Check out the new design

Terjemahan makna Alquran Alkarim - Terjemahan Berbahasa Kannada - Basir Maisuri * - Daftar isi terjemahan


Terjemahan makna Surah: Asy-Syu'arā`   Ayah:
مَاۤ اَغْنٰی عَنْهُمْ مَّا كَانُوْا یُمَتَّعُوْنَ ۟ؕ
ಅವರು ಏನೇ ಸುಖಭೋಗಿಸುತ್ತಿರಲಿ, ಅದಾವುದೂ ಅವರಿಗೆ ಯಾವ ಪ್ರಯೋಜನಕ್ಕೂ ಬರಲಾರದು.
Tafsir berbahasa Arab:
وَمَاۤ اَهْلَكْنَا مِنْ قَرْیَةٍ اِلَّا لَهَا مُنْذِرُوْنَ ۟
ನಾವು ಯಾವುದೇ ನಾಡನ್ನೂ ಅದಕ್ಕೆ ಎಚ್ಚರಿಕೆ ನೀಡುವವರಿಲ್ಲದೇ ನಾಶ ಮಾಡಿರುವುದಿಲ್ಲ.
Tafsir berbahasa Arab:
ذِكْرٰی ۛ۫— وَمَا كُنَّا ظٰلِمِیْنَ ۟
ಇದು ಉದ್ಭೋಧೆಯಲ್ಲಾಗಿತ್ತು ಮತ್ತು ನಾವು ಅನ್ಯಾಯ ಮಾಡುವವರಲ್ಲ.
Tafsir berbahasa Arab:
وَمَا تَنَزَّلَتْ بِهِ الشَّیٰطِیْنُ ۟ۚ
ಈ ಕುರ್‌ಆನನ್ನು ಶೈತಾನರು ತಂದಿಳಿಸಲಿಲ್ಲ.
Tafsir berbahasa Arab:
وَمَا یَنْۢبَغِیْ لَهُمْ وَمَا یَسْتَطِیْعُوْنَ ۟ؕ
ಅವರು ಅದಕ್ಕೆ ಯೋಗ್ಯರೂ ಆಗಿರಲಿಲ್ಲ, ಅವರು ಅದರ ಸಾಮರ್ಥ್ಯವನ್ನು ಹೊಂದಿದವರಾಗಿರಲಿಲ್ಲ.
Tafsir berbahasa Arab:
اِنَّهُمْ عَنِ السَّمْعِ لَمَعْزُوْلُوْنَ ۟ؕ
ಖಂಡಿತವಾಗಿಯು ಅವರಂತು ಇದನ್ನು (ದೈವವಾಣಿಯನ್ನು) ಆಲಿಸುವುದರಿಂದಲೂ ತಡೆಯಲ್ಪಟ್ಟಿರುವರು.
Tafsir berbahasa Arab:
فَلَا تَدْعُ مَعَ اللّٰهِ اِلٰهًا اٰخَرَ فَتَكُوْنَ مِنَ الْمُعَذَّبِیْنَ ۟ۚ
ಆದ್ದರಿಂದ ನೀವು ಅಲ್ಲಾಹನೊಂದಿಗೆ ಇನ್ನಾವ ಆರಾಧ್ಯನನ್ನೂ ಕರೆದು ಬೇಡದಿರಿ. ಇಲ್ಲವಾದರೆ ನೀವು ಸಹ ಯಾತನೆಗೊಳಗಾಗುವರಲ್ಲಿ ಸೇರಿಬಿಡುವಿರಿ.
Tafsir berbahasa Arab:
وَاَنْذِرْ عَشِیْرَتَكَ الْاَقْرَبِیْنَ ۟ۙ
ನಿಮ್ಮ ಅಂತ್ಯದ ನಿಕಟ ಸಂಬAಧಿಕರಿಗೆ ಎಚ್ಚರಿಕೆ ನೀಡಿರಿ.
Tafsir berbahasa Arab:
وَاخْفِضْ جَنَاحَكَ لِمَنِ اتَّبَعَكَ مِنَ الْمُؤْمِنِیْنَ ۟ۚ
ಮತ್ತು ನೀವು ನಿಮ್ಮನ್ನು ಅನುಸರಿಸುವ ಸತ್ಯವಿಶ್ವಾಸಿಗಳಿಗಾಗಿ ನಿಮ್ಮ ಭುಜವನ್ನು ತಗ್ಗಿಸಿರಿ.
Tafsir berbahasa Arab:
فَاِنْ عَصَوْكَ فَقُلْ اِنِّیْ بَرِیْٓءٌ مِّمَّا تَعْمَلُوْنَ ۟ۚ
ಇನ್ನು ಅವರು ನಿಮ್ಮನ್ನು ಧಿಕ್ಕರಿಸಿದರೆ ನೀವು ಮಾಡುತ್ತಿರುವ ಕಾರ್ಯಗಳಿಂದ ನಾನು ಹೊಣೆ ಮುಕ್ತನಾಗಿದ್ದೇನೆ ಎಂದು ಹೇಳಿರಿ.
Tafsir berbahasa Arab:
وَتَوَكَّلْ عَلَی الْعَزِیْزِ الرَّحِیْمِ ۟ۙ
ಪ್ರಚಂಡನು, ಕರುಣಾನಿಧಿಯು ಆದ ಅಲ್ಲಾಹನ ಮೇಲೆ ಭರವಸೆಯಿಡಿ.
Tafsir berbahasa Arab:
الَّذِیْ یَرٰىكَ حِیْنَ تَقُوْمُ ۟ۙ
ನೀವು (ನಮಾಜ್‌ಗಾಗಿ) ನಿಲ್ಲುವಾಗ ನಿಮ್ಮನ್ನು ಅವನು ನೋಡುತ್ತಾನೆ.
Tafsir berbahasa Arab:
وَتَقَلُّبَكَ فِی السّٰجِدِیْنَ ۟
ಮತ್ತು ಸಾಷ್ಟಾಂಗ ಮಾಡುವವರ ಜೊತೆ ನಿಮ್ಮ ಚಲನವಲನವನ್ನೂ. (ನೋಡುತ್ತಾನೆ.)
Tafsir berbahasa Arab:
اِنَّهٗ هُوَ السَّمِیْعُ الْعَلِیْمُ ۟
ಅವನು ಸರ್ವವನ್ನಾಲಿಸುವವನು, ಸರ್ವಜ್ಞಾನಿಯು ಆಗಿರುವನು.
Tafsir berbahasa Arab:
هَلْ اُنَبِّئُكُمْ عَلٰی مَنْ تَنَزَّلُ الشَّیٰطِیْنُ ۟ؕ
ಶೈತಾನರು ಯಾರ ಮೇಲೆ ಇಳಿಯುತ್ತಾರೆಂದು ನಾನು ನಿಮಗೆ ತಿಳಿಸಿ ಕೊಡಲೇ?
Tafsir berbahasa Arab:
تَنَزَّلُ عَلٰی كُلِّ اَفَّاكٍ اَثِیْمٍ ۟ۙ
ಅವರು ಪ್ರತಿಯೊಬ್ಬ ಸುಳ್ಳುಗಾರನಾದ ಪಾಪಿಯ ಮೇಲೆ ಇಳಿಯುತ್ತಾರೆ.
Tafsir berbahasa Arab:
یُّلْقُوْنَ السَّمْعَ وَاَكْثَرُهُمْ كٰذِبُوْنَ ۟ؕ
ಅವರು (ಆಕಾಶದೆಡೆಗೆ) ಕಿವಿಗೊಟ್ಟು ಕೇಳುತ್ತಾರೆ ಆದರೆ ಅವರಲ್ಲಿ ಹೆಚ್ಚಿನವರು ಸುಳ್ಳುಗಾರಾಗಿದ್ದಾರೆ.
Tafsir berbahasa Arab:
وَالشُّعَرَآءُ یَتَّبِعُهُمُ الْغَاوٗنَ ۟ؕ
ಕವಿಗಳನ್ನು ಪಥಭ್ರಷ್ಟರು ಅನುಸರಿಸುತ್ತಾರೆ.
Tafsir berbahasa Arab:
اَلَمْ تَرَ اَنَّهُمْ فِیْ كُلِّ وَادٍ یَّهِیْمُوْنَ ۟ۙ
ಅವರು ಪ್ರತಿಯೊಂದು ಕಣಿವೆಯಲ್ಲೂ ಅಲೆದಾಡುತ್ತಿರುವುದನ್ನು ನೀವು ಕಾಣುವುದಿಲ್ಲವೇ?
Tafsir berbahasa Arab:
وَاَنَّهُمْ یَقُوْلُوْنَ مَا لَا یَفْعَلُوْنَ ۟ۙ
ಮತ್ತು ಖಂಡಿತವಾಗಿಯೂ ಅವರು ಮಾಡದ್ದನ್ನು ಆಡುತ್ತಾರೆ.
Tafsir berbahasa Arab:
اِلَّا الَّذِیْنَ اٰمَنُوْا وَعَمِلُوا الصّٰلِحٰتِ وَذَكَرُوا اللّٰهَ كَثِیْرًا وَّانْتَصَرُوْا مِنْ بَعْدِ مَا ظُلِمُوْا ؕ— وَسَیَعْلَمُ الَّذِیْنَ ظَلَمُوْۤا اَیَّ مُنْقَلَبٍ یَّنْقَلِبُوْنَ ۟۠
ಆದರೆ (ಕವಿಗಳಲ್ಲಿ) ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಕೈಗೊಂಡು ಅಲ್ಲಾಹನನ್ನು ಅತ್ಯಧಿಕ ಸ್ಮರಿಸುವವರ ಹೊರತು, ಅವರು ಮತ್ತು ತಾವು ಅಕ್ರಮಕ್ಕೊಳಗಾದ ಬಳಿಕ ಪ್ರತಿಕಾರ ಕೈಗೊಂಡವರ ಹೊರತು. ಯಾರು ಅಕ್ರಮ ಕೈಗೊಂಡಿರುವರೋ ಅವರು ಯಾವ ಕಡೆಗೆ ಮರಳಿಸಲಾಗುತ್ತಾರೆಂಬುದನ್ನು ಸದ್ಯದಲ್ಲೇ ತಿಳಿಯುವರು.
Tafsir berbahasa Arab:
 
Terjemahan makna Surah: Asy-Syu'arā`
Daftar surah Nomor Halaman
 
Terjemahan makna Alquran Alkarim - Terjemahan Berbahasa Kannada - Basir Maisuri - Daftar isi terjemahan

Terjemahan oleh Syekh Bashīr Maisūrī. Sudah dikembangkan oleh Markaz Ruwād Terjemah.

Tutup