Check out the new design

Traduzione dei Significati del Sacro Corano - Traduzione Canadese - Bashir Maisuri * - Indice Traduzioni


Traduzione dei significati Sura: Al-A‘râf   Versetto:
قَالَ مَا مَنَعَكَ اَلَّا تَسْجُدَ اِذْ اَمَرْتُكَ ؕ— قَالَ اَنَا خَیْرٌ مِّنْهُ ۚ— خَلَقْتَنِیْ مِنْ نَّارٍ وَّخَلَقْتَهٗ مِنْ طِیْنٍ ۟
ಅಲ್ಲಾಹನು ಹೇಳಿದನು: ನಾನು ನಿನಗೆ ಆಜ್ಞೆ ನೀಡಿರುವಾಗ ನೀನು ಸಾಷ್ಟಾಂಗವೆರಗದಿರಲು ನಿನಗೆ ಅದ್ಯಾವ ವಸ್ತು ತಡೆಯಿತು; ಅವನು ಹೇಳಿದನು: ನಾನು ಅವನಿಗಿಂತಲು ಉತ್ತಮನಾಗಿದ್ದೇನೆ. ನೀನು ನನ್ನನ್ನು ಅಗ್ನಿಯಿಂದ ಸೃಷ್ಟಿಸಿರುವೆ ಮತ್ತು ಅವನನ್ನು ಮಣ್ಣಿನಿಂದ ಸೃಷ್ಟಿಸಿರುವೆ.
Esegesi in lingua araba:
قَالَ فَاهْبِطْ مِنْهَا فَمَا یَكُوْنُ لَكَ اَنْ تَتَكَبَّرَ فِیْهَا فَاخْرُجْ اِنَّكَ مِنَ الصّٰغِرِیْنَ ۟
ಅಲ್ಲಾಹನು ಹೇಳಿದನು: ನೀನು ಇಲ್ಲಿಂದ (ಈ ಸ್ವರ್ಗದಿಂದ) ಇಳಿದುಬಿಡು. ಆಕಾಶದಲ್ಲಿದ್ದುಕೊಂಡು ನಿನಗೆ ಅಹಂಕಾರ ತೋರಲು ಯಾವುದೇ ಹಕ್ಕಿರುವುದಿಲ್ಲ. ನೀನು ತೊಲಗು, ನಿಸ್ಸಂಶಯವಾಗಿಯು ನೀನು ನಿಂದ್ಯರಲ್ಲಿ ಸೇರಿರುವೆ.
Esegesi in lingua araba:
قَالَ اَنْظِرْنِیْۤ اِلٰی یَوْمِ یُبْعَثُوْنَ ۟
ಜನರನ್ನು ಪುನರುತ್ಥಾನಗೊಳಿಸುವವರೆಗೆ ನೀನು ನನಗೆ ಕಾಲವಕಾಶವನ್ನು ನೀಡು ಎಂದು ಕೇಳಿದನು.
Esegesi in lingua araba:
قَالَ اِنَّكَ مِنَ الْمُنْظَرِیْنَ ۟
ಅಲ್ಲಾಹನು ಹೇಳಿದನು: ನಿನಗೆ ಕಾಲಾವಕಾಶ ನೀಡಲಾಗಿದೆ.
Esegesi in lingua araba:
قَالَ فَبِمَاۤ اَغْوَیْتَنِیْ لَاَقْعُدَنَّ لَهُمْ صِرَاطَكَ الْمُسْتَقِیْمَ ۟ۙ
ಆಗ ಅವನು ಹೇಳಿದನು: ನೀನು ನನ್ನನ್ನು ಮಾರ್ಗ ಭ್ರಷ್ಟಗೊಳಿಸಿರುವುದರಿಂದ ನಾನು ಆಣೆ ಹಾಕುತ್ತೇನೆ, ನಿನ್ನ ಋಜುವಾದ ಮಾರ್ಗದಲ್ಲಿ ಮಾನವರಿಗಾಗಿ ಹೊಂಚು ಹಾಕಿ ಕುಳಿತುಕೊಳ್ಳುವೆನು.
Esegesi in lingua araba:
ثُمَّ لَاٰتِیَنَّهُمْ مِّنْ بَیْنِ اَیْدِیْهِمْ وَمِنْ خَلْفِهِمْ وَعَنْ اَیْمَانِهِمْ وَعَنْ شَمَآىِٕلِهِمْ ؕ— وَلَا تَجِدُ اَكْثَرَهُمْ شٰكِرِیْنَ ۟
ಅನಂತರ ಅವರ ಮುಂದಿನಿAದಲೂ, ಅವರ ಹಿಂದಿನಿAದಲೂ, ಅವರ ಬಲಗಡೆಯಿಂದಲೂ, ಅವರ ಎಡಗಡೆಯಿಂದಲೂ ನಾನು ಅವರ ಮೇಲೆ ಮುಗಿ ಬೀಳುವೆನು. ಆಗ ನೀನು ಅವರ ಪೈಕಿ ಹೆಚ್ಚಿನವರನ್ನು ಕೃತಜ್ಞರನ್ನಾಗಿ ಕಾಣಲಾರೆ.
Esegesi in lingua araba:
قَالَ اخْرُجْ مِنْهَا مَذْءُوْمًا مَّدْحُوْرًا ؕ— لَمَنْ تَبِعَكَ مِنْهُمْ لَاَمْلَـَٔنَّ جَهَنَّمَ مِنْكُمْ اَجْمَعِیْنَ ۟
ಅಲ್ಲಾಹನು ಹೇಳಿದನು: (ಓ ಇಬ್ಲೀಸ್) ನೀನು ಇಲ್ಲಿಂದ ಅಪಮಾನಿತನಾಗಿ, ಬಹಿಷ್ಕೃತನಾಗಿ ತೊಲಗು. ಅವರ ಪೈಕಿ ಯಾರು ನಿನ್ನನ್ನು ಅನುಸರಿಸುತ್ತಾನೋ ಖಂಡಿತವಾಗಿಯು ನಾನು ನಿಮ್ಮೆಲ್ಲರನ್ನು ಸೇರಿಸಿ ನರಕವನ್ನು ತುಂಬುವೆನು.
Esegesi in lingua araba:
وَیٰۤاٰدَمُ اسْكُنْ اَنْتَ وَزَوْجُكَ الْجَنَّةَ فَكُلَا مِنْ حَیْثُ شِئْتُمَا وَلَا تَقْرَبَا هٰذِهِ الشَّجَرَةَ فَتَكُوْنَا مِنَ الظّٰلِمِیْنَ ۟
ಅಲ್ಲಾಹನು ಹೇಳಿದನು: ಓ ಆದಮ್, ನೀವು ಮತ್ತು ನಿಮ್ಮ ಪತ್ನಿಯು ಸ್ವರ್ಗದಲ್ಲಿ ನೆಮ್ಮದಿಯಿಂದ ವಾಸಿಸಿರಿ ಮತ್ತು ನೀವು ಇಚ್ಛಿಸುವ ಕಡೆಗಳಿಂದ ತಿನ್ನಿರಿ ಮತ್ತು ಆ ಮರದ ಸಮೀಪಕ್ಕೂ ಸುಳಿಯಬೇಡಿರಿ. ಅನ್ಯಥಾ ನೀವು ಅಕ್ರಮಿಗಳಲ್ಲಿ ಸೇರಿ ಬಿಡುವಿರಿ.
Esegesi in lingua araba:
فَوَسْوَسَ لَهُمَا الشَّیْطٰنُ لِیُبْدِیَ لَهُمَا مَا وٗرِیَ عَنْهُمَا مِنْ سَوْاٰتِهِمَا وَقَالَ مَا نَهٰىكُمَا رَبُّكُمَا عَنْ هٰذِهِ الشَّجَرَةِ اِلَّاۤ اَنْ تَكُوْنَا مَلَكَیْنِ اَوْ تَكُوْنَا مِنَ الْخٰلِدِیْنَ ۟
ನಂತರ ಅವರ ಪರಸ್ಪರ ಮರೆಮಾಚಿರುವ ಅವರ ಗುಹ್ಯಾಂಗಗಳನ್ನು ಅವರಿಬ್ಬರ ಮುಂದೆ ಪ್ರಕಟಗೊಳಿಸಲು ಶೈತಾನನು ಅವರಿಬ್ಬರ ಹೃದಯದಲ್ಲಿ ದುಷ್ಪೆçÃರಣೆಯನ್ನು ಹಾಕಿದನು. ಮತ್ತು ಹೇಳಿದನು: ನಿಮ್ಮ ಪ್ರಭು ನಿಮ್ಮಿಬ್ಬರನ್ನು ಈ ಮರದಿಂದ ತಡೆದಿರುವುದು ನೀವು ಮಲಕ್‌ಗಳಾಗಿ ಬಿಡಬಾರದು ಅಥವಾ ಶಾಶ್ವತವಾಗಿ ವಾಸಿಸಬಾರದೆಂದಾಗಿದೆ.
Esegesi in lingua araba:
وَقَاسَمَهُمَاۤ اِنِّیْ لَكُمَا لَمِنَ النّٰصِحِیْنَ ۟ۙ
ಖಂಡಿತವಾಗಿಯೂ ನಾನು ನಿಮ್ಮಿಬ್ಬರ ಹಿತಕಾಂಕ್ಷಿಯಾಗಿರುವೆನೆAದು ಅವನು ಅವರ ಮುಂದೆ ಆಣೆಯಿಟ್ಟು ಹೇಳಿದನು.
Esegesi in lingua araba:
فَدَلّٰىهُمَا بِغُرُوْرٍ ۚ— فَلَمَّا ذَاقَا الشَّجَرَةَ بَدَتْ لَهُمَا سَوْاٰتُهُمَا وَطَفِقَا یَخْصِفٰنِ عَلَیْهِمَا مِنْ وَّرَقِ الْجَنَّةِ ؕ— وَنَادٰىهُمَا رَبُّهُمَاۤ اَلَمْ اَنْهَكُمَا عَنْ تِلْكُمَا الشَّجَرَةِ وَاَقُلْ لَّكُمَاۤ اِنَّ الشَّیْطٰنَ لَكُمَا عَدُوٌّ مُّبِیْنٌ ۟
ಹೀಗೆ ಅವನು ಅವರಿಬ್ಬರನ್ನೂ ಮೋಸದಿಂದ ತನ್ನ ಧಾಟಿಗೆ ತಂದನು. ಅವರಿಬ್ಬರೂ ಕೊನೆಗೆ ಆ ಮರದಿಂದ ರುಚಿಯನ್ನು ಸವಿದಾಗ ಅವರ ಗುಹ್ಯಾಂಗಗಳು ಅವರ ಮುಂದೆ ಪ್ರಕಟವಾದವು ಮತ್ತು ಅವರಿಬ್ಬರೂ ಸ್ವರ್ಗದ ಎಲೆಗಳಿಂದ ತಮ್ಮನ್ನು ಮರೆಮಾಚತೊಡಗಿದರು. ಮತ್ತು ಅವರ ಪ್ರಭು ಅವರನ್ನು ಕರೆದನು: ನಾನು ನಿಮ್ಮನ್ನು ಆ ಮರದಿಂದ ತಡೆದಿರಲಿಲ್ಲವೇ? ಮತ್ತು ಶೈತಾನನು ನಿಮ್ಮ ಪ್ರತ್ಯಕ್ಷ ಶತ್ರುವಾಗಿದ್ದಾನೆಂದು ನಾನು ನಿಮ್ಮೊಂದಿಗೆ ಹೇಳಿರಲಿಲ್ಲವೇ?
Esegesi in lingua araba:
 
Traduzione dei significati Sura: Al-A‘râf
Indice delle Sure Numero di pagina
 
Traduzione dei Significati del Sacro Corano - Traduzione Canadese - Bashir Maisuri - Indice Traduzioni

Tradotta dallo Sheikh Bashir Maisuri. Sviluppata sotto la supervisione del Pioneer Translation Center (Ruwwad at-Tarjama).

Chiudi