Check out the new design

Terjemahan makna Alquran Alkarim - Terjemahan Berbahasa Kannada - Hamzah Batur * - Daftar isi terjemahan

PDF XML CSV Excel API
Please review the Terms and Policies

Terjemahan makna Surah: Ar-Ra'd   Ayah:
مَثَلُ الْجَنَّةِ الَّتِیْ وُعِدَ الْمُتَّقُوْنَ ؕ— تَجْرِیْ مِنْ تَحْتِهَا الْاَنْهٰرُ ؕ— اُكُلُهَا دَآىِٕمٌ وَّظِلُّهَا ؕ— تِلْكَ عُقْبَی الَّذِیْنَ اتَّقَوْا ۖۗ— وَّعُقْبَی الْكٰفِرِیْنَ النَّارُ ۟
ದೇವಭಯವುಳ್ಳವರಿಗೆ ವಾಗ್ದಾನ ಮಾಡಲಾದ ಸ್ವರ್ಗವು ಹೇಗಿದೆಯೆಂದರೆ, ಅದರ ತಳಭಾಗದಲ್ಲಿ ನದಿಗಳು ಹರಿಯುತ್ತಿವೆ. ಅದರ ಹಣ್ಣುಗಳು ಮತ್ತು ನೆರಳು ಶಾಶ್ವತವಾಗಿವೆ. ಅದು ದೇವಭಯವುಳ್ಳವರ ಅಂತಿಮ ಸ್ಥಿತಿಯಾಗಿದೆ! ಸತ್ಯನಿಷೇಧಿಗಳ ಅಂತಿಮ ಸ್ಥಿತಿಯು ನರಕಾಗ್ನಿಯಾಗಿದೆ.
Tafsir berbahasa Arab:
وَالَّذِیْنَ اٰتَیْنٰهُمُ الْكِتٰبَ یَفْرَحُوْنَ بِمَاۤ اُنْزِلَ اِلَیْكَ وَمِنَ الْاَحْزَابِ مَنْ یُّنْكِرُ بَعْضَهٗ ؕ— قُلْ اِنَّمَاۤ اُمِرْتُ اَنْ اَعْبُدَ اللّٰهَ وَلَاۤ اُشْرِكَ بِهٖ ؕ— اِلَیْهِ اَدْعُوْا وَاِلَیْهِ مَاٰبِ ۟
ನಾವು (ಇದಕ್ಕೆ ಮೊದಲು) ಯಾರಿಗೆ ಗ್ರಂಥವನ್ನು ನೀಡಿದ್ದೇವೋ ಅವರು ನಿಮಗೆ ಅವತೀರ್ಣವಾದ ಈ ಗ್ರಂಥದ ಬಗ್ಗೆ ಸಂತಸಪಡುತ್ತಾರೆ. ಅದರ ಕೆಲವು ಭಾಗಗಳನ್ನು ನಿಷೇಧಿಸುವ ಪಂಗಡಗಳೂ ಅವರಲ್ಲಿವೆ. ಹೇಳಿರಿ: “ಅಲ್ಲಾಹನನ್ನು ಮಾತ್ರ ಆರಾಧಿಸಬೇಕು ಮತ್ತು ಅವನೊಂದಿಗೆ ಏನೂ ಸಹಭಾಗಿತ್ವ (ಶಿರ್ಕ್) ಮಾಡಬಾರದೆಂದು ನನಗೆ ಆಜ್ಞಾಪಿಸಲಾಗಿದೆ. ನಾನು ಅವನ ಕಡೆಗೇ ಕರೆಯುತ್ತಿದ್ದೇನೆ. ನಾನು ಮರಳಿಹೋಗುವುದು ಕೂಡ ಅವನ ಬಳಿಗೇ ಆಗಿದೆ.”
Tafsir berbahasa Arab:
وَكَذٰلِكَ اَنْزَلْنٰهُ حُكْمًا عَرَبِیًّا ؕ— وَلَىِٕنِ اتَّبَعْتَ اَهْوَآءَهُمْ بَعْدَ مَا جَآءَكَ مِنَ الْعِلْمِ ۙ— مَا لَكَ مِنَ اللّٰهِ مِنْ وَّلِیٍّ وَّلَا وَاقٍ ۟۠
ಈ ರೀತಿ ನಾವು ಈ ಕುರ್‌ಆನನ್ನು ಅರಬ್ಬಿ ಭಾಷೆಯಲ್ಲಿರುವ ಆಜ್ಞೆಯಾಗಿ ಅವತೀರ್ಣಗೊಳಿಸಿದ್ದೇವೆ. ನಿಮಗೆ ಜ್ಞಾನ ಬಂದ ಬಳಿಕವೂ ನೀವು ಅವರ ಸ್ವೇಚ್ಛೆಗಳನ್ನು ಹಿಂಬಾಲಿಸಿದರೆ, ನಿಮ್ಮನ್ನು ಅಲ್ಲಾಹನ ಶಿಕ್ಷೆಯಿಂದ ಪಾರು ಮಾಡುವ ಯಾವುದೇ ಸಹಾಯಕರು ಅಥವಾ ರಕ್ಷಕರು ಇರಲಾರರು.
Tafsir berbahasa Arab:
وَلَقَدْ اَرْسَلْنَا رُسُلًا مِّنْ قَبْلِكَ وَجَعَلْنَا لَهُمْ اَزْوَاجًا وَّذُرِّیَّةً ؕ— وَمَا كَانَ لِرَسُوْلٍ اَنْ یَّاْتِیَ بِاٰیَةٍ اِلَّا بِاِذْنِ اللّٰهِ ؕ— لِكُلِّ اَجَلٍ كِتَابٌ ۟
ನಿಮಗಿಂತ ಮೊದಲೂ ನಾವು ಸಂದೇಶವಾಹಕರುಗಳನ್ನು ಕಳುಹಿಸಿದ್ದೇವೆ. ಅವರಿಗೆ ನಾವು ಪತ್ನಿ-ಮಕ್ಕಳನ್ನು ನೀಡಿದ್ದೇವೆ. ಅಲ್ಲಾಹನ ಅಪ್ಪಣೆಯಿಲ್ಲದೆ ಯಾವುದೇ ಒಂದು ದೃಷ್ಟಾಂತವನ್ನು ತರಲು ಸಂದೇಶವಾಹಕರಲ್ಲಿ ಯಾರಿಗೂ ಸಾಧ್ಯವಿಲ್ಲ. ಎಲ್ಲಾ ನಿಶ್ಚಿತ ವಾಗ್ದಾನಗಳಿಗೂ ಒಂದು ಲಿಖಿತ ಸಮಯವಿದೆ.
Tafsir berbahasa Arab:
یَمْحُوا اللّٰهُ مَا یَشَآءُ وَیُثْبِتُ ۖۚ— وَعِنْدَهٗۤ اُمُّ الْكِتٰبِ ۟
ಅಲ್ಲಾಹು ಅವನು ಇಚ್ಛಿಸುವುದನ್ನು ಅಳಿಸುತ್ತಾನೆ ಮತ್ತು (ಅವನು ಇಚ್ಛಿಸುವುದನ್ನು) ಸ್ಥಿರಗೊಳಿಸುತ್ತಾನೆ. ಮೂಲಗ್ರಂಥವು ಅವನ ಬಳಿಯಲ್ಲಿದೆ.
Tafsir berbahasa Arab:
وَاِنْ مَّا نُرِیَنَّكَ بَعْضَ الَّذِیْ نَعِدُهُمْ اَوْ نَتَوَفَّیَنَّكَ فَاِنَّمَا عَلَیْكَ الْبَلٰغُ وَعَلَیْنَا الْحِسَابُ ۟
ನಾವು ಅವರಿಗೆ ವಾಗ್ದಾನ ಮಾಡುವ ಶಿಕ್ಷೆಗಳಲ್ಲಿ ಕೆಲವನ್ನು ನಾವು ನಿಮಗೆ ತೋರಿಸಿಕೊಟ್ಟರೂ ಅಥವಾ (ಅದಕ್ಕಿಂತ ಮೊದಲೇ) ನಾವು ನಿಮ್ಮ ಆತ್ಮವನ್ನು ವಶಪಡಿಸಿದರೂ ನಿಮ್ಮ ಕರ್ತವ್ಯವು ಸಂದೇಶವನ್ನು ತಲುಪಿಸುವುದು ಮಾತ್ರ. ವಿಚಾರಣೆ ಮಾಡಬೇಕಾದುದು ನಮ್ಮ ಹೊಣೆಯಾಗಿದೆ.
Tafsir berbahasa Arab:
اَوَلَمْ یَرَوْا اَنَّا نَاْتِی الْاَرْضَ نَنْقُصُهَا مِنْ اَطْرَافِهَا ؕ— وَاللّٰهُ یَحْكُمُ لَا مُعَقِّبَ لِحُكْمِهٖ ؕ— وَهُوَ سَرِیْعُ الْحِسَابِ ۟
ನಾವು ಭೂಮಿಯನ್ನು ಅದರ ಕಿನಾರೆಗಳಿಂದ ಕುಗ್ಗಿಸುವುದನ್ನು ಅವರು ನೋಡುವುದಿಲ್ಲವೇ?[1] ಅಲ್ಲಾಹು ತೀರ್ಪು ನೀಡುತ್ತಾನೆ. ಅವನ ತೀರ್ಪನ್ನು ಹಿಂದಿಕ್ಕಲು (ರದ್ದು ಮಾಡಲು) ಯಾರಿಗೂ ಸಾಧ್ಯವಿಲ್ಲ. ಅವನು ಶೀಘ್ರವಾಗಿ ವಿಚಾರಣೆ ಮಾಡುತ್ತಾನೆ.
[1] ಅಂದರೆ ಸತ್ಯನಿಷೇಧಿಗಳ ವಶದಲ್ಲಿರುವ ಪ್ರದೇಶಗಳು ಕುಗ್ಗುವುದನ್ನು ಮತ್ತು ಸತ್ಯವಿಶ್ವಾಸಿಗಳ ವಶದಲ್ಲಿರುವ ಪ್ರದೇಶಗಳು ಹಿಗ್ಗುವುದನ್ನು ಅವರು ನೋಡುವುದಿಲ್ಲವೇ?
Tafsir berbahasa Arab:
وَقَدْ مَكَرَ الَّذِیْنَ مِنْ قَبْلِهِمْ فَلِلّٰهِ الْمَكْرُ جَمِیْعًا ؕ— یَعْلَمُ مَا تَكْسِبُ كُلُّ نَفْسٍ ؕ— وَسَیَعْلَمُ الْكُفّٰرُ لِمَنْ عُقْبَی الدَّارِ ۟
ಇವರಿಗಿಂತ ಮೊದಲಿನವರು ಕೂಡ ಪಿತೂರಿ ಮಾಡಿದ್ದರು. ಆದರೆ ತಂತ್ರಗಾರಿಕೆಗಳೆಲ್ಲವೂ ಅಲ್ಲಾಹನಿಗೆ ಸೇರಿದ್ದು. ಪ್ರತಿಯೊಬ್ಬ ಮನುಷ್ಯನು ಮಾಡುವ ಕರ್ಮಗಳನ್ನು ಅವನು ತಿಳಿಯುತ್ತಾನೆ. ಅಂತಿಮ ಭವನವು ಯಾರಿಗೆ ದೊರೆಯಲಿದೆಯೆಂದು ಸತ್ಯನಿಷೇಧಿಗಳು ಸದ್ಯವೇ ತಿಳಿಯುವರು.
Tafsir berbahasa Arab:
 
Terjemahan makna Surah: Ar-Ra'd
Daftar surah Nomor Halaman
 
Terjemahan makna Alquran Alkarim - Terjemahan Berbahasa Kannada - Hamzah Batur - Daftar isi terjemahan

Ditafsirkan oleh Muhammad Hamzah Batur. Dikembangkan di bawah pengawasan Pusat Terjemah Ruwwād.

Tutup