Check out the new design

ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី * - សន្ទស្សន៍នៃការបកប្រែ


ការបកប្រែអត្ថន័យ ជំពូក​: អាល់អាក់រ៉ហ្វ   អាយ៉ាត់:
قَالَا رَبَّنَا ظَلَمْنَاۤ اَنْفُسَنَا ٚ— وَاِنْ لَّمْ تَغْفِرْ لَنَا وَتَرْحَمْنَا لَنَكُوْنَنَّ مِنَ الْخٰسِرِیْنَ ۟
ಅವರಿಬ್ಬರೂ ಪ್ರಾರ್ಥಿಸಿದರು: ಓ ನಮ್ಮ ಪ್ರಭೂ, ನಾವು ನಮಗೇ ಆತ್ಮ ದ್ರೋಹ ಮಾಡಿರುವೆವು. ನೀನು ನಮಗೆ ಕ್ಷಮಿಸದಿದ್ದರೆ ಮತ್ತು ನಮ್ಮ ಮೇಲೆ ಕರುಣೆ ತೋರದಿದ್ದರೆ ಖಂಡಿತವಾಗಿಯು ನಾವು ನಷ್ಟ ಹೊಂದುವವರಲ್ಲಾಗುವೆವು.
តាហ្វសៀរជាភាសា​អារ៉ាប់ជាច្រេីន:
قَالَ اهْبِطُوْا بَعْضُكُمْ لِبَعْضٍ عَدُوٌّ ۚ— وَلَكُمْ فِی الْاَرْضِ مُسْتَقَرٌّ وَّمَتَاعٌ اِلٰی حِیْنٍ ۟
ಅವನು ಹೇಳಿದನು: ನೀವು (ಸ್ವರ್ಗದಿಂದ) ಇಳಿದು ಹೋಗಿರಿ. ನೀವು ಪರಸ್ಪರ ಶತ್ರುಗಳಾಗಿರುವಿರಿ. ನಿಮಗೆ ಭೂಮಿಯಲ್ಲಿ ವಾಸಸ್ಥಳವಿರುವುದು ಮತ್ತು ಒಂದು ನಿರ್ದಿಷ್ಟ ಕಾಲಾವಧಿಯವರೆಗೆ ಸುಖ ಭೋಗವಿರುವುದು.
តាហ្វសៀរជាភាសា​អារ៉ាប់ជាច្រេីន:
قَالَ فِیْهَا تَحْیَوْنَ وَفِیْهَا تَمُوْتُوْنَ وَمِنْهَا تُخْرَجُوْنَ ۟۠
ಅವನು ಹೇಳಿದನು: ಅಲ್ಲೇ (ಭೂಮಿಯಲ್ಲೇ) ನೀವು ಜೀವನ ಮಾಡುವಿರಿ ಮತ್ತು ಅಲ್ಲೇ ಮರÀಣ ಹೊಂದುವಿರಿ. ಮತ್ತು ಅಲ್ಲಿಂದಲೇ ನಿಮ್ಮನ್ನು ಪುನರುತ್ಥಾನದದಿನ ಹೊರತರಲಾಗುವುದು.
តាហ្វសៀរជាភាសា​អារ៉ាប់ជាច្រេីន:
یٰبَنِیْۤ اٰدَمَ قَدْ اَنْزَلْنَا عَلَیْكُمْ لِبَاسًا یُّوَارِیْ سَوْاٰتِكُمْ وَرِیْشًا ؕ— وَلِبَاسُ التَّقْوٰی ۙ— ذٰلِكَ خَیْرٌ ؕ— ذٰلِكَ مِنْ اٰیٰتِ اللّٰهِ لَعَلَّهُمْ یَذَّكَّرُوْنَ ۟
ಓ ಆದಮ್‌ನ ಸಂತತಿಗಳೇ, ನಿಮ್ಮ ಗುಹ್ಯಾಂಗಗಳನ್ನು ಮರೆಮಾಚಲಿಕ್ಕೂ ಮತ್ತು ಅಲಂಕಾರದ ಸಾಧನವನ್ನಾಗಿಯೂ ನಾವು ನಿಮ್ಮ ಮೇಲೆ ಉಡುಪನ್ನು ಇಳಿಸಿದ್ದೇವೆ. ಮತ್ತು ಭಯಭಕ್ತಿಯ ಉಡುಪು ಅತ್ಯುತ್ತಮವಾದುದು. ಇದು ಅಲ್ಲಾಹನ ದೃಷ್ಟಾಂತಗಳಲ್ಲಿ ಸೇರಿದ್ದಾಗಿದೆ. ಇದು ಜನರು ಸ್ಮರಿಸಿಕೊಳ್ಳಲ್ಲೆಂದಾಗಿದೆ.
តាហ្វសៀរជាភាសា​អារ៉ាប់ជាច្រេីន:
یٰبَنِیْۤ اٰدَمَ لَا یَفْتِنَنَّكُمُ الشَّیْطٰنُ كَمَاۤ اَخْرَجَ اَبَوَیْكُمْ مِّنَ الْجَنَّةِ یَنْزِعُ عَنْهُمَا لِبَاسَهُمَا لِیُرِیَهُمَا سَوْاٰتِهِمَا ؕ— اِنَّهٗ یَرٰىكُمْ هُوَ وَقَبِیْلُهٗ مِنْ حَیْثُ لَا تَرَوْنَهُمْ ؕ— اِنَّا جَعَلْنَا الشَّیٰطِیْنَ اَوْلِیَآءَ لِلَّذِیْنَ لَا یُؤْمِنُوْنَ ۟
ಓ ಆದಮ್ ಸಂತತಿಗಳೇ ಶೈತಾನನು ನಿಮ್ಮ ಮಾತಾಪಿತರನ್ನು ಒಬ್ಬರ ಮುಂದೆ ಇನ್ನೊಬ್ಬರ ಗುಹ್ಯಾಂಗಗಳನ್ನು ಗೋಚರಿಸುವಂತೆ ಮಾಡಿ, ಸ್ವರ್ಗದಿಂದ ಹೊರಗಟ್ಟಿದಂತೆ ನಿಮ್ಮನ್ನೂ ದಾರಿಗೆಡಿಸದಿರಲಿ. ಖಂಡಿತವಾಗಿಯು ಅವನು ಮತ್ತು ಅವನ ಸೈನ್ಯದವರು ನೀವು ಅವರನ್ನು ನೋಡದ ಸ್ಥಿತಿಯಲ್ಲಿ ನಿಮ್ಮನ್ನು ನೋಡುತ್ತಾರೆ. ನಾವು ಶೈತಾನರನ್ನು ಸತ್ಯವಿಶ್ವಾಸವಿಡದಂತಹ ಜನರಿಗೆ ಆಪ್ತಮಿತ್ರರನ್ನಾಗಿ ಮಾಡಿದ್ದೇವೆ.
តាហ្វសៀរជាភាសា​អារ៉ាប់ជាច្រេីន:
وَاِذَا فَعَلُوْا فَاحِشَةً قَالُوْا وَجَدْنَا عَلَیْهَاۤ اٰبَآءَنَا وَاللّٰهُ اَمَرَنَا بِهَا ؕ— قُلْ اِنَّ اللّٰهَ لَا یَاْمُرُ بِالْفَحْشَآءِ ؕ— اَتَقُوْلُوْنَ عَلَی اللّٰهِ مَا لَا تَعْلَمُوْنَ ۟
ಅವರು ಯಾವುದಾದರು ನೀಚ ಕೃತ್ಯವನ್ನು ಮಾಡಿದರೆ ಹೇಳುತ್ತಾರೆ: ನಾವು ನಮ್ಮ ಪೂರ್ವಿಕರನ್ನು ಹೀಗೆ ಮಾಡುತ್ತಿರುವುದಾಗಿ ಕಂಡಿದ್ದೇವೆ ಮತ್ತು ಅಲ್ಲಾಹನು ನಮಗೆ ಇದರ ಆಜ್ಞೆಯನ್ನು ನೀಡಿದ್ದಾನೆ. ನೀವು ಹೇಳಿರಿ: ಅಲ್ಲಾಹನು ನೀಚ ಕೃತ್ಯಗಳ ಆದೇಶ ನೀಡುವುದಿಲ್ಲ. ನಿಮಗೆ ಅರಿವಿಲ್ಲದ್ದನ್ನು ನೀವು ಅಲ್ಲಾಹನ ಹೆಸರಿನಲ್ಲಿ ಹೇಳುತ್ತಿರುವಿರಾ?
តាហ្វសៀរជាភាសា​អារ៉ាប់ជាច្រេីន:
قُلْ اَمَرَ رَبِّیْ بِالْقِسْطِ ۫— وَاَقِیْمُوْا وُجُوْهَكُمْ عِنْدَ كُلِّ مَسْجِدٍ وَّادْعُوْهُ مُخْلِصِیْنَ لَهُ الدِّیْنَ ؕ۬— كَمَا بَدَاَكُمْ تَعُوْدُوْنَ ۟ؕ
ಹೇಳಿರಿ: ನನ್ನ ಪ್ರಭುವು ನ್ಯಾಯವನ್ನು ಪಾಲಿಸಬೇಕೆಂದು ನನಗೆ ಆದೇಶಿಸಿದ್ದಾನೆ. ಪ್ರತಿಯೊಂದು ನಮಾಜಿನ ವೇಳೆಯಲ್ಲಿ ನೀವು ಏಕಾಗ್ರಚಿತ್ತರಾಗಿ ಮುಖವನ್ನು ಕಿಬ್ಲದೆಡೆಗೆ ತಿರುಗಿಸಿರಿ ಮತ್ತು ಆರಾಧನೆಯನ್ನು ಅವನಿಗೆ ಮಿಸಲಿಟ್ಟು ಅವನನ್ನು ಪ್ರಾರ್ಥಿಸಿರಿ. ನಿಮ್ಮನ್ನು ಅವನು ಮೊದಲ ಬಾರಿ ಸೃಷ್ಟಿಸಿದಂತೆ (ಮರಣದ ಬಳಿಕ) ನೀವು ಪುನಃ ಸೃಷ್ಟಿಸಲಾಗುವಿರಿ.
តាហ្វសៀរជាភាសា​អារ៉ាប់ជាច្រេីន:
فَرِیْقًا هَدٰی وَفَرِیْقًا حَقَّ عَلَیْهِمُ الضَّلٰلَةُ ؕ— اِنَّهُمُ اتَّخَذُوا الشَّیٰطِیْنَ اَوْلِیَآءَ مِنْ دُوْنِ اللّٰهِ وَیَحْسَبُوْنَ اَنَّهُمْ مُّهْتَدُوْنَ ۟
ಒಂದು ಪಂಗಡವನ್ನು ಅವನು ಸನ್ಮಾರ್ಗಕ್ಕೆ ಸೇರಿಸಿದನು. ಮತ್ತೊಂದು ಪಂಗಡಕ್ಕೆ ಪಥಭ್ರಷ್ಟತೆಯು ನಿಜಗೊಂಡಿದೆ. ಅವರು ಅಲ್ಲಾಹನನ್ನು ಬಿಟ್ಟು ಶೈತಾನರನ್ನು ಮಿತ್ರರನ್ನಾಗಿ ಮಾಡಿಕೊಂಡಿದ್ದಾರೆ ಮತ್ತು ಅವರು ತಾವು ಸನ್ಮಾರ್ಗದಲ್ಲಿದ್ದೇವೆಂದು ಭಾವಿಸುತ್ತಾರೆ.
តាហ្វសៀរជាភាសា​អារ៉ាប់ជាច្រេីន:
 
ការបកប្រែអត្ថន័យ ជំពូក​: អាល់អាក់រ៉ហ្វ
សន្ទស្សន៍នៃជំពូក លេខ​ទំព័រ
 
ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី - សន្ទស្សន៍នៃការបកប្រែ

ការបកប្រែដោយឥស្លាមប៉ាសៀរ មីសូរី។ ត្រូវបានអភិវឌ្ឍដោយការត្រួតពិនិត្យរបស់មជ្ឈមណ្ឌលបកប្រែរ៉ូវ៉ាទ។

បិទ