Check out the new design

કુરઆન મજીદના શબ્દોનું ભાષાંતર - કન્નડ ભાષામાં અનુવાદ - હમઝહ બતુર * - ભાષાંતરોની અનુક્રમણિકા

PDF XML CSV Excel API
Please review the Terms and Policies

શબ્દોનું ભાષાંતર સૂરહ: અલ્ બકરહ   આયત:
كُتِبَ عَلَیْكُمُ الْقِتَالُ وَهُوَ كُرْهٌ لَّكُمْ ۚ— وَعَسٰۤی اَنْ تَكْرَهُوْا شَیْـًٔا وَّهُوَ خَیْرٌ لَّكُمْ ۚ— وَعَسٰۤی اَنْ تُحِبُّوْا شَیْـًٔا وَّهُوَ شَرٌّ لَّكُمْ ؕ— وَاللّٰهُ یَعْلَمُ وَاَنْتُمْ لَا تَعْلَمُوْنَ ۟۠
ನಿಮಗೆ ಅಸಹ್ಯವೆನಿಸಿದರೂ ಸಹ ನಿಮ್ಮ ಮೇಲೆ ಯುದ್ಧವನ್ನು ಕಡ್ಡಾಯಗೊಳಿಸಲಾಗಿದೆ. ಬಹುಶಃ ನಿಮಗೊಂದು ವಿಷಯವು ಅಸಹ್ಯವೆನಿಸಿದರೂ ಅದು ನಿಮಗೆ ಒಳಿತಾಗಿರಬಹುದು. ಹಾಗೆಯೇ, ನಿಮಗೊಂದು ವಿಷಯವು ಇಷ್ಟವಾಗಿದ್ದರೂ ಅದು ನಿಮಗೆ ಕೆಡುಕಾಗಿರಬಹುದು. ಅಲ್ಲಾಹು ತಿಳಿದಿದ್ದಾನೆ; ಆದರೆ ನೀವು ತಿಳಿದಿಲ್ಲ.
અરબી તફસીરો:
یَسْـَٔلُوْنَكَ عَنِ الشَّهْرِ الْحَرَامِ قِتَالٍ فِیْهِ ؕ— قُلْ قِتَالٌ فِیْهِ كَبِیْرٌ ؕ— وَصَدٌّ عَنْ سَبِیْلِ اللّٰهِ وَكُفْرٌ بِهٖ وَالْمَسْجِدِ الْحَرَامِ ۗ— وَاِخْرَاجُ اَهْلِهٖ مِنْهُ اَكْبَرُ عِنْدَ اللّٰهِ ۚ— وَالْفِتْنَةُ اَكْبَرُ مِنَ الْقَتْلِ ؕ— وَلَا یَزَالُوْنَ یُقَاتِلُوْنَكُمْ حَتّٰی یَرُدُّوْكُمْ عَنْ دِیْنِكُمْ اِنِ اسْتَطَاعُوْا ؕ— وَمَنْ یَّرْتَدِدْ مِنْكُمْ عَنْ دِیْنِهٖ فَیَمُتْ وَهُوَ كَافِرٌ فَاُولٰٓىِٕكَ حَبِطَتْ اَعْمَالُهُمْ فِی الدُّنْیَا وَالْاٰخِرَةِ ۚ— وَاُولٰٓىِٕكَ اَصْحٰبُ النَّارِ ۚ— هُمْ فِیْهَا خٰلِدُوْنَ ۟
ನಿಷೇಧಿತ ತಿಂಗಳಲ್ಲಿ ಯುದ್ಧ ಮಾಡುವುದರ ಕುರಿತು ಅವರು ನಿಮ್ಮಲ್ಲಿ ವಿಚಾರಿಸುತ್ತಾರೆ. ಹೇಳಿರಿ: “ಅದರಲ್ಲಿ ಯುದ್ಧ ಮಾಡುವುದು ಮಹಾ ಅಪರಾಧವಾಗಿದೆ.” ಆದರೆ ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆಯುವುದು, ಅವನನ್ನು ನಿಷೇಧಿಸುವುದು, ಮಸ್ಜಿದುಲ್ ಹರಾಮ್‍ನಿಂದ (ಜನರನ್ನು) ತಡೆಯುವುದು ಮತ್ತು ಅದರ ನಿವಾಸಿಗಳನ್ನು ಅಲ್ಲಿಂದ ಹೊರಹಾಕುವುದು ಅಲ್ಲಾಹನ ದೃಷ್ಟಿಯಲ್ಲಿ ಅದಕ್ಕಿಂತಲೂ ಗಂಭೀರ ಅಪರಾಧಗಳಾಗಿವೆ. ಕ್ಷೋಭೆಯು ಕೊಲೆಗಿಂತಲೂ ಘೋರವಾಗಿದೆ. ಅವರಿಗೆ ಸಾಧ್ಯವಾಗುವುದಾದರೆ ಅವರು ನಿಮ್ಮನ್ನು ನಿಮ್ಮ ಧರ್ಮದಿಂದ ಹಿಂದಿರುಗುವಂತೆ ಮಾಡುವವರೆಗೂ ನಿಮ್ಮೊಂದಿಗೆ ಯುದ್ಧ ಮಾಡುತ್ತಲೇ ಇರುವರು. ನಿಮ್ಮಲ್ಲಿ ಯಾರಾದರೂ ತನ್ನ ಧರ್ಮವನ್ನು ತ್ಯಜಿಸಿ, ನಂತರ ಸತ್ಯನಿಷೇಧಿಯಾಗಿ ಸಾಯುವುದಾದರೆ, ಅವರ ಕರ್ಮಗಳು ಇಹಲೋಕದಲ್ಲೂ ಪರಲೋಕದಲ್ಲೂ ನಿಷ್ಫಲವಾಗುತ್ತವೆ. ಅವರೇ ನರಕವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
અરબી તફસીરો:
اِنَّ الَّذِیْنَ اٰمَنُوْا وَالَّذِیْنَ هَاجَرُوْا وَجٰهَدُوْا فِیْ سَبِیْلِ اللّٰهِ ۙ— اُولٰٓىِٕكَ یَرْجُوْنَ رَحْمَتَ اللّٰهِ ؕ— وَاللّٰهُ غَفُوْرٌ رَّحِیْمٌ ۟
ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು, ಹಿಜ್ರ (ವಲಸೆ) ಹೋದವರು ಮತ್ತು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿದವರು ಯಾರೋ—ಅವರು ಅಲ್ಲಾಹನ ದಯೆಯನ್ನು ನಿರೀಕ್ಷಿಸುತ್ತಾರೆ. ಅಲ್ಲಾಹು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.
અરબી તફસીરો:
یَسْـَٔلُوْنَكَ عَنِ الْخَمْرِ وَالْمَیْسِرِ ؕ— قُلْ فِیْهِمَاۤ اِثْمٌ كَبِیْرٌ وَّمَنَافِعُ لِلنَّاسِ ؗ— وَاِثْمُهُمَاۤ اَكْبَرُ مِنْ نَّفْعِهِمَا ؕ— وَیَسْـَٔلُوْنَكَ مَاذَا یُنْفِقُوْنَ ؕ۬— قُلِ الْعَفْوَؕ— كَذٰلِكَ یُبَیِّنُ اللّٰهُ لَكُمُ الْاٰیٰتِ لَعَلَّكُمْ تَتَفَكَّرُوْنَ ۟ۙ
ಅವರು ನಿಮ್ಮೊಂದಿಗೆ ಮದ್ಯ ಮತ್ತು ಜೂಜಿನ ಬಗ್ಗೆ ವಿಚಾರಿಸುತ್ತಾರೆ. ಹೇಳಿರಿ: “ಅವೆರಡರಲ್ಲೂ ಬಹುದೊಡ್ಡ ಪಾಪವಿದೆ ಮತ್ತು ಜನರಿಗೆ ಕೆಲವು ಪ್ರಯೋಜನಗಳೂ ಇವೆ.[1] ಆದರೆ ಅವುಗಳ ಪಾಪವು ಪ್ರಯೋಜನಕ್ಕಿಂತಲೂ ದೊಡ್ಡದು.” ಅವರು ಏನು ಖರ್ಚು ಮಾಡಬೇಕೆಂದು ಅವರು ನಿಮ್ಮೊಡನೆ ಕೇಳುತ್ತಾರೆ. ಹೇಳಿರಿ: “ಅಗತ್ಯಕ್ಕಿಂತ ಮಿಕ್ಕಿದ್ದು.” ಈ ರೀತಿ ಅಲ್ಲಾಹು ತನ್ನ ನಿಯಮಗಳನ್ನು ನಿಮಗೆ ಸ್ಪಷ್ಟವಾಗಿ ವಿವರಿಸಿಕೊಡುತ್ತಾನೆ. ನೀವು ಆಲೋಚಿಸುವುದಕ್ಕಾಗಿ.
[1] ಮದ್ಯ ಮತ್ತು ಜೂಜಿನಲ್ಲಿ ಕೆಲವು ಲೌಕಿಕ ಪ್ರಯೋಜನಗಳಿವೆ. ಉದಾಹರಣೆಗೆ, ಮದ್ಯವು ತಾತ್ಕಾಲಿಕವಾಗಿ ದೇಹದಲ್ಲಿ ಉತ್ಸಾಹ ಮತ್ತು ಚುರುಕುತನವನ್ನು ಹೆಚ್ಚಿಸುತ್ತದೆ. ಕೆಲವೊಮ್ಮೆ ಮನಸ್ಸು ಮದ್ಯ ಸೇವನೆಯಿಂದ ಹರಿತವಾಗುತ್ತದೆ. ಇದರಿಂದ ಲೈಂಗಿಕ ಸಾಮರ್ಥ್ಯವು ಹೆಚ್ಚಾಗುತ್ತದೆ. ಅದೇ ರೀತಿ, ಮದ್ಯ ಮಾರಾಟವು ಲಾಭದಾಯಕ ಉದ್ಯಮವಾಗಿದೆ. ಜೂಜಿನಲ್ಲಿ ಕೆಲವೊಮ್ಮೆ ಅದೃಷ್ಟವಿರುವವನು ಕೋಟಿಗಳನ್ನು ಸಂಪಾದಿಸುತ್ತಾನೆ. ಆದರೆ ಈ ಪ್ರಯೋಜನಗಳು ವ್ಯಕ್ತಿಯ ಬುದ್ಧಿ ಮತ್ತು ಧರ್ಮಕ್ಕೆ ಉಂಟು ಮಾಡುವ ನಷ್ಟ ಮತ್ತು ಹಾನಿಗಳಿಗೆ ಹೋಲಿಸಿದರೆ ಅವುಗಳ ಪ್ರಯೋಜನವು ಉಲ್ಲೇಖಾರ್ಹವೇ ಅಲ್ಲ.
અરબી તફસીરો:
 
શબ્દોનું ભાષાંતર સૂરહ: અલ્ બકરહ
સૂરહ માટે અનુક્રમણિકા પેજ નંબર
 
કુરઆન મજીદના શબ્દોનું ભાષાંતર - કન્નડ ભાષામાં અનુવાદ - હમઝહ બતુર - ભાષાંતરોની અનુક્રમણિકા

તેનું અનુવાદ મોહમ્મદ હમઝહ બતૂર દ્વારા કરવામાં આવ્યું. ફરી રવ્વાદ ભાષાંતર કેન્દ્રની દેખરેખ હેઠળ તેની ચકાસણી કરવામાં આવી.

બંધ કરો