗೊಂಡಿರುವುದರಲ್ಲೂ, ಇಬ್ರಾಹೀಮ್, ಇಸ್ಮಾಯೀಲ್, ಇಸ್‌ಹಾಕ್ ಯಾಕೂಬ್ ಮತ್ತು ಯಾಕೂಬರ ಸಂತಿತಿಯೆಡೆಗೆ ಅವತೀರ್ಣ ಗೊಂಡಿರುವದರಲ್ಲೂ, ಮೂಸಾ, ಈಸಾ ಮತ್ತು ಎಲ್ಲಾ ಪ್ರವಾದಿಗಳೂ ತಮ್ಮ ಪ್ರಭುವಿನ ಕಡೆಯಿಂದ ಅವತೀರ್ಣಗೊಂಡಿರುವುದರಲ್ಲೂ ವಿಶ್ವಾಸವಿರಿಸಿರುತ್ತೇವೆ. ನಾವು ಅವರ ಪೈಕಿ ಯಾರ ನಡುವೆಯೂ ತಾರತಮ್ಯ ಮಾಡುವುದಿಲ್ಲ ಮತ್ತು ನಾವು ಅವನಿಗೆ ಸಂಪೂರ್ಣವಾಗಿ ವಿಧೇಯರಾಗಿದ್ದೇವೆ.
تفسیرهای عربی:
فَاِنْ اٰمَنُوْا بِمِثْلِ مَاۤ اٰمَنْتُمْ بِهٖ فَقَدِ اهْتَدَوْا ۚ— وَاِنْ تَوَلَّوْا فَاِنَّمَا هُمْ فِیْ شِقَاقٍ ۚ— فَسَیَكْفِیْكَهُمُ اللّٰهُ ۚ— وَهُوَ السَّمِیْعُ الْعَلِیْمُ ۟ؕ
ನೀವು ವಿಶ್ವಾಸವಿರಿಸಿದಂತೆ ಅವರು ವಿಶ್ವಾಸವಿರಿಸಿದರೆ ಸನ್ಮಾರ್ಗ ಪಡೆದುಕೊಳ್ಳುವರು ಮತ್ತು ಅವರು ವಿಮುಖರಾಗುವುದಾದರೆ ವಿರೋಧದಲ್ಲಿದ್ದಾರೆ. ಅವರ ವಿರುದ್ಧ ನಿಮಗೆ ಸಹಾಯಕನಾಗಿ ಅಲ್ಲಾಹನೇ ಸಾಕು ಮತ್ತು ಅವನು ಸರ್ವವನ್ನಾಲಿಸುವವನೂ, ಸರ್ವಜ್ಞಾನಿಯು ಆಗಿದ್ದಾನೆ.
تفسیرهای عربی:
صِبْغَةَ اللّٰهِ ۚ— وَمَنْ اَحْسَنُ مِنَ اللّٰهِ صِبْغَةً ؗ— وَّنَحْنُ لَهٗ عٰبِدُوْنَ ۟
ಅಲ್ಲಾಹನ ವರ್ಣವನ್ನು (ಧರ್ಮವನ್ನು) ಅಂಗೀಕರಿಸಿರಿ ಮತ್ತು ಅಲ್ಲಾಹನಿಗಿಂತ ಅತ್ಯುತ್ತಮ ವರ್ಣವು (ಧರ್ಮವು) ಯಾರದಿರಬಹುದು ಮತ್ತು ನಾವು ಅವನನ್ನು ಮಾತ್ರ ಆರಾಧಿಸುವವರಾಗಿದ್ದೇವೆ.
تفسیرهای عربی:
قُلْ اَتُحَآجُّوْنَنَا فِی اللّٰهِ وَهُوَ رَبُّنَا وَرَبُّكُمْ ۚ— وَلَنَاۤ اَعْمَالُنَا وَلَكُمْ اَعْمَالُكُمْ ۚ— وَنَحْنُ لَهٗ مُخْلِصُوْنَ ۟ۙ
(ಓ ಪೈಗಂಬರರೇ) ಹೇಳಿರಿ; ಅಲ್ಲಾಹನ ವಿಚಾರದಲ್ಲಿ ನಮ್ಮೊಂದಿಗೆ ವಾಗ್ವಾದ ನಡೆಸುತ್ತಿರುವಿರಾ? ವಾಸ್ತವದಲ್ಲಿ ಅವನೇ ನಮ್ಮ ಪ್ರಭುವೂ ಮತ್ತು ನಿಮ್ಮ ಪ್ರಭುವೂ ಆಗಿದ್ದಾನೆ. ನಮಗೆ ನಮ್ಮ ಕರ್ಮಫಲವಿದೆ ನಿಮಗೆ ನಿಮ್ಮ ಕರ್ಮಫಲವಿದೆ. ನಾವು ಅವನಿಗೆ ಮಾತ್ರ ಏಕನಿಷ್ಠರಾಗಿದ್ದೇವೆ.
تفسیرهای عربی:
اَمْ تَقُوْلُوْنَ اِنَّ اِبْرٰهٖمَ وَاِسْمٰعِیْلَ وَاِسْحٰقَ وَیَعْقُوْبَ وَالْاَسْبَاطَ كَانُوْا هُوْدًا اَوْ نَصٰرٰی ؕ— قُلْ ءَاَنْتُمْ اَعْلَمُ اَمِ اللّٰهُ ؕ— وَمَنْ اَظْلَمُ مِمَّنْ كَتَمَ شَهَادَةً عِنْدَهٗ مِنَ اللّٰهِ ؕ— وَمَا اللّٰهُ بِغَافِلٍ عَمَّا تَعْمَلُوْنَ ۟
ಇಬ್ರಾಹೀಮ್, ಇಸ್ಮಾಯೀಲ್, ಇಸ್‌ಹಾಕ್, ಯಾಕೂಬ್ ಹಾಗೂ ಯಾಕೂಬರ ಸಂತತಿಗಳು ಯಹೂದರು ಅಥವಾ ಕ್ರೆöÊಸ್ತರಾಗಿದ್ದರೆಂದು ಎಂದು ನೀವು ಹೇಳುತ್ತಿರುವಿರಾ? (ಓ ಪೈಗಂಬರರೇ) ಕೇಳಿರಿ; ಹೆಚ್ಚು ಬಲ್ಲವರು ನೀವೋ ಅಥವಾ ಅಲ್ಲಾಹನೋ? ಮತ್ತು ಅಲ್ಲ್ಲಾಹನ ಕಡೆಯ ಸಾಕ್ಷö್ಯವು ತನ್ನ ಬಳಿ ಅಡಗಿಸಿದವನಿಗಿಂತ ದೊಡ್ಡ ಅಕ್ರಮಿಯು ಇನ್ನಾರಿದ್ದಾನೆ? ಮತ್ತು ಅಲ್ಲಾಹನು ನೀವು ಮಾಡುತ್ತಿರುವುÀದರ ಕುರಿತು ಅಲಕ್ಷö್ಯನಲ್ಲ.
تفسیرهای عربی:
تِلْكَ اُمَّةٌ قَدْ خَلَتْ ۚ— لَهَا مَا كَسَبَتْ وَلَكُمْ مَّا كَسَبْتُمْ ۚ— وَلَا تُسْـَٔلُوْنَ عَمَّا كَانُوْا یَعْمَلُوْنَ ۟۠
ಆ ಸಮುದಾಯವು ಗತಿಸಿ ಹೋಗಿದೆ ಅವರು ಸಂಪಾದಿಸಿದ್ದು ಅವರಿಗಿದೆ ಮತ್ತು ನೀವು ಸಂಪಾದಿಸಿದ್ದು ನಿಮಗದೆ. ಅವರ ಕರ್ಮಗಳ ಕುರಿತು ನೀವು ವಿಚಾರಿಸಲ್ಪಡಲಾರಿರಿ.
تفسیرهای عربی:
 
ترجمهٔ معانی سوره: بقره
فهرست سوره ها شماره صفحه
 
ترجمهٔ معانی قرآن کریم - ترجمه‌ى كنادى ـ بشير ميسورى - لیست ترجمه ها

مترجم: شیخ بشیر میسوری. تحت نظارت مرکز ترجمه‌ى رواد توسعه یافته است.

بستن