Check out the new design

કુરઆન મજીદના શબ્દોનું ભાષાંતર - કન્નડ ભાષામાં અનુવાદ - બશીર મૈસૂરી * - ભાષાંતરોની અનુક્રમણિકા


શબ્દોનું ભાષાંતર સૂરહ: અલ્ હિજ્ર   આયત:
وَلَقَدْ جَعَلْنَا فِی السَّمَآءِ بُرُوْجًا وَّزَیَّنّٰهَا لِلنّٰظِرِیْنَ ۟ۙ
ನಿಶ್ಚಯವಾಗಿಯೂ ನಾವು ಆಕಾಶದಲ್ಲಿ ನಕ್ಷತ್ರಮಂಡಲವನ್ನು ಮಾಡಿರುತ್ತೇವೆ ಮತ್ತು ನೋಡುವವರಿಗೆ ಅಲಂಕಾರಗೊಳಿಸಿದ್ದೇವೆ.
અરબી તફસીરો:
وَحَفِظْنٰهَا مِنْ كُلِّ شَیْطٰنٍ رَّجِیْمٍ ۟ۙ
ಮತ್ತು ಅದನ್ನು ಧಿಕ್ಕರಿಸಲ್ಪಟ್ಟ ಪ್ರತಿಯೊಬ್ಬ ಶೈತಾನನಿಂದ ನಾವು ಸುರಕ್ಷಿತವಾಗಿರಿಸಿದ್ದೇವೆ.
અરબી તફસીરો:
اِلَّا مَنِ اسْتَرَقَ السَّمْعَ فَاَتْبَعَهٗ شِهَابٌ مُّبِیْنٌ ۟
ಆದರೆ ಯಾರು ಕದ್ದಾಲಿಸಕ್ಕಾಗಿ ಕಿವಿಗೊಡಲು ಪ್ರಯತ್ನಿಸುತ್ತಾನೋ ಪ್ರತ್ಯಕ್ಷ ಅಗ್ನಿ ಜ್ವಾಲೆಯೊಂದು ಅವನನ್ನು ಬೆನ್ನಟ್ಟುತ್ತದೆ.
અરબી તફસીરો:
وَالْاَرْضَ مَدَدْنٰهَا وَاَلْقَیْنَا فِیْهَا رَوَاسِیَ وَاَنْۢبَتْنَا فِیْهَا مِنْ كُلِّ شَیْءٍ مَّوْزُوْنٍ ۟
ನಾವು ಭೂಮಿಯನ್ನು ಹರಡಿ ಅದರಲ್ಲಿ ಪರ್ವತಗಳನ್ನು ನಾಟಿದೆವು ಮತ್ತು ನಾವದರಲ್ಲಿ ಪ್ರತಿಯೊಂದು ಬಗೆಯ ವಸ್ತುಗಳನ್ನು ಒಂದು ನಿಶ್ಚಿತ ಪ್ರಮಾಣದಲ್ಲಿ ಬೆಳೆಸಿದೆವು.
અરબી તફસીરો:
وَجَعَلْنَا لَكُمْ فِیْهَا مَعَایِشَ وَمَنْ لَّسْتُمْ لَهٗ بِرٰزِقِیْنَ ۟
ಅದರಲ್ಲೇ ನಾವು ನಿಮಗೂ ಹಾಗೂ ನೀವು ಆಹಾರ ನೀಡದ (ಇತರ ಜೀವಿಗಳಿಗೂ) ಜೀವನೋಪಾಯಗಳನ್ನು ಒದಗಿಸಿದೆವು,
અરબી તફસીરો:
وَاِنْ مِّنْ شَیْءٍ اِلَّا عِنْدَنَا خَزَآىِٕنُهٗ ؗ— وَمَا نُنَزِّلُهٗۤ اِلَّا بِقَدَرٍ مَّعْلُوْمٍ ۟
ಯಾವುದೇ ವಸ್ತುವಿನ ಭಂಡಾರಗಳು ನಮ್ಮ ಬಳಿ ಇಲ್ಲದ್ದಿಲ್ಲಾ ಮತ್ತು ನಾವು ಅದನ್ನು ಒಂದು ನಿಶ್ಚಿತ ಪ್ರಮಾಣದಲ್ಲಿ ಮಾತ್ರ ಇಳಿಸುತ್ತೇವೆ.
અરબી તફસીરો:
وَاَرْسَلْنَا الرِّیٰحَ لَوَاقِحَ فَاَنْزَلْنَا مِنَ السَّمَآءِ مَآءً فَاَسْقَیْنٰكُمُوْهُ ۚ— وَمَاۤ اَنْتُمْ لَهٗ بِخٰزِنِیْنَ ۟
ನಾವು ಜಲಭರಿತ ಮಾರುತಗಳನ್ನು ಕಳುಹಿಸುತ್ತೇವೆ. ಅನಂತರ ಆಕಾಶದಿಂದ ಮಳೆಯನ್ನು ಸುರಿಸಿ ಅದನ್ನು ನಿಮಗೆ ಕುಡಿಸುತ್ತೇವೆ ಮತ್ತು ನೀವು ಅದನ್ನು ಸಂಗ್ರಹ ಮಾಡುವವರಲ್ಲ.
અરબી તફસીરો:
وَاِنَّا لَنَحْنُ نُحْیٖ وَنُمِیْتُ وَنَحْنُ الْوٰرِثُوْنَ ۟
ನಿಶ್ಚಯವಾಗಿಯು ನಾವೇ ಜೀವನ ನೀಡುತ್ತೇವೆ ಮತ್ತು ಮರಣಗೊಳಿಸುತ್ತೇವೆ ಮತ್ತು ನಾವೇ ವಾರಿಸುದಾರರಾಗಿರುತ್ತೇವೆ.
અરબી તફસીરો:
وَلَقَدْ عَلِمْنَا الْمُسْتَقْدِمِیْنَ مِنْكُمْ وَلَقَدْ عَلِمْنَا الْمُسْتَاْخِرِیْنَ ۟
ನಿಶ್ಚಯವಾಗಿಯೂ ನಾವು ನಿಮ್ಮ ಪೈಕಿ ಗತಿಸಿ ಹೋದವರನ್ನು ಬಲ್ಲೆವು ಹಾಗೂ ಮುಂದೆ ಬರುವವರನ್ನು ಸಹ ಅರಿತಿದ್ದೇವೆ.
અરબી તફસીરો:
وَاِنَّ رَبَّكَ هُوَ یَحْشُرُهُمْ ؕ— اِنَّهٗ حَكِیْمٌ عَلِیْمٌ ۟۠
ಖಂಡಿತವಾಗಿಯೂ ನಿಮ್ಮ ಪ್ರಭು; ಅವರೆಲ್ಲರನ್ನು ಒಟ್ಟುಗೂಡಿಸುವನು ನಿಶ್ಚಯವಾಗಿಯೂ ಅವನು ಮಹಾಯುಕ್ತಿವಂತನು ಸರ್ವಜ್ಞಾನಿಯು ಆಗಿರುತ್ತಾನೆ.
અરબી તફસીરો:
وَلَقَدْ خَلَقْنَا الْاِنْسَانَ مِنْ صَلْصَالٍ مِّنْ حَمَاٍ مَّسْنُوْنٍ ۟ۚ
ನಿಶ್ಚಯವಾಗಿಯು ನಾವು ಮನುಷ್ಯನನ್ನು ಟಣಟಣಿಸುವ ಕೊಳೆತ ಕರಿ ಮಣ್ಣಿನಿಂದ ಸೃಷ್ಟಿಸಿರುತ್ತೇವೆ.
અરબી તફસીરો:
وَالْجَآنَّ خَلَقْنٰهُ مِنْ قَبْلُ مِنْ نَّارِ السَّمُوْمِ ۟
ಇದಕ್ಕೂ ಮುನ್ನ ನಾವು ಜ್ವಾಲೆಯುಳ್ಳ ಅಗ್ನಿಯಿಂದ ಜಿನ್ನ್ (ಯಕ್ಷ) ಗಳನ್ನು ಸೃಷ್ಟಿಸಿರುತ್ತೇವೆ.
અરબી તફસીરો:
وَاِذْ قَالَ رَبُّكَ لِلْمَلٰٓىِٕكَةِ اِنِّیْ خَالِقٌۢ بَشَرًا مِّنْ صَلْصَالٍ مِّنْ حَمَاٍ مَّسْنُوْنٍ ۟
ನಿಮ್ಮ ಪ್ರಭು ಮಲಕ್‌ಗಳೊಂದಿಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ನಿಶ್ಚಯವಾಗಿಯೂ ನಾನು ಟಣಟಣಿಸುವ ಕೊಳೆತ ಕರಿ ಮಣ್ಣಿನಿಂದ ಒಬ್ಬ ಮಾನವನನ್ನು ಸೃಷ್ಟಿಸಲಿದ್ದೇನೆ.
અરબી તફસીરો:
فَاِذَا سَوَّیْتُهٗ وَنَفَخْتُ فِیْهِ مِنْ رُّوْحِیْ فَقَعُوْا لَهٗ سٰجِدِیْنَ ۟
ನಾನು ಅವನನ್ನು ಸಂಪೂರ್ಣಗೊಳಿಸಿ ಅವನಲ್ಲಿ ನನ್ನೆಡೆಯ ಆತ್ಮವನ್ನು ಊದಿದಾಗ ನೀವೆಲ್ಲರೂ ಅವನಿಗೆ ಸಾಷ್ಟಾಂಗವೆರಗಿರಿ.
અરબી તફસીરો:
فَسَجَدَ الْمَلٰٓىِٕكَةُ كُلُّهُمْ اَجْمَعُوْنَ ۟ۙ
ಹಾಗೆಯೇ ಮಲಕ್‌ಗಳೆಲ್ಲರೂ ಸಾಷ್ಟಾಂಗವೆರಿಗಿದರು.
અરબી તફસીરો:
اِلَّاۤ اِبْلِیْسَ ؕ— اَبٰۤی اَنْ یَّكُوْنَ مَعَ السّٰجِدِیْنَ ۟
ಆದರೆ ಇಬ್‌ಲೀಸನ ಹೊರತು. ಅವನು ಸಾಷ್ಟಾಂಗವೆರಗುವವರ ಜೊತೆ ಸೇರಲು ನಿರಾಕರಿಸಿಬಿಟ್ಟನು.
અરબી તફસીરો:
 
શબ્દોનું ભાષાંતર સૂરહ: અલ્ હિજ્ર
સૂરહ માટે અનુક્રમણિકા પેજ નંબર
 
કુરઆન મજીદના શબ્દોનું ભાષાંતર - કન્નડ ભાષામાં અનુવાદ - બશીર મૈસૂરી - ભાષાંતરોની અનુક્રમણિકા

શૈખ બશીર મૈસૂરી દ્વારા અનુવાદિત. રવ્વાદ ભાષાંતર કેન્દ્રની દેખરેખ હેઠળ તેની ચકાસણી કરવામાં આવી છે.

બંધ કરો