លេខ​ទំព័រ:close

external-link copy
49 : 34

قُلْ جَآءَ الْحَقُّ وَمَا یُبْدِئُ الْبَاطِلُ وَمَا یُعِیْدُ ۟

ಹೇಳಿರಿ: ಸತ್ಯವು ಬಂದು ಬಿಟ್ಟಿತು. ಮಿಥ್ಯವು ಏನನ್ನೂ ಆರಂಭಿಸಲಾರದು ಮತ್ತು ಪುನರಾವರ್ತಿಸುವ ಶಕ್ತಿಯೂ ಅದಕ್ಕಿಲ್ಲ. info
التفاسير: |

external-link copy
50 : 34

قُلْ اِنْ ضَلَلْتُ فَاِنَّمَاۤ اَضِلُّ عَلٰی نَفْسِیْ ۚ— وَاِنِ اهْتَدَیْتُ فَبِمَا یُوْحِیْۤ اِلَیَّ رَبِّیْ ؕ— اِنَّهٗ سَمِیْعٌ قَرِیْبٌ ۟

ಹೇಳಿರಿ: ನಾನು ಪಥಭ್ರಷ್ಟನಾಗಿದ್ದರೆ ನನ್ನ ಪಥಭ್ರಷ್ಟತೆಯ ಪಾತಕ ನನ್ನ ಮೇಲೆಯೇ ಇರುವುದು ಮತ್ತು ನಾನು ಸನ್ಮಾರ್ಗದಲ್ಲಿದ್ದರೆ ಅದು ನನ್ನ ಪ್ರಭು ನನ್ನೆಡೆಗೆ ದಿವ್ಯ ಸಂದೇಶ ಮಾಡಿರುವುದರ ಕಾರಣವಾಗಿದೆ. ನಿಶ್ಚಯವಾಗಿಯು ಅವನು ಸರ್ವವನ್ನಾಲಿಸುವವನು, ಅತ್ಯಂತ ಸಮೀಪನೂ ಆಗಿದ್ದಾನೆ. info
التفاسير: |

external-link copy
51 : 34

وَلَوْ تَرٰۤی اِذْ فَزِعُوْا فَلَا فَوْتَ وَاُخِذُوْا مِنْ مَّكَانٍ قَرِیْبٍ ۟ۙ

ಮತ್ತು ಅವರು ಭಯಭೀತರಾಗಿ ಅಲೆದಾಡುವುದನ್ನು ನೀವು ಕಾಣುತ್ತಿದ್ದರೆ! ಆದರೆ ಅವರಿಗೆ ತಪ್ಪಿಸಿಕೊಳ್ಳುವ ಯಾವ ದಾರಿಯೂ ಇರುವುದಿಲ್ಲ ಮತ್ತು ಸಮೀಪದ ಸ್ಥಳದಿಂದಲೇ ಅವರು ಹಿಡಿಯಲ್ಪಡುವರು. info
التفاسير: |

external-link copy
52 : 34

وَّقَالُوْۤا اٰمَنَّا بِهٖ ۚ— وَاَنّٰی لَهُمُ التَّنَاوُشُ مِنْ مَّكَانٍ بَعِیْدٍ ۟ۚ

ಅವರು ಹೇಳುವರು: ನಾವು ಈ ಕುರ್‌ಆನಿನಲ್ಲಿ ವಿಶ್ವಾಸವಿಟ್ಟೆವು. ಆದರೆ ಇಷ್ಟು ದೂರದಿಂದ (ಉದ್ದೇಶಿತ ವಸ್ತು) ಕೈಗೆಟುಕುವುದಾದರೂ ಹೇಗೆ? info
التفاسير: |

external-link copy
53 : 34

وَقَدْ كَفَرُوْا بِهٖ مِنْ قَبْلُ ۚ— وَیَقْذِفُوْنَ بِالْغَیْبِ مِنْ مَّكَانٍ بَعِیْدٍ ۟

ಇದಕ್ಕೆ ಮೊದಲು ಅವರು ಅದನ್ನು ನಿರಾಕರಿಸಿದ್ದರು ಮತ್ತು ದೂರ ಸ್ಥಳದಿಂದಲೇ ಹಿಂದೆ ಮುಂದೆ ನೋಡದೇ ಅವರು ಊಹಾಸ್ತçವನ್ನು ಎಸೆಯುತ್ತಿದ್ದರು. info
التفاسير: |

external-link copy
54 : 34

وَحِیْلَ بَیْنَهُمْ وَبَیْنَ مَا یَشْتَهُوْنَ كَمَا فُعِلَ بِاَشْیَاعِهِمْ مِّنْ قَبْلُ ؕ— اِنَّهُمْ كَانُوْا فِیْ شَكٍّ مُّرِیْبٍ ۟۠

ಅವರು ಮತ್ತು ಅವರು ಇಚ್ಛಿಸುತ್ತಿರುವ ವಿಶ್ವಾಸದ ನಡುವೆ ತಡೆ ಹಾಕಲಾಗುವುದು. ಇದಕ್ಕೆ ಮೊದಲು ಅವರಂತಿರುವ ಜನರೊಂದಿಗೆ ಮಾಡಲಾದಂತೆ. ನಿಶ್ಚಯವಾಗಿಯು ಅವರು ಗೊಂದಲ ಪೂರ್ಣ ಸಂದೇಹದಲ್ಲಿದ್ದರು. info
التفاسير: |

ಸಬಅ್