Check out the new design

ترجمهٔ معانی قرآن کریم - ترجمه‌ى كنادى ـ بشير ميسورى * - لیست ترجمه ها


ترجمهٔ معانی سوره: یس   آیه:
اَوَلَمْ یَرَوْا اَنَّا خَلَقْنَا لَهُمْ مِّمَّا عَمِلَتْ اَیْدِیْنَاۤ اَنْعَامًا فَهُمْ لَهَا مٰلِكُوْنَ ۟
ನಾವು ನಮ್ಮ ಕÉÊಗಳಿಂದ ನಿರ್ಮಿಸಲಾದ ವಸ್ತುಗಳ ಪÉÊಕಿ ಅವರಿಗಾಗಿ ಜಾನುವರುಗಳನ್ನು ಸೃಷ್ಟಿಸಿರುವುದನ್ನು ಅವರು ಕಾಣುವುದಿಲ್ಲವೇ ? ಈಗ ಅವರು ಅವುಗಳ ಒಡೆಯರಾಗಿ ಬಿಟ್ಟಿದ್ದಾರೆ.
تفسیرهای عربی:
وَذَلَّلْنٰهَا لَهُمْ فَمِنْهَا رَكُوْبُهُمْ وَمِنْهَا یَاْكُلُوْنَ ۟
ಮತ್ತು ನಾವು ಆ ಜಾನುವಾರುಗಳನ್ನು ಅವರಿಗೆ ವಿಧೇಯಗೊಳಿಸಿದೆವು. ಅವುಗಳಲ್ಲಿ ಕೆಲವು ಅವರ ಸವಾರಿಗಳಾಗಿವೆ ಮತ್ತು ಕೆಲವೊಂದರ ಮಾಂಸವನ್ನು ಅವರು ತಿನ್ನುತ್ತಾರೆ.
تفسیرهای عربی:
وَلَهُمْ فِیْهَا مَنَافِعُ وَمَشَارِبُ ؕ— اَفَلَا یَشْكُرُوْنَ ۟
ಅವರಿಗೆ ಅವುಗಳಲ್ಲಿ ಇನ್ನೂ ಅನೇಕ ಪ್ರಯೋಜನಗಳಿವೆ ಮತ್ತು ಪಾನೀಯವೂ ಇದೆ. ಹಾಗಿದ್ದೂ ಅವರು ಕೃತಜ್ಞತೆ ಸಲ್ಲಿಸುವುದಿಲ್ಲವೇ ?
تفسیرهای عربی:
وَاتَّخَذُوْا مِنْ دُوْنِ اللّٰهِ اٰلِهَةً لَّعَلَّهُمْ یُنْصَرُوْنَ ۟ؕ
ಅವರು ತಮಗೆ ಸಹಾಯ ಲಭಿಸಲಿಕ್ಕಾಗಿ ಅಲ್ಲಾಹನ ಹೊರತು ಇತರರನ್ನು ಆರಾಧ್ಯರನ್ನಾಗಿ ನಿಶ್ಚಯಿಸಿಕೊಂಡಿದ್ದಾರೆ.
تفسیرهای عربی:
لَا یَسْتَطِیْعُوْنَ نَصْرَهُمْ وَهُمْ لَهُمْ جُنْدٌ مُّحْضَرُوْنَ ۟
ಅವರಿಗೆ ಅವರ ಸಹಾಯ ಮಾಡುವ ಸಾಮರ್ಥ್ಯವಿಲ್ಲ. ಬದಲಾಗಿ ಬಹುದೇವಾರಾಧಕರು ಅವರಿಗಾಗಿ ಸರ್ವಸನ್ನಧ್ದ ಸÉÊನ್ಯವಾಗಿದ್ದಾರೆ.
تفسیرهای عربی:
فَلَا یَحْزُنْكَ قَوْلُهُمْ ۘ— اِنَّا نَعْلَمُ مَا یُسِرُّوْنَ وَمَا یُعْلِنُوْنَ ۟
ಆದ್ದರಿಂದ ನಿಮಗೆ ಅವರ ಮಾತು ದುಃಖಕ್ಕೀಡು ಮಾಡದಿರಲಿ. ಅವರು ಅಡಗಿಸಿಡುವುದನ್ನು ಬಹಿರಂಗ ಪಡಿಸುವುದನ್ನು ನಾವು ಚೆನ್ನಾಗಿ ಬಲ್ಲೆವು.
تفسیرهای عربی:
اَوَلَمْ یَرَ الْاِنْسَانُ اَنَّا خَلَقْنٰهُ مِنْ نُّطْفَةٍ فَاِذَا هُوَ خَصِیْمٌ مُّبِیْنٌ ۟
ನಾವು ಮನುಷ್ಯನನ್ನು ವೀರ್ಯದಿಂದ ಸೃಷ್ಟಿಸಿದ್ದೇವೆಂದು ಅವನಿಗೆ ಅರಿವಿಲ್ಲವೇ ? ತರುವಾಯ ಅವನು ಒಮ್ಮೆಲೇ ಜಗಳಗಂಟನಾಗಿ ಬಿಟ್ಟಿದ್ದಾನೆ.
تفسیرهای عربی:
وَضَرَبَ لَنَا مَثَلًا وَّنَسِیَ خَلْقَهٗ ؕ— قَالَ مَنْ یُّحْیِ الْعِظَامَ وَهِیَ رَمِیْمٌ ۟
ಅವನು ನಮಗಾಗಿ ಉಪಮೆಯನ್ನು ಕೊಡುತ್ತಾನೆ ಮತ್ತು ತನ್ನ( ಮೂಲ) ಸೃಷ್ಟಿಯನ್ನು ಮರೆತು ಬಿಟ್ಟಿದ್ದಾನೆ. ಮೂಳೆಗಳು ಶಿಥಿಲವಾದ ಬಳಿಕ ಜೀವಂತಗೊಳಿಸುವವನಾರು ? ಎಂದು ಕೇಳುತ್ತಾನೆ.
تفسیرهای عربی:
قُلْ یُحْیِیْهَا الَّذِیْۤ اَنْشَاَهَاۤ اَوَّلَ مَرَّةٍ ؕ— وَهُوَ بِكُلِّ خَلْقٍ عَلِیْمُ ۟ۙ
ಹೇಳಿರಿ ಪ್ರವಾದಿಯವರೇ: ಅದನ್ನು ಮೊದಲ ಬಾರಿಗೆ ಸೃಷ್ಟಿಸಿದವನೆ ಅದನ್ನು ಪುನಃ ಜೀವಂತಗೊಳಿಸುತ್ತಾನೆ. ಅವನು ಸೃಷ್ಟಿಗಳ ಕುರಿತು ಚೆನ್ನಾಗಿ ಬಲ್ಲನು.
تفسیرهای عربی:
١لَّذِیْ جَعَلَ لَكُمْ مِّنَ الشَّجَرِ الْاَخْضَرِ نَارًا فَاِذَاۤ اَنْتُمْ مِّنْهُ تُوْقِدُوْنَ ۟
ನಿಮಗೆ ಹಸಿರು ಮರದಿಂದ ಬೆಂಕಿಯನ್ನು ಉಂಟು ಮಾಡಿದವನು ಅವನೇ, ಅದರಿಂದ ನೀವು ಬೆಂಕಿ ಉರಿಸುತ್ತೀರಿ.
تفسیرهای عربی:
اَوَلَیْسَ الَّذِیْ خَلَقَ السَّمٰوٰتِ وَالْاَرْضَ بِقٰدِرٍ عَلٰۤی اَنْ یَّخْلُقَ مِثْلَهُمْ ؔؕ— بَلٰی ۗ— وَهُوَ الْخَلّٰقُ الْعَلِیْمُ ۟
ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು ಇಂತಹವರನ್ನು ಸೃಷ್ಟಿಸಲು ಸಾಮರ್ಥ್ಯವುಳ್ಳವನಲ್ಲವೇ? ಏಕಿಲ್ಲ ಮತ್ತು ಅವನು ಮಹಾ ಸೃಷ್ಟಿಕರ್ತನು, ಎಲ್ಲವನ್ನು ಅರಿಯುವವನು ಆಗಿದ್ದಾನೆ.
تفسیرهای عربی:
اِنَّمَاۤ اَمْرُهٗۤ اِذَاۤ اَرَادَ شَیْـًٔا اَنْ یَّقُوْلَ لَهٗ كُنْ فَیَكُوْنُ ۟
ಅವನು ಯಾವುದಾದರೂ ವಸ್ತುವನ್ನು ಬಯಸಿದರೆ ಅದರೊಂದಿಗೆ' ಆಗು' ಎಂದು ಮಾತ್ರ ಹೇಳುತ್ತಾನೆ. ಅದು ಆಗಿ ಬಿಡುತ್ತದೆ.
تفسیرهای عربی:
فَسُبْحٰنَ الَّذِیْ بِیَدِهٖ مَلَكُوْتُ كُلِّ شَیْءٍ وَّاِلَیْهِ تُرْجَعُوْنَ ۟۠
ಸಕಲ ವಸ್ತುಗಳ ಅಧಿಪತ್ಯವು ಯಾರ ಕÉÊಯ್ಯಲ್ಲಿದೆಯೋ, ಅವನು ಪರಮಪಾವನನು ಮತ್ತು ನೀವು ಅವನೆಡೆಗೇ ಮರಳಿಸಲಾಗುವಿರಿ.
تفسیرهای عربی:
 
ترجمهٔ معانی سوره: یس
فهرست سوره ها شماره صفحه
 
ترجمهٔ معانی قرآن کریم - ترجمه‌ى كنادى ـ بشير ميسورى - لیست ترجمه ها

مترجم: شیخ بشیر میسوری. تحت نظارت مرکز ترجمه‌ى رواد توسعه یافته است.

بستن