ಪವಿತ್ರ ಕುರ್‌ಆನ್ ಅರ್ಥಾನುವಾದ - الترجمة الكنادية - بشير ميسوري * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ಸೂರ ಮರ್ಯಮ್   ಶ್ಲೋಕ:

ಸೂರ ಮರ್ಯಮ್

كٓهٰیٰعٓصٓ ۟
ಕಾಫ್, ಹಾ, ಯಾ, ಐನ್, ಸ್ವಾದ್
ಅರಬ್ಬಿ ವ್ಯಾಖ್ಯಾನಗಳು:
ذِكْرُ رَحْمَتِ رَبِّكَ عَبْدَهٗ زَكَرِیَّا ۟ۖۚ
ಇದು ನಿಮ್ಮ ಪ್ರಭು ತನ್ನ ದಾಸರಾದ ಝಕರಿಯ್ಯಾರಿಗೆ ತೋರಿದ ಕಾರುಣ್ಯದ ಪ್ರಸ್ತಾಪವಾಗಿದೆ.
ಅರಬ್ಬಿ ವ್ಯಾಖ್ಯಾನಗಳು:
اِذْ نَادٰی رَبَّهٗ نِدَآءً خَفِیًّا ۟
ಅವರು ತನ್ನ ಪ್ರಭುವನ್ನು ರಹಸ್ಯವಾಗಿ ಕೂಗಿ ಪ್ರಾರ್ಥಿಸಿದ ಸಂದರ್ಭ.
ಅರಬ್ಬಿ ವ್ಯಾಖ್ಯಾನಗಳು:
قَالَ رَبِّ اِنِّیْ وَهَنَ الْعَظْمُ مِنِّیْ وَاشْتَعَلَ الرَّاْسُ شَیْبًا وَّلَمْ اَكُنْ بِدُعَآىِٕكَ رَبِّ شَقِیًّا ۟
ಓ ನನ್ನ ಪ್ರಭುವೇ, ನಿಜವಾಗಿಯೂ ನನ್ನ ಎಲುಬುಗಳು ದುರ್ಬಲಗೊಂಡಿವೆ ಮತ್ತು ತಲೆಯು ವೃದ್ಧಾಪ್ಯದಿಂದ ನೆರೆತು ಹೊಳೆಯುತ್ತಿದೆ. ಮತ್ತು ಓ ಪ್ರಭು, ನಾನೆಂದೂ ನಿನ್ನೊಡನೆ ಪ್ರಾರ್ಥಿಸಿ ನಿರಾಶನಾಗಿಲ್ಲ.
ಅರಬ್ಬಿ ವ್ಯಾಖ್ಯಾನಗಳು:
وَاِنِّیْ خِفْتُ الْمَوَالِیَ مِنْ وَّرَآءِیْ وَكَانَتِ امْرَاَتِیْ عَاقِرًا فَهَبْ لِیْ مِنْ لَّدُنْكَ وَلِیًّا ۟ۙ
ನನಗೆ ನನ್ನ ಬಳಿಕ ನನ್ನ ಸಂಬAಧಿಕರ ಕುರಿತು ಭಯವಿದೆ. ನನ್ನ ಪತ್ನಿಯು ಸಹ ಬಂಜೆಯಾಗಿದ್ದಾಳೆ. ಆದ್ದರಿಂದ ನೀನು ನಿನ್ನ ವತಿಯಿಂದ ನನಗೆ ಉತ್ತರಾಧಿಕಾರಿಯನ್ನು ಕರುಣಿಸು.
ಅರಬ್ಬಿ ವ್ಯಾಖ್ಯಾನಗಳು:
یَّرِثُنِیْ وَیَرِثُ مِنْ اٰلِ یَعْقُوْبَ ۗ— وَاجْعَلْهُ رَبِّ رَضِیًّا ۟
ಅವನು ನನ್ನ ವಾರೀಸುದಾರನೂ, ಯಾಕೂಬರವರ ಸಂತತಿಗಳ ಉತ್ತರಾಧಿಕಾರಿಯೂ ಆಗಿರಲಿ ಮತ್ತು ಓ ನನ್ನ ಪ್ರಭುವೇ, ಅವನನ್ನು ನೀನು ಪ್ರೀತಿ ಪಾತ್ರನನ್ನಾಗಿ ಮಾಡು.
ಅರಬ್ಬಿ ವ್ಯಾಖ್ಯಾನಗಳು:
یٰزَكَرِیَّاۤ اِنَّا نُبَشِّرُكَ بِغُلٰمِ ١سْمُهٗ یَحْیٰی ۙ— لَمْ نَجْعَلْ لَّهٗ مِنْ قَبْلُ سَمِیًّا ۟
ಓ ಝಕರಿಯ್ಯಾ! ನಾವು ನಿನಗೆ ಒಬ್ಬ ಪುತ್ರನ ಶುಭವಾರ್ತೆಯನ್ನು ನೀಡುತ್ತಿದ್ದೇವೆ. ಅವನ ಹೆಸರು “ಯಾಹ್ಯಾ” ಎಂದಾಗಿರುತ್ತದೆ. ಇದಕ್ಕೆ ಮೊದಲು ನಾವು ಈ ಹೆಸರಿರುವ ಯಾರನ್ನೂ ಸೃಷ್ಟಿಸಿಲ್ಲ.
ಅರಬ್ಬಿ ವ್ಯಾಖ್ಯಾನಗಳು:
قَالَ رَبِّ اَنّٰی یَكُوْنُ لِیْ غُلٰمٌ وَّكَانَتِ امْرَاَتِیْ عَاقِرًا وَّقَدْ بَلَغْتُ مِنَ الْكِبَرِ عِتِیًّا ۟
ಝಕರಿಯ್ಯಾ ಹೇಳಿದರು: ಓ ನನ್ನ ಪ್ರಭು! ನನ್ನ ಪತ್ನಿಯು ಬಂಜೆಯಾಗಿದ್ದು ಹಾಗು ನಾನು ವೃದ್ಧಾಪ್ಯದ ಅತ್ಯಂತ ದುರ್ಬಲ ಸ್ಥಿತಿಗೆ ತಲುಪಿರುವಾಗ ನನಗೆ ಮಗುವಾಗುವುದಾದರೂ ಹೇಗೆ?
ಅರಬ್ಬಿ ವ್ಯಾಖ್ಯಾನಗಳು:
قَالَ كَذٰلِكَ ۚ— قَالَ رَبُّكَ هُوَ عَلَیَّ هَیِّنٌ وَّقَدْ خَلَقْتُكَ مِنْ قَبْلُ وَلَمْ تَكُ شَیْـًٔا ۟
(ಅಲ್ಲಾಹ್À): ಹೇಳಿದನು ಹಾಗೆಯೇ ಆಗುವುದು. ನಿಮ್ಮ ಪ್ರಭು ಇದು ನನ್ನ ಪಾಲಿಗೆ ಬಹಳ ಸುಲಭವಾಗಿದೆ. ಮತ್ತು ಸ್ವತಃ ನೀನು ಏನೂ ಆಗಿರದಂತಹ ಸಂದರ್ಭದಲ್ಲಿ ನಾನು ನಿನ್ನನ್ನು ಸೃಷ್ಟಿಸಿದ್ದೇನೆಂದು ಹೇಳಿದನು.
ಅರಬ್ಬಿ ವ್ಯಾಖ್ಯಾನಗಳು:
قَالَ رَبِّ اجْعَلْ لِّیْۤ اٰیَةً ؕ— قَالَ اٰیَتُكَ اَلَّا تُكَلِّمَ النَّاسَ ثَلٰثَ لَیَالٍ سَوِیًّا ۟
ಝಕರಿಯ್ಯಾ ಪ್ರಾರ್ಥಿಸಿದರು. ಓ ನನ್ನ ಪ್ರಭುವೇ, ನನಗೆ ಯಾವುದಾದರೂ ಸಂಕೇತವನ್ನು ನಿಶ್ಚಯಿಸು. ಹೇಳಲಾಯಿತು: ನೀನು ಆರೋಗ್ಯವಂತನಾಗಿದ್ದರು ಸಹ ಜನರೊಂದಿಗೆ ಮೂರು ರಾತ್ರಿಗಳವರೆಗೆ ಮಾತನಾಡಲಾಗ ದಿರುವುದೇ ನಿನಗಿರುವ ಸಂಕೇತವಾಗಿದೆ.
ಅರಬ್ಬಿ ವ್ಯಾಖ್ಯಾನಗಳು:
فَخَرَجَ عَلٰی قَوْمِهٖ مِنَ الْمِحْرَابِ فَاَوْحٰۤی اِلَیْهِمْ اَنْ سَبِّحُوْا بُكْرَةً وَّعَشِیًّا ۟
ತರುವಾಯ ಝಕರಿಯ್ಯಾ ತಮ್ಮ ಪ್ರರ್ಥನಾ ಕೋಣೆಯಿಂದ ತಮ್ಮ ಜನಾಂಗದ ಬಳಿಗೆ ಬಂದರು. ನೀವು ಸಂಜೆ ಮುಂಜಾನೆಯ ಸಮಯದಲ್ಲಿ (ಅಲ್ಲಾಹನ) ಪಾವಿತ್ರö್ಯ ಸ್ತುತಿಸುತ್ತಿರಿ ಎಂದು ಸನ್ನೆ ಮೂಲಕ ಸೂಚಿಸಿದರು.
ಅರಬ್ಬಿ ವ್ಯಾಖ್ಯಾನಗಳು:
یٰیَحْیٰی خُذِ الْكِتٰبَ بِقُوَّةٍ ؕ— وَاٰتَیْنٰهُ الْحُكْمَ صَبِیًّا ۟ۙ
ಅಲ್ಲಾಹನು ಹೇಳಿದನು: ಓ ಯಹ್ಯಾ, “ನೀನು ಗ್ರಂಥವನ್ನು ಸದೃಢತೆಯಿಂದ ಹಿಡಿದುಕೋ” ಮತ್ತು ನಾವು ಅವನಿಗೆ ಬಾಲ್ಯದಲ್ಲೇ ಸುಜ್ಞಾನವನ್ನು ದಯಪಾಲಿಸಿದ್ದೆವು.
ಅರಬ್ಬಿ ವ್ಯಾಖ್ಯಾನಗಳು:
وَّحَنَانًا مِّنْ لَّدُنَّا وَزَكٰوةً ؕ— وَكَانَ تَقِیًّا ۟ۙ
ಮತ್ತು ನಮ್ಮ ಬಳಿಯಿಂದ ದಯೆ-ವಾತ್ಸಲ್ಯ ಮತ್ತು ಪಾವಿತ್ರö್ಯವನ್ನು ನೀಡಿದ್ದೆವು. ಅವರು ಭಯ ಭಕ್ತಿಯುಳ್ಳ ವ್ಯಕ್ತಿಯಾಗಿದ್ದರು.
ಅರಬ್ಬಿ ವ್ಯಾಖ್ಯಾನಗಳು:
وَّبَرًّا بِوَالِدَیْهِ وَلَمْ یَكُنْ جَبَّارًا عَصِیًّا ۟
ಮತ್ತು ಅವರು ತಮ್ಮ ಮಾತಾಪಿತರೊಂದಿಗೆ ಸೌಜನ್ಯಪೂರ್ಣವಾಗಿ ವರ್ತಿಸುವವರಾಗಿದ್ದರು. ಅವರು ದುಷ್ಟರು ಧಿಕ್ಕಾರಿಯು ಆಗಿರಲಿಲ್ಲ.
ಅರಬ್ಬಿ ವ್ಯಾಖ್ಯಾನಗಳು:
وَسَلٰمٌ عَلَیْهِ یَوْمَ وُلِدَ وَیَوْمَ یَمُوْتُ وَیَوْمَ یُبْعَثُ حَیًّا ۟۠
ಅವರು ಜನಿಸಿದ ದಿನವೂ, ಮರಣ ಹೊಂದುವ ದಿನವೂ ಹಾಗೂ ಅವರು ಜೀವಂತ ಎಬ್ಬಿಸಲಾಗುವ ದಿನವೂ ಅವರ ಮೇಲೆ ಶಾಂತಿಯಿರುವುದು.
ಅರಬ್ಬಿ ವ್ಯಾಖ್ಯಾನಗಳು:
وَاذْكُرْ فِی الْكِتٰبِ مَرْیَمَ ۘ— اِذِ انْتَبَذَتْ مِنْ اَهْلِهَا مَكَانًا شَرْقِیًّا ۟ۙ
(ಓ ಪೈಗಂಬರರೇ) ನೀವು ಈ ಗ್ರಂಥದಲ್ಲಿ ಮರ್ಯಮರ ವಿಷಯವನ್ನು ಪ್ರಸ್ತಾಪಿಸಿರಿ. ಅವರು ತನ್ನ ಜನರಿಂದ ಅಗಲಿ ಪೂರ್ವ ದಿಕ್ಕಿನೆಡೆಗೆ ಹೋದ ಸಂದರ್ಭ ಸ್ಮರಿಸಿರಿ.
ಅರಬ್ಬಿ ವ್ಯಾಖ್ಯಾನಗಳು:
فَاتَّخَذَتْ مِنْ دُوْنِهِمْ حِجَابًا ۫— فَاَرْسَلْنَاۤ اِلَیْهَا رُوْحَنَا فَتَمَثَّلَ لَهَا بَشَرًا سَوِیًّا ۟
ಮತ್ತು ಆಕೆ ಅವರಿಂದ ಮರೆಯಾಗಿ ಒಂದು ತೆರೆಯನ್ನು ಮಾಡಿಕೊಂಡಳು. ಅನಂತರ ನಾವು ಅವಳ ಬಳಿಗೆ ನಮ್ಮ ಪವಿತ್ರಾತ್ಮ (ಜಿಬ್ರೀಲ್‌ನನ್ನು) ಕಳುಹಿಸಿಕೊಟ್ಟೆವು ಅವನು ಆಕೆಯ ಮುಂದೆ ಪರಿಪೂರ್ಣ ಮಾನವ ರೂಪದಲ್ಲಿ ಪ್ರತ್ಯಕ್ಷವಾದನು.
ಅರಬ್ಬಿ ವ್ಯಾಖ್ಯಾನಗಳು:
قَالَتْ اِنِّیْۤ اَعُوْذُ بِالرَّحْمٰنِ مِنْكَ اِنْ كُنْتَ تَقِیًّا ۟
ಮರ್ಯಮ್ ಹೇಳಿದರು: ನೀನು ಅಲ್ಲಾಹನ ಭಯಭಕ್ತಿಯನ್ನು ಹೊಂದಿದವನಾಗಿದ್ದರೆ ನಿನ್ನಿಂದ ನಾನು ಪರಮ ದಯಾಮಯನ ಅಭಯವನ್ನು ಯಾಚಿಸುತ್ತೇನೆ.
ಅರಬ್ಬಿ ವ್ಯಾಖ್ಯಾನಗಳು:
قَالَ اِنَّمَاۤ اَنَا رَسُوْلُ رَبِّكِ ۖۗ— لِاَهَبَ لَكِ غُلٰمًا زَكِیًّا ۟
ಅವನು (ಪವಿತ್ರಾತ್ಮ) ಉತ್ತರಿಸಿದನು: ನಾನಂತು ನಿನ್ನ ಪ್ರಭುವಿನ ನಿಯೋಗಿತ ದೂತನಾಗಿದ್ದೇನೆ. ನಿನಗೆ ಪರಿಶುದ್ಧನಾದ ಒಬ್ಬ ಬಾಲಕನನ್ನು ನೀಡಲೆಂದು ಬಂದಿರುವೆನು.
ಅರಬ್ಬಿ ವ್ಯಾಖ್ಯಾನಗಳು:
قَالَتْ اَنّٰی یَكُوْنُ لِیْ غُلٰمٌ وَّلَمْ یَمْسَسْنِیْ بَشَرٌ وَّلَمْ اَكُ بَغِیًّا ۟
ಮರ್ಯಮ್ ಹೇಳಿದರು: ನನಗೆ ಮಗುವಾಗುವುದಾದರೂ ಹೇಗೆ? ನನ್ನನ್ನು ಯಾವೊಬ್ಬ ಮನುಷ್ಯನು ಸ್ಪರ್ಷಿಸಿರುವುದಿಲ್ಲ ಹಾಗೂ ನಾನು ನಡತೆಗೆಟ್ಟವಳೂ ಅಲ್ಲ.
ಅರಬ್ಬಿ ವ್ಯಾಖ್ಯಾನಗಳು:
قَالَ كَذٰلِكِ ۚ— قَالَ رَبُّكِ هُوَ عَلَیَّ هَیِّنٌ ۚ— وَلِنَجْعَلَهٗۤ اٰیَةً لِّلنَّاسِ وَرَحْمَةً مِّنَّا ۚ— وَكَانَ اَمْرًا مَّقْضِیًّا ۟
ಅವನು (ಜಿಬ್ರೀಲ್) ಹೇಳಿದನು: ಹಾಗೆಯೇ ಆಗುವುದು ನಿಮ್ಮ ಪ್ರಭು ಹೇಳುತ್ತಾನೆ. 'ಇದು ನನಗೆ ಅತಿ ಸುಲಭವಾಗಿದೆ. ನಾನು ಅವನನ್ನು ಜನರಿಗೆ ಒಂದು ನಿದರ್ಶನವನ್ನಾಗಿಯೂ, ನಮ್ಮ ಕಡೆಯ ವಿಶೇಷ ಕಾರುಣ್ಯವನ್ನಾಗಿಯೂ ಮಾಡಲಿದ್ದೇವೆ'.ಇದು ನಿಶ್ಚಿತ ಸಂಗತಿಯಾಗಿದೆ.
ಅರಬ್ಬಿ ವ್ಯಾಖ್ಯಾನಗಳು:
فَحَمَلَتْهُ فَانْتَبَذَتْ بِهٖ مَكَانًا قَصِیًّا ۟
ಮರ್ಯಮರು ಗರ್ಭಿಣಿಯಾದರು. ಇದೇ ಸ್ಥಿತಿಯಲ್ಲಿ ಅವರು ದೂರವಾದ ಪ್ರದೇಶಕ್ಕೆ ಹೋದರು.
ಅರಬ್ಬಿ ವ್ಯಾಖ್ಯಾನಗಳು:
فَاَجَآءَهَا الْمَخَاضُ اِلٰی جِذْعِ النَّخْلَةِ ۚ— قَالَتْ یٰلَیْتَنِیْ مِتُّ قَبْلَ هٰذَا وَكُنْتُ نَسْیًا مَّنْسِیًّا ۟
ಅನಂತರ ಅವರನ್ನು ಪ್ರಸವವೇದನೆಯು ಒಂದು ಖರ್ಜೂರದ ಮರದ ಬೊಡ್ಡೆಯ ಕೆಳಗೆ ತಂದು ಬಿಟ್ಟಿತು. ಅವರೆಂದರು: ಅಯ್ಯೋ! ನಾನು ಇದಕ್ಕೆ ಮೊದಲೇ ಮರಣ ಹೊಂದಿರುತ್ತಿದ್ದರೆ! ಹಾಗೂ ನಾನು ಜನರ ನೆನಪಿನಿಂದಲೂ ವಿಸ್ಮರಣೀಯ ವಸ್ತುವಾಗಿರುತ್ತಿದ್ದರೆ!(ಚೆನ್ನಾಗಿತ್ತು).
ಅರಬ್ಬಿ ವ್ಯಾಖ್ಯಾನಗಳು:
فَنَادٰىهَا مِنْ تَحْتِهَاۤ اَلَّا تَحْزَنِیْ قَدْ جَعَلَ رَبُّكِ تَحْتَكِ سَرِیًّا ۟
ಅಷ್ಟರಲ್ಲಿ ಜಿಬ್ರೀಲನು ಮರದಡಿಯಿಂದ ಕೂಗಿ ಹೇಳಿದನು: “ನೀನು ದುಃಖಿಸಬೇಡ; ನಿನ್ನ ಪ್ರಭುವು ನಿನ್ನ ತಳಭಾಗದಲ್ಲಿ ಚಿಲುಮೆಯೊಂದನ್ನು ಹರಿಸಿರುವನು”
ಅರಬ್ಬಿ ವ್ಯಾಖ್ಯಾನಗಳು:
وَهُزِّیْۤ اِلَیْكِ بِجِذْعِ النَّخْلَةِ تُسٰقِطْ عَلَیْكِ رُطَبًا جَنِیًّا ۟ؗ
ಮತ್ತು ನೀನು ನಿನ್ನೆಡೆಗೆ ಆ ಖರ್ಜೂರ ಮರದ ಬೊಡ್ಡೆಯನ್ನು ಅಲುಗಾಡಿಸು. ಅದು ನಿನ್ನ ಮೇಲೆ ತಾಜಾ ಖರ್ಜೂರ ಹಣ್ಣನ್ನು ಉದುರಿಸುವುದು.
ಅರಬ್ಬಿ ವ್ಯಾಖ್ಯಾನಗಳು:
فَكُلِیْ وَاشْرَبِیْ وَقَرِّیْ عَیْنًا ۚ— فَاِمَّا تَرَیِنَّ مِنَ الْبَشَرِ اَحَدًا ۙ— فَقُوْلِیْۤ اِنِّیْ نَذَرْتُ لِلرَّحْمٰنِ صَوْمًا فَلَنْ اُكَلِّمَ الْیَوْمَ اِنْسِیًّا ۟ۚ
ಇನ್ನು ನೀನು ತಿನ್ನು-ಕುಡಿ ಮತ್ತು ಕಣ್ಣುಗಳನ್ನು ತಂಪಾಗಿಸು. ಇನ್ನು ಯಾರಾದರೊಬ್ಬ ಮನುಷ್ಯನನ್ನು ಕಂಡರೆ (ಸನ್ನೆಯಿಂದ) ಹೇಳಿಬಿಡು: ನಾನು ಪರಮ ದಯಮಯನಾದ ಅಲ್ಲಾಹನ ಹೆಸರಲ್ಲಿ ಮೌನವ್ರತದ ಹರಕೆ ಹೊತ್ತಿರುತ್ತೇನೆ. ನಾನಿಂದು ಯಾರೊಂದಿಗೂ ಮಾತಾನಾಡಲಾರೆ.
ಅರಬ್ಬಿ ವ್ಯಾಖ್ಯಾನಗಳು:
فَاَتَتْ بِهٖ قَوْمَهَا تَحْمِلُهٗ ؕ— قَالُوْا یٰمَرْیَمُ لَقَدْ جِئْتِ شَیْـًٔا فَرِیًّا ۟
ಆಮೇಲೆ ಮರ್ಯಮ್ ಆ ಮಗುವನ್ನು ಎತ್ತಿಕೊಂಡು ತನ್ನ ಜನಾಂಗದೆಡೆಗೆ ಬಂದರು. ಅವರೆಲ್ಲರು ಹೇಳಿದರು: ಓ ಮರ್ಯಮ್, ನೀನು ತುಂಬಾ ಕೆಟ್ಟ ಕೆಲಸ ಮಾಡಿರುವೆ.
ಅರಬ್ಬಿ ವ್ಯಾಖ್ಯಾನಗಳು:
یٰۤاُخْتَ هٰرُوْنَ مَا كَانَ اَبُوْكِ امْرَاَ سَوْءٍ وَّمَا كَانَتْ اُمُّكِ بَغِیًّا ۟ۖۚ
ಓ ಹಾರೂನನ ಸಹೋದರಿ, ನಿನ್ನ ತಂದೆ ಕೆಟ್ಟ ಮನುಷ್ಯನಾಗಿರಲಿಲ್ಲ, ನಿನ್ನ ತಾಯಿಯು ನಡತೆಗೆಟ್ಟವಳಾಗಿರಲಿಲ್ಲ.
ಅರಬ್ಬಿ ವ್ಯಾಖ್ಯಾನಗಳು:
فَاَشَارَتْ اِلَیْهِ ۫ؕ— قَالُوْا كَیْفَ نُكَلِّمُ مَنْ كَانَ فِی الْمَهْدِ صَبِیًّا ۟
ಮರ್ಯಮರು ತನ್ನ ಮಗುವಿನೆಡೆಗೆ ಸನ್ನೆ ಮಾಡಿದರು: ಅವರೆಲ್ಲರೂ ಹೇಳಿದರು: ತೊಟ್ಟಿಲಲ್ಲಿರುವ ಮಗುವಿನೊಂದಿಗೆ ನಾವು ಮಾತನಾಡುವುದಾದರು ಹೇಗೆ?
ಅರಬ್ಬಿ ವ್ಯಾಖ್ಯಾನಗಳು:
قَالَ اِنِّیْ عَبْدُ اللّٰهِ ۫ؕ— اٰتٰىنِیَ الْكِتٰبَ وَجَعَلَنِیْ نَبِیًّا ۟ۙ
ಆಗ ಮಗು ಸ್ವತಃ ಹೇಳಿತು: ನಾನು ಅಲ್ಲಾಹನ ದಾಸನಾಗಿರುವೆನು ನನಗೆ ಅವನು ಗ್ರಂಥವನ್ನು ದಯಪಾಲಿಸಿರುವನು ಮತ್ತು ನನ್ನನ್ನು ತನ್ನ ಸಂದೇಶವಾಹಕರನ್ನಾಗಿ ಮಾಡಿರುವನು.
ಅರಬ್ಬಿ ವ್ಯಾಖ್ಯಾನಗಳು:
وَّجَعَلَنِیْ مُبٰرَكًا اَیْنَ مَا كُنْتُ ۪— وَاَوْصٰنِیْ بِالصَّلٰوةِ وَالزَّكٰوةِ مَا دُمْتُ حَیًّا ۟ۙ
ಮತ್ತು ನಾನೆಲ್ಲೇ ಇರಲಿ ಅವನು ನನ್ನನ್ನು ಅನುಗ್ರಹೀತನನ್ನಾಗಿ ಮಾಡಿರುತ್ತಾನೆ. ಮತ್ತು ನಾನು ಬದುಕಿರುವವರೆಗೆ ಅವನು ನನಗೆ ನಮಾಝ್ ಮತ್ತು ಝಕಾತಿನ ಆದೇಶ ನೀಡಿರುವನು.
ಅರಬ್ಬಿ ವ್ಯಾಖ್ಯಾನಗಳು:
وَّبَرًّا بِوَالِدَتِیْ ؗ— وَلَمْ یَجْعَلْنِیْ جَبَّارًا شَقِیًّا ۟
ಮತ್ತು ನನ್ನನ್ನು ನನ್ನ ತಾಯಿಯ ಸೇವೆ, ಹಾಗು ಸೌಜನ್ಯ ವರ್ತನೆ ಮಾಡುವವನಾಗಿ ಮಾಡಿರುತ್ತಾನೆ. ಮತ್ತು ಅವನು ನನ್ನನ್ನು ದುಷ್ಟನನ್ನಾಗಿಯು ಮತ್ತು ಹತಭಾಗ್ಯನನ್ನಾಗಿಯು ಮಾಡಿರುವುದಿಲ್ಲ.
ಅರಬ್ಬಿ ವ್ಯಾಖ್ಯಾನಗಳು:
وَالسَّلٰمُ عَلَیَّ یَوْمَ وُلِدْتُّ وَیَوْمَ اَمُوْتُ وَیَوْمَ اُبْعَثُ حَیًّا ۟
ನಾನು ಜನಿಸಿದ ದಿನವೂ, ಮರಣ ಹೊಂದುವ ದಿನವೂ ಮತ್ತು ನಾನು ಪುನಃ ಜೀವಂತ ಎಬ್ಬಿಸಲಾಗುವ ದಿನವೂ ನನ್ನ ಮೇಲೆ ಶಾಂತಿಯಿರುವುದು.
ಅರಬ್ಬಿ ವ್ಯಾಖ್ಯಾನಗಳು:
ذٰلِكَ عِیْسَی ابْنُ مَرْیَمَ ۚ— قَوْلَ الْحَقِّ الَّذِیْ فِیْهِ یَمْتَرُوْنَ ۟
ಇದುವೇ ಮರ್ಯಮರ ಪುತ್ರರ ಈಸಾರವರ ಘಟನೆ. ಇದುವೇ ಅವರು ಸಂದೇಹ ಗ್ರಸ್ತರಾಗಿರುವ ಸತ್ಯ ವಿಚಾರವಾಗಿದೆ.
ಅರಬ್ಬಿ ವ್ಯಾಖ್ಯಾನಗಳು:
مَا كَانَ لِلّٰهِ اَنْ یَّتَّخِذَ مِنْ وَّلَدٍ ۙ— سُبْحٰنَهٗ ؕ— اِذَا قَضٰۤی اَمْرًا فَاِنَّمَا یَقُوْلُ لَهٗ كُنْ فَیَكُوْنُ ۟ؕ
ಯಾರನ್ನೂ ಮಗನನ್ನಾಗಿ ಮಾಡಿಕೊಳ್ಳುವುದು ಅಲ್ಲಾಹನಿಗೆ ಶೋಭಿಸುವುದಿಲ್ಲ. ಅವನು ಪರಮ ಪಾವನನು. ಅವನು ಯಾವುದೇ ಕಾರ್ಯವನ್ನು ನಿರ್ಧರಿಸಿದಾಗ ಅದರೊಂದಿಗೆ ಆಗು ಎಂದು ಮಾತ್ರವೇ ಹೇಳುತ್ತಾನೆ. ಆಗಲೇ ಅದು ಆಗಿಬಿಡುತ್ತದೆ.
ಅರಬ್ಬಿ ವ್ಯಾಖ್ಯಾನಗಳು:
وَاِنَّ اللّٰهَ رَبِّیْ وَرَبُّكُمْ فَاعْبُدُوْهُ ؕ— هٰذَا صِرَاطٌ مُّسْتَقِیْمٌ ۟
(ಈಸಾ ಹೇಳುವರು) ನನ್ನ ಮತ್ತು ನಿಮ್ಮೆಲ್ಲರ ಪ್ರಭು ಅಲ್ಲಾಹನಾಗಿದ್ದಾನೆ. ಆದುದರಿಂದ ನೀವೆಲ್ಲರೂ ಅವನನ್ನೇ ಆರಾಧಿಸಿರಿ. ಇದುವೇ ಸನ್ಮಾರ್ಗವಾಗಿದೆ.
ಅರಬ್ಬಿ ವ್ಯಾಖ್ಯಾನಗಳು:
فَاخْتَلَفَ الْاَحْزَابُ مِنْ بَیْنِهِمْ ۚ— فَوَیْلٌ لِّلَّذِیْنَ كَفَرُوْا مِنْ مَّشْهَدِ یَوْمٍ عَظِیْمٍ ۟
ಆದರೆ ಗ್ರಂಥದವರ ವಿವಿಧ ಪಂಗಡಗಳು ಪರಸ್ಪರ ಭಿನ್ನತೆಯನ್ನು ತೋರಿದವು ಸತ್ಯನಿಷೇಧಿಗಳಿಗೆ ಅವರು ಹಾಜರಾಗುವ ದಿನದಂದು ಮಹಾವಿನಾಶವಿದೆ.
ಅರಬ್ಬಿ ವ್ಯಾಖ್ಯಾನಗಳು:
اَسْمِعْ بِهِمْ وَاَبْصِرْ ۙ— یَوْمَ یَاْتُوْنَنَا لٰكِنِ الظّٰلِمُوْنَ الْیَوْمَ فِیْ ضَلٰلٍ مُّبِیْنٍ ۟
ಅವರು ನಮ್ಮ ಮುಂದೆ ಹಾಜರುಗೊಳಿಸಲಾಗುವ ದಿನ ಅವರು ಚೆನ್ನಾಗಿ ಕೇಳುವರು ಮತ್ತು ಚೆನ್ನಾಗಿ ನೋಡುವರಾಗಿರುವರು ಆದರೆ ಇಂದು ಈ ಅಕ್ರಮಿಗಳು ಸ್ಪಷ್ಟವಾದ ಮಾರ್ಗಭ್ರಷ್ಟತೆಯಲ್ಲಿದ್ದಾರೆ.
ಅರಬ್ಬಿ ವ್ಯಾಖ್ಯಾನಗಳು:
وَاَنْذِرْهُمْ یَوْمَ الْحَسْرَةِ اِذْ قُضِیَ الْاَمْرُ ۘ— وَهُمْ فِیْ غَفْلَةٍ وَّهُمْ لَا یُؤْمِنُوْنَ ۟
(ಓ ಪೈಗಂಬರರೇ)ನೀವು ಅವರಿಗೆ ವ್ಯಥೆ ಪಡುವ ದಿನದ ಎಚ್ಚರಿಕೆಯನ್ನು ನೀಡಿರಿ. ಆಗ ಸಂಗತಿಗಳ ವಿಷಯ ತೀರ್ಮಾನ ಮಾಡಲಾಗುವುದು. ಆದರೆ ಅವರು ಅಲಕ್ಷö್ಯತೆಯಲ್ಲಿದ್ದಾರೆ ಮತ್ತು ಅವರು ವಿಶ್ವಾಸವಿಡುವುದಿಲ್ಲ.
ಅರಬ್ಬಿ ವ್ಯಾಖ್ಯಾನಗಳು:
اِنَّا نَحْنُ نَرِثُ الْاَرْضَ وَمَنْ عَلَیْهَا وَاِلَیْنَا یُرْجَعُوْنَ ۟۠
ನಿಶ್ಚಯವಾಗಿಯೂ ಈ ಭೂಮಿ ಮತ್ತು ಅದರ ಮೇಲಿರುವ ಸಕಲರ ವಾರೀಸುದಾರರು ನಾವೇ ಆಗಿದ್ದೇವೆ ಮತ್ತು ಅವರೆಲ್ಲರೂ ನಮ್ಮೆಡೆಗೇ ಮರಳಿಸಲಾಗುವರು.
ಅರಬ್ಬಿ ವ್ಯಾಖ್ಯಾನಗಳು:
وَاذْكُرْ فِی الْكِتٰبِ اِبْرٰهِیْمَ ؕ۬— اِنَّهٗ كَانَ صِدِّیْقًا نَّبِیًّا ۟
ನೀವು ಈ ಗ್ರಂಥದಲ್ಲಿ ಇಬ್ರಾಹೀಮರ ವಿಷಯವನ್ನು ಪ್ರಸ್ತಾಪಿಸಿರಿ. ನಿಸ್ಸಂಶಯವಾಗಿಯೂ ಅವರು ಮಹಾ ಸತ್ಯಸಂಧ ಪೈಗಂಬರ್ ಆಗಿದ್ದರು.
ಅರಬ್ಬಿ ವ್ಯಾಖ್ಯಾನಗಳು:
اِذْ قَالَ لِاَبِیْهِ یٰۤاَبَتِ لِمَ تَعْبُدُ مَا لَا یَسْمَعُ وَلَا یُبْصِرُ وَلَا یُغْنِیْ عَنْكَ شَیْـًٔا ۟
ಅವರು ತಮ್ಮ ತಂದೆಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ಓ ನನ್ನ ಪ್ರಿಯ ತಂದೆಯೇ, ಕೇಳಲಾಗದ, ನೋಡಲಾಗದ ಮತ್ತು ನಿಮಗೆ ಒಂದಿಷ್ಟೂ ಪ್ರಯೋಜನವನ್ನು ನೀಡಲಾಗದ ವಸ್ತುವನ್ನು ನೀವೇಕೆ ಆರಾಧಿಸುತ್ತಿದ್ದೀರಿ.
ಅರಬ್ಬಿ ವ್ಯಾಖ್ಯಾನಗಳು:
یٰۤاَبَتِ اِنِّیْ قَدْ جَآءَنِیْ مِنَ الْعِلْمِ مَا لَمْ یَاْتِكَ فَاتَّبِعْنِیْۤ اَهْدِكَ صِرَاطًا سَوِیًّا ۟
ಓ ನನ್ನ ಪ್ರಿಯ ತಂದೆಯೇ ನಿಮಗೆ ಬಂದಿರದAತಹ ಜ್ಞಾನ ನನಗೆ ಬಂದಿದೆ. ಆದ್ದರಿಂದ ನೀವು ನನ್ನನ್ನು ಅನುಸರಿಸಿರಿ.ನಾನು ನಿಮಗೆ ಅತ್ಯಂತ ನೇರಮಾರ್ಗದೆಡೆಗೆ ಮುನ್ನಡೆಸುವೆನು.
ಅರಬ್ಬಿ ವ್ಯಾಖ್ಯಾನಗಳು:
یٰۤاَبَتِ لَا تَعْبُدِ الشَّیْطٰنَ ؕ— اِنَّ الشَّیْطٰنَ كَانَ لِلرَّحْمٰنِ عَصِیًّا ۟
ಓ ನನ್ನ ಪ್ರಿಯ ತಂದೆಯೆ, ನೀವು ಶೈತಾನನನ್ನು ಆರಾಧಿಸಬೇಡಿರಿ. ಶೈತಾನನು ಪರಮ ದಯಾಮಯನಾದ ಅಲ್ಲಾಹನ ಧಿಕ್ಕಾರಿಯಾಗಿದ್ದಾನೆ.
ಅರಬ್ಬಿ ವ್ಯಾಖ್ಯಾನಗಳು:
یٰۤاَبَتِ اِنِّیْۤ اَخَافُ اَنْ یَّمَسَّكَ عَذَابٌ مِّنَ الرَّحْمٰنِ فَتَكُوْنَ لِلشَّیْطٰنِ وَلِیًّا ۟
ಓ ನನ್ನ ಪ್ರಿಯ ತಂದೆಯೇ, ಪರಮದಯಾಮಯನಾದ ಅಲ್ಲಾಹನಿಂದ ಯಾವುದದರೊಂದು ಯಾತನೆಯು ನಿಮಗೆ ತಗಲಿ ನೀವು ಶೈತಾನನ ಮಿತ್ರರಾಗಿ ಬಿಡುವಿರೆಂದು ನಾನು ಭಯಪಡುತ್ತೇನೆ.
ಅರಬ್ಬಿ ವ್ಯಾಖ್ಯಾನಗಳು:
قَالَ اَرَاغِبٌ اَنْتَ عَنْ اٰلِهَتِیْ یٰۤاِبْرٰهِیْمُ ۚ— لَىِٕنْ لَّمْ تَنْتَهِ لَاَرْجُمَنَّكَ وَاهْجُرْنِیْ مَلِیًّا ۟
ಅವನು (ತಂದೆ) ಉತ್ತರಿಸಿದನು: ಓ ಇಬ್ರಾಹೀಮ್, ನೀನು ನನ್ನ ಆರಾಧ್ಯರಿಂದ ವಿಮುಖನಾದೆಯಾ? ಕೇಳು, ನೀನು ಈ ನಿಲುವನ್ನು ತೊರೆಯದಿದ್ದರೆ ನಾನು ನಿನ್ನನ್ನು ಕಲ್ಲೆಸೆದು ಕೊಂದುಬಿಡುತ್ತೇನೆ. ಹೋಗು, ನೀನು ಒಂದು ದೀರ್ಘ ಕಾಲ ನನ್ನಿಂದ ದೂರವಾಗು.
ಅರಬ್ಬಿ ವ್ಯಾಖ್ಯಾನಗಳು:
قَالَ سَلٰمٌ عَلَیْكَ ۚ— سَاَسْتَغْفِرُ لَكَ رَبِّیْ ؕ— اِنَّهٗ كَانَ بِیْ حَفِیًّا ۟
ಇಬ್ರಾಹೀಮ್ ಹೇಳಿದರು: ನಿಮ್ಮ ಮೇಲೆ ಶಾಂತಿಯಿರಲಿ. ನಾನು ನಿಮಗಾಗಿ ನನ್ನ ಪ್ರಭುವಿನಲ್ಲಿ ಕ್ಷಮೆಯಾಚಿಸುತ್ತಲಿರುವೆನು. ಅವನು ನನ್ನ ಮೇಲೆ ತುಂಬಾ ಕೃಪೆಯುಳ್ಳವನಾಗಿದ್ದಾನೆ.
ಅರಬ್ಬಿ ವ್ಯಾಖ್ಯಾನಗಳು:
وَاَعْتَزِلُكُمْ وَمَا تَدْعُوْنَ مِنْ دُوْنِ اللّٰهِ وَاَدْعُوْا رَبِّیْ ۖؗ— عَسٰۤی اَلَّاۤ اَكُوْنَ بِدُعَآءِ رَبِّیْ شَقِیًّا ۟
ನಾನು ನಿಮ್ಮನ್ನು ಮತ್ತು ನೀವು ಅಲ್ಲಾಹನ ಹೊರತು ಕರೆದು ಪ್ರಾರ್ಥಿಸುತ್ತಿರುವುಗಳಿಂದ ಬಿಟ್ಟಗಲಿ ಹೋಗುತ್ತೇನೆ. ನಾನು ನನ್ನ ಪ್ರಭುವನ್ನು ಪ್ರಾರ್ಥಿಸಿ ನಿರಾಶನಾಗಲಾರೆ ಎಂದು ನಂಬಿದ್ದೇನೆ.
ಅರಬ್ಬಿ ವ್ಯಾಖ್ಯಾನಗಳು:
فَلَمَّا اعْتَزَلَهُمْ وَمَا یَعْبُدُوْنَ مِنْ دُوْنِ اللّٰهِ ۙ— وَهَبْنَا لَهٗۤ اِسْحٰقَ وَیَعْقُوْبَ ؕ— وَكُلًّا جَعَلْنَا نَبِیًّا ۟
ಇಬ್ರಾಹೀಮ್‌ರವರು ಅವರೆಲ್ಲರನ್ನು ಮತ್ತು ಅವರು ಅಲ್ಲಾಹನ ಹೊರತು ಆರಾಧಿಸುತ್ತಿದ್ದಂತಹ ಸಕಲ ಅರಾಧ್ಯರನ್ನು ಬಿಟ್ಟಗಲಿದಾಗ ನಾವು ಅವರಿಗೆ ಇಸ್‌ಹಾಕ್ ಮತ್ತು ಯಾಕೂಬ್‌ರನ್ನು ದಯಪಾಲಿಸಿದೆವು ಮತ್ತು ನಾವು ಅವರೆಲ್ಲರನ್ನು ಪ್ರವಾದಿಯನ್ನಾಗಿ ಮಾಡಿದೆವು.
ಅರಬ್ಬಿ ವ್ಯಾಖ್ಯಾನಗಳು:
وَوَهَبْنَا لَهُمْ مِّنْ رَّحْمَتِنَا وَجَعَلْنَا لَهُمْ لِسَانَ صِدْقٍ عَلِیًّا ۟۠
ಮತ್ತು ನಾವು ಅವರಿಗೆ ನಮ್ಮ ಕೃಪೆಯನ್ನು ದಯಪಾಲಿಸಿದೆವು ಮತ್ತು ಅವರ ಕೀರ್ತಿಯನ್ನು ಉನ್ನತಗೊಳಿಸಿದೆವು.
ಅರಬ್ಬಿ ವ್ಯಾಖ್ಯಾನಗಳು:
وَاذْكُرْ فِی الْكِتٰبِ مُوْسٰۤی ؗ— اِنَّهٗ كَانَ مُخْلَصًا وَّكَانَ رَسُوْلًا نَّبِیًّا ۟
(ಓ ಪೈಗಂಬರರೇ) ನೀವು ಈ ಗ್ರಂಥದಲ್ಲಿ ಮೂಸಾರವರ ವಿಷಯವನ್ನು ಪ್ರಸ್ತಾಪಿಸಿರಿ. ನಿಶ್ಚಯವಾಗಿಯೂ ಅವರು ಆಯ್ದ ವ್ಯಕ್ತಿಯಾಗಿ ಮತ್ತು ಸಂದೇಶÀವಾಹಕರೂ ಹಾಗೂ ಪೈಗಂಬರರಾಗಿದ್ದರು.
ಅರಬ್ಬಿ ವ್ಯಾಖ್ಯಾನಗಳು:
وَنَادَیْنٰهُ مِنْ جَانِبِ الطُّوْرِ الْاَیْمَنِ وَقَرَّبْنٰهُ نَجِیًّا ۟
ನಾವು ಅವರನ್ನು ತೂರ್ ಪರ್ವತದ ಬಲಗಡೆಯಿಂದ ಕೂಗಿ ಕರೆದೆವು ಹಾಗೂ ರಹಸ್ಯ ಸಂಭಾಷಣೆಯ ಮೂಲಕ ನಾವು ಅವರಿಗೆ ಸಾಮೀಪ್ಯ ನೀಡಿದೆವು.
ಅರಬ್ಬಿ ವ್ಯಾಖ್ಯಾನಗಳು:
وَوَهَبْنَا لَهٗ مِنْ رَّحْمَتِنَاۤ اَخَاهُ هٰرُوْنَ نَبِیًّا ۟
ಮತ್ತು ನಮ್ಮ ಕೃಪೆಯಿಂದ ಅವರ ಸಹೋದರ ಹಾರೂನರನ್ನು ಪೈಗಂಬರರನ್ನಾಗಿ ಮಾಡಿ ಅವರಿಗೆ ನೆರವು ನೀಡಿದೆವು.
ಅರಬ್ಬಿ ವ್ಯಾಖ್ಯಾನಗಳು:
وَاذْكُرْ فِی الْكِتٰبِ اِسْمٰعِیْلَ ؗ— اِنَّهٗ كَانَ صَادِقَ الْوَعْدِ وَكَانَ رَسُوْلًا نَّبِیًّا ۟ۚ
ನೀವು ಈ ಗ್ರಂಥದಲ್ಲಿ ಇಸ್ಮಾಯೀಲ್‌ರವರ ವೃತ್ತಾಂತವನ್ನು ಪ್ರಸ್ತಾಪಿಸಿರಿ. ಅವರು ವಚನ ಪಾಲಕರಾಗಿದ್ದರು ಮತ್ತು ಪೈಗಂಬರರು ಹಾಗೂ ರಸೂಲರು ಆಗಿದ್ದರು.
ಅರಬ್ಬಿ ವ್ಯಾಖ್ಯಾನಗಳು:
وَكَانَ یَاْمُرُ اَهْلَهٗ بِالصَّلٰوةِ وَالزَّكٰوةِ ۪— وَكَانَ عِنْدَ رَبِّهٖ مَرْضِیًّا ۟
ಅವರು ತಮ್ಮ ಮನೆಯವರಿಗೆ ನಮಾಝ್ ಹಗೂ ಝಕಾತ್‌ನ ಆದೇಶ ನೀಡುತ್ತಿದ್ದರು ಮತ್ತು ಅವರು ತಮ್ಮ ಪ್ರಭುವಿನ ಸಂತೃಪ್ತಿಗೆ ಪಾತ್ರರಾಗಿದ್ದರು.
ಅರಬ್ಬಿ ವ್ಯಾಖ್ಯಾನಗಳು:
وَاذْكُرْ فِی الْكِتٰبِ اِدْرِیْسَ ؗ— اِنَّهٗ كَانَ صِدِّیْقًا نَّبِیًّا ۟ۗۙ
ನೀವು ಈ ಗ್ರಂಥದಲ್ಲಿ ಇದ್‌ರೀಸ್‌ರವರ ಕುರಿತು ಪ್ರಸ್ತಾಪಿಸಿರಿ, ಅವರು ಮಹಾ ಸತ್ಯಸಂಧ ಪೈಗಂಬರರಾಗಿದ್ದರು.
ಅರಬ್ಬಿ ವ್ಯಾಖ್ಯಾನಗಳು:
وَّرَفَعْنٰهُ مَكَانًا عَلِیًّا ۟
ಮತ್ತು ನಾವು ಅವರನ್ನು ಉನ್ನತ ಸ್ಥಾನಕ್ಕೇರಿಸಿದೆವು.
ಅರಬ್ಬಿ ವ್ಯಾಖ್ಯಾನಗಳು:
اُولٰٓىِٕكَ الَّذِیْنَ اَنْعَمَ اللّٰهُ عَلَیْهِمْ مِّنَ النَّبِیّٖنَ مِنْ ذُرِّیَّةِ اٰدَمَ ۗ— وَمِمَّنْ حَمَلْنَا مَعَ نُوْحٍ ؗ— وَّمِنْ ذُرِّیَّةِ اِبْرٰهِیْمَ وَاِسْرَآءِیْلَ ؗ— وَمِمَّنْ هَدَیْنَا وَاجْتَبَیْنَا ؕ— اِذَا تُتْلٰی عَلَیْهِمْ اٰیٰتُ الرَّحْمٰنِ خَرُّوْا سُجَّدًا وَّبُكِیًّا ۟
ಅವರೆಲ್ಲರೂ ಅಲ್ಲಾಹನು ಅನುಗ್ರಹಿಸಿದ ಪೈಗಂಬರರÀ ಪೈಕಿಯಾಗಿದ್ದಾರೆ. ಆದಮರ ಸಂತಾನದಿAದಲೂ ನಾವು ನೂಹರ ಜೊತೆ ಹಡಗಿನಲ್ಲಿ ಸಾಗಿಸಿದವರ ಸಂತಾನದಿAದಲೂ ಇಬ್ರಾಹೀಮರ ಮತ್ತು ಯಾಕೂಬರ ಸಂತಾನದಿAದಲೂ ನಾವು ಸನ್ಮಾರ್ಗ ದರ್ಶನ ಮಾಡಿ ಆಯ್ಕೆ ಮಾಡಿದವರಲ್ಲಾಗಿದ್ದಾರೆ. ಅವರ ಮುಂದೆ ಪರಮ ದಯಾಮಯನಾದ ಅಲ್ಲಾಹನ ಸೂಕ್ತಿಗಳನ್ನು ಓದಿ ಹೇಳಲಾದಾಗ ಅವರು ಅಳುತ್ತಾ ಸಾಷ್ಟಾಂಗವೆರಗುತ್ತಾ ನೆಲದ ಮೇಲೆ ಬೀಳುವರು.
ಅರಬ್ಬಿ ವ್ಯಾಖ್ಯಾನಗಳು:
فَخَلَفَ مِنْ بَعْدِهِمْ خَلْفٌ اَضَاعُوا الصَّلٰوةَ وَاتَّبَعُوا الشَّهَوٰتِ فَسَوْفَ یَلْقَوْنَ غَیًّا ۟ۙ
ತರುವಾಯ ಅವರ ನಂತರ ಅಯೋಗ್ಯರು ಉತ್ತರಾಧಿಕಾರಿಗಳಾದರು. ಅವರು ನಮಾಝ್ ವ್ಯರ್ಥಗೊಳಿಸಿದರು ಮತ್ತು ಸ್ವೇಚ್ಛೆಗಳನ್ನು ಅನುಸರಿಸಿದರು.ಸದ್ಯದಲ್ಲೇ ಅವರು ತಮ್ಮ ಪಥಭ್ರಷ್ಟತೆಯ ದುಷ್ಪರಿಣಾಮವನ್ನು ಕಾಣಲಿರುವರು.
ಅರಬ್ಬಿ ವ್ಯಾಖ್ಯಾನಗಳು:
اِلَّا مَنْ تَابَ وَاٰمَنَ وَعَمِلَ صَالِحًا فَاُولٰٓىِٕكَ یَدْخُلُوْنَ الْجَنَّةَ وَلَا یُظْلَمُوْنَ شَیْـًٔا ۟ۙ
. ಆದರೆ ಪಶ್ಚಾತ್ತಾಪ ಪಟ್ಟು ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಕೈಗೊಂಡವರ ಹೊರತು. ಅವರು ಸ್ವರ್ಗದಲ್ಲಿ ಪ್ರವೇಶಿಸುವರು.ಮತ್ತು ಅವರು ಒಂದಿಷ್ಟೂ ಅನ್ಯಾಯಕ್ಕೊಳಗಾಗಲಾರರು.
ಅರಬ್ಬಿ ವ್ಯಾಖ್ಯಾನಗಳು:
جَنّٰتِ عَدْنِ ١لَّتِیْ وَعَدَ الرَّحْمٰنُ عِبَادَهٗ بِالْغَیْبِ ؕ— اِنَّهٗ كَانَ وَعْدُهٗ مَاْتِیًّا ۟
ಪರಮ ದಯಾಮಯನು ತನ್ನ ದಾಸರಿಗೆ ಪರೋಕ್ಷವಾಗಿ ಮಾಡಿರುವ ಶಾಶ್ವತ ಸ್ವರ್ಗೋದ್ಯಾನಗಳಿವೆ ಎಂಬ ವಾಗ್ದಾನವಾಗಿದೆ. ನಿಸ್ಸಂಶಯವಾಗಿಯೂ ಅವನ ವಾಗ್ದಾನವು ಪೂರ್ಣಗೊಂಡೇ ತೀರುವುದು.
ಅರಬ್ಬಿ ವ್ಯಾಖ್ಯಾನಗಳು:
لَا یَسْمَعُوْنَ فِیْهَا لَغْوًا اِلَّا سَلٰمًا ؕ— وَلَهُمْ رِزْقُهُمْ فِیْهَا بُكْرَةً وَّعَشِیًّا ۟
ಅವರು ಅದರಲ್ಲಿ ಶಾಂತಿಯ ಹೊರತು ಇನ್ನಾವುದೇ ವ್ಯರ್ಥ ಮಾತುಗಳನ್ನು ಕೇಳಲಾರರು. ಮತ್ತು ಅವರಿಗೆ ಅಲ್ಲಿ ಅವರ ಆಹಾರವು ಸಂಜೆ-ಮುAಜಾನೆಯಲ್ಲಿ ಸಿಗುತ್ತಲಿರುವುದು.
ಅರಬ್ಬಿ ವ್ಯಾಖ್ಯಾನಗಳು:
تِلْكَ الْجَنَّةُ الَّتِیْ نُوْرِثُ مِنْ عِبَادِنَا مَنْ كَانَ تَقِیًّا ۟
ಇದುವೇ ಆ ಸ್ವರ್ಗೋದ್ಯಾನ. ನಾವು ನಮ್ಮ ದಾಸರ ಪೈಕಿ ಭಯಭಕ್ತಿಯುಳ್ಳವರನ್ನು ಇದರ ವಾರಿಸುದಾರರನ್ನಾಗಿ ಮಾಡುವೆವು.
ಅರಬ್ಬಿ ವ್ಯಾಖ್ಯಾನಗಳು:
وَمَا نَتَنَزَّلُ اِلَّا بِاَمْرِ رَبِّكَ ۚ— لَهٗ مَا بَیْنَ اَیْدِیْنَا وَمَا خَلْفَنَا وَمَا بَیْنَ ذٰلِكَ ۚ— وَمَا كَانَ رَبُّكَ نَسِیًّا ۟ۚ
(ಓ ಪೈಗಂಬರರೇ) ನಾವು (ಮಲಕ್‌ಗಳು) ನಿಮ್ಮ ಪ್ರಭುವಿನ ಅಪ್ಪಣೆಯಿಲ್ಲದೆ ಇಳಿದು (ಭೂಮಿಗೆ) ಬರಲಾರೆವು. ನಮ್ಮ ಮುಂದಿರುವ ಮತ್ತು ನಮ್ಮ ಹಿಂದಿರುವ ಹಾಗೂ ಅವರೆಡರ ನಡುವೆಯಿರುವ ಸಕಲ ವಸ್ತುಗಳು ಅವನ (ಅಲ್ಲಾಹನ) ಒಡೆತನದಲ್ಲಿದೆ. ನಿಮ್ಮ ಪ್ರಭು ಮರೆಯುವವನಲ್ಲ.
ಅರಬ್ಬಿ ವ್ಯಾಖ್ಯಾನಗಳು:
رَبُّ السَّمٰوٰتِ وَالْاَرْضِ وَمَا بَیْنَهُمَا فَاعْبُدْهُ وَاصْطَبِرْ لِعِبَادَتِهٖ ؕ— هَلْ تَعْلَمُ لَهٗ سَمِیًّا ۟۠
ಅವನೇ ಆಕಾಶಗಳ ಮತ್ತು ಭೂಮಿಯ ಹಾಗೂ ಅವರೆಡರ ನಡುವೆಯಿರುವ ಸಕಲ ವಸ್ತುಗಳ ಪ್ರಭು. ಆದ್ದರಿಂದ ನೀವು ಅವನನ್ನೇ ಆರಾಧಿಸಿರಿ ಮತ್ತು ಅವನ ಆರಾಧನೆಯಲ್ಲಿ ಸ್ಥಿರವಾಗಿರಿ. ಗುಣನಾಮಗಳಲ್ಲಿ ಅವನಿಗೆ ಸರಿಸಾಟಿಯಾದ ಮತ್ತೊಬ್ಬನು ಇರುವುದಾಗಿ ನೀವು ಬಲ್ಲಿರಾ?
ಅರಬ್ಬಿ ವ್ಯಾಖ್ಯಾನಗಳು:
وَیَقُوْلُ الْاِنْسَانُ ءَاِذَا مَا مِتُّ لَسَوْفَ اُخْرَجُ حَیًّا ۟
ಮರಣ ಹೊಂದಿದ ಬಳಿಕ ನಾನು ಜೀವಂತವಾಗಿ ಹೊರ ತರಲ್ಪಡುವನೇ? ಎಂದು ಮಾನವನು ಕೇಳುತ್ತಾನೆ.
ಅರಬ್ಬಿ ವ್ಯಾಖ್ಯಾನಗಳು:
اَوَلَا یَذْكُرُ الْاِنْسَانُ اَنَّا خَلَقْنٰهُ مِنْ قَبْلُ وَلَمْ یَكُ شَیْـًٔا ۟
ಮನುಷ್ಯನು ಇದಕ್ಕೆ ಮೊದಲು ಏನೂ ಇಲ್ಲದಿದ್ದಾಗ ನಾವು ಅವನನ್ನು ಸೃಷ್ಟಿಸಿದ್ದೇವೆಂಬುದನ್ನು ನೆನಪಿಸಿಕೊಳ್ಳುವುದಿಲ್ಲವೇ?
ಅರಬ್ಬಿ ವ್ಯಾಖ್ಯಾನಗಳು:
فَوَرَبِّكَ لَنَحْشُرَنَّهُمْ وَالشَّیٰطِیْنَ ثُمَّ لَنُحْضِرَنَّهُمْ حَوْلَ جَهَنَّمَ جِثِیًّا ۟ۚ
ನಿಮ್ಮ ಪ್ರಭುವಿನಾಣೆ! ಖಂಡಿತವಾಗಿಯು ನಾವು ಸತ್ಯನಿಷೇಧಿಗಳನ್ನು ಹಾಗೂ ಶೈತಾನರನ್ನು ಒಟ್ಟು ಸೇರಿಸಿ ತದನಂತರ ಅವರೆಲ್ಲರನ್ನೂ ನರಕದ ಸುತ್ತಮುತ್ತಲೂ ಮೊಣಕಾಲೂರಿದ ಸ್ಥಿತಿಯಲ್ಲಿ ಹಾಜರುಗೊಳಿಸಲಿದ್ದೇವೆ.
ಅರಬ್ಬಿ ವ್ಯಾಖ್ಯಾನಗಳು:
ثُمَّ لَنَنْزِعَنَّ مِنْ كُلِّ شِیْعَةٍ اَیُّهُمْ اَشَدُّ عَلَی الرَّحْمٰنِ عِتِیًّا ۟ۚ
ಅನಂತರ ನಾವು ಎಲ್ಲಾ ಗುಂಪುಗಳಿAದಲೂ ಪರಮ ದಯಾಮಯನಾದ ಅಲ್ಲಾಹನ ವಿರುದ್ಧ ಅತ್ಯಧಿಕ ಧಿಕ್ಕಾರ ತೋರಿದವರನ್ನು ಖಂಡಿತವಾಗಿ ಎಳೆದು ಬೇರ್ಪಡಿಸುವೆವು.
ಅರಬ್ಬಿ ವ್ಯಾಖ್ಯಾನಗಳು:
ثُمَّ لَنَحْنُ اَعْلَمُ بِالَّذِیْنَ هُمْ اَوْلٰی بِهَا صِلِیًّا ۟
ತರುವಾಯ ನರಕಾಗ್ನಿಯಲ್ಲಿ ಪ್ರವೇಶಿಸಲು ಅತ್ಯಂತ ಅರ್ಹರು ಯಾರೆಂಬುದನ್ನು ನಾವು ಚೆನ್ನಾಗಿ ಬಲ್ಲೆವು.
ಅರಬ್ಬಿ ವ್ಯಾಖ್ಯಾನಗಳು:
وَاِنْ مِّنْكُمْ اِلَّا وَارِدُهَا ۚ— كَانَ عَلٰی رَبِّكَ حَتْمًا مَّقْضِیًّا ۟ۚ
ನಿಮ್ಮ ಪೈಕಿ ನರಕವನ್ನು ಹಾದು ಹೋಗದವರು ಯಾರು ಇಲ್ಲ ಇದು ನಿಮ್ಮ ಪ್ರಭುವಿನ ಮೇಲೆ ಹೊಣೆಯಾಗಿರುವ ನಿರ್ಧರಿತ ಸಂಗತಿಯಾಗಿದೆ.
ಅರಬ್ಬಿ ವ್ಯಾಖ್ಯಾನಗಳು:
ثُمَّ نُنَجِّی الَّذِیْنَ اتَّقَوْا وَّنَذَرُ الظّٰلِمِیْنَ فِیْهَا جِثِیًّا ۟
ನಂತರ ನಾವು ಭಯ ಭಕ್ತಿಯನ್ನಿರಿಸಿಕೊಂಡವರನ್ನು ರಕ್ಷಿಸುವೆವು ಹಾಗೂ ಅಕ್ರಮಿಗಳನ್ನು ಮೊಣಕಾಲೂರಿದ ಸ್ಥಿತಿಯಲ್ಲಿ ಅದರಲ್ಲೇ ಬಿಟ್ಟು ಬಿಡುವೆವು.
ಅರಬ್ಬಿ ವ್ಯಾಖ್ಯಾನಗಳು:
وَاِذَا تُتْلٰی عَلَیْهِمْ اٰیٰتُنَا بَیِّنٰتٍ قَالَ الَّذِیْنَ كَفَرُوْا لِلَّذِیْنَ اٰمَنُوْۤا ۙ— اَیُّ الْفَرِیْقَیْنِ خَیْرٌ مَّقَامًا وَّاَحْسَنُ نَدِیًّا ۟
ಅವರ ಮುಂದೆ ನಮ್ಮ ಸ್ಪಷ್ಟ ಸೂಕ್ತಿಗಳನ್ನು ಓದಿ ಹೇಳಲಾದಾಗ ಸತ್ಯನಿಷೇಧಿಗಳು ಸತ್ಯವಿಶ್ವಾಸಿಗಳೊಂದಿಗೆ ನಮ್ಮೆರಡು ಗುಂಪುಗಳಲ್ಲಿ ಯಾರ ಸ್ಥಾನವು ಉನ್ನತವಾಗಿದೆ ಹಾಗೂ ಯಾರ ಸಭೆಯು ವೈಭವಪೂರ್ಣವಾಗಿದೆ ಎಂದು ಕೇಳುತ್ತಾರೆ.
ಅರಬ್ಬಿ ವ್ಯಾಖ್ಯಾನಗಳು:
وَكَمْ اَهْلَكْنَا قَبْلَهُمْ مِّنْ قَرْنٍ هُمْ اَحْسَنُ اَثَاثًا وَّرِﺋْﻴًﺎ ۟
(ವಸ್ತುತಃ) ಇವರಿಗಿಂತ ಮೊದಲು ಸುಖ ಸವಲತ್ತುಗಳಲ್ಲೂ, ಆಡಂಬರಗಳಲ್ಲೂ ಇವರಿಗಿಂತ ಉನ್ನತರಾಗಿದ್ದ ಅದೆಷ್ಟೋ ಜನಾಂಗಗಳನ್ನು ನಾವು ನಾಶ ಮಾಡಿರುತ್ತೇವೆ.
ಅರಬ್ಬಿ ವ್ಯಾಖ್ಯಾನಗಳು:
قُلْ مَنْ كَانَ فِی الضَّلٰلَةِ فَلْیَمْدُدْ لَهُ الرَّحْمٰنُ مَدًّا ۚ۬— حَتّٰۤی اِذَا رَاَوْا مَا یُوْعَدُوْنَ اِمَّا الْعَذَابَ وَاِمَّا السَّاعَةَ ؕ۬— فَسَیَعْلَمُوْنَ مَنْ هُوَ شَرٌّ مَّكَانًا وَّاَضْعَفُ جُنْدًا ۟
(ಇವರೊಡನೆ) ಹೇಳಿರಿ: ಯಾರು ಪಥಭ್ರಷ್ಟತೆಯಲ್ಲಿರುತ್ತಾರೋ ಅವರೊಡನೆ ಮಾಡಲಾಗುತ್ತಿರುವ ವಾಗ್ದಾನ ಅವರು ಕಾಣುವ ತನಕ. ಅವರಿಗೆ ಪರಮ ದಯಾಮಯನು ದೀರ್ಘ ಕಾಲಾವಕಾಶವನ್ನು ನೀಡುತ್ತಾನೆ. ಅದು ಯಾತನೆಯಾಗಿರಲಿ ಅಥವಾ ಅಂತ್ಯಕಾಲವಾಗಿರಲಿ ಆಗ ಅವರು ಯಾರು ನಿಕೃಷ್ಟ ಸ್ಥಾನದವರು ಹಾಗೂ ಯಾರ ಸಂಖ್ಯಾ ಬಲವು ಅತ್ಯಂತ ದುರ್ಬಲ ಎಂಬುದನ್ನು ಅರಿತುಕೊಳ್ಳುವರು.
ಅರಬ್ಬಿ ವ್ಯಾಖ್ಯಾನಗಳು:
وَیَزِیْدُ اللّٰهُ الَّذِیْنَ اهْتَدَوْا هُدًی ؕ— وَالْبٰقِیٰتُ الصّٰلِحٰتُ خَیْرٌ عِنْدَ رَبِّكَ ثَوَابًا وَّخَیْرٌ مَّرَدًّا ۟
ಸನ್ಮಾರ್ಗ ಪಡೆದವರಿಗೆ ಅಲ್ಲಾಹನು ಸನ್ಮಾರ್ಗವನ್ನು ಹೆಚ್ಚಿಸಿಕೊಡುತ್ತಾನೆ ಮತ್ತು ಬಾಕಿಯುಳಿಯುವ ಸತ್ಕರ್ಮಗಳೇ ನಿಮ್ಮ ಪ್ರಭುವಿನ ಬಳಿ ಪ್ರತಿಫಲದ ದೃಷ್ಟಿಯಿಂದ ಉತ್ತಮವೂ ಹಾಗೂ ಪರಿಣಾಮದ ದೃಷ್ಟಿಯಿಂದ ಅತ್ಯುತ್ತಮವೂ ಆಗಿದೆ.
ಅರಬ್ಬಿ ವ್ಯಾಖ್ಯಾನಗಳು:
اَفَرَءَیْتَ الَّذِیْ كَفَرَ بِاٰیٰتِنَا وَقَالَ لَاُوْتَیَنَّ مَالًا وَّوَلَدًا ۟ؕ
ನಮ್ಮ ಸೂಕ್ತಿಗಳನ್ನು ನಿರಾಕರಿಸಿದ ಮತ್ತು ತನಗೆ ಖಂಡಿತ ಸೊತ್ತು ಸಂತಾನಗಳನ್ನು ನೀಡಲಾಗುವುದೆಂದು ಹೇಳಿದ ವ್ಯಕ್ತಿಯನ್ನು ನೀವು ಕಂಡಿರಾ?
ಅರಬ್ಬಿ ವ್ಯಾಖ್ಯಾನಗಳು:
اَطَّلَعَ الْغَیْبَ اَمِ اتَّخَذَ عِنْدَ الرَّحْمٰنِ عَهْدًا ۟ۙ
ಅವನಿಗೆ ಅಗೋಚರ ಜ್ಞಾನದ ಸುಳಿವು ಸಿಕ್ಕಿದೆಯೇ? ಅಥವಾ ಪರಮ ದಯಾಮಯನಾದ ಅಲ್ಲಾಹನ ಬಳಿ ಒಪ್ಪಂದವೊAದನ್ನು ಮಾಡಿಕೊಂಡಿರುವನೇ?
ಅರಬ್ಬಿ ವ್ಯಾಖ್ಯಾನಗಳು:
كَلَّا ؕ— سَنَكْتُبُ مَا یَقُوْلُ وَنَمُدُّ لَهٗ مِنَ الْعَذَابِ مَدًّا ۟ۙ
ಹಾಗಲ್ಲಾ! ಅವನು ಹೇಳುತ್ತಿರವುದನ್ನು ನಾವು ಬರೆದಿಡಲಿದ್ದೇವೆ ಮತ್ತು ನಾವು ಅವನಿಗೆ ಯಾತನೆಯನ್ನು ಇನ್ನಷ್ಟು ಹೆಚ್ಚಿಸುವೆವು.
ಅರಬ್ಬಿ ವ್ಯಾಖ್ಯಾನಗಳು:
وَّنَرِثُهٗ مَا یَقُوْلُ وَیَاْتِیْنَا فَرْدًا ۟
ಅವನು ಹೇಳುತ್ತಿರುವ ಸೊತ್ತು ಸಂತಾನವನ್ನು ನಾವು ಹಿಂತೆಗೆದುಕೊಳ್ಳುವೆವು.ಮತ್ತು ಅವನು ನಮ್ಮ ಬಳಿ ಒಬ್ಬಂಟಿಯಾಗಿ ಬರಲಿದ್ದಾನೆ.
ಅರಬ್ಬಿ ವ್ಯಾಖ್ಯಾನಗಳು:
وَاتَّخَذُوْا مِنْ دُوْنِ اللّٰهِ اٰلِهَةً لِّیَكُوْنُوْا لَهُمْ عِزًّا ۟ۙ
ಅವರು ತಮಗೆ ಪ್ರತಿಷ್ಠೆಯ ವಸ್ತುವಾಗಲೆಂದು ಅಲ್ಲಾಹನ ಹೊರತು ಇತರರನ್ನು ಆರಾಧ್ಯರನ್ನಾಗಿ ಮಾಡಿ ಕೊಂಡಿದ್ದಾರೆ.
ಅರಬ್ಬಿ ವ್ಯಾಖ್ಯಾನಗಳು:
كَلَّا ؕ— سَیَكْفُرُوْنَ بِعِبَادَتِهِمْ وَیَكُوْنُوْنَ عَلَیْهِمْ ضِدًّا ۟۠
ಹಾಗಲ್ಲ! ಅವರಂತು ಇವರ ಆರಾಧನೆಯನ್ನು ನಿರಾಕರಿಸುವರು ಮತ್ತು ಇವರ ವಿರೋಧಿಗಳಾಗುವರು.
ಅರಬ್ಬಿ ವ್ಯಾಖ್ಯಾನಗಳು:
اَلَمْ تَرَ اَنَّاۤ اَرْسَلْنَا الشَّیٰطِیْنَ عَلَی الْكٰفِرِیْنَ تَؤُزُّهُمْ اَزًّا ۟ۙ
ನಾವು ಸತ್ಯನಿಷೇಧಿಗಳ ಮೇಲೆ ಶೈತಾನರನ್ನು ಅವರ ಹಿಂದೆ ಹಚ್ಚಿಬಿಡಲಾಗಿರುವುದನ್ನು ನೀವು ಕಂಡಿಲ್ಲವೇ?ಅವರು ಇವರನ್ನು ಸತ್ಯದ ವಿರುದ್ಧ ಪ್ರಚೋದಿಸುತ್ತಿದ್ದಾರೆ.
ಅರಬ್ಬಿ ವ್ಯಾಖ್ಯಾನಗಳು:
فَلَا تَعْجَلْ عَلَیْهِمْ ؕ— اِنَّمَا نَعُدُّ لَهُمْ عَدًّا ۟ۚ
ಆದ್ದರಿಂದ ನೀವು ಅವರ ಬಗ್ಗೆ ಆತುರ ಪಡಬೇಡಿ ಖಂಡಿತವಾಗಿಯು ನಾವು ಅವರ ದಿನಗಳನ್ನು ಎಣಿಸುತ್ತಿದ್ದೇವೆ.
ಅರಬ್ಬಿ ವ್ಯಾಖ್ಯಾನಗಳು:
یَوْمَ نَحْشُرُ الْمُتَّقِیْنَ اِلَی الرَّحْمٰنِ وَفْدًا ۟ۙ
ಅಂದು ನಾವು ಭಯಭಕ್ತಿಯುಳ್ಳವರನ್ನು ಪರಮ ದಯಾಮಯನಾದ ಅಲ್ಲಾಹನ ಕಡೆಗೆ ಅತಿಥಿಗಳಾಗಿ ಒಟ್ಟುಸೇರಿಸುವೆವು.
ಅರಬ್ಬಿ ವ್ಯಾಖ್ಯಾನಗಳು:
وَّنَسُوْقُ الْمُجْرِمِیْنَ اِلٰی جَهَنَّمَ وِرْدًا ۟ۘ
ಹಾಗೂ ನಾವು ಅಪರಾಧಿಗಳನ್ನು ತೀವ್ರದಾಹದ ಸ್ಥಿತಿಯಲ್ಲಿ ನರಕದೆಡೆಗೆ ಅಟ್ಟುತ್ತಾ ಹೋಗುವೆವು.
ಅರಬ್ಬಿ ವ್ಯಾಖ್ಯಾನಗಳು:
لَا یَمْلِكُوْنَ الشَّفَاعَةَ اِلَّا مَنِ اتَّخَذَ عِنْدَ الرَّحْمٰنِ عَهْدًا ۟ۘ
ಪರಮ ದಯಾಮಯನಾದ ಅಲ್ಲಾಹನ ಬಳಿ ಕರಾರನ್ನು ಪಡೆದುಕೊಂಡವನ ಹೊರತು ಅವರು ಯಾರು ಶಿಫಾರಸ್ಸಿನ ಅಧಿಕಾರವನ್ನು ಹೊಂದಿರುವುದಿಲ್ಲ.
ಅರಬ್ಬಿ ವ್ಯಾಖ್ಯಾನಗಳು:
وَقَالُوا اتَّخَذَ الرَّحْمٰنُ وَلَدًا ۟ؕ
ಪರಮ ದಯಾಮಯನಾದ ಅಲ್ಲಾಹನು ಪುತ್ರನನ್ನು ಹೊಂದಿದಾನೆAದು ಅವರು ಹೇಳುತ್ತಾರೆ.
ಅರಬ್ಬಿ ವ್ಯಾಖ್ಯಾನಗಳು:
لَقَدْ جِئْتُمْ شَیْـًٔا اِدًّا ۟ۙ
ಖಂಡಿತವಾಗಿಯು ನೀವು ಅತ್ಯಂತ ಘೋರ ಮಾತನ್ನಾಡಿರುವಿರಿ.
ಅರಬ್ಬಿ ವ್ಯಾಖ್ಯಾನಗಳು:
تَكَادُ السَّمٰوٰتُ یَتَفَطَّرْنَ مِنْهُ وَتَنْشَقُّ الْاَرْضُ وَتَخِرُّ الْجِبَالُ هَدًّا ۟ۙ
ಆಕಾಶಗಳು ಈ ಮಾತಿನ ನಿಮಿತ್ತ ಸಿಡಿದು ಬೀಳುವ, ಭೂಮಿಯು ಬಿರಿಯುವ, ಪರ್ವತಗಳು ಧ್ವಂಸಗೊಳ್ಳುವ ಸಮಯ ಸಮೀಪದಲ್ಲಿದೆ.
ಅರಬ್ಬಿ ವ್ಯಾಖ್ಯಾನಗಳು:
اَنْ دَعَوْا لِلرَّحْمٰنِ وَلَدًا ۟ۚ
ಏಕೆಂದರೆ ಅವರು ಪರಮ ದಯಾಮಯನಿಗೆ ಪುತ್ರನಿರುವನೆಂದು ವಾದಿಸುತ್ತಾರೆ.
ಅರಬ್ಬಿ ವ್ಯಾಖ್ಯಾನಗಳು:
وَمَا یَنْۢبَغِیْ لِلرَّحْمٰنِ اَنْ یَّتَّخِذَ وَلَدًا ۟ؕ
ಪುತ್ರನನ್ನು ನಿಶ್ಚಯಿಸಿಕೊಳ್ಳುವುದು ಪರಮ ದಯಾಮಯನಿಗೆ ಶೋಭಿಸುವುದಿಲ್ಲ.
ಅರಬ್ಬಿ ವ್ಯಾಖ್ಯಾನಗಳು:
اِنْ كُلُّ مَنْ فِی السَّمٰوٰتِ وَالْاَرْضِ اِلَّاۤ اٰتِی الرَّحْمٰنِ عَبْدًا ۟ؕ
ಭೂಮಿ ಆಕಾಶಗಳಲ್ಲಿರುವವರೆಲ್ಲರೂ ಅಲ್ಲಾಹನ ದಾಸರಾಗಿ ಹಾಜರಾಗುವವರಾಗಿದ್ದಾರೆ.
ಅರಬ್ಬಿ ವ್ಯಾಖ್ಯಾನಗಳು:
لَقَدْ اَحْصٰىهُمْ وَعَدَّهُمْ عَدًّا ۟ؕ
ವಾಸ್ತವದಲ್ಲಿ ಅವನು ಅವರೆಲ್ಲರನ್ನು ಆವರಿಸಿರುತ್ತಾನೆ ಮತ್ತು ಎಲ್ಲರನ್ನು ಎಣಿಸಿಯೂ ಇಟ್ಟಿರುವನು.
ಅರಬ್ಬಿ ವ್ಯಾಖ್ಯಾನಗಳು:
وَكُلُّهُمْ اٰتِیْهِ یَوْمَ الْقِیٰمَةِ فَرْدًا ۟
ಪುನರುತ್ಥಾನ ದಿನದಂದು ಅವರೆಲ್ಲರೂ ಅವನಲ್ಲಿಗೆ ಒಬ್ಬಂಟಿಗರಾಗಿ ಹಾಜರಾಗುವರು.
ಅರಬ್ಬಿ ವ್ಯಾಖ್ಯಾನಗಳು:
اِنَّ الَّذِیْنَ اٰمَنُوْا وَعَمِلُوا الصّٰلِحٰتِ سَیَجْعَلُ لَهُمُ الرَّحْمٰنُ وُدًّا ۟
ನಿಸ್ಸಂಶಯವಾಗಿಯು ಸತ್ಯವಿಶ್ವಾಸಿವಿರಿಸಿ, ಸತ್ಕರ್ಮಗಳನ್ನು ಕೈಗೊಂಡಿರುವರಿಗಾಗಿ ಪರಮ ದಯಾಮಯನಾದ ಅಲ್ಲಾಹನು (ಜನರ ಹೃದಯಗಳಲ್ಲಿ) ಪ್ರೀತಿಯನ್ನುಂಟು ಮಾಡಲಿರುವನು.
ಅರಬ್ಬಿ ವ್ಯಾಖ್ಯಾನಗಳು:
فَاِنَّمَا یَسَّرْنٰهُ بِلِسَانِكَ لِتُبَشِّرَ بِهِ الْمُتَّقِیْنَ وَتُنْذِرَ بِهٖ قَوْمًا لُّدًّا ۟
ನೀವು ಈ ಕುರ್‌ಆನಿನ ಮೂಲಕ ಭಯಭಕ್ತಿಯುಳ್ಳವರಿಗೆ ಶುಭವಾರ್ತೆ ನೀಡಲೆಂದೂ, ಜಗಳಗಂಟ ಜನಾಂಗಕ್ಕೆ ಎಚ್ಚರಿಕೆ ನೀಡಲೆಂದೂ ನಾವು ಇದನ್ನು ನಿಮ್ಮ ಭಾಷೆಯಲ್ಲಿ ಸರಳಗೊಳಿಸಿರುತ್ತೇವೆ.
ಅರಬ್ಬಿ ವ್ಯಾಖ್ಯಾನಗಳು:
وَكَمْ اَهْلَكْنَا قَبْلَهُمْ مِّنْ قَرْنٍ ؕ— هَلْ تُحِسُّ مِنْهُمْ مِّنْ اَحَدٍ اَوْ تَسْمَعُ لَهُمْ رِكْزًا ۟۠
ಮತ್ತು ನಾವು ಇವರಿಗಿಂತ ಮೊದಲು ಅದೆಷ್ಟೋ ಸಮುದಾಯಗಳನ್ನು ನಾಶಪಡಿಸಿರುತ್ತೇವೆ. ನೀವು ಅವರ ಪೈಕಿ ಯಾರನ್ನಾದರೂ ಕಾಣುತ್ತಿರುವಿರಾ? ಅಥವಾ ಅವರ ಮೆಲುಧ್ವನಿಯಾದರೂ ನಿಮ್ಮ ಕಿವಿಗೆ ಬೀಳುತ್ತಿದೆಯೇ?
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಸೂರ ಮರ್ಯಮ್
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - الترجمة الكنادية - بشير ميسوري - ಅನುವಾದಗಳ ವಿಷಯಸೂಚಿ

ترجمة معاني القرآن الكريم إلى اللغة الكنادية ترجمها بشير ميسوري.

ಮುಚ್ಚಿ