Check out the new design

કુરઆન મજીદના શબ્દોનું ભાષાંતર - કન્નડ ભાષામાં અનુવાદ - બશીર મૈસૂરી * - ભાષાંતરોની અનુક્રમણિકા


શબ્દોનું ભાષાંતર સૂરહ: અલ્ અઅરાફ   આયત:
وَمَا كَانَ جَوَابَ قَوْمِهٖۤ اِلَّاۤ اَنْ قَالُوْۤا اَخْرِجُوْهُمْ مِّنْ قَرْیَتِكُمْ ۚ— اِنَّهُمْ اُنَاسٌ یَّتَطَهَّرُوْنَ ۟
ಇವರನ್ನು ನಿಮ್ಮ ನಾಡಿನಿಂದ ಹೊರಗಟ್ಟಿರಿ. ಇವರು ಮಹಾ ಪರಿಶುದ್ಧರು ಎನ್ನುವುದರ ಹೊರತು ಅವರ ಜನತೆಯ ಉತ್ತರ ಬೇರೇನೂ ಆಗಿರಲಿಲ್ಲ.
અરબી તફસીરો:
فَاَنْجَیْنٰهُ وَاَهْلَهٗۤ اِلَّا امْرَاَتَهٗ ۖؗ— كَانَتْ مِنَ الْغٰبِرِیْنَ ۟
ಆದ್ದರಿಂದ ನಾವು ಲೂತ್‌ರವರನ್ನು ಮತ್ತು ಅವರ ಮನೆಯವರನ್ನು ರಕ್ಷಿಸಿದೆವು: ಆದರೆ ಅವರ ಪತ್ನಿಯ ಹೊರತು. ಆಕೆ ಶಿಕ್ಷೆಗೆ ಗುರಿಯಾದವರೊಂದಿಗೆ ಸೇರಿದ್ದಳು.
અરબી તફસીરો:
وَاَمْطَرْنَا عَلَیْهِمْ مَّطَرًا ؕ— فَانْظُرْ كَیْفَ كَانَ عَاقِبَةُ الْمُجْرِمِیْنَ ۟۠
ನಾವು ಅವರ ಮೇಲೆ ಸುಡುಗಲ್ಲಿನ ಮಳೆಯನ್ನು ಸುರಿಸಿದೆವು. ಇನ್ನು ನೀವು ಅಕ್ರಮಿಗಳ ಅಂತ್ಯ ಹೇಗಾಯಿತೆಂಬುದನ್ನು ನೋಡಿರಿ.
અરબી તફસીરો:
وَاِلٰی مَدْیَنَ اَخَاهُمْ شُعَیْبًا ؕ— قَالَ یٰقَوْمِ اعْبُدُوا اللّٰهَ مَا لَكُمْ مِّنْ اِلٰهٍ غَیْرُهٗ ؕ— قَدْ جَآءَتْكُمْ بَیِّنَةٌ مِّنْ رَّبِّكُمْ فَاَوْفُوا الْكَیْلَ وَالْمِیْزَانَ وَلَا تَبْخَسُوا النَّاسَ اَشْیَآءَهُمْ وَلَا تُفْسِدُوْا فِی الْاَرْضِ بَعْدَ اِصْلَاحِهَا ؕ— ذٰلِكُمْ خَیْرٌ لَّكُمْ اِنْ كُنْتُمْ مُّؤْمِنِیْنَ ۟ۚ
ಮತ್ತು ನಾವು ಮದ್‌ಯನ್ ಜನಾಂಗದೆಡೆಗೆ ಅವರ ಸಹೋದರ ಶುಐಬ್‌ರವರನ್ನು ಕಳುಹಿಸಿದೆವು. ಅವರು ಹೇಳಿದರು: ಓ ನನ್ನ ಜನರೇ, ನೀವು ಅಲ್ಲಾಹನನ್ನು ಆರಾಧಿಸಿರಿ. ನಿಮಗೆ ಅವನ ಹೊರತು ಇನ್ನಾವ ಆರಾಧ್ಯನಿಲ್ಲ. ನಿಮ್ಮ ಬಳಿಗೆ ನಿಮ್ಮ ಪ್ರಭುವಿನ ವತಿಯಿಂದ ಸ್ಪಷ್ಟವಾದ ಪುರಾವೆಯು ಬಂದಿರುತ್ತದೆ. ಆದ್ದರಿಂದ ನೀವು ಅಳತೆ ಮತ್ತು ತೂಕವನ್ನು ಪರಿಪೂರ್ಣವಾಗಿ ಕೊಡಿರಿ ಮತ್ತು ಜನರಿಗೆ ಅವರ ಸಾಮಗ್ರಿಗಳನ್ನು ನೀವು ಕಡಿತಗೊಳಿಸಿ ಕೊಡಬೇಡಿರಿ. ಭೂಮಿಯಲ್ಲಿ ಅದರ ವಾತಾವರಣ ಸುಧಾರಣೆಯಾದ ಬಳಿಕ ನೀವು ಕ್ಷೆÆÃಭೆಯನ್ನು ಹರಡಬೇಡಿರಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ ಇದು ನಿಮಗೆ ಉತ್ತಮವಾಗಿದೆ.
અરબી તફસીરો:
وَلَا تَقْعُدُوْا بِكُلِّ صِرَاطٍ تُوْعِدُوْنَ وَتَصُدُّوْنَ عَنْ سَبِیْلِ اللّٰهِ مَنْ اٰمَنَ بِهٖ وَتَبْغُوْنَهَا عِوَجًا ۚ— وَاذْكُرُوْۤا اِذْ كُنْتُمْ قَلِیْلًا فَكَثَّرَكُمْ ۪— وَانْظُرُوْا كَیْفَ كَانَ عَاقِبَةُ الْمُفْسِدِیْنَ ۟
ನೀವು ಸತ್ಯವಿಶ್ವಾಸಿಗಳನ್ನು ಬೆದರಿಸುವ ಸಲುವಾಗಿ ಹಾಗೂ ಅಲ್ಲಾಹನ ಮಾರ್ಗದಿಂದ ತಡೆಯುವ ಸಲುವಾಗಿ ಮತ್ತು ಅದರಲ್ಲಿ ವಕ್ರತೆಯನ್ನು ಹುಡುಕುವ ಸಲುವಾಗಿ ಪ್ರತಿಯೊಂದು ಮಾರ್ಗದಲ್ಲಿ ಕುಳಿತು ಕೊಳ್ಳಬೇಡಿರಿ. ನೀವು ಅಲ್ಪಸಂಖ್ಯಾತರಾಗಿದ್ದಾಗ ಅಲ್ಲಾಹನು ನಿಮ್ಮನ್ನು ಬಹುಸಂಖ್ಯಾತರನ್ನಾಗಿ ಮಾಡಿದ್ದನ್ನು ಸ್ಮರಿಸರಿ ಮತ್ತು ವಿಛಿದ್ರಕಾರಿಗಳ ಅಂತ್ಯವು ಹೇಗಾಯಿತೆಂಬುದನ್ನು ನೋಡಿರಿ.
અરબી તફસીરો:
وَاِنْ كَانَ طَآىِٕفَةٌ مِّنْكُمْ اٰمَنُوْا بِالَّذِیْۤ اُرْسِلْتُ بِهٖ وَطَآىِٕفَةٌ لَّمْ یُؤْمِنُوْا فَاصْبِرُوْا حَتّٰی یَحْكُمَ اللّٰهُ بَیْنَنَا ۚ— وَهُوَ خَیْرُ الْحٰكِمِیْنَ ۟
ಮತ್ತು ನಾನು ಯಾವ ಸಂದೇಶದೊAದಿಗೆ ಕಳುಹಿಸಲ್ಪಟ್ಟಿರುವನೋ ಆ ಆದೇಶದ ಮೇಲೆ ನಿಮ್ಮ ಪೈಕಿ ಒಂದು ಪಂಗಡವು ವಿಶ್ವಾಸವಿಟ್ಟಿದ್ದರೆ ಮತ್ತು ಇನ್ನೊಂದು ಪಂಗಡವು ವಿಶ್ವಾಸವಿಡದಿದ್ದರೆ ನಮ್ಮ ಮಧ್ಯೆ ಅಲ್ಲಾಹನು ತೀರ್ಪು ನೀಡುವವರೆಗೆ ನೀವು ಸ್ವಲ್ಪ ತಾಳ್ಮೆಯಿಂದಿರಿ ಮತ್ತು ಅವನು ತೀರ್ಪು ನೀಡುವವರಲ್ಲಿ ಅತ್ಯುತ್ತಮನಾಗಿದ್ದಾನೆ.
અરબી તફસીરો:
 
શબ્દોનું ભાષાંતર સૂરહ: અલ્ અઅરાફ
સૂરહ માટે અનુક્રમણિકા પેજ નંબર
 
કુરઆન મજીદના શબ્દોનું ભાષાંતર - કન્નડ ભાષામાં અનુવાદ - બશીર મૈસૂરી - ભાષાંતરોની અનુક્રમણિકા

શૈખ બશીર મૈસૂરી દ્વારા અનુવાદિત. રવ્વાદ ભાષાંતર કેન્દ્રની દેખરેખ હેઠળ તેની ચકાસણી કરવામાં આવી છે.

બંધ કરો