Check out the new design

ترجمهٔ معانی قرآن کریم - ترجمه‌ى كنادى ـ بشير ميسورى * - لیست ترجمه ها


ترجمهٔ معانی سوره: اعراف   آیه:
فَاِذَا جَآءَتْهُمُ الْحَسَنَةُ قَالُوْا لَنَا هٰذِهٖ ۚ— وَاِنْ تُصِبْهُمْ سَیِّئَةٌ یَّطَّیَّرُوْا بِمُوْسٰی وَمَنْ مَّعَهٗ ؕ— اَلَاۤ اِنَّمَا طٰٓىِٕرُهُمْ عِنْدَ اللّٰهِ وَلٰكِنَّ اَكْثَرَهُمْ لَا یَعْلَمُوْنَ ۟
ಅವರಿಗೆ ಒಳಿತೇನಾದರು ತಲುಪಿದರೆ ಇದು ನಮಗೆ ದಕ್ಕಬೇಕಾದದ್ದು ಎಂದು ಹೇಳುತ್ತಾರೆ ಮತ್ತು ಅವರಿಗೆ ಕೆಡುಕೇನಾದರು ಎದುರಾದರೆ ಅವರು ಅದನ್ನು ಮೂಸಾ ಮತ್ತು ಅವರ ಸಂಗಡಿಗರ ಅಪಶಕುನವೆಂದು ಹೇಳುತ್ತಾರೆ. ತಿಳಿದುಕೊಳ್ಳಿರಿ, ಅವರ ಅಪಶÀಕುನವು ಅಲ್ಲಾಹನ ಬಳಿಯಿದೆ. ಆದರೆ ಅವರಲ್ಲಿ ಹೆಚ್ಚಿನವರು ಅರಿಯುವುದಿಲ್ಲ.
تفسیرهای عربی:
وَقَالُوْا مَهْمَا تَاْتِنَا بِهٖ مِنْ اٰیَةٍ لِّتَسْحَرَنَا بِهَا ۙ— فَمَا نَحْنُ لَكَ بِمُؤْمِنِیْنَ ۟
ಮತ್ತು ಫಿರ್‌ಔನ್‌ನ ಜನರು ಹೇಳಿದರು: ನೀನು ನಮ್ಮನ್ನು ವಶೀಕರಿಸಲು ಎಂತಹ ದೃಷ್ಟಾಂತವನ್ನು ತಂದರೂ, ನಾವು ನಿನ್ನ ಮೇಲೆ ವಿಶ್ವಾಸವಿಡಲಾರೆವು.
تفسیرهای عربی:
فَاَرْسَلْنَا عَلَیْهِمُ الطُّوْفَانَ وَالْجَرَادَ وَالْقُمَّلَ وَالضَّفَادِعَ وَالدَّمَ اٰیٰتٍ مُّفَصَّلٰتٍ ۫— فَاسْتَكْبَرُوْا وَكَانُوْا قَوْمًا مُّجْرِمِیْنَ ۟
ಅನಂತರ ನಾವು ಅವರ ವಿರುದ್ಧ ಚಂಡಮಾರುತ, ಮಿಡತೆ, ಹೇನು, ಕಪ್ಪೆ, ರಕ್ತ ಮುಂತಾದ ಸ್ಪಷ್ಟ (ಎಚ್ಚರಿಕೆ ನೀಡುವ) ದೃಷ್ಟಾಂತಗಳನ್ನು ಕಳುಹಿಸಿದೆವು. ಆದರೆ ಅವರು ಅಹಂಭಾವ ತೋರಿದರು ಮತ್ತು ಅವರು ಅಪರಾಧಿಗಳಾದ ಒಂದು ಜನಾಂಗವಾಗಿದ್ದರು.
تفسیرهای عربی:
وَلَمَّا وَقَعَ عَلَیْهِمُ الرِّجْزُ قَالُوْا یٰمُوْسَی ادْعُ لَنَا رَبَّكَ بِمَا عَهِدَ عِنْدَكَ ۚ— لَىِٕنْ كَشَفْتَ عَنَّا الرِّجْزَ لَنُؤْمِنَنَّ لَكَ وَلَنُرْسِلَنَّ مَعَكَ بَنِیْۤ اِسْرَآءِیْلَ ۟ۚ
ಮತ್ತು ಶಿಕ್ಷೆಯು ಅವರಿಗೆ ಬಾಧಿಸಿದಾಗ ಅವರು ಹೇಳಿದರು: ಓ ಮೂಸಾ, ನಿಮ್ಮ ಪ್ರಭು ನಿಮ್ಮೊಂದಿಗೆ ಮಾಡಿದ ಕರಾರಿನ ಆಧಾರದಲ್ಲಿ ಅವನೊಂದಿಗೆ ನಮಗಾಗಿ ಪ್ರಾರ್ಥಿಸಿರಿ. ನೀವು ಈ ಶಿಕ್ಷೆಯನ್ನು ನಮ್ಮಿಂದ ಸರಿಸಿ ಬಿಟ್ಟರೆ ಖಂಡಿತವಾಗಿಯು ನಾವು ನಿಮ್ಮ ಮಾತಿನಂತೆ ಸತ್ಯವಿಶ್ವಾಸವಿಡುವೆವು ಮತ್ತು ಇಸ್ರಾಯೀಲ್ ಸಂತತಿಗಳನ್ನು ನಿಮ್ಮ ಜೊತೆ ಕಳುಹಿಸಿ ಕೊಡುವೆವು.
تفسیرهای عربی:
فَلَمَّا كَشَفْنَا عَنْهُمُ الرِّجْزَ اِلٰۤی اَجَلٍ هُمْ بٰلِغُوْهُ اِذَا هُمْ یَنْكُثُوْنَ ۟
ಬಳಿಕ ಅವರು ತಲುಪಬೇಕಾದ ಒಂದು ಅವಧಿಯವರೆಗೆ ನಾವು ಅವರಿಂದ ಆ ಶಿಕ್ಷೆಯನ್ನು ಸರಿಸಿ ಬಿಟ್ಟರೆ ಕೂಡಲೇ ಅವರು ವಾಗ್ದಾನ ಉಲ್ಲಂಘಿಸತೊಡಗುತ್ತಾರೆ.
تفسیرهای عربی:
فَانْتَقَمْنَا مِنْهُمْ فَاَغْرَقْنٰهُمْ فِی الْیَمِّ بِاَنَّهُمْ كَذَّبُوْا بِاٰیٰتِنَا وَكَانُوْا عَنْهَا غٰفِلِیْنَ ۟
ಅನಂತರ ನಾವು ಅವರೊಂದಿಗೆ ಪ್ರತೀಕಾರ ಕ್ರಮವನ್ನೂ ಕೈಗೊಂಡೆವು; ಇದು ಅವರು ನಮ್ಮ ದೃಷ್ಟಾಂತಗಳನ್ನು ಧಿಕ್ಕರಿಸುತ್ತಿದ್ದುದ್ದರ ನಿಮಿತ್ತ ಮತ್ತು ಅವುಗಳ ಕುರಿತು ನಿರ್ಲಕ್ಷö್ಯತನ ತೋರುತ್ತಿದ್ದುದ್ದರ ನಿಮಿತ್ತ ನಾವು ಅವರನ್ನು ಸಮುದ್ರದಲ್ಲಿ ಮುಳಿಗಿಸಿ ಬಿಟ್ಟೆವು.
تفسیرهای عربی:
وَاَوْرَثْنَا الْقَوْمَ الَّذِیْنَ كَانُوْا یُسْتَضْعَفُوْنَ مَشَارِقَ الْاَرْضِ وَمَغَارِبَهَا الَّتِیْ بٰرَكْنَا فِیْهَا ؕ— وَتَمَّتْ كَلِمَتُ رَبِّكَ الْحُسْنٰی عَلٰی بَنِیْۤ اِسْرَآءِیْلَ ۙ۬— بِمَا صَبَرُوْا ؕ— وَدَمَّرْنَا مَا كَانَ یَصْنَعُ فِرْعَوْنُ وَقَوْمُهٗ وَمَا كَانُوْا یَعْرِشُوْنَ ۟
ಅವರ ಸ್ಥಾನದಲ್ಲಿ ಅತ್ಯಂತ ದುರ್ಬಲರೆಂದು ಪರಿಗಣಿಸಲ್ಪಟ್ಟಿದ್ದ ಜನರನ್ನು ನಾವು ಸಮೃದ್ಧಿಯನ್ನಿರಿಸಿದ್ದ ಆ ಭೂಪ್ರದೇಶದ ಪೂರ್ವ ಮತ್ತು ಪಶ್ಚಿಮಗಳ ವಾರೀಸುದಾರರನ್ನಾಗಿ ಮಾಡಿಬಿಟ್ಟೆವು. ಈ ರೀತಿ ಇಸ್ರಾಯೀಲರಿಗೆ ನಿನ್ನ ಪ್ರಭುವಿನ ಉತ್ತಮ ವಾಗ್ದಾನವು ನೆರವೇರಿತು, ಏಕೆಂದರೆ ಅವರು ತಾಳ್ಮೆವಹಿಸಿದ್ದರು. ನಾವು ಫಿರ್‌ಔನ್ ಮತ್ತು ಅವನ ಜನತೆಯು ನಿರ್ಮಿಸಿದ ವಸ್ತುಗಳನ್ನೂ, ಮತ್ತು ಎತ್ತರ ಕಟ್ಟಡಗಳನ್ನೂ ಧ್ವಂಸಗೊಳಿಸಿಬಿಟ್ಟೆವು.
تفسیرهای عربی:
 
ترجمهٔ معانی سوره: اعراف
فهرست سوره ها شماره صفحه
 
ترجمهٔ معانی قرآن کریم - ترجمه‌ى كنادى ـ بشير ميسورى - لیست ترجمه ها

مترجم: شیخ بشیر میسوری. تحت نظارت مرکز ترجمه‌ى رواد توسعه یافته است.

بستن