Traduzione dei Significati del Sacro Corano - الترجمة الكنادية * - Indice Traduzioni

XML CSV Excel API
Please review the Terms and Policies

Traduzione dei significati Versetto: (62) Sura: Al-Baqarah
اِنَّ الَّذِیْنَ اٰمَنُوْا وَالَّذِیْنَ هَادُوْا وَالنَّصٰرٰی وَالصّٰبِـِٕیْنَ مَنْ اٰمَنَ بِاللّٰهِ وَالْیَوْمِ الْاٰخِرِ وَعَمِلَ صَالِحًا فَلَهُمْ اَجْرُهُمْ عِنْدَ رَبِّهِمْ ۪ۚ— وَلَا خَوْفٌ عَلَیْهِمْ وَلَا هُمْ یَحْزَنُوْنَ ۟
ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು, ಯಹೂದಿಗಳು, ಕ್ರೈಸ್ತರು ಅಥವಾ ಸಾಬಿಗಳು—ಇವರ ಪೈಕಿ ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಟ್ಟವರು ಹಾಗೂ ಸತ್ಕರ್ಮವೆಸಗಿದವರು ಯಾರೋ, ಅವರಿಗೆ ಅವರ ಪ್ರತಿಫಲವು ಅವರ ಪರಿಪಾಲಕನ (ಅಲ್ಲಾಹನ) ಬಳಿಯಿದೆ. ಅವರಿಗೆ ಯಾವುದೇ ಭಯವಿಲ್ಲ; ಅವರು ದುಃಖಿಸುವುದೂ ಇಲ್ಲ.[1]
[1] ಕೆಲವರು ಈ ವಚನವನ್ನು ತಪ್ಪಾಗಿ ಅರ್ಥಮಾಡಿಕೊಂಡು 'ಧರ್ಮಗಳ ಏಕತೆ' ಎಂಬ ಹೊಸ ಸಿದ್ಧಾಂತವನ್ನು ಸ್ಥಾಪಿಸಿದ್ದಾರೆ. ಅವರ ಪ್ರಕಾರ ಇಸ್ಲಾಂ ಧರ್ಮದಲ್ಲಿ ವಿಶ್ವಾಸವಿಡುವುದು ಕಡ್ಡಾಯವಲ್ಲ. ಯಾವುದೇ ಧರ್ಮದಲ್ಲಿದ್ದು ಏಕದೇವನನ್ನು ಆರಾಧಿಸಿ ಒಳಿತು ಮಾಡಿದರೆ ಅವರಿಗೆ ಮೋಕ್ಷ ಸಿಗುತ್ತದೆ. ಇದು ಅತ್ಯಂತ ಹೊಲಸು ಸಿದ್ಧಾಂತವಾಗಿದ್ದು ಕುರ್‌ಆನಿನ ಬೋಧನೆಗಳಿಗೆ ವಿರುದ್ಧವಾಗಿದೆ. ಈ ವಚನದ ನಿಜವಾದ ಅರ್ಥವೇನೆಂದರೆ, ಮೇಲಿನ ವಚನಗಳಲ್ಲಿ ಯಹೂದಿಗಳ ಅವಿಧೇಯತೆ, ಅಹಂಕಾರ ಮತ್ತು ಅತಿರೇಕಗಳ ಬಗ್ಗೆ ಪ್ರಸ್ತಾಪಿಸಿ, ಅವರಿಗೆ ನೀಡಲಾದ ಶಿಕ್ಷೆಯ ಬಗ್ಗೆಯೂ ಪ್ರಸ್ತಾಪಿಸಲಾದಾಗ, ಸ್ವಾಭಾವಿಕವಾಗಿ ಒಂದು ಪ್ರಶ್ನೆ ಉದ್ಭವವಾಗುತ್ತದೆ. ಹಾಗಾದರೆ, ಯಹೂದಿಗಳಲ್ಲಿ ಒಳ್ಳೆಯವರು ಯಾರೂ ಇರಲಿಲ್ಲವೇ? ಇದ್ದರೆ ಅವರಿಗೆ ಅಲ್ಲಾಹು ಏನು ಪ್ರತಿಫಲ ನೀಡಿದ್ದಾನೆ? ಇದಕ್ಕೆ ಉತ್ತರವಾಗಿ, ಈ ವಚನ ಅವತೀರ್ಣವಾಗಿದೆ. ಅಂದರೆ, ಯಹೂದಿಗಳಲ್ಲಿ ಮಾತ್ರವಲ್ಲ, ಕ್ರೈಸ್ತರು, ಸಾಬಿಗಳು ಮುಂತಾದವರಲ್ಲಿಯೂ ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಆಗಮನಕ್ಕೆ ಮುಂಚೆ ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ವಿಶ್ವಾಸವಿಟ್ಟು, ಸತ್ಕಾರ್ಯಗಳನ್ನು ಮಾಡಿದ್ದರೆ ಅವರೆಲ್ಲರೂ ಮೋಕ್ಷ ಪಡೆಯುತ್ತಾರೆ. ಅದೇ ರೀತಿ, ಈಗ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಸಂದೇಶದಲ್ಲಿ ವಿಶ್ವಾಸವಿಡುವವರು ಕೂಡ ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ಸರಿಯಾಗಿ ವಿಶ್ವಾಸವಿಟ್ಟು ಸತ್ಕಾರ್ಯಗಳನ್ನು ಮಾಡಿದರೆ ಅವರು ಕೂಡ ಮೋಕ್ಷ ಪಡೆಯುತ್ತಾರೆ. [ನೋಡಿ: 3:19, 3:85]
Esegesi in lingua araba:
 
Traduzione dei significati Versetto: (62) Sura: Al-Baqarah
Indice delle Sure Numero di pagina
 
Traduzione dei Significati del Sacro Corano - الترجمة الكنادية - Indice Traduzioni

ترجمة معاني القرآن الكريم إلى اللغة الكنادية ترجمها محمد حمزة بتور.

Chiudi