Check out the new design

Traduzione dei Significati del Sacro Corano - Traduzione Canadese - Bashir Maisuri * - Indice Traduzioni


Traduzione dei significati Sura: An-Naml   Versetto:

ಅನ್ನಮ್ಲ್

طٰسٓ ۫— تِلْكَ اٰیٰتُ الْقُرْاٰنِ وَكِتَابٍ مُّبِیْنٍ ۟ۙ
ತ್ವಾಸೀನ್ ಇವು ಕುರ್‌ಆನ್ ಮತ್ತು ಸುವ್ಯಕ್ತ ಗ್ರಂಥದ ಸೂಕ್ತಿಗಳಾಗಿವೆ.
Esegesi in lingua araba:
هُدًی وَّبُشْرٰی لِلْمُؤْمِنِیْنَ ۟ۙ
ಸತ್ಯವಶ್ವಾಸಿಗಳಿಗೆ ಸನ್ಮಾರ್ಗವು ಮತ್ತು ಸುವಾರ್ತೆಯು ಆಗಿದೆ.
Esegesi in lingua araba:
الَّذِیْنَ یُقِیْمُوْنَ الصَّلٰوةَ وَیُؤْتُوْنَ الزَّكٰوةَ وَهُمْ بِالْاٰخِرَةِ هُمْ یُوْقِنُوْنَ ۟
ಅವರು ನಮಾಝ್ ನಿರ್ವಹಿಸುವವರು, ಝಕಾತ್ ನೀಡುವವರು ಮತ್ತು ಪರಲೋಕದಲ್ಲಿ ದೃಢ ನಂಬಿಕೆಯುಳ್ಳವರಾಗಿದ್ದಾರೆ.
Esegesi in lingua araba:
اِنَّ الَّذِیْنَ لَا یُؤْمِنُوْنَ بِالْاٰخِرَةِ زَیَّنَّا لَهُمْ اَعْمَالَهُمْ فَهُمْ یَعْمَهُوْنَ ۟ؕ
ನಿಜವಾಗಿಯು ಪರಲೋಕದ ಮೇಲೆ ವಿಶ್ವಾಸವಿರಿಸಿದವರಿಗೆ ನಾವು ಅವರ ಕರ್ಮಗಳನ್ನು ಮನಮೋಹಕಗೊಳಿಸಿದ್ದೇವೆ. ಹಾಗಾಗಿ ಅವರು ಅಂಧರಾಗಿ ಅಲೆದಾಡುತ್ತಾರೆ.
Esegesi in lingua araba:
اُولٰٓىِٕكَ الَّذِیْنَ لَهُمْ سُوْٓءُ الْعَذَابِ وَهُمْ فِی الْاٰخِرَةِ هُمُ الْاَخْسَرُوْنَ ۟
ಇವರೇ ಕಠಿಣ ಶಿಕ್ಷೆಗೆ ಗುರಿ ಯಾಗುವರು ಮತ್ತು ಪರಲೋಕದಲ್ಲಿ ಅತ್ಯಂತ ನಷ್ಟ ಹೊಂದುವರಾಗಿರುತ್ತಾರೆ.
Esegesi in lingua araba:
وَاِنَّكَ لَتُلَقَّی الْقُرْاٰنَ مِنْ لَّدُنْ حَكِیْمٍ عَلِیْمٍ ۟
ನಿಸ್ಸಂದೇಹವಾಗಿಯು ಓ ಪೈಗಂಬರರೇ ನಿಮಗೆ ಈ ಕುರ್‌ಆನನ್ನು ಯುಕ್ತಿವಂತನು, ಸರ್ವಜ್ಞಾನಿಯು, ಆದ ಅಲ್ಲಾಹನ ಕಡೆಯಿಂದ ನೀಡಲಾಗುತ್ತಿದೆ.
Esegesi in lingua araba:
اِذْ قَالَ مُوْسٰی لِاَهْلِهٖۤ اِنِّیْۤ اٰنَسْتُ نَارًا ؕ— سَاٰتِیْكُمْ مِّنْهَا بِخَبَرٍ اَوْ اٰتِیْكُمْ بِشِهَابٍ قَبَسٍ لَّعَلَّكُمْ تَصْطَلُوْنَ ۟
ಮೂಸಾ ತನ್ನ ಮನೆಯವರಿಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ: ನಾನೊಂದು ಬೆಂಕಿಯನ್ನು ಕಂಡಿರುವೆನು. ನಾನು ಅಲ್ಲಿಂದೇನಾದರೂ ನಿಮಗೆ ಸುದ್ದಿಯನ್ನು ತರುವೆನು ಇಲ್ಲವೇ ಪ್ರಜ್ವಲಿಸುವ ಬೆಂಕಿಕೆAಡವನ್ನು ತರುವೆನು. ನೀವು ಚಳಿಕಾಯಿಸಿಕೊಳ ್ಳಬಹುದು.
Esegesi in lingua araba:
فَلَمَّا جَآءَهَا نُوْدِیَ اَنْ بُوْرِكَ مَنْ فِی النَّارِ وَمَنْ حَوْلَهَا ؕ— وَسُبْحٰنَ اللّٰهِ رَبِّ الْعٰلَمِیْنَ ۟
ಅವರು ಅಲ್ಲಿಗೆ ತಲುಪಿದಾಗ ಕರೆಕೊಡಲಾಯಿತು: “ಈ ಅಗ್ನಿಯಲ್ಲಿರುವವನು ಮಹಾಮಂಗಳಮಯನಾಗಿರುವನು ಮತ್ತು ಇದರ ಸುತ್ತಮುತ್ತಲಲ್ಲಿರುವವರು ಸಹ ಮತ್ತು ಸರ್ವಲೋಕಗಳ ಪ್ರಭುವಾದ ಅಲ್ಲಾಹನು ಪರಮ ಪಾವನನು.
Esegesi in lingua araba:
یٰمُوْسٰۤی اِنَّهٗۤ اَنَا اللّٰهُ الْعَزِیْزُ الْحَكِیْمُ ۟ۙ
ಓ ಮೂಸಾ! ವಾಸ್ತವವೇನೆಂದರೆ ಪ್ರಚಂಡನು, ಯುಕ್ತಿಪೂರ್ಣನು ಆದ ಅಲ್ಲಾಹನು. ನಾನೇ
Esegesi in lingua araba:
وَاَلْقِ عَصَاكَ ؕ— فَلَمَّا رَاٰهَا تَهْتَزُّ كَاَنَّهَا جَآنٌّ وَّلّٰی مُدْبِرًا وَّلَمْ یُعَقِّبْ ؕ— یٰمُوْسٰی لَا تَخَفْ ۫— اِنِّیْ لَا یَخَافُ لَدَیَّ الْمُرْسَلُوْنَ ۟ۗۖ
ಮತ್ತು ನಿಮ್ಮ ಲಾಠಿಯನ್ನು ಕೆಳಗೆ ಹಾಕಿಬಿಡಿ. ಅವರು ಅದನ್ನು (ಹಾಕಿದಾಗ) ಸರ್ಪವೆಂಬAತೆ ತೆವಳುತ್ತಿರುವುದಾಗಿ ಕಂಡಾಗ ಬೆನ್ನು ತಿರುಗಿಸಿ ಓಟಕಿತ್ತರು ಹಾಗೂ ತಿರುಗಿ ನೋಡಲಿಲ್ಲ. ಓ ಮೂಸಾ ನೀವು ಭಯಪಡದಿರಿ. ನಿಶ್ಚಯವಾಗಿಯು ಸಂದೇಶವಾಹಕರು ನನ್ನ ಸನ್ನಿಧಿಯಲ್ಲಿ ಭಯಪಡುವುದಿಲ್ಲ.
Esegesi in lingua araba:
اِلَّا مَنْ ظَلَمَ ثُمَّ بَدَّلَ حُسْنًا بَعْدَ سُوْٓءٍ فَاِنِّیْ غَفُوْرٌ رَّحِیْمٌ ۟
ಆದರೆ ಯಾರು ಅಕ್ರಮವೆಸಗುವನೋ, ತರುವಾಯ ಕೆಡುಕಿನ ಬದಲಿಗೆ ಒಳಿತನ್ನು ತರುವನೋ ನಾನು ಕ್ಷಮಾಶೀಲನು, ಕರುಣಾನಿಧಿಯು ಆಗಿರುವೆನು.
Esegesi in lingua araba:
وَاَدْخِلْ یَدَكَ فِیْ جَیْبِكَ تَخْرُجْ بَیْضَآءَ مِنْ غَیْرِ سُوْٓءٍ ۫— فِیْ تِسْعِ اٰیٰتٍ اِلٰی فِرْعَوْنَ وَقَوْمِهٖ ؕ— اِنَّهُمْ كَانُوْا قَوْمًا فٰسِقِیْنَ ۟
ನಿನ್ನ ಕೈಯನ್ನು ನಿನ್ನ ಜೇಬಿನೊಳಗೆ ಹಾಕು. ಅದು ಯಾವುದೇ ಲೋಪವಿಲ್ಲದೆ ಬೆಳ್ಳಗಾಗಿ ಮಿಂಚುತ್ತ ಹೊರಬರುವುದು. ನೀನು ಒಂಬತ್ತು ದೃಷ್ಟಾಂತಗಳೊAದಿಗೆ ಫಿರ್‌ಔನ್ ಮತ್ತು ಅವನ ಜನಾಂಗದೆಡೆಗೆ ಹೋಗು. ನಿಜವಾಗಿಯು ಅವರು ದುಷ್ಕರ್ಮಿಗಳಾಗಿದ್ದಾರೆ.
Esegesi in lingua araba:
فَلَمَّا جَآءَتْهُمْ اٰیٰتُنَا مُبْصِرَةً قَالُوْا هٰذَا سِحْرٌ مُّبِیْنٌ ۟ۚ
ಆದರೆ ಕಣ್ತೆರೆಸುವಂತಹ ನಮ್ಮ ದೃಷ್ಟಾಂತಗಳು ಅವರ ಬಳಿಗೆ ಬಂದಾಗ: ಇದು ಸುಸ್ಪಷ್ಟ ಜಾದುವಾಗಿದೆ ಎಂದು ಅವರು ಹೆಳಿದರು.
Esegesi in lingua araba:
 
Traduzione dei significati Sura: An-Naml
Indice delle Sure Numero di pagina
 
Traduzione dei Significati del Sacro Corano - Traduzione Canadese - Bashir Maisuri - Indice Traduzioni

Tradotta dallo Sheikh Bashir Maisuri. Sviluppata sotto la supervisione del Pioneer Translation Center (Ruwwad at-Tarjama).

Chiudi