Check out the new design

ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី * - សន្ទស្សន៍នៃការបកប្រែ


ការបកប្រែអត្ថន័យ ជំពូក​: អាល់ហ្ពាក៏រ៉ោះ   អាយ៉ាត់:
وَالَّذِیْنَ یُتَوَفَّوْنَ مِنْكُمْ وَیَذَرُوْنَ اَزْوَاجًا یَّتَرَبَّصْنَ بِاَنْفُسِهِنَّ اَرْبَعَةَ اَشْهُرٍ وَّعَشْرًا ۚ— فَاِذَا بَلَغْنَ اَجَلَهُنَّ فَلَا جُنَاحَ عَلَیْكُمْ فِیْمَا فَعَلْنَ فِیْۤ اَنْفُسِهِنَّ بِالْمَعْرُوْفِ ؕ— وَاللّٰهُ بِمَا تَعْمَلُوْنَ خَبِیْرٌ ۟
ಮತ್ತು ನಿಮ್ಮ ಪೈಕಿ ಯಾರಾದರೂ ತಮ್ಮ ಪತ್ನಿಯರನ್ನು ಬಿಟ್ಟು ಮರಣ ಹೊಂದಿದರೆ ಅವರ ಪತ್ನಿಯರು ಸ್ವತಃ ತಮ್ಮನ್ನೇ ನಾಲ್ಕು ತಿಂಗಳು ಹತ್ತು ದಿನಗಳ ಕಾಲ (ಇದ್ದಃ) ಅವಧಿಯನ್ನು ಅನುಸರಿಸಲಿ. ಇನ್ನು ಅವರು ತಮ್ಮ ಅವಧಿಯನ್ನು ತಲುಪಿದರೆ ಸದಾಚಾರದೊಂದಿಗೆ ತಮ್ಮ ಮರು ವಿವಾಹದ ವಿಚಾರದಲ್ಲಿ ಯಾವುದಾದರು ನಿರ್ಧಾರ ಕೈಗೊಂಡರೆ ನಿಮ್ಮ (ಪೋಷಕರ) ಮೇಲೆ ಯಾವ ದೋಷವಿರುವುದಿಲ್ಲ ಮತ್ತು ಅಲ್ಲಾಹನು ನೀವು ಮಾಡುತ್ತಿರುವುದರ ಕುರಿತು ಅರಿವುಳ್ಳವನಾಗಿರುವನು.
តាហ្វសៀរជាភាសា​អារ៉ាប់ជាច្រេីន:
وَلَا جُنَاحَ عَلَیْكُمْ فِیْمَا عَرَّضْتُمْ بِهٖ مِنْ خِطْبَةِ النِّسَآءِ اَوْ اَكْنَنْتُمْ فِیْۤ اَنْفُسِكُمْ ؕ— عَلِمَ اللّٰهُ اَنَّكُمْ سَتَذْكُرُوْنَهُنَّ وَلٰكِنْ لَّا تُوَاعِدُوْهُنَّ سِرًّا اِلَّاۤ اَنْ تَقُوْلُوْا قَوْلًا مَّعْرُوْفًا ؕ۬— وَلَا تَعْزِمُوْا عُقْدَةَ النِّكَاحِ حَتّٰی یَبْلُغَ الْكِتٰبُ اَجَلَهٗ ؕ— وَاعْلَمُوْۤا اَنَّ اللّٰهَ یَعْلَمُ مَا فِیْۤ اَنْفُسِكُمْ فَاحْذَرُوْهُ ۚ— وَاعْلَمُوْۤا اَنَّ اللّٰهَ غَفُوْرٌ حَلِیْمٌ ۟۠
(ಇದ್ದಃ ಅವಧಿಯಲ್ಲಿ) ಇಂತಹ ಸ್ತಿçÃಯರನ್ನು ವಿವಾಹವಾಗುವುದರ ಬಗ್ಗೆ ನೀವು ಸೂಚಕವಾಗಿ ಹೇಳುವುದರಲ್ಲಿ ಅಥವ ನಿಮ್ಮಲ್ಲೇ ಮುಚ್ಚಿಡುವುದರಲ್ಲಿ ನಿಮ್ಮ ಮೇಲೆ ಯಾವ ದೋಷವೂ ಇಲ್ಲ. ಮುಂದೆ ನೀವು ಅವರನ್ನು ಸ್ಮರಿಸುವಿರೆಂದು ಅಲ್ಲಾಹನು ಅರಿತಿದ್ದಾನೆ. ಆದರೆ ಅವರೊಂದಿಗೆ ರಹಸ್ಯವಾಗಿ ವಾಗ್ದಾನವನ್ನು ಮಾಡಬೇಡಿರಿ. ಇನ್ನು ನೀವು ಸದಾಚಾರದ ಮಾತುಗಳನ್ನಾಡುವುದಾದರೆ ಬೇರೆ ವಿಚಾರ. ಇದ್ದ ಅವಧಿಯು ಕೊನೆಗೊಳ್ಳುವವರೆಗೆ ವಿವಾಹ ಒಪ್ಪಂದವನ್ನು ಮಾಡಬೇಡಿರಿ ಮತ್ತು ನಿಮ್ಮ ನಿಮ್ಮ ಮನಸ್ಸಿನಲ್ಲಿರುವುದನ್ನು ಅಲ್ಲಾಹನು ಅರಿಯುತ್ತಾನೆಂಬುದನ್ನು ನೀವು ತಿಳಿದುಕೊಳ್ಳಿರಿ ಹಾಗೂ ಅವನ ಬಗ್ಗೆ ಭಯವಿರಿಸಿಕೊಳ್ಳಿರಿ. ಮತ್ತು ಅಲ್ಲಾಹನು ಕ್ಷಮಾಶೀಲನೂ, ವಿವೇಕಪೂರ್ಣನೂ ಆಗಿರುವನೆಂಬುದನ್ನು ಅರಿತುಕೊಳ್ಳಿರಿ.
តាហ្វសៀរជាភាសា​អារ៉ាប់ជាច្រេីន:
لَا جُنَاحَ عَلَیْكُمْ اِنْ طَلَّقْتُمُ النِّسَآءَ مَا لَمْ تَمَسُّوْهُنَّ اَوْ تَفْرِضُوْا لَهُنَّ فَرِیْضَةً ۖۚ— وَّمَتِّعُوْهُنَّ ۚ— عَلَی الْمُوْسِعِ قَدَرُهٗ وَعَلَی الْمُقْتِرِ قَدَرُهٗ ۚ— مَتَاعًا بِالْمَعْرُوْفِ ۚ— حَقًّا عَلَی الْمُحْسِنِیْنَ ۟
ನೀವು ಪತ್ನಿಯರನ್ನು ಸ್ಪರ್ಶಿಸದೆ ಅಥವಾ ವಿವಾಹ ಧನವನ್ನು ನಿಶ್ಚಯಿಸದೆÀ ಇರುವ ಪತ್ನಿಯರಿಗೆ ವಿಚ್ಛೇದನೆ ಕೊಟ್ಟರೆ (ಮಹ್ರ್ ನೀಡದಿರುವುದಕ್ಕಾಗಿ) ನಿಮ್ಮ ಮೇಲೆ ಯಾವ ದೋಷವಿರುವುದಿಲ್ಲ. ಹಾಗೆಯೇ ಅವರಿಗೆ ಏನಾದರೂ ಜೀವನಾಂಶವನ್ನು ಕೊಟ್ಟು ಬಿಡಿರಿ. ಸಾಮರ್ಥ್ಯವುಳ್ಳವನು ತನ್ನ ಸಾಮರ್ಥ್ಯಕ್ಕನುಸಾರವಾಗಿ ಮತ್ತು ದುಸ್ಥಿಯಲ್ಲಿರುವವನು ತನಗೆ ಅನುಕೂಲವಿರುವಷ್ಟು ಸದಾಚಾರದೊಂದಿಗೆ ನೀಡಲಿ. ಇದು ಸತ್ಕರ್ಮಿಗಳ ಮೇಲಿರುವ ಬಾಧ್ಯತೆಯಾಗಿರುತ್ತದೆ.
តាហ្វសៀរជាភាសា​អារ៉ាប់ជាច្រេីន:
وَاِنْ طَلَّقْتُمُوْهُنَّ مِنْ قَبْلِ اَنْ تَمَسُّوْهُنَّ وَقَدْ فَرَضْتُمْ لَهُنَّ فَرِیْضَةً فَنِصْفُ مَا فَرَضْتُمْ اِلَّاۤ اَنْ یَّعْفُوْنَ اَوْ یَعْفُوَا الَّذِیْ بِیَدِهٖ عُقْدَةُ النِّكَاحِ ؕ— وَاَنْ تَعْفُوْۤا اَقْرَبُ لِلتَّقْوٰی ؕ— وَلَا تَنْسَوُا الْفَضْلَ بَیْنَكُمْ ؕ— اِنَّ اللّٰهَ بِمَا تَعْمَلُوْنَ بَصِیْرٌ ۟
ಮತ್ತು ನೀವು ಅವರನ್ನು ಸ್ಪರ್ಶಿಸುವುದಕ್ಕೆ ಮುನ್ನ ವಿಚ್ಛೇದಿಸಿದ್ಧರೆ ಮತ್ತು ವಿವಾಹ ಧನವನ್ನು ನಿಶ್ಚಯಿಸಲಾಗಿದ್ದರೆ ನಿಶ್ಚಿಯಿಸಿರುವುದರ ಅರ್ಥವನ್ನು ಕೊಟ್ಟುಬಿಡಿರಿ. ಆದರೆ ಸ್ವತಃ (ಸ್ತಿçÃಯರು) ಅವರೇ ಮನ್ನಿಸುವುದಾದರೆ ಬೇರೆ ವಿಚಾರ ಅಥವಾ ಯಾರ ಕೈಯಲ್ಲಿ ವಿವಾಹ ಒಪ್ಪಂದವಿದೇಯೋ ಅವನು (ಪೂರ್ಣ ಮಹ್ರ್ ಪಾವತಿಸಿ) ವಿಶಾಲ ಮನಸ್ಸು ತೋರಬೇಕು ನೀವು ವಿಶಾಲ ಮನಸ್ಸು ತೋರಿ (ಸಂಪೂರ್ಣ ಮಹ್ರ್ ನೀಡುವುದು) ಭಯಭಕ್ತಿಗೆ ಹೆಚ್ಚು ಸಮೀಪವುಳ್ಳದ್ದಾಗಿದೆ ಮತ್ತು ನೀವು ಪರಸ್ಪರ ಔದಾರ್ಯವನ್ನು ಮರೆಯಬಾರದು. ನಿಶ್ಚಯವಾಗಿಯು ಅಲ್ಲಾಹನು ನೀವು ಮಾಡುತ್ತಿರುವ ಕರ್ಮಗಳನ್ನು ನೋಡುತ್ತಿದ್ದಾನೆ.
តាហ្វសៀរជាភាសា​អារ៉ាប់ជាច្រេីន:
 
ការបកប្រែអត្ថន័យ ជំពូក​: អាល់ហ្ពាក៏រ៉ោះ
សន្ទស្សន៍នៃជំពូក លេខ​ទំព័រ
 
ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី - សន្ទស្សន៍នៃការបកប្រែ

ការបកប្រែដោយឥស្លាមប៉ាសៀរ មីសូរី។ ត្រូវបានអភិវឌ្ឍដោយការត្រួតពិនិត្យរបស់មជ្ឈមណ្ឌលបកប្រែរ៉ូវ៉ាទ។

បិទ