Check out the new design

ترجمهٔ معانی قرآن کریم - ترجمه‌ى كنادى ـ بشير ميسورى * - لیست ترجمه ها


ترجمهٔ معانی سوره: انفال   آیه:
ذٰلِكَ بِاَنَّ اللّٰهَ لَمْ یَكُ مُغَیِّرًا نِّعْمَةً اَنْعَمَهَا عَلٰی قَوْمٍ حَتّٰی یُغَیِّرُوْا مَا بِاَنْفُسِهِمْ ۙ— وَاَنَّ اللّٰهَ سَمِیْعٌ عَلِیْمٌ ۟ۙ
ಇದೇಕೆಂದರೆ, ಒಂದು ಜನತೆಗೆ ಯಾವುದಾದರೂ ಅನುಗ್ರಹವನ್ನು ಕರುಣಿಸಿದ ನಂತರ ಅವರು ತಮ್ಮ ಧಾರ್ಮಿಕ ಸ್ಥಿತಿಯನ್ನು ಸ್ವತಃ ಬದಲಾಯಿಸುವವರೆಗೆ ಅಲ್ಲಾಹನು ಬದಲಾಯಿಸುವುದಿಲ್ಲ ಮತ್ತು ಖಂಡಿತವಾಗಿಯು ಅಲ್ಲಾಹನು ಆಲಿಸುವವನೂ, ಅರಿಯುವವನೂ ಆಗಿದ್ದಾನೆ.
تفسیرهای عربی:
كَدَاْبِ اٰلِ فِرْعَوْنَ ۙ— وَالَّذِیْنَ مِنْ قَبْلِهِمْ ؕ— كَذَّبُوْا بِاٰیٰتِ رَبِّهِمْ فَاَهْلَكْنٰهُمْ بِذُنُوْبِهِمْ وَاَغْرَقْنَاۤ اٰلَ فِرْعَوْنَ ۚ— وَكُلٌّ كَانُوْا ظٰلِمِیْنَ ۟
ಫಿರ್‌ಔನ್‌ನ ಜನಾಂಗ ಮತ್ತು ಅವರ ಪೂರ್ವಿಕರ ಸ್ಥಿತಿಯಂತೆಯೇ ಅವರು ತಮ್ಮ ಪ್ರಭುವಿನ ದೃಷ್ಟಾಂತಗಳನ್ನು ನಿರಾಕರಿಸಿದರು. ಆಗ ಅವರ ಪಾಪಗಳ ನಿಮಿತ್ತ ನಾವು ಅವರನ್ನು ನಾಶಗೊಳಿಸಿದೆವು. ಮತ್ತು ಫಿರ್‌ಔನ್‌ನ ಜನರನ್ನು ಮುಳುಗಿಸಿಬಿಟ್ಟೆವು. ಅವರೆಲ್ಲರೂ ಅಕ್ರಮಿಗಳಾಗಿದ್ದರು.
تفسیرهای عربی:
اِنَّ شَرَّ الدَّوَآبِّ عِنْدَ اللّٰهِ الَّذِیْنَ كَفَرُوْا فَهُمْ لَا یُؤْمِنُوْنَ ۟ۖۚ
ಖಂಡಿತವಾಗಿಯು ಅಲ್ಲಾಹನ ಬಳಿ ಭೂಮಿಯಲ್ಲಿ ಚಲಿಸುವ ಸಕಲ ಜೀವಿಗಳ ಪೈಕಿ ನಿಕೃಷ್ಟರು ಸತ್ಯವನ್ನು ನಿಷೇಧಿಸುವವರಾಗಿದ್ದಾರೆ. ಅವರು ಸತ್ಯವಿಶ್ವಾಸವಿಡುವವರಲ್ಲ.
تفسیرهای عربی:
اَلَّذِیْنَ عٰهَدْتَّ مِنْهُمْ ثُمَّ یَنْقُضُوْنَ عَهْدَهُمْ فِیْ كُلِّ مَرَّةٍ وَّهُمْ لَا یَتَّقُوْنَ ۟
ನೀವು ಯಹೂದರೊಂದಿಗೆ ಅನೇಕ ಬಾರಿ ಕರಾರು ಪಡೆದುಕೊಂಡಿರುವಿರಿ. ಆದರೆ ಪ್ರತಿ ಬಾರಿಯೂ ಅವರು ತಮ್ಮ ಕರಾರನ್ನು ಉಲ್ಲಂಘಿಸಿರುವರು. ಅವರು ಜಾಗೃತೆ ವಹಿಸುವುದಿಲ್ಲ.
تفسیرهای عربی:
فَاِمَّا تَثْقَفَنَّهُمْ فِی الْحَرْبِ فَشَرِّدْ بِهِمْ مَّنْ خَلْفَهُمْ لَعَلَّهُمْ یَذَّكَّرُوْنَ ۟
ನಿಮಗೆ ಕರಾರು ಉಲ್ಲಂಘನೆ ಮಾಡಿದವರು ಯುದ್ಧದಲ್ಲಿ ಸೆರೆ ಸಿಕ್ಕರೆ ಅವರ ಹಿಂದೆ ಹುರಿದುಂಬಿಸುವ ಬೆಂಬಲಿಗರೂ ಸಹ ಪಾಠ ಕಲಿಯುವಂತೆ ತಕ್ಕ ಶಿಕ್ಷೆ ಕೊಡಿ.
تفسیرهای عربی:
وَاِمَّا تَخَافَنَّ مِنْ قَوْمٍ خِیَانَةً فَانْۢبِذْ اِلَیْهِمْ عَلٰی سَوَآءٍ ؕ— اِنَّ اللّٰهَ لَا یُحِبُّ الْخَآىِٕنِیْنَ ۟۠
ಮತ್ತು ನಿಮಗೆ ಯಾವುದಾದರು ಜನತೆಯಿಂದ ವಂಚನೆಯ ಭಯವಿದ್ದರೆ ಬಹಿರಂಗವಾಗಿ ಅವರ ಕರಾರು ಪತ್ರವನ್ನು ಎಸೆದುಬಿಡಿರಿ. ಅಲ್ಲಾಹನು ವಂಚಕರನ್ನು ಇಷ್ಟಪಡುವುದಿಲ್ಲ.
تفسیرهای عربی:
وَلَا یَحْسَبَنَّ الَّذِیْنَ كَفَرُوْا سَبَقُوْا ؕ— اِنَّهُمْ لَا یُعْجِزُوْنَ ۟
ತಾವು ಪಾರಾಗಿಬಿಟ್ಟೇವೆಂದು ಸತ್ಯನಿಷೇಧಿಗಳು ಎಂದೂ ಭಾವಿಸದಿರಲಿ. ಖಂಡಿತವಾಗಿಯು ಅವರು ಅಲ್ಲಾಹನನ್ನು ಎಂದಿಗೂ ಸೋಲಿಸಲಾರರು.
تفسیرهای عربی:
وَاَعِدُّوْا لَهُمْ مَّا اسْتَطَعْتُمْ مِّنْ قُوَّةٍ وَّمِنْ رِّبَاطِ الْخَیْلِ تُرْهِبُوْنَ بِهٖ عَدُوَّ اللّٰهِ وَعَدُوَّكُمْ وَاٰخَرِیْنَ مِنْ دُوْنِهِمْ ۚ— لَا تَعْلَمُوْنَهُمْ ۚ— اَللّٰهُ یَعْلَمُهُمْ ؕ— وَمَا تُنْفِقُوْا مِنْ شَیْءٍ فِیْ سَبِیْلِ اللّٰهِ یُوَفَّ اِلَیْكُمْ وَاَنْتُمْ لَا تُظْلَمُوْنَ ۟
ನೀವು ಅವರನ್ನು ಎದುರಿಸಲಿಕ್ಕಾಗಿ ನಿಮ್ಮ ಸಂಪೂರ್ಣ ಶಕ್ತಿಯನ್ನು ಮತ್ತು ಅಶ್ವಸೇನೆಯನ್ನು ಸಿದ್ಧಗೊಳಿಸಿರಿ. ತನ್ಮೂಲಕ ನೀವು ಅಲ್ಲಾಹನ ಶತ್ರುವನ್ನೂ, ನಿಮ್ಮ ಶತ್ರುವನ್ನೂ ಅವರ ಹೊರತು ನಿಮಗೆ ಅರಿವಿಲ್ಲದ ಮತ್ತು ಅಲ್ಲಾಹನಿಗೆ ಅರಿವಿರುವ ಶತ್ರುಗಳನ್ನು ಭಯಭೀತರನ್ನಾಗಿಸಲೆಂದಾಗಿದೆ. ನೀವು ಅಲ್ಲಾಹನ ಮಾರ್ಗದಲ್ಲಿ ಯಾವುದೇ ವಸ್ತುವನ್ನು ವ್ಯಯಿಸಿದರೂ ನಿಮಗೆ ಪರಿಪೂರ್ಣವಾಗಿ ನೀಡಲಾಗುವುದು ಮತ್ತು ನಿಮ್ಮ ಮೇಲೆ ಅನ್ಯಾಯವೆಸಗಲಾಗದು.
تفسیرهای عربی:
وَاِنْ جَنَحُوْا لِلسَّلْمِ فَاجْنَحْ لَهَا وَتَوَكَّلْ عَلَی اللّٰهِ ؕ— اِنَّهٗ هُوَ السَّمِیْعُ الْعَلِیْمُ ۟
ಪೈಗಂಬರರೇ, ಇನ್ನು ಅವರು ಒಪ್ಪಂದದೆಡೆಗೆ ಒಲವು ತೋರುವುದಾದರೆ ನೀವು ಸಹ ಒಪ್ಪಂದದೆಡೆಗೆ ಒಲವು ತೋರಿಸಿರಿ. ಮತ್ತು ಅಲ್ಲಾಹನ ಮೇಲೆ ಭರವಸೆಯಿಡಿರಿ. ಖಂಡಿತವಾಗಿಯು ಅವನು ಚೆನ್ನಾಗಿ ಆಲಿಸುವವನೂ, ಎಲ್ಲವನ್ನು ಅರಿಯುವವನು ಆಗಿದ್ದಾನೆ.
تفسیرهای عربی:
 
ترجمهٔ معانی سوره: انفال
فهرست سوره ها شماره صفحه
 
ترجمهٔ معانی قرآن کریم - ترجمه‌ى كنادى ـ بشير ميسورى - لیست ترجمه ها

مترجم: شیخ بشیر میسوری. تحت نظارت مرکز ترجمه‌ى رواد توسعه یافته است.

بستن