Check out the new design

કુરઆન મજીદના શબ્દોનું ભાષાંતર - કન્નડ ભાષામાં અનુવાદ - બશીર મૈસૂરી * - ભાષાંતરોની અનુક્રમણિકા


શબ્દોનું ભાષાંતર સૂરહ: અલ્ બકરહ   આયત:
وَقَالَتِ الْیَهُوْدُ لَیْسَتِ النَّصٰرٰی عَلٰی شَیْءٍ ۪— وَّقَالَتِ النَّصٰرٰی لَیْسَتِ الْیَهُوْدُ عَلٰی شَیْءٍ ۙ— وَّهُمْ یَتْلُوْنَ الْكِتٰبَ ؕ— كَذٰلِكَ قَالَ الَّذِیْنَ لَا یَعْلَمُوْنَ مِثْلَ قَوْلِهِمْ ۚ— فَاللّٰهُ یَحْكُمُ بَیْنَهُمْ یَوْمَ الْقِیٰمَةِ فِیْمَا كَانُوْا فِیْهِ یَخْتَلِفُوْنَ ۟
ಕ್ರೈಸ್ತರು ಸತ್ಯ ಮಾರ್ಗದಲ್ಲಿಲ್ಲ ಎಂದು ಯಹೂದರು ಹೇಳುತ್ತಾರೆ. ಮತ್ತು ಯಹೂದರು ಸತ್ಯ ಮಾರ್ಗದಲ್ಲಿಲ್ಲ ಎಂದು ಕ್ರೈಸ್ತರು ಹೇಳುತ್ತಾರೆ. ವಸ್ತುತಃ ಉಭಯ ಪಕ್ಷದವರು ಗ್ರಂಥವನ್ನು ಓದುತ್ತಾರೆ. ಮತ್ತು ಜ್ಞಾನವಿಲ್ಲದವರೂ ಇದೇ ಪ್ರಕಾರ ಇವರು ಹೇಳಿದಂತೆಯೇ ಹೇಳುತ್ತಾರೆ. ಇನ್ನು ಅಲ್ಲಾಹನು ಪುನರುತ್ಥಾನ ದಿನದಂದು ಇವರ ನಡುವೆ ಭಿನ್ನತೆ ಹೊಂದಿರುವ ವಿಚಾರದ ಕುರಿತು ತೀರ್ಪು ನೀಡಲಿರುವನು.
અરબી તફસીરો:
وَمَنْ اَظْلَمُ مِمَّنْ مَّنَعَ مَسٰجِدَ اللّٰهِ اَنْ یُّذْكَرَ فِیْهَا اسْمُهٗ وَسَعٰی فِیْ خَرَابِهَا ؕ— اُولٰٓىِٕكَ مَا كَانَ لَهُمْ اَنْ یَّدْخُلُوْهَاۤ اِلَّا خَآىِٕفِیْنَ ؕ۬— لَهُمْ فِی الدُّنْیَا خِزْیٌ وَّلَهُمْ فِی الْاٰخِرَةِ عَذَابٌ عَظِیْمٌ ۟
ಅಲ್ಲಾಹನ ಮಸೀದಿಗಳಲ್ಲಿ ಅವನ ನಾಮವನ್ನು ಸ್ಮರಿಸುವುದರಿಂದ ತಡೆಯಲು ಹಾಗೂ ಅವುಗಳನ್ನು ಹಾಳುಗೆಡವಲು ಪ್ರಯತ್ನಿಸಿದವನಿಗಿಂತ ದೊಡ್ಡ ಅಕ್ರಮಿಯು ಇನ್ನಾರಿದ್ದಾನೆ? ಇಂತಹವರು ಭಯಗ್ರಸ್ತರಾಗಿಯೇ ಅವುಗಳಲ್ಲಿ ಪ್ರವೇಶಿಸಬೇಕಾಗಿದೆ. ಇವರಿಗೆ ಇಹಲೋಕದಲ್ಲೂ ಅಪಮಾನವಿದೆ ಮತ್ತು ಪರಲೋಕದಲ್ಲೂ ಮಹಾ ಯಾತನೆಯಿದೆ.
અરબી તફસીરો:
وَلِلّٰهِ الْمَشْرِقُ وَالْمَغْرِبُ ۗ— فَاَیْنَمَا تُوَلُّوْا فَثَمَّ وَجْهُ اللّٰهِ ؕ— اِنَّ اللّٰهَ وَاسِعٌ عَلِیْمٌ ۟
ಪೂರ್ವ ಹಾಗೂ ಪಶ್ಚಿಮಗಳ ಒಡೆಯ ಅಲ್ಲಾಹನೇ ಆಗಿದ್ದಾನೆ.. ನೀವು ಯಾವ ದಿಕ್ಕಿಗೆ ಮುಖ ಮಾಡಿದರೂ ಅಲ್ಲಿ ಅಲ್ಲಾಹನ ಅಸ್ಥಿತ್ವವಿರುವುದು. ನಿಜವಾಗಿಯೂ ಅಲ್ಲಾಹನು ವಿಶಾಲನೂ, ಸರ್ವಜ್ಞಾನಿಯು ಆಗಿದ್ದಾನೆ.
અરબી તફસીરો:
وَقَالُوا اتَّخَذَ اللّٰهُ وَلَدًا ۙ— سُبْحٰنَهٗ ؕ— بَلْ لَّهٗ مَا فِی السَّمٰوٰتِ وَالْاَرْضِ ؕ— كُلٌّ لَّهٗ قٰنِتُوْنَ ۟
ಅಲ್ಲಾಹನು ಪುತ್ರನನ್ನು ಹೊಂದಿದ್ದಾನೆAದು ಅವರು (ಕ್ರೆöÊಸ್ತರು) ಹೇಳುತ್ತಾರೆ; (ಇವುಗಳಿಂದ) ಅವನು ಪವಿತ್ರನು! ವಾಸ್ತವದಲ್ಲಿ ಆಕಾಶಗಳ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಅವನ ಅಧೀನದಲ್ಲಿದೆ ಮತ್ತು ಪ್ರತಿಯೊಬ್ಬರೂ ಅವನಿಗೆ ವಿಧೇಯರಾಗಿದ್ದಾರೆ.
અરબી તફસીરો:
بَدِیْعُ السَّمٰوٰتِ وَالْاَرْضِ ؕ— وَاِذَا قَضٰۤی اَمْرًا فَاِنَّمَا یَقُوْلُ لَهٗ كُنْ فَیَكُوْنُ ۟
ಆಕಾಶಗಳನ್ನು ಹಾಗೂ ಭೂಮಿಯನ್ನು ಪೂರ್ವ ಮಾದರಿಯಿಲ್ಲದೇ ಸೃಷ್ಟಿಸಿದವನು ಅವನೇ, ಅವನು ಯಾವುದೇ ಕಾರ್ಯವನ್ನು ನಿರ್ಧರಿಸಿಕೊಂಡರೆ ಅದಕ್ಕೆ 'ಆಗು' ಎಂದು ಹೇಳುತ್ತಾನೆ. ಅದು ಆಗಿ ಬಿಡುತ್ತದೆ.
અરબી તફસીરો:
وَقَالَ الَّذِیْنَ لَا یَعْلَمُوْنَ لَوْلَا یُكَلِّمُنَا اللّٰهُ اَوْ تَاْتِیْنَاۤ اٰیَةٌ ؕ— كَذٰلِكَ قَالَ الَّذِیْنَ مِنْ قَبْلِهِمْ مِّثْلَ قَوْلِهِمْ ؕ— تَشَابَهَتْ قُلُوْبُهُمْ ؕ— قَدْ بَیَّنَّا الْاٰیٰتِ لِقَوْمٍ یُّوْقِنُوْنَ ۟
ಅಲ್ಲಾಹನು ನಮ್ಮೊಂದಿಗೆ ಏಕೆ ಮಾತನಾಡುವುದಿಲ್ಲ ಅಥವಾ ನಮ್ಮ ಬಳಿಗೆ ಒಂದು ದೃಷ್ಟಾಂತವನ್ನು ಏಕೆ ತರುವುದಿಲ್ಲವೆಂದು ಅಜ್ಞಾನಿಗಳು ಕೇಳುತ್ತಾರೆ. ಇದೇ ಪ್ರಕಾರ ಇಂತಹದೇ ಮಾತನ್ನು ಇವರಿಗಿಂತ ಮುಂಚಿನವರು ಹೇಳಿದ್ದರು. ಇವರ ಮತ್ತು ಅವರ ಹೃದಯಗಳು ಪರಸ್ಪರ ಒಂದೇ ತೆರನಾಗಿವೆ. ವಾಸ್ತವದಲ್ಲಿ ನಾವು ದೃಢ ನಂಬಿಕೆಯುಳ್ಳವರಿಗೆ ದೃಷ್ಟಾಂತಗಳನ್ನು ವಿವರಿಸಿ ಕೊಟ್ಟಿದ್ದೇವೆ.
અરબી તફસીરો:
اِنَّاۤ اَرْسَلْنٰكَ بِالْحَقِّ بَشِیْرًا وَّنَذِیْرًا ۙ— وَّلَا تُسْـَٔلُ عَنْ اَصْحٰبِ الْجَحِیْمِ ۟
ಖಂಡಿತವಾಗಿಯೂ ನಾವು ನಿಮ್ಮನ್ನು ಸತ್ಯದೊಂದಿಗೆ ಸುವಾರ್ತೆ ಕೊಡುವವರಾಗಿ, ಎಚ್ಚರಿಕೆ ನೀಡುವವರಾಗಿ ಕಳುಹಿಸಿದ್ದೇವೆ. ಮತ್ತು ನರಕವಾಸಿಗಳ ಕುರಿತು ನೀವು ವಿಚಾರಣೆಗೊಳಗಾಗುವುದಿಲ್ಲ.
અરબી તફસીરો:
 
શબ્દોનું ભાષાંતર સૂરહ: અલ્ બકરહ
સૂરહ માટે અનુક્રમણિકા પેજ નંબર
 
કુરઆન મજીદના શબ્દોનું ભાષાંતર - કન્નડ ભાષામાં અનુવાદ - બશીર મૈસૂરી - ભાષાંતરોની અનુક્રમણિકા

શૈખ બશીર મૈસૂરી દ્વારા અનુવાદિત. રવ્વાદ ભાષાંતર કેન્દ્રની દેખરેખ હેઠળ તેની ચકાસણી કરવામાં આવી છે.

બંધ કરો