Check out the new design

ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី * - សន្ទស្សន៍នៃការបកប្រែ


ការបកប្រែអត្ថន័យ ជំពូក​: អាន់នីសាក   អាយ៉ាត់:
اِنَّاۤ اَوْحَیْنَاۤ اِلَیْكَ كَمَاۤ اَوْحَیْنَاۤ اِلٰی نُوْحٍ وَّالنَّبِیّٖنَ مِنْ بَعْدِهٖ ۚ— وَاَوْحَیْنَاۤ اِلٰۤی اِبْرٰهِیْمَ وَاِسْمٰعِیْلَ وَاِسْحٰقَ وَیَعْقُوْبَ وَالْاَسْبَاطِ وَعِیْسٰی وَاَیُّوْبَ وَیُوْنُسَ وَهٰرُوْنَ وَسُلَیْمٰنَ ۚ— وَاٰتَیْنَا دَاوٗدَ زَبُوْرًا ۟ۚ
ಖಂಡಿತವಾಗಿಯೂ ನೂಹ್ ಮತ್ತು ಅವರ ನಂತರದ ಪೈಗಂಬರರಿಗೆ ದಿವ್ಯ ಸಂದೇಶವನ್ನು ನೀಡಿದಂತೆ, ನಾವು ನಿಮ್ಮೆಡೆಗೂ ದಿವ್ಯಸಂದೇಶವನ್ನು ನೀಡಿದ್ದೇವೆ; ಇಬ್ರಾಹೀಮ್, ಇಸ್ಮಾಹೀಲ್, ಇಸ್‌ಹಾಕ್, ಯಾಕೂಬ್ ಮತ್ತು ಯಾಕೂಬರ ಸಂತತಿಗಳಿಗೆ ಮತ್ತು ಈಸಾ, ಅಯ್ಯೂಬ್, ಯೂನುಸ್, ಹಾರೂನ್, ಸುಲೈಮಾನ್ ಮುಂತಾದವರೆಡೆಗೆ ನಾವು ದಿವ್ಯ ಸಂದೇಶವನ್ನು ನೀಡಿದ್ದೆವು ಮತ್ತು ದಾವೂದ್‌ರಿಗೆ ನಾವು ಝಬೂರ್ ನೀಡಿದ್ದೆವು.
តាហ្វសៀរជាភាសា​អារ៉ាប់ជាច្រេីន:
وَرُسُلًا قَدْ قَصَصْنٰهُمْ عَلَیْكَ مِنْ قَبْلُ وَرُسُلًا لَّمْ نَقْصُصْهُمْ عَلَیْكَ ؕ— وَكَلَّمَ اللّٰهُ مُوْسٰی تَكْلِیْمًا ۟ۚ
ಮತ್ತು ನಾವು ನಿಮಗಿಂತ ಮುಂಚಿನ ಅನೇಕ ಸಂದೇಶವಾಹಕರ ವೃತ್ತಾಂತಗಳನ್ನು ನಿಮಗೆ ವಿವರಿಸಿಕೊಟ್ಟಿದ್ದೇವೆ ಇನ್ನೂ ಅನೇಕ ಸಂದೇಶವಾಹಕರ (ವೃತ್ತಾಂತಗಳನ್ನು ವಿವರಿಸಿ ಕೊಟ್ಟಿಲ್ಲ) ಮೂಸಾರೊಂದಿಗೆ ಅಲ್ಲಾಹನು ನೇರವಾಗಿ ಮಾತನಾಡಿರುವನು.
តាហ្វសៀរជាភាសា​អារ៉ាប់ជាច្រេីន:
رُسُلًا مُّبَشِّرِیْنَ وَمُنْذِرِیْنَ لِئَلَّا یَكُوْنَ لِلنَّاسِ عَلَی اللّٰهِ حُجَّةٌ بَعْدَ الرُّسُلِ ؕ— وَكَانَ اللّٰهُ عَزِیْزًا حَكِیْمًا ۟
ಅವರು ಶುಭವಾರ್ತೆ ನೀಡುವ ಮತ್ತು ಮುನ್ನೆಚ್ಚರಿಕೆ ನೀಡುವ ಸಂದೇಶವಾಹಕರಾಗಿದ್ದರು. ಇದೇಕೆಂದರೆ ಸಂದೇಶವಾಹಕರ (ಆಗಮನದ) ನಂತರ ಜನರಿಗೆ ಅಲ್ಲಾಹನ ವಿರುದ್ಧ ಯಾವ ಪುರಾವೆಯು ಇಲ್ಲದಿರಲೆಂದಾಗಿದೆ. ಅಲ್ಲಾಹನು ಪ್ರತಾಪಶಾಲಿಯೂ, ಯುಕ್ತಿವಂತನೂ ಆಗಿದ್ದಾನೆ.
តាហ្វសៀរជាភាសា​អារ៉ាប់ជាច្រេីន:
لٰكِنِ اللّٰهُ یَشْهَدُ بِمَاۤ اَنْزَلَ اِلَیْكَ اَنْزَلَهٗ بِعِلْمِهٖ ۚ— وَالْمَلٰٓىِٕكَةُ یَشْهَدُوْنَ ؕ— وَكَفٰی بِاللّٰهِ شَهِیْدًا ۟ؕ
ಆದರೆ ಅಲ್ಲಾಹನು ನಿಮ್ಮೆಡೆಗೆ ಅವತೀರ್ಣಗೊಳಿಸಿರುವುದನ್ನು ತನ್ನ ಜ್ಞಾನದಿಂದಲೇ ಅವತೀರ್ಣಗೊಳಿಸಿದ್ದಾನೆಂದು ಅವನೇ ಸಾಕ್ಷö್ಯ ವಹಿಸುತ್ತಿದ್ದಾನೆ ಮತ್ತು ಮಲಕ್‌ಗಳು ಸಾಕ್ಷö್ಯ ವಹಿಸುತ್ತಾರೆ. ಸಾಕ್ಷಿಯಾಗಿ ಅಲ್ಲಾಹನೇ ಸಾಕು.
តាហ្វសៀរជាភាសា​អារ៉ាប់ជាច្រេីន:
اِنَّ الَّذِیْنَ كَفَرُوْا وَصَدُّوْا عَنْ سَبِیْلِ اللّٰهِ قَدْ ضَلُّوْا ضَلٰلًا بَعِیْدًا ۟
ಯಾರು ಸತ್ಯನಿಷೇಧಿಸಿದರೋ ಮತ್ತು ಅಲ್ಲಾಹನ ಮಾರ್ಗದಿಂದ ಜನರನ್ನು ತಡೆದರೋ ಅವರು ಖಂಡಿತವಾಗಿಯು ಪಥಭ್ರಷ್ಟತೆಯಲ್ಲಿ ಬಹುದೂರ ಸಾಗಿಬಿಟ್ಟರು.
តាហ្វសៀរជាភាសា​អារ៉ាប់ជាច្រេីន:
اِنَّ الَّذِیْنَ كَفَرُوْا وَظَلَمُوْا لَمْ یَكُنِ اللّٰهُ لِیَغْفِرَ لَهُمْ وَلَا لِیَهْدِیَهُمْ طَرِیْقًا ۟ۙ
ಯಾರು ಸತ್ಯನಿಷೇಧಿಸಿದರೋ ಮತ್ತು ಅಕ್ರಮವೆಸಗಿದರೋ ಅಲ್ಲಾಹನು ಅವರಿಗೆಂದಿಗೂ ಕ್ಷಮಿಸುವುದಿಲ್ಲ. ಮತ್ತು ಅವರಿಗೆ ಯಾವ ದಾರಿಯನ್ನು ತೋರಿಸುವುದಿಲ್ಲ.
តាហ្វសៀរជាភាសា​អារ៉ាប់ជាច្រេីន:
اِلَّا طَرِیْقَ جَهَنَّمَ خٰلِدِیْنَ فِیْهَاۤ اَبَدًا ؕ— وَكَانَ ذٰلِكَ عَلَی اللّٰهِ یَسِیْرًا ۟
ಆದರೆ ನರಕದ ದಾರಿಯ ಹೊರತು ಅದರಲ್ಲವರು ಶಾಶ್ವತವಾಗಿರುವರು ಮತ್ತು ಇದು ಅಲ್ಲಾಹನಿಗೆ ಅತೀ ಸುಲಭವಾಗಿದೆ.
តាហ្វសៀរជាភាសា​អារ៉ាប់ជាច្រេីន:
یٰۤاَیُّهَا النَّاسُ قَدْ جَآءَكُمُ الرَّسُوْلُ بِالْحَقِّ مِنْ رَّبِّكُمْ فَاٰمِنُوْا خَیْرًا لَّكُمْ ؕ— وَاِنْ تَكْفُرُوْا فَاِنَّ لِلّٰهِ مَا فِی السَّمٰوٰتِ وَالْاَرْضِ ؕ— وَكَانَ اللّٰهُ عَلِیْمًا حَكِیْمًا ۟
ಓ ಜನರೇ, ನಿಮ್ಮ ಪ್ರಭುವಿನ ವತಿಯ ಸತ್ಯದೊಂದಿಗೆ ನಿಮ್ಮ ಬಳಿಗೆ ಸಂದೇಶವಾಹಕರು ಬಂದಿರುತ್ತಾರೆ. ಆದ್ದರಿಂದ ನಿಮ್ಮ ಒಳಿತಿಗಾಗಿ ನೀವು ವಿಶ್ವಾಸವಿಡಿರಿ ಇನ್ನು ನೀವು ನಿರಾಕರಿಸುವುದಾದರೆ ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹನದ್ದಾಗಿದೆ. ಮತ್ತು ಅಲ್ಲಾಹನು ಎಲ್ಲವನ್ನೂ ಅರಿಯುವವನೂ, ಯುಕ್ತಿಪೂರ್ಣನೂ ಆಗಿದ್ದಾನೆ.
តាហ្វសៀរជាភាសា​អារ៉ាប់ជាច្រេីន:
 
ការបកប្រែអត្ថន័យ ជំពូក​: អាន់នីសាក
សន្ទស្សន៍នៃជំពូក លេខ​ទំព័រ
 
ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី - សន្ទស្សន៍នៃការបកប្រែ

ការបកប្រែដោយឥស្លាមប៉ាសៀរ មីសូរី។ ត្រូវបានអភិវឌ្ឍដោយការត្រួតពិនិត្យរបស់មជ្ឈមណ្ឌលបកប្រែរ៉ូវ៉ាទ។

បិទ