Check out the new design

ترجمهٔ معانی قرآن کریم - ترجمه‌ى كنادى ـ بشير ميسورى * - لیست ترجمه ها


ترجمهٔ معانی سوره: مائده   آیه:
قَالَ عِیْسَی ابْنُ مَرْیَمَ اللّٰهُمَّ رَبَّنَاۤ اَنْزِلْ عَلَیْنَا مَآىِٕدَةً مِّنَ السَّمَآءِ تَكُوْنُ لَنَا عِیْدًا لِّاَوَّلِنَا وَاٰخِرِنَا وَاٰیَةً مِّنْكَ ۚ— وَارْزُقْنَا وَاَنْتَ خَیْرُ الرّٰزِقِیْنَ ۟
ಮರ್ಯಮರ ಪುತ್ರ ಈಸಾ ಪ್ರಾರ್ಥಿಸಿದರು: ಓ ಅಲ್ಲಾಹ್, ನಮ್ಮ ಪ್ರಭು, ನೀನು ಆಕಾಶದಿಂದ ನಮ್ಮ ಮೇಲೆ ಒಂದು ಭಕ್ಷö್ಯ ಹರಿವಾಣವನ್ನು ಇಳಿಸಿಕೊಡು ಅದು ನಮ್ಮ ಪೈಕಿ ಮೊದಲಿನವರಿಗೂ, ನಂತರದವರಿಗೂ ಹಬ್ಬವಾಗಲಿ ಮತ್ತು ನಿನ್ನ ಕಡೆಯಿಂದ ಒಂದು ದೃಷ್ಟಾಂತವು ಆಗಿರಲಿ ಮತ್ತು ನೀನು ನಮಗೆ ಜೀವನಾಧಾರವನ್ನು ಕರುಣಿಸು ಮತ್ತು ಅನ್ನಧಾರ ದಯಪಾಲಿಸುವವರ ಪೈಕಿ ನೀನು ಅತ್ಯುತ್ತಮನಾಗಿರುವೆ.
تفسیرهای عربی:
قَالَ اللّٰهُ اِنِّیْ مُنَزِّلُهَا عَلَیْكُمْ ۚ— فَمَنْ یَّكْفُرْ بَعْدُ مِنْكُمْ فَاِنِّیْۤ اُعَذِّبُهٗ عَذَابًا لَّاۤ اُعَذِّبُهٗۤ اَحَدًا مِّنَ الْعٰلَمِیْنَ ۟۠
ಅಲ್ಲಾಹು ಹೇಳಿದನು: ಖಂಡಿತ ನಾನು ಅದನ್ನು ನಿಮ್ಮ ಮೇಲೆ ಇಳಿಸಿಕೊಡುವೆನು ಅನಂತರ ನಿಮ್ಮ ಪೈಕಿ ಯಾರಾದರೂ ಧಿಕ್ಕಾರ ತೋರಿದರೆ ನಾನು ಅವನಿಗೆ ಜಗತ್ತಿನವರಲ್ಲಿ ಯಾರಿಗೂ ನೀಡದಂತಹ ಶಿಕ್ಷೆಯನ್ನು ನೀಡುವೆನು.
تفسیرهای عربی:
وَاِذْ قَالَ اللّٰهُ یٰعِیْسَی ابْنَ مَرْیَمَ ءَاَنْتَ قُلْتَ لِلنَّاسِ اتَّخِذُوْنِیْ وَاُمِّیَ اِلٰهَیْنِ مِنْ دُوْنِ اللّٰهِ ؕ— قَالَ سُبْحٰنَكَ مَا یَكُوْنُ لِیْۤ اَنْ اَقُوْلَ مَا لَیْسَ لِیْ ۗ— بِحَقٍّ ؔؕ— اِنْ كُنْتُ قُلْتُهٗ فَقَدْ عَلِمْتَهٗ ؕ— تَعْلَمُ مَا فِیْ نَفْسِیْ وَلَاۤ اَعْلَمُ مَا فِیْ نَفْسِكَ ؕ— اِنَّكَ اَنْتَ عَلَّامُ الْغُیُوْبِ ۟
ಮತ್ತು ಅಲ್ಲಾಹನು ಪುನರುತ್ಥಾನದ ದಿನ ಹೇಳುವ ಸಂದರ್ಭವನ್ನು ಗಮನಿಸಿರಿ. ಓ ಮರ್ಯಮರ ಪುತ್ರನಾದ ಈಸಾ, ನನ್ನನ್ನೂ ಮತ್ತು ನನ್ನ ತಾಯಿಯನ್ನೂ ಅಲ್ಲಾಹನ ಹೊರತು ಆರಾಧ್ಯರನ್ನಾಗಿ ಮಾಡಿಕೊಳ್ಳಿರಿ ಎಂದು ಜನರೊಡನೆ ಹೇಳಿರುವೆಯಾ? ಈಸಾ ಹೇಳುವರು: ನೀನು ಪರಮ ಪಾವನನು ನನಗೆ ಯಾವುದೇ ಹಕ್ಕಿಲ್ಲದ ಮಾತನ್ನು ಹೇಳುವುದು ನನಗೆ ಯುಕ್ತವಲ್ಲ. ನಾನದನ್ನು ಹೇಳಿರುತ್ತಿದ್ದರೆ ನೀನು ಅದನ್ನು ತಿಳಿದಿರುತ್ತಿದ್ದೆ. ನನ್ನ ಮನಸ್ಸಿನಲ್ಲಿರುವುದನ್ನು ನೀನು ಅರಿಯುವೆ ಮತ್ತು ನಿನ್ನ ಮನಸ್ಸಿನಲ್ಲಿರುವುದನ್ನು ನಾನು ಅರಿಯಲಾರೆ. ಸಕಲ ಅಗೋಚರಗಳನ್ನು ಅರಿಯುವವನು ನೀನೇ ಆಗಿರುವೆ.
تفسیرهای عربی:
مَا قُلْتُ لَهُمْ اِلَّا مَاۤ اَمَرْتَنِیْ بِهٖۤ اَنِ اعْبُدُوا اللّٰهَ رَبِّیْ وَرَبَّكُمْ ۚ— وَكُنْتُ عَلَیْهِمْ شَهِیْدًا مَّا دُمْتُ فِیْهِمْ ۚ— فَلَمَّا تَوَفَّیْتَنِیْ كُنْتَ اَنْتَ الرَّقِیْبَ عَلَیْهِمْ ؕ— وَاَنْتَ عَلٰی كُلِّ شَیْءٍ شَهِیْدٌ ۟
ನೀನು ನನ್ನೊಂದಿಗೆ ಆದೇಶಿಸಿದಂತೆ ನನ್ನ ಪ್ರಭುವೂ, ನಿಮ್ಮ ಪ್ರಭುವೂ ಆದ ಅಲ್ಲಾಹನನ್ನು ಆರಾಧಿಸಿರಿ ಎಂಬುದರ ಹೊರತು ಇನ್ನೇನನ್ನೂ ಅವರಿಗೆ ಹೇಳಿರಲಿಲ್ಲ. ನಾನು ಅವರೊಂದಿಗೆ ಇದ್ದ ಕಾಲದವರೆಗೆ ಅವರ ಮೇಲೆ ಸಾಕ್ಷಿಯಾಗಿದ್ದೆ. ನಂತರ ನೀನು ನನ್ನನ್ನು ಆಕಾಶÀಕ್ಕೆತ್ತಿದ ಬಳಿಕ ನೀನೇ ಅವರ ವೀಕ್ಷಕನಾಗಿದ್ದೆ. ನೀನು ಸರ್ವ ಸಂಗತಿಗಳ ಕುರಿತು ಸಾಕ್ಷಿಯಾಗಿರುವೆ.
تفسیرهای عربی:
اِنْ تُعَذِّبْهُمْ فَاِنَّهُمْ عِبَادُكَ ۚ— وَاِنْ تَغْفِرْ لَهُمْ فَاِنَّكَ اَنْتَ الْعَزِیْزُ الْحَكِیْمُ ۟
ನೀನು ಅವರನ್ನು ಶಿಕ್ಷಿಸುವುದಾದರೆ ನಿಸ್ಸಂಶಯವಾಗಿಯು ಅವರು ನಿನ್ನ ದಾಸರಾಗಿದ್ದಾರೆ ಮತ್ತು ನೀನು ಅವರನ್ನು ಕ್ಷಮಿಸುವುದರೆ ನೀನು ಪ್ರತಾಪಶಾಲಿಯೂ, ಯುಕ್ತಿಪೂರ್ಣನೂ ಆಗಿರುವೆ.
تفسیرهای عربی:
قَالَ اللّٰهُ هٰذَا یَوْمُ یَنْفَعُ الصّٰدِقِیْنَ صِدْقُهُمْ ؕ— لَهُمْ جَنّٰتٌ تَجْرِیْ مِنْ تَحْتِهَا الْاَنْهٰرُ خٰلِدِیْنَ فِیْهَاۤ اَبَدًا ؕ— رَضِیَ اللّٰهُ عَنْهُمْ وَرَضُوْا عَنْهُ ؕ— ذٰلِكَ الْفَوْزُ الْعَظِیْمُ ۟
ಅಲ್ಲಾಹನು ಹೇಳುವನು: ಇಂದು ಸತ್ಯಸಂಧರಿಗೆ (ಏಕ ದೇವ ನಿಷ್ಠರಿಗೆ) ತಮ್ಮ ಸತ್ಯಸಂಧತೆಯ ಪ್ರಯೋಜನ ಸಿಗುವ ದಿನವಾಗಿದೆ. ಅವರಿಗೆ ತಳಭಾಗದಿಂದ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಿರುವುವು. ಅವರು ಅದರಲ್ಲಿ ಶಾಶ್ವತವಾಗಿರುವರು. ಅವರ ಬಗ್ಗೆ ಅಲ್ಲ್ಲಾಹನು ಸಂತೃಪ್ತನಾಗಿರುವನು. ಮತ್ತು ಅವರು ಅವನ ಬಗ್ಗೆ ಸಂತೃಪ್ತರಾಗಿರುವರು. ಇದು ಮಹಾ ಯಶಸ್ಸಾಗಿದೆ.
تفسیرهای عربی:
لِلّٰهِ مُلْكُ السَّمٰوٰتِ وَالْاَرْضِ وَمَا فِیْهِنَّ ؕ— وَهُوَ عَلٰی كُلِّ شَیْءٍ قَدِیْرٌ ۟۠
ಆಕಾಶಗಳಲ್ಲೂ, ಭೂಮಿಯಲ್ಲೂ ಮತ್ತು ಅವರೆಡರ ನಡುವೆಯೂ ಇರುವ ಸಕಲ ವಸ್ತುಗಳ ಆಧಿಪತ್ಯವು ಅಲ್ಲಾಹನದ್ದಾಗಿದೆ. ಅವನು ಸಕಲ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
تفسیرهای عربی:
 
ترجمهٔ معانی سوره: مائده
فهرست سوره ها شماره صفحه
 
ترجمهٔ معانی قرآن کریم - ترجمه‌ى كنادى ـ بشير ميسورى - لیست ترجمه ها

مترجم: شیخ بشیر میسوری. تحت نظارت مرکز ترجمه‌ى رواد توسعه یافته است.

بستن