Check out the new design

કુરઆન મજીદના શબ્દોનું ભાષાંતર - કન્નડ ભાષામાં અનુવાદ - બશીર મૈસૂરી * - ભાષાંતરોની અનુક્રમણિકા


શબ્દોનું ભાષાંતર સૂરહ: મુહમ્મદ   આયત:
وَیَقُوْلُ الَّذِیْنَ اٰمَنُوْا لَوْلَا نُزِّلَتْ سُوْرَةٌ ۚ— فَاِذَاۤ اُنْزِلَتْ سُوْرَةٌ مُّحْكَمَةٌ وَّذُكِرَ فِیْهَا الْقِتَالُ ۙ— رَاَیْتَ الَّذِیْنَ فِیْ قُلُوْبِهِمْ مَّرَضٌ یَّنْظُرُوْنَ اِلَیْكَ نَظَرَ الْمَغْشِیِّ عَلَیْهِ مِنَ الْمَوْتِ ؕ— فَاَوْلٰى لَهُمْ ۟ۚ
ಸತ್ಯವಿಶ್ವಾವಿರಿಸಿದವರು ಹೇಳುತ್ತಾರೆ; (ಯುದ್ಧದ ಕುರಿತು) ಒಂದು ಅಧ್ಯಾಯ ಅವತೀರ್ಣಗೊಳಿಸಲಾಗಿಲ್ಲವೇಕೆ? ಬಳಿಕ ನಿಖರವಾದ ನಿಯಮಗಳೊಂದಿಗೆ ಕೂಡಿದ ಒಂದು ಅಧ್ಯಾಯವನ್ನು ಅವತೀರ್ಣ ಗೊಳಿಸಲಾದರೆ ಹಾಗು ಅದರಲ್ಲಿ ಯುದ್ಧದ ಪ್ರಸ್ತಾಪವನ್ನು ಮಾಡಲಾದರೆ ಹೃದಯಗಳಲ್ಲಿ ಕಾಪಟ್ಯದ ರೋಗವಿದ್ದವರು ಮೃತ್ಯು ಆವರಿಸಿದವನೊಬ್ಬನು ನೋಡುವ ಹಾಗೆ ನಿಮ್ಮೆಡೆಗೆ ನೋಡುತ್ತಿರುವುದಾಗಿ ನೀವು ಕಾಣುವಿರಿ, ಆದ್ದರಿಂದ ಅವರಿಗೆ ಅದೆ ತಕ್ಕದ್ದಾಗಿದೆ.
અરબી તફસીરો:
طَاعَةٌ وَّقَوْلٌ مَّعْرُوْفٌ ۫— فَاِذَا عَزَمَ الْاَمْرُ ۫— فَلَوْ صَدَقُوا اللّٰهَ لَكَانَ خَیْرًا لَّهُمْ ۟ۚ
ಆಜ್ಞಾನುಸರಣೆ ಮತ್ತು ಒಳ್ಳೆಯ ಮಾತು ಅವರಿಗೆ ಉತ್ತಮವಾಗಿತ್ತು. ಇನ್ನು ಯುದ್ಧದ ಸಂಗತಿಯು ನಿರ್ಧರಿಸಲಾದಾಗ ಅವರು ಅಲ್ಲಾಹನೊಡನೆ ಪ್ರಾಮಾಣಿಕರಾಗಿರುತ್ತಿದ್ದರೆ ಅದು ಅವರಿಗೆ ಅತ್ತುö್ಯತ್ತಮವಾಗಿರುತ್ತಿತ್ತು.
અરબી તફસીરો:
فَهَلْ عَسَیْتُمْ اِنْ تَوَلَّیْتُمْ اَنْ تُفْسِدُوْا فِی الْاَرْضِ وَتُقَطِّعُوْۤا اَرْحَامَكُمْ ۟
ನಿಮಗೆ ಆಡಳಿತಾಧಿಕಾರ ಪ್ರಾಪ್ತವಾದರೆ ನೀವು ಭೂಮಿಯಲ್ಲಿ ಕ್ಷೆÆÃಭೆ ಹರಡುವಿರಿ ಮತ್ತು ಕುಟುಂಬ ಸಂಬAಧಗಳನ್ನು ಮುರಿದುಬಿಡುವಿರಿ ಎಂಬುದೇ ನಿಮ್ಮಿಂದ ನಿರೀಕ್ಷೆಯಿದೆ.
અરબી તફસીરો:
اُولٰٓىِٕكَ الَّذِیْنَ لَعَنَهُمُ اللّٰهُ فَاَصَمَّهُمْ وَاَعْمٰۤی اَبْصَارَهُمْ ۟
ಅಂಥವರನ್ನು ಅಲ್ಲಾಹನು ಶಪಿಸಿರುವನು ಮತ್ತು ಅವರನ್ನು ಕಿವುಡರನ್ನಾಗಿಯು, ಕುರುಡರನ್ನಾಗಿಯು ಮಾಡಿದ್ದಾನೆ.
અરબી તફસીરો:
اَفَلَا یَتَدَبَّرُوْنَ الْقُرْاٰنَ اَمْ عَلٰی قُلُوْبٍ اَقْفَالُهَا ۟
ಇವರು ಈ ಕುರ್‌ಆನಿನಲ್ಲಿ ಚಿಂತನೆ ನಡೆಸುವುದಿಲ್ಲವೇ ? ಅಥವ ಅವರ ಹೃದಯಗಳ ಮೇಲೆ ಬೀಗ ಜಡೆದಿದೆಯೇ?
અરબી તફસીરો:
اِنَّ الَّذِیْنَ ارْتَدُّوْا عَلٰۤی اَدْبَارِهِمْ مِّنْ بَعْدِ مَا تَبَیَّنَ لَهُمُ الْهُدَی ۙ— الشَّیْطٰنُ سَوَّلَ لَهُمْ ؕ— وَاَمْلٰی لَهُمْ ۟
ತಮಗೆ ಸನ್ಮಾರ್ಗವು ಸ್ಪಷ್ಟವಾದ ಬಳಿಕ ತಮ್ಮ ಬೆನ್ನುಗಳನ್ನು ತಿರುಗಿಸುವವರಿಗೆ ಶೈತಾನನು(ಅವರ ಕರ್ಮಗಳನ್ನು) ಮನಮೋಹಕಗೊಳಿಸಿರುವನು ಹಾಗೂ ಅವರನ್ನು ಸಡಿಲುಬಿಟ್ಟಿರುವನು.
અરબી તફસીરો:
ذٰلِكَ بِاَنَّهُمْ قَالُوْا لِلَّذِیْنَ كَرِهُوْا مَا نَزَّلَ اللّٰهُ سَنُطِیْعُكُمْ فِیْ بَعْضِ الْاَمْرِ ۚ— وَاللّٰهُ یَعْلَمُ اِسْرَارَهُمْ ۟
ಇದೇಕೆಂದರೆ ಅವರು ಅಲ್ಲಾಹನು ಅವತೀರ್ಣಗೊಳಿಸಿರುವ ದಿವ್ಯವಾಣಿಯನ್ನು ಇಷ್ಟಪಡದಿರುವ ಜನರಿಗೆ ನಾವು ಸಧ್ಯವೇ ಕೆಲವೊಂದು ವಿಚಾರಗಳಲ್ಲಿ ನಿಮ್ಮನ್ನು ಅನುಸರಿಸುತ್ತೇವೆ ಎಂದು ಹೇಳಿದರು. ಮತ್ತು ಅಲ್ಲಾಹನು ಅವರ ರಹಸ್ಯ ಮಾತುಗಳನ್ನು ಚೆನ್ನಾಗಿ ಅರಿಯುತ್ತಾನೆ.
અરબી તફસીરો:
فَكَیْفَ اِذَا تَوَفَّتْهُمُ الْمَلٰٓىِٕكَةُ یَضْرِبُوْنَ وُجُوْهَهُمْ وَاَدْبَارَهُمْ ۟
ದೇವದೂತರು ಅವರ ಆತ್ಮಗಳನ್ನು ವಶಪಡಿಸುತ್ತಾ ಅವರ ಮುಖಗಳ ಮತ್ತು ಬೆನ್ನುಗಳ ಮೇಲೆ ಹೊಡೆಯುವಾಗ ಅವರ ಸ್ಥಿತಿ ಹೇಗಿರಬಹುದು?
અરબી તફસીરો:
ذٰلِكَ بِاَنَّهُمُ اتَّبَعُوْا مَاۤ اَسْخَطَ اللّٰهَ وَكَرِهُوْا رِضْوَانَهٗ فَاَحْبَطَ اَعْمَالَهُمْ ۟۠
ಇದೇಕೆಂದರೆ ಅವರು ಅಲ್ಲಾಹನಿಗೆ ಕುಪಿತಗೊಳಿಸುವ ಮಾರ್ಗವನ್ನು ಅನುಸರಿಸಿದ ನಿಮಿತ್ತ ಮತ್ತು ಅವನ ಸಂತೃಪ್ತಿಯನ್ನು ಅವರು ಇಷ್ಟಪಡದಿದ್ದುದರ ನಿಮಿತ್ತವಾಗಿದೆ. ಆಗ ಅಲ್ಲಾಹನು ಅವರ ಕರ್ಮಗಳನ್ನು ನಿಷ್ಫಲಗೊಳಿಸಿಬಿಟ್ಟನು.
અરબી તફસીરો:
اَمْ حَسِبَ الَّذِیْنَ فِیْ قُلُوْبِهِمْ مَّرَضٌ اَنْ لَّنْ یُّخْرِجَ اللّٰهُ اَضْغَانَهُمْ ۟
ಅಥವಾ ಹೃದಯಗಳಲ್ಲಿ ಕಾಪಟ್ಯದ ರೋಗವಿದ್ದವರು ತಮ್ಮ ದ್ವೇಷ-ಗಳನ್ನು ಅಲ್ಲಾಹನು ಹೊರತರಲಾರನೆಂದು ಭಾವಿಸಿಕೊಂಡಿರುವರೇ ?
અરબી તફસીરો:
 
શબ્દોનું ભાષાંતર સૂરહ: મુહમ્મદ
સૂરહ માટે અનુક્રમણિકા પેજ નંબર
 
કુરઆન મજીદના શબ્દોનું ભાષાંતર - કન્નડ ભાષામાં અનુવાદ - બશીર મૈસૂરી - ભાષાંતરોની અનુક્રમણિકા

શૈખ બશીર મૈસૂરી દ્વારા અનુવાદિત. રવ્વાદ ભાષાંતર કેન્દ્રની દેખરેખ હેઠળ તેની ચકાસણી કરવામાં આવી છે.

બંધ કરો