Terjemahan makna Alquran Alkarim - الترجمة الكنادية - بشير ميسوري * - Daftar isi terjemahan


Terjemahan makna Surah: Surah Al-Ma'ārij   Ayah:

ಸೂರ ಅಲ್ -ಮಆರಿಜ್

سَاَلَ سَآىِٕلٌۢ بِعَذَابٍ وَّاقِعٍ ۟ۙ
ಬೇಡುವವನೊಬ್ಬನು ಸಂಭವಿಸಲಿರುವಂತಹ ಯಾತನೆಯನ್ನು ಬೇಡಿದನು.
Tafsir berbahasa Arab:
لِّلْكٰفِرِیْنَ لَیْسَ لَهٗ دَافِعٌ ۟ۙ
ಸತ್ಯನಿಷೇಧಿಗಳ ಮೇಲೆ ಬಂದೆರಗುವುದನ್ನು ತಡೆಯುವವನಾರೂ ಇಲ್ಲ.
Tafsir berbahasa Arab:
مِّنَ اللّٰهِ ذِی الْمَعَارِجِ ۟ؕ
ಆರೋಹಣಾ ಮರ‍್ಗಗಳ ಒಡೆಯನಾದ ಅಲ್ಲಾಹನ ಕಡೆಯಿಂದ (ಅದು ಸಂಭವಿಸುವುದು)
Tafsir berbahasa Arab:
تَعْرُجُ الْمَلٰٓىِٕكَةُ وَالرُّوْحُ اِلَیْهِ فِیْ یَوْمٍ كَانَ مِقْدَارُهٗ خَمْسِیْنَ اَلْفَ سَنَةٍ ۟ۚ
ಐವತ್ತು ಸಾವಿರ ರ‍್ಷಗಳ ಕಾಲಾವಧಿಯುಳ್ಳ ಒಂದು ದಿನದಲ್ಲಿ, ಮಲಕ್ಗಳು ಮತ್ತು ರೂಹ್ ಅವನೆಡೆಗೆ ಏರಿಹೋಗುತ್ತಾರೆ,
Tafsir berbahasa Arab:
فَاصْبِرْ صَبْرًا جَمِیْلًا ۟
ಆದ್ದರಿಂದ ಪೈಗಂಬರರೇ ನೀವು ಅತ್ಯುತ್ತಮವಾಗಿ ಸಹನೆವಹಿಸಿರಿ.
Tafsir berbahasa Arab:
اِنَّهُمْ یَرَوْنَهٗ بَعِیْدًا ۟ۙ
ನಿಸ್ಸಂಶಯವಾಗಿಯೂ ಅವರು ಅದನ್ನು (ಯಾತನೆಯನ್ನು) ವಿದೂರವಾಗಿ ಕಾಣುತ್ತಾರೆ.
Tafsir berbahasa Arab:
وَّنَرٰىهُ قَرِیْبًا ۟ؕ
ನಾವು ಅದನ್ನು ಸಮೀಪದಲ್ಲೇ ಕಾಣುತ್ತೇವೆ,
Tafsir berbahasa Arab:
یَوْمَ تَكُوْنُ السَّمَآءُ كَالْمُهْلِ ۟ۙ
ಅಂದು ಆಕಾಶವು ಕರಗಿದ ತಾಮ್ರದಂತಾಗುವುದು.
Tafsir berbahasa Arab:
وَتَكُوْنُ الْجِبَالُ كَالْعِهْنِ ۟ۙ
ರ‍್ವತಗಳು ಹಿಂಜಿದ ಉಣ್ಣೆಯಂತಾಗುವುವು.
Tafsir berbahasa Arab:
وَلَا یَسْـَٔلُ حَمِیْمٌ حَمِیْمًا ۟ۚۖ
ಯಾವ ಆಪ್ತಮಿತ್ರನೂ ತನ್ನ ಆಪ್ತಮಿತ್ರನನ್ನು ವಿಚಾರಿಸಲಾರನು.
Tafsir berbahasa Arab:
یُّبَصَّرُوْنَهُمْ ؕ— یَوَدُّ الْمُجْرِمُ لَوْ یَفْتَدِیْ مِنْ عَذَابِ یَوْمِىِٕذٍ بِبَنِیْهِ ۟ۙ
(ವಸ್ತುತಃ) ಅವರು ಪರಸ್ಪರರನ್ನು ತೋರಿಸಲಾಗುವರು. ಅಪರಾಧಿಯು ಆದಿನದ ಶಿಕ್ಷೆಯ ಬದಲಿಗೆ ತನ್ನ ಮಕ್ಕಳನ್ನು
Tafsir berbahasa Arab:
وَصَاحِبَتِهٖ وَاَخِیْهِ ۟ۙ
ತನ್ನ ಪತ್ನಿಯನ್ನು ತನ್ನ ಸಹೋದರನನ್ನು.
Tafsir berbahasa Arab:
وَفَصِیْلَتِهِ الَّتِیْ تُـْٔوِیْهِ ۟ۙ
. ತನಗೆ ಆಶ್ರಯ ನೀಡಿದ ತನ್ನ ಕುಟುಂಬವನ್ನು,
Tafsir berbahasa Arab:
وَمَنْ فِی الْاَرْضِ جَمِیْعًا ۙ— ثُمَّ یُنْجِیْهِ ۟ۙ
ಮತ್ತು ಭೂಮುಖದ ಮೇಲಿರುವ ಸಕಲರನ್ನೂ ಪ್ರಾಯಶ್ಚಿತ್ತವಾಗಿ ನೀಡಿ ಆ ದಿನದ ಶಿಕ್ಷೆಯಿಂದ ಪಾರಾಗಲು ಬಯಸುವನು,
Tafsir berbahasa Arab:
كَلَّا ؕ— اِنَّهَا لَظٰی ۟ۙ
ಖಂಡಿತವಾಗಿಯೂ ಹೀಗಾಗದು ನಿಶ್ಚಯವಾಗಿಯೂ ಆದು ಜ್ವಾಲೆಗಳುಳ್ಳ ಅಗ್ನಿಯಾಗಿದೆ.
Tafsir berbahasa Arab:
نَزَّاعَةً لِّلشَّوٰی ۟ۚۖ
ರ‍್ಮವನ್ನು ಸುಲಿದುಬಿಡುವಂತಹದ್ದಾಗಿದೆ.
Tafsir berbahasa Arab:
تَدْعُوْا مَنْ اَدْبَرَ وَتَوَلّٰی ۟ۙ
ಸತ್ಯದಿಂದ ವಿಮುಖನಾದವನನ್ನು ಬೆನ್ನು ತಿರುಗಿಸಿದವನನ್ನು
Tafsir berbahasa Arab:
وَجَمَعَ فَاَوْعٰی ۟
ಮತ್ತು ಸಂಪತ್ತನ್ನು ಸಂಗ್ರಹಿಸಿ ಬಚ್ಚಿಟ್ಟವನನ್ನು ಅದು ಕೂಗಿ ಕರೆಯುವುದು.
Tafsir berbahasa Arab:
اِنَّ الْاِنْسَانَ خُلِقَ هَلُوْعًا ۟ۙ
ನಿಸ್ಸಂದೇಹವಾಗಿಯೂ ಮನುಷ್ಯನು ಅತ್ಯಂತ ಅಸಹನೆಯುಳ್ಳವನಾಗಿ ಸೃಷ್ಟಿಸಲಾಗಿರುವನು.
Tafsir berbahasa Arab:
اِذَا مَسَّهُ الشَّرُّ جَزُوْعًا ۟ۙ
ಅವನಿಗೆ ಆಪತ್ತು ಬಾಧಿಸಿದರೆ ದಿಗ್ಭಾçಂತನಾಗಿಬಿಡುತ್ತಾನೆ.
Tafsir berbahasa Arab:
وَّاِذَا مَسَّهُ الْخَیْرُ مَنُوْعًا ۟ۙ
ಮತ್ತು ಅನುಕೂಲತೆಯು ಲಭಿಸಿದರೆ ಜಿಪುಣತೆ ತೋರತೊಡಗುತ್ತಾನೆ.
Tafsir berbahasa Arab:
اِلَّا الْمُصَلِّیْنَ ۟ۙ
ಆದರೆ ನಮಾಜ಼್ ನರ‍್ವಹಿಸುವವರ ಹೊರತು.
Tafsir berbahasa Arab:
الَّذِیْنَ هُمْ عَلٰی صَلَاتِهِمْ دَآىِٕمُوْنَ ۟
ಅವರು ತಮ್ಮ ನಮಾಜ಼್ನಲ್ಲಿ ಸದಾ ಸ್ಥಿರತೆಯನ್ನು ಕಾಪಾಡಿಕೊಳ್ಳುವವರಾಗಿದ್ದಾರೆ.
Tafsir berbahasa Arab:
وَالَّذِیْنَ فِیْۤ اَمْوَالِهِمْ حَقٌّ مَّعْلُوْمٌ ۟
ಅವರ ಸಂಪತ್ತಿನಲ್ಲಿ ಒಂದು ನಿಶ್ಚಿತ ಪಾಲು ಇದೆ;
Tafsir berbahasa Arab:
لِّلسَّآىِٕلِ وَالْمَحْرُوْمِ ۟
ಬೇಡುವವನಿಗೆ ಮತ್ತು ಬೇಡದವನಿಗೆ ,
Tafsir berbahasa Arab:
وَالَّذِیْنَ یُصَدِّقُوْنَ بِیَوْمِ الدِّیْنِ ۟
ಅವರು ಪ್ರತಿಫಲದ ದಿನ ಸತ್ಯವೇನೆಂದು ನಂಬುತ್ತಾರೆ,
Tafsir berbahasa Arab:
وَالَّذِیْنَ هُمْ مِّنْ عَذَابِ رَبِّهِمْ مُّشْفِقُوْنَ ۟ۚ
ಅವರು ತಮ್ಮ ಪ್ರಭುವಿನ ಶಿಕ್ಷೆಯ ಬಗ್ಗೆ ಭಯಪಡುತ್ತಾರೆ.
Tafsir berbahasa Arab:
اِنَّ عَذَابَ رَبِّهِمْ غَیْرُ مَاْمُوْنٍ ۪۟
ನಿಸ್ಸಂಶಯವಾಗಿಯೂ ಅವರ ಪ್ರಭುವಿನ ಶಿಕ್ಷೆಯು ನರ‍್ಭೀತಿಯಿಂದ ಇರುವಂತಹದ್ದಲ್ಲ.
Tafsir berbahasa Arab:
وَالَّذِیْنَ هُمْ لِفُرُوْجِهِمْ حٰفِظُوْنَ ۟ۙ
ಅವರು ತಮ್ಮ ಗುಪ್ತಾಂಗಗಳನ್ನು ರಕ್ಷಿಸಿಕೊಳ್ಳುತ್ತಾರೆ.
Tafsir berbahasa Arab:
اِلَّا عَلٰۤی اَزْوَاجِهِمْ اَوْ مَا مَلَكَتْ اَیْمَانُهُمْ فَاِنَّهُمْ غَیْرُ مَلُوْمِیْنَ ۟ۚ
ಆದರೆ ತಮ್ಮ ಪತ್ನಿಯರ ಅಥವಾ ತಮ್ಮ ದಾಸಿಯರ ಹೊರತು ಇದರಲ್ಲಿ ಅವರು ಆಕ್ಷೇಪರ‍್ಹರಲ್ಲ,
Tafsir berbahasa Arab:
فَمَنِ ابْتَغٰی وَرَآءَ ذٰلِكَ فَاُولٰٓىِٕكَ هُمُ الْعٰدُوْنَ ۟ۚ
ಇನ್ನು ಯಾರು ಅದರ ಹೊರತು ಅನ್ಯಮರ‍್ಗವನ್ನು ಬಯಸುತ್ತಾರೋ ಅವರೇ ಮಿತಿಮೀರಿದವರಾಗಿರುತ್ತಾರೆ.
Tafsir berbahasa Arab:
وَالَّذِیْنَ هُمْ لِاَمٰنٰتِهِمْ وَعَهْدِهِمْ رٰعُوْنَ ۟
ಅವರು ತಮ್ಮ ಅಮಾನತ್ತು ಮತ್ತು ತಮ್ಮ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.
Tafsir berbahasa Arab:
وَالَّذِیْنَ هُمْ بِشَهٰدٰتِهِمْ قَآىِٕمُوْنَ ۟
ತಮ್ಮ ಸಾಕ್ಷö್ಯಗಳ ಮೇಲೆ ಸ್ಥಿರವಾಗಿ ನಿಲ್ಲುತ್ತಾರೆ.
Tafsir berbahasa Arab:
وَالَّذِیْنَ هُمْ عَلٰی صَلَاتِهِمْ یُحَافِظُوْنَ ۟ؕ
ಮತ್ತು ತಮ್ಮ ನಮಾಜ಼್ಗಳನ್ನು ಕಾಪಾಡಿಕೊಳ್ಳುವವರಾಗಿದ್ದಾರೆ.
Tafsir berbahasa Arab:
اُولٰٓىِٕكَ فِیْ جَنّٰتٍ مُّكْرَمُوْنَ ۟ؕ۠
ಇವರೇ ಸ್ರ‍್ಗದಲ್ಲಿ ಆದರಣೀಯರಾಗಿರುವರು.
Tafsir berbahasa Arab:
فَمَالِ الَّذِیْنَ كَفَرُوْا قِبَلَكَ مُهْطِعِیْنَ ۟ۙ
(ಓ ಪೈಗಂಬರರೇ) ಈ ಸತ್ಯನಿಷೇಧಿಗಳಿಗೆ ಏನಾಗಿಬಿಟ್ಟಿದೆ ? ನಿಮ್ಮೆಡೆಗೆ ಧಾವಿಸಿ ಬರುತ್ತಿದ್ದಾರೆ.
Tafsir berbahasa Arab:
عَنِ الْیَمِیْنِ وَعَنِ الشِّمَالِ عِزِیْنَ ۟
ಬಲಭಾಗದಿಂದಲೂ ಎಡಭಾಗದಿಂದಲೂ ಗುಂಪುಗುಂಪಾಗಿ (ಧಾವಿಸುತ್ತಿದ್ದಾರೆ) ,
Tafsir berbahasa Arab:
اَیَطْمَعُ كُلُّ امْرِئٍ مِّنْهُمْ اَنْ یُّدْخَلَ جَنَّةَ نَعِیْمٍ ۟ۙ
ಅವರಲ್ಲಿ ಪ್ರತಿಯೊಬ್ಬನು ಸುಖಾನುಗ್ರಹಗಳು ತುಂಬಿದ ಸ್ರ‍್ಗದಲ್ಲಿ ತಾನು ಪ್ರವೇಶಿಸಲಿಕ್ಕಿರುವೆನೆಂದು ನಿರೀಕ್ಷಿಸುತ್ತಿದ್ದಾನೆಯೇ ?
Tafsir berbahasa Arab:
كَلَّا ؕ— اِنَّا خَلَقْنٰهُمْ مِّمَّا یَعْلَمُوْنَ ۟
ಖಂಡಿತ ಇಲ್ಲ ನಾವು ಅವರನ್ನು ಯಾವ ವಸ್ತುವಿನಿಂದ ಸೃಷ್ಟಿಸಿದ್ದೇವೆಂದು ಅವರು ಅರಿತಿದ್ದಾರೆ,
Tafsir berbahasa Arab:
فَلَاۤ اُقْسِمُ بِرَبِّ الْمَشٰرِقِ وَالْمَغٰرِبِ اِنَّا لَقٰدِرُوْنَ ۟ۙ
ನಾನು ಉದಯಸ್ಥಾನಗಳ ಮತ್ತು ಅಸ್ತಮ ಸ್ಥಾನಗಳ ಪ್ರಭುವಿನ ಮೇಲೆ ಆಣೆಹಾಕುತ್ತೇನೆ,
Tafsir berbahasa Arab:
عَلٰۤی اَنْ نُّبَدِّلَ خَیْرًا مِّنْهُمْ ۙ— وَمَا نَحْنُ بِمَسْبُوْقِیْنَ ۟
ಖಚಿತವಾಗಿಯೂ ಅವರಿಗಿಂತಲೂ ಉತ್ತಮ ಜನರನ್ನು ಅವರ ಬದಲಿಗೆ ತರಲು ನಾವು ಸರ‍್ಥರಿದ್ದೇವೆ ಮತ್ತು ನಾವು (ಹೀಗೆ ಮಾಡಲು) ಅಶಕ್ತರಲ್ಲ.
Tafsir berbahasa Arab:
فَذَرْهُمْ یَخُوْضُوْا وَیَلْعَبُوْا حَتّٰی یُلٰقُوْا یَوْمَهُمُ الَّذِیْ یُوْعَدُوْنَ ۟ۙ
ಆದ್ದರಿಂದ ಅವರಿಗೆ ಎಚ್ಚರಿಕೆ ನೀಡಲಾದ ಆ ದಿನವನ್ನು ಭೇಟಿಯಾಗುವತನಕ ನೀವು ಅವರನ್ನು ಪರಸ್ಪರ ಜಗಳವಾಡುತ್ತಿರಲು, ಆಟವಾಡುತ್ತಿರಲು ಬಿಟ್ಟುಬಿಡಿರಿ.
Tafsir berbahasa Arab:
یَوْمَ یَخْرُجُوْنَ مِنَ الْاَجْدَاثِ سِرَاعًا كَاَنَّهُمْ اِلٰی نُصُبٍ یُّوْفِضُوْنَ ۟ۙ
ಅವರು ಯಾವುದೋ ಒಂದು ವಿಗ್ರಹದತ್ತ ಅತಿವೇಗವಾಗಿ ಓಡುತ್ತಿರುವವರೋ ಎಂಬಂತೆ, ತಮ್ಮ ಗೋರಿಗಳಿಂದ ಧಾವಂತದಿಂದ ಹೊರಡುವ ದಿನ.
Tafsir berbahasa Arab:
خَاشِعَةً اَبْصَارُهُمْ تَرْهَقُهُمْ ذِلَّةٌ ؕ— ذٰلِكَ الْیَوْمُ الَّذِیْ كَانُوْا یُوْعَدُوْنَ ۟۠
ಅವರ ದೃಷ್ಟಿಗಳು ತಗ್ಗಿರುವುವು, ನಿಂದ್ಯತೆಯು ಅವರನ್ನು ಆವರಿಸುತ್ತಿರುವುದು, ಅವರಿಗೆ ಎಚ್ಚರಿಕೆ ನೀಡಲ್ಪಟ್ಟ ದಿನ ಅದೇ ಆಗಿದೆ.
Tafsir berbahasa Arab:
 
Terjemahan makna Surah: Surah Al-Ma'ārij
Daftar surah Nomor Halaman
 
Terjemahan makna Alquran Alkarim - الترجمة الكنادية - بشير ميسوري - Daftar isi terjemahan

ترجمة معاني القرآن الكريم إلى اللغة الكنادية ترجمها بشير ميسوري.

Tutup