Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ಅಲ್- ಬಕರ   ಶ್ಲೋಕ:
فِی الدُّنْیَا وَالْاٰخِرَةِ ؕ— وَیَسْـَٔلُوْنَكَ عَنِ الْیَتٰمٰی ؕ— قُلْ اِصْلَاحٌ لَّهُمْ خَیْرٌ ؕ— وَاِنْ تُخَالِطُوْهُمْ فَاِخْوَانُكُمْ ؕ— وَاللّٰهُ یَعْلَمُ الْمُفْسِدَ مِنَ الْمُصْلِحِ ؕ— وَلَوْ شَآءَ اللّٰهُ لَاَعْنَتَكُمْ ؕ— اِنَّ اللّٰهَ عَزِیْزٌ حَكِیْمٌ ۟
ಇಹಲೋಕ ಹಾಗೂ ಪರಲೋಕದ ಕುರಿತು ಮತ್ತು ಅನಾಥರ ಕುರಿತು ಅವರು ನಿಮ್ಮೊಡನೆ ಕೇಳುತ್ತಾರೆ. ಹೇಳಿರಿ; ಅವರಿಗೆ ಹಿತವನ್ನು ಬಯಸುವುದು ಉತ್ತಮವಾಗಿದೆ ಮತ್ತು ನೀವು ಅವರನ್ನು (ಖರ್ಚುವೆಚ್ಚ ವ್ಯವಹಾರದಲ್ಲಿ) ತಮ್ಮೊಂದಿಗೆ ಸೇರಿಸಿಕೊಂಡರೆ ಅವರು ನಿಮ್ಮ ಸಹೋದರರಾಗಿರುತ್ತಾರೆ ಮತ್ತು ಕೆಟ್ಟ ಉದ್ದೇಶವಿರುವ ಮತ್ತು ಒಳಿತಿನ ಉದ್ದೇಶವಿರುವ ಎಲ್ಲರನ್ನೂ ಅಲ್ಲಾಹನು ಅರಿಯುತ್ತಾನೆ ಮತ್ತು ಅಲ್ಲಾಹನು ಉದ್ದೇಶಿಸಿರುತ್ತಿದ್ದರೆ ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದನು. ವಾಸ್ತವದಲ್ಲಿ ಅಲ್ಲಾಹನು ಪ್ರತಾಪಶಾಲಿಯು, ಯುಕ್ತಿಪೂರ್ಣನೂ ಆಗಿದ್ದಾನೆ.-
ಅರಬ್ಬಿ ವ್ಯಾಖ್ಯಾನಗಳು:
وَلَا تَنْكِحُوا الْمُشْرِكٰتِ حَتّٰی یُؤْمِنَّ ؕ— وَلَاَمَةٌ مُّؤْمِنَةٌ خَیْرٌ مِّنْ مُّشْرِكَةٍ وَّلَوْ اَعْجَبَتْكُمْ ۚ— وَلَا تُنْكِحُوا الْمُشْرِكِیْنَ حَتّٰی یُؤْمِنُوْا ؕ— وَلَعَبْدٌ مُّؤْمِنٌ خَیْرٌ مِّنْ مُّشْرِكٍ وَّلَوْ اَعْجَبَكُمْ ؕ— اُولٰٓىِٕكَ یَدْعُوْنَ اِلَی النَّارِ ۖۚ— وَاللّٰهُ یَدْعُوْۤا اِلَی الْجَنَّةِ وَالْمَغْفِرَةِ بِاِذْنِهٖ ۚ— وَیُبَیِّنُ اٰیٰتِهٖ لِلنَّاسِ لَعَلَّهُمْ یَتَذَكَّرُوْنَ ۟۠
ಓ ಸತ್ಯವಿಶ್ವಾಸಿಗಳೇ, ನೀವು ಬಹುದೇವಾರಾಧಕಿಯರನ್ನು ಅವರು ವಿಶ್ವಾಸಕೈಗೊಳ್ಳುವ ತನಕ ವಿವಾಹವಾಗದಿರಿ.-ಮತ್ತು ಸತ್ಯವಿಶ್ವಾಸಿಯಾದ-ದಾಸಿಯು ಬಹುದೇವಾರಾಧಕಿಗಿಂಲೂ ಉತ್ತಮಳಾಗಿದ್ದಾಳೆ. ಆಕೆ ನಿಮಗೆ ಹೆಚ್ಚು ಆಕರ್ಷಕಳಾಗಿ ಕಂಡರೂ ಸರಿಯೇ ಮತ್ತು ನೀವು ನಿಮ್ಮ ಸತ್ಯವಿಶ್ವಾಸಿ ಸ್ತಿçÃಯರನ್ನು ಬಹುದೇವಾರಾಧಕರಿಗೆ ಅವರು ವಿಶ್ವಾಸ ಕೈಗೊಳ್ಳುವ ತನಕ ವಿವಾಹ ಮಾಡಿಕೊಡಬೇಡಿರಿ ಮತ್ತು ಸತ್ಯವಿಶ್ವಾಸಿಯಾದ ಒಬ್ಬ ಗುಲಾಮನು ಒಬ್ಬ ಬಹುದೇವಾರಾಧಕನಿಗಿಂತಲೂ ಉತ್ತಮನು ಮತ್ತು ಅವನು ನಿಮಗೆ ಹೆಚ್ಚು ಆಕರ್ಷಕನಾಗಿ ಕಂಡರೂ ಸರಿಯೇ ಅವರು ನರಕದೆಡೆಗೆ ಕರೆಯುತ್ತಿದ್ದಾರೆ ಮತ್ತು ಅಲ್ಲಾಹನು ತನ್ನ ಆದೇಶದಿಂದ ಸ್ವರ್ಗ ಮತ್ತು ಕ್ಷಮೆಯೆಡೆಗೆ ಕರೆಯುತ್ತಿದ್ದಾನೆ. ಮತ್ತು ಜನರು ವಿವೇಚಿಸಿಕೊಳ್ಳಲೆಂದು ಅವನು ತನ್ನ ದೃಷ್ಟಾಂತಗಳನ್ನು ಅವರಿಗೆ ವಿವರಿಸಿಕೊಡುತ್ತಾನೆ.
ಅರಬ್ಬಿ ವ್ಯಾಖ್ಯಾನಗಳು:
وَیَسْـَٔلُوْنَكَ عَنِ الْمَحِیْضِ ؕ— قُلْ هُوَ اَذًی ۙ— فَاعْتَزِلُوا النِّسَآءَ فِی الْمَحِیْضِ ۙ— وَلَا تَقْرَبُوْهُنَّ حَتّٰی یَطْهُرْنَ ۚ— فَاِذَا تَطَهَّرْنَ فَاْتُوْهُنَّ مِنْ حَیْثُ اَمَرَكُمُ اللّٰهُ ؕ— اِنَّ اللّٰهَ یُحِبُّ التَّوَّابِیْنَ وَیُحِبُّ الْمُتَطَهِّرِیْنَ ۟
(ಓ ಪೈಗಂಬರರೇ) ಜನರು ಆರ್ತವದ (ಋತುಸ್ರಾವದ) ಕುರಿತು ನಿಮ್ಮೊಡನೆ ಕೇಳುತ್ತಾರೆ. ಹೇಳಿರಿ ಅದೊಂದು ಮಾಲಿನ್ಯತೆಯಾಗಿದೆ. ಆದ್ದರಿಂದ ಆರ್ತವಕಾಲದಲ್ಲಿ ಸ್ರೀಯರಿಂದ ದೂರವಿರಿ ಮತ್ತು ಅವರು ಶುದ್ಧರಾಗುವವರೆಗೂ ಅವರನ್ನು ಸಮೀಪಿಸಬೇಡಿರಿ. ಇನ್ನು ಅವರು ಶುದ್ಧರಾದರೆ ಅಲ್ಲಾಹು ನಿಮಗೆ ಅನುಮತಿಸಿದ ಕಡೆಯಿಂದ ಅವರ ಬಳಿಗೆ ಹೋಗಿರಿ. ಅಲ್ಲಾಹು ಪಶ್ಚಾತ್ತಾಪ ಹೊಂದುವವರನ್ನೂ, ಶುದ್ಧರಾಗಿರುವವರನ್ನೂ ಇಷ್ಟ ಪಡುತ್ತಾನೆ.
ಅರಬ್ಬಿ ವ್ಯಾಖ್ಯಾನಗಳು:
نِسَآؤُكُمْ حَرْثٌ لَّكُمْ ۪— فَاْتُوْا حَرْثَكُمْ اَنّٰی شِئْتُمْ ؗ— وَقَدِّمُوْا لِاَنْفُسِكُمْ ؕ— وَاتَّقُوا اللّٰهَ وَاعْلَمُوْۤا اَنَّكُمْ مُّلٰقُوْهُ ؕ— وَبَشِّرِ الْمُؤْمِنِیْنَ ۟
ನಿಮ್ಮ ಪತ್ನಿಯರುನಿಮಗೆ ಕೃಷಿಯಾಗಿದ್ದಾರೆ. ಆದ್ದರಿಂದ ನಿಮ್ಮ ಕೃಷಿಗೆ ನೀವು ಇಚ್ಛಿಸುವಂತೆ ಹೋಗಿರಿ ಮತ್ತು ನೀವು ಸ್ವತಃ ನಿಮಗಾಗಿ (ಸತ್ಕರ್ಮವನ್ನು) ಮುಂಗಡವಾಗಿ ಕಳುಹಿಸಿರಿ ಮತ್ತು ಅಲ್ಲಾಹನನ್ನು ಭಯಪಡುತ್ತಿರಿ ಹಾಗೂ ನೀವು ಅವನನ್ನು ಭೇಟಿಯಾಗಲಿರುವಿರೆಂದು ಅರಿತುಕೊಳ್ಳಿರಿ ಮತ್ತು ಓ ಪೈಗಂಬರÀರೇ ನೀವು ಸತ್ಯವಿಶ್ವಾಸಿಗಳಿಗೆ ಸುವಾರ್ತೆ ನೀಡಿರಿ.
ಅರಬ್ಬಿ ವ್ಯಾಖ್ಯಾನಗಳು:
وَلَا تَجْعَلُوا اللّٰهَ عُرْضَةً لِّاَیْمَانِكُمْ اَنْ تَبَرُّوْا وَتَتَّقُوْا وَتُصْلِحُوْا بَیْنَ النَّاسِ ؕ— وَاللّٰهُ سَمِیْعٌ عَلِیْمٌ ۟
ಪುಣ್ಯಕಾರ್ಯ ಮಾಡುವುದು, ಭಯ ಭಕ್ತಿ ಹೊಂದುವುದು ಹಾಗೂ ಜನರ ನಡುವೆ ಸುಧಾರಣೆ ಮಾಡುವುದನ್ನು ತೊರೆಯಲಿಕ್ಕಾಗಿ ನೀವು ಮಾಡುವ ಶಪಥಗಳಿಗೆ ಅಲ್ಲಾಹನ ನಾಮವನ್ನು ಉಪಯೋಗಿಸಬೇಡಿರಿ. ಅಲ್ಲಾಹನು ಸರ್ವವನ್ನಾಲಿಸುವವನೂ, ಸರ್ವಜ್ಞಾನಿಯೂ ಆಗಿದ್ದಾನೆ.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಅಲ್- ಬಕರ
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ - ಅನುವಾದಗಳ ವಿಷಯಸೂಚಿ

ಅನುವಾದ - ಶೇಖ್ ಬಶೀರ್ ಮೈಸೂರಿ. ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ