ಪವಿತ್ರ ಕುರ್‌ಆನ್ ಅರ್ಥಾನುವಾದ - الترجمة الكنادية - بشير ميسوري * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ಸೂರ ಅಲ್ -ಮುದ್ದಸ್ಸಿರ್   ಶ್ಲೋಕ:

ಸೂರ ಅಲ್ -ಮುದ್ದಸ್ಸಿರ್

یٰۤاَیُّهَا الْمُدَّثِّرُ ۟ۙ
ಓ ಕಂಬಳಿ ಹೊದ್ದುಕೊಂಡವರೇ,
ಅರಬ್ಬಿ ವ್ಯಾಖ್ಯಾನಗಳು:
قُمْ فَاَنْذِرْ ۟ۙ
ಎದ್ದೇಳಿ ಮತ್ತು (ಜನರಿಗೆ) ಎಚ್ಚರಿಕೆ ನೀಡಿರಿ.
ಅರಬ್ಬಿ ವ್ಯಾಖ್ಯಾನಗಳು:
وَرَبَّكَ فَكَبِّرْ ۟ۙ
ತಮ್ಮ ಪ್ರಭುವಿನ ಹಿರಿಮೆಯನ್ನು ಕೊಂಡಾಡಿರಿ.
ಅರಬ್ಬಿ ವ್ಯಾಖ್ಯಾನಗಳು:
وَثِیَابَكَ فَطَهِّرْ ۟ۙ
ನಿಮ್ಮ ಉಡುಪುಗಳನ್ನು ಶುಚಿಯಾಗಿಡಿರಿ.
ಅರಬ್ಬಿ ವ್ಯಾಖ್ಯಾನಗಳು:
وَالرُّجْزَ فَاهْجُرْ ۟ۙ
ಮಾಲಿನ್ಯದಿಂದ ದೂರವಿರಿ.
ಅರಬ್ಬಿ ವ್ಯಾಖ್ಯಾನಗಳು:
وَلَا تَمْنُنْ تَسْتَكْثِرُ ۟ۙ
ಹೆಚ್ಚು ಪಡೆಯುವ ಉದ್ದೇಶದಿಂದ ಉಪಕಾರ ಮಾಡದಿರಿ.
ಅರಬ್ಬಿ ವ್ಯಾಖ್ಯಾನಗಳು:
وَلِرَبِّكَ فَاصْبِرْ ۟ؕ
ನಿಮ್ಮ ಪ್ರಭುವಿಗಾಗಿ ಸಹನೆವಹಿಸಿರಿ.
ಅರಬ್ಬಿ ವ್ಯಾಖ್ಯಾನಗಳು:
فَاِذَا نُقِرَ فِی النَّاقُوْرِ ۟ۙ
ಕಹಳೆಯನ್ನು (ಮತ್ತೊಮ್ಮೆ) ಮೊಳಗಿಸಿದಾಗ.
ಅರಬ್ಬಿ ವ್ಯಾಖ್ಯಾನಗಳು:
فَذٰلِكَ یَوْمَىِٕذٍ یَّوْمٌ عَسِیْرٌ ۟ۙ
ಆ ಪ್ರಳಯ ದಿನವು ಅತ್ಯಂತ ಕಠಿಣ ದಿನವಾಗಿರುವುದು
ಅರಬ್ಬಿ ವ್ಯಾಖ್ಯಾನಗಳು:
عَلَی الْكٰفِرِیْنَ غَیْرُ یَسِیْرٍ ۟
ಸತ್ಯನಿಷೇಧಿಗಳಿಗೆ ಅದು ಸುಲಭವಾಗಿರಲಾರದು.
ಅರಬ್ಬಿ ವ್ಯಾಖ್ಯಾನಗಳು:
ذَرْنِیْ وَمَنْ خَلَقْتُ وَحِیْدًا ۟ۙ
ನನ್ನನ್ನು ಮತ್ತು ನಾನು, ಒಬ್ಬಂಟಿಗನನ್ನಾಗಿ ಸೃಷ್ಟಿಸಿದವನನ್ನು (ಪ್ರತಿಕಾರ ಪಡೆಯಲು) ಬಿಟ್ಟುಬಿಡಿರಿ.
ಅರಬ್ಬಿ ವ್ಯಾಖ್ಯಾನಗಳು:
وَّجَعَلْتُ لَهٗ مَالًا مَّمْدُوْدًا ۟ۙ
ಅವನಿಗೆ ನಾನು ಧಾರಾಳ ಸಂಪತ್ತನ್ನು ಕೊಟ್ಟಿರುವೆನು.
ಅರಬ್ಬಿ ವ್ಯಾಖ್ಯಾನಗಳು:
وَّبَنِیْنَ شُهُوْدًا ۟ۙ
ಮತ್ತು ಸದಾ ಅವನ ಜೊತೆಗೆ ಸನ್ನದ್ಧರಾದ ಪುತ್ರರನ್ನು ಸಹ.
ಅರಬ್ಬಿ ವ್ಯಾಖ್ಯಾನಗಳು:
وَّمَهَّدْتُّ لَهٗ تَمْهِیْدًا ۟ۙ
ನಾನು ಅವನಿಗೆ ಧಾರಾಳ ಅನುಕೂಲತೆಗಳನ್ನು ದÀಯಪಾಲಿಸಿರುವೆನು.
ಅರಬ್ಬಿ ವ್ಯಾಖ್ಯಾನಗಳು:
ثُمَّ یَطْمَعُ اَنْ اَزِیْدَ ۟ۙ
ಇಷ್ಟಿದ್ದೂ ನಾನು ಇನ್ನಷ್ಟು ನೀಡಬೇಕೆಂದು ಅವನು ಹಂಬಲಿಸುತ್ತಿರುವನು.
ಅರಬ್ಬಿ ವ್ಯಾಖ್ಯಾನಗಳು:
كَلَّا ؕ— اِنَّهٗ كَانَ لِاٰیٰتِنَا عَنِیْدًا ۟ؕ
ಖಂಡಿತಇಲ್ಲ ಅವನು ನಮ್ಮ ಸೂಕ್ತಿಗಳ ವಿರೋಧಿಯಾಗಿದ್ದಾನೆ.
ಅರಬ್ಬಿ ವ್ಯಾಖ್ಯಾನಗಳು:
سَاُرْهِقُهٗ صَعُوْدًا ۟ؕ
ಸಧ್ಯದಲ್ಲೇ ನಾನು ಅವನನ್ನು ಒಂದು ಪ್ರಯಾಸಕರವಾದ ಏರುವಿಕೆಗೆ ಏರಿಸುವೆನು.
ಅರಬ್ಬಿ ವ್ಯಾಖ್ಯಾನಗಳು:
اِنَّهٗ فَكَّرَ وَقَدَّرَ ۟ۙ
ಅವನು ಯೋಚಿಸಿದನು ಮತ್ತು ನರ‍್ಧರಿಸಿದನು.
ಅರಬ್ಬಿ ವ್ಯಾಖ್ಯಾನಗಳು:
فَقُتِلَ كَیْفَ قَدَّرَ ۟ۙ
ಅವನಿಗೆ ನಾಶವಿರಲಿ, ಅವನು ಹೇಗೆ ನರ‍್ಧರಿಸಿದನು,
ಅರಬ್ಬಿ ವ್ಯಾಖ್ಯಾನಗಳು:
ثُمَّ قُتِلَ كَیْفَ قَدَّرَ ۟ۙ
ಪುನಃ ಅವನಿಗೆ ನಾಶವಿರಲಿ. ಅವನು ಹೇಗೆ ನರ‍್ಧರಿಸಿದನು,
ಅರಬ್ಬಿ ವ್ಯಾಖ್ಯಾನಗಳು:
ثُمَّ نَظَرَ ۟ۙ
ಅವನು ಪುನಃ (ತನ್ನ ಸಂಗಡಿಗರಕಡೆಗೆ) ನೋಡಿದನು.
ಅರಬ್ಬಿ ವ್ಯಾಖ್ಯಾನಗಳು:
ثُمَّ عَبَسَ وَبَسَرَ ۟ۙ
ತರುವಾಯ ಅವನು ಮುಖ ಗಂಟಿಕ್ಕಿಕೊಂಡನು ಮತ್ತು ಮುಖವನ್ನು ಸಿಂಡರಿಸಿಕೊಂಡನು.
ಅರಬ್ಬಿ ವ್ಯಾಖ್ಯಾನಗಳು:
ثُمَّ اَدْبَرَ وَاسْتَكْبَرَ ۟ۙ
ಬಳಿಕ ಅವನು ಹಿಂದೆ ಸರಿದನು ಮತ್ತು ಅಹಂಕಾರ ತೋರಿದನು.
ಅರಬ್ಬಿ ವ್ಯಾಖ್ಯಾನಗಳು:
فَقَالَ اِنْ هٰذَاۤ اِلَّا سِحْرٌ یُّؤْثَرُ ۟ۙ
ಮತ್ತು ಹೇಳಿದನು; ಇದಂತು ಹಿಂದಿನಿಂದ ನಡೆದು ಬರುತ್ತಿರುವ ಜಾದೂ ಅಲ್ಲದೇ ಇನ್ನೇನೂ ಅಲ್ಲ.
ಅರಬ್ಬಿ ವ್ಯಾಖ್ಯಾನಗಳು:
اِنْ هٰذَاۤ اِلَّا قَوْلُ الْبَشَرِ ۟ؕ
ಇದು (ಕುರ್ಆನ್) ಮನುಷ್ಯನ ಮಾತಲ್ಲದೆ ಇನ್ನೇನೂ ಅಲ್ಲ.
ಅರಬ್ಬಿ ವ್ಯಾಖ್ಯಾನಗಳು:
سَاُصْلِیْهِ سَقَرَ ۟
ಸಧ್ಯವೇ ನಾನು ಅವನನ್ನು ನರಕಾಗ್ನಿಗೆ ಹಾಕುವೆನು.
ಅರಬ್ಬಿ ವ್ಯಾಖ್ಯಾನಗಳು:
وَمَاۤ اَدْرٰىكَ مَا سَقَرُ ۟ؕ
ನರಕಾಗ್ನಿ ಏನೆಂದು ನಿಮಗೇನು ಗೊತ್ತು ?
ಅರಬ್ಬಿ ವ್ಯಾಖ್ಯಾನಗಳು:
لَا تُبْقِیْ وَلَا تَذَرُ ۟ۚ
ಅದು ಬಾಕಿ ಉಳಿಸುವುದೂ ಇಲ್ಲ ಬಿಡುವುದೂ ಇಲ್ಲ.
ಅರಬ್ಬಿ ವ್ಯಾಖ್ಯಾನಗಳು:
لَوَّاحَةٌ لِّلْبَشَرِ ۟ۚ
ಅದು ರ‍್ಮವನ್ನು ಸುಟ್ಟು ಹಾಕುವಂತದ್ದಾಗಿದೆ.
ಅರಬ್ಬಿ ವ್ಯಾಖ್ಯಾನಗಳು:
عَلَیْهَا تِسْعَةَ عَشَرَ ۟ؕ
ಅದರಲ್ಲಿ ಹತ್ತೊಂಬತ್ತು ಮಲಕ್ಗಳು ನಿಯೋಗಿಸಲ್ಪಟ್ಟಿದ್ದಾರೆ.
ಅರಬ್ಬಿ ವ್ಯಾಖ್ಯಾನಗಳು:
وَمَا جَعَلْنَاۤ اَصْحٰبَ النَّارِ اِلَّا مَلٰٓىِٕكَةً ۪— وَّمَا جَعَلْنَا عِدَّتَهُمْ اِلَّا فِتْنَةً لِّلَّذِیْنَ كَفَرُوْا ۙ— لِیَسْتَیْقِنَ الَّذِیْنَ اُوْتُوا الْكِتٰبَ وَیَزْدَادَ الَّذِیْنَ اٰمَنُوْۤا اِیْمَانًا وَّلَا یَرْتَابَ الَّذِیْنَ اُوْتُوا الْكِتٰبَ وَالْمُؤْمِنُوْنَ ۙ— وَلِیَقُوْلَ الَّذِیْنَ فِیْ قُلُوْبِهِمْ مَّرَضٌ وَّالْكٰفِرُوْنَ مَاذَاۤ اَرَادَ اللّٰهُ بِهٰذَا مَثَلًا ؕ— كَذٰلِكَ یُضِلُّ اللّٰهُ مَنْ یَّشَآءُ وَیَهْدِیْ مَنْ یَّشَآءُ ؕ— وَمَا یَعْلَمُ جُنُوْدَ رَبِّكَ اِلَّا هُوَ ؕ— وَمَا هِیَ اِلَّا ذِكْرٰی لِلْبَشَرِ ۟۠
ನರಕದ ಕಾವಲುಗಾರರನ್ನಾಗಿ ನಾವು ಕೇವಲ ಮಲಕ್ಗಳನ್ನು ನಿಯೋಗಿಸುತ್ತೇವೆ ಮತ್ತು ಅವರ ಸಂಖ್ಯೆಯನ್ನು ಸತ್ಯನಿಷೇಧಿಗಳ ಪಾಲಿಗೆ ಪರೀಕ್ಷಾ ಸಾಧನವನ್ನಾಗಿ ನಿಶ್ಚಯಿಸಿದ್ದೇವೆ, ಇದು ಗ್ರಂಥ ನೀಡಲಾದವರು ನಂಬಲೆಂದೂ (ಅವರ ಗ್ರಂಥದಲ್ಲೂ ಇದೇ ಸಂಖ್ಯೆ ಇದೆ) ಸತ್ಯವಿಶ್ವಾಸಿಗಳ ವಿಶ್ವಾಸವು ವೃದ್ಧಿಸಲೆಂದೂ, ಗ್ರಂಥ ನೀಡಲಾದವರು ಮತ್ತು ಸತ್ಯವಿಶ್ವಾಸಿಗಳು ಕುರ್ಆನಿನಲ್ಲಿ ಸಂದೇಹ ಪಡದಿರಲೆಂದು ಮತ್ತು ಹೃದಯದಲ್ಲಿ (ಕಾಪಟ್ಯದ) ರೋಗವಿದ್ದವರು ಮತ್ತು ಸತ್ಯನಿಷೇಧಿಗಳು “ಈ ಮಾತಿನ ಮೂಲಕ ಅಲ್ಲಾಹನ ಉದ್ದೇಶವೇನು?” ಎಂದು ಹೇಳಲೆಂದಾಗಿದೆ, ಇದೇ ಪ್ರಕಾರ ಅಲ್ಲಾಹನು (ಒಂದೇ ಮಾತಿನಿಂದ) ತಾನಿಚ್ಛಿಸುವವರನ್ನು ದಾರಿಗೆಡಿಸುತ್ತಾನೆ ಮತ್ತು ತಾನಿಚ್ಛಿಸುವವರನ್ನು ಸನ್ಮರ‍್ಗದಲ್ಲಿ ಮುನ್ನಡೆಸುತ್ತಾನೆ. ನಿನ್ನ ಪ್ರಭುವಿನ ಸೈನ್ಯಗಳನ್ನು ಅವನ ಹೊರತು ಇನ್ನಾರೂ ಅರಿಯಲಾರರು, ಇದು ಸಕಲ ಮಾನವರಿಗೆ ಸ್ಪಷ್ಟ ಉಪದೇಶವಲ್ಲದೇ ಇನ್ನೇನೂ ಅಲ್ಲ.
ಅರಬ್ಬಿ ವ್ಯಾಖ್ಯಾನಗಳು:
كَلَّا وَالْقَمَرِ ۟ۙ
ಅನುಮಾನವೇ ಇಲ್ಲ, ಚಂದ್ರನ ಮೇಲಾಣೆ.
ಅರಬ್ಬಿ ವ್ಯಾಖ್ಯಾನಗಳು:
وَالَّیْلِ اِذْ اَدْبَرَ ۟ۙ
ರಾತ್ರಿಯು ಮರಳುವಾಗಿನ ಆಣೆ.
ಅರಬ್ಬಿ ವ್ಯಾಖ್ಯಾನಗಳು:
وَالصُّبْحِ اِذَاۤ اَسْفَرَ ۟ۙ
ಪ್ರಭಾತದಾಣೆ, ಅದು ಪ್ರಕಾಶಮಾನವಾಗುವಾಗ
ಅರಬ್ಬಿ ವ್ಯಾಖ್ಯಾನಗಳು:
اِنَّهَا لَاِحْدَی الْكُبَرِ ۟ۙ
ಖಂಡಿತವಾಗಿಯೂ (ಆ ನರಕಾಗ್ನಿ) ಮಹಾ ವಿಷಯಗಳಲ್ಲೊಂದಾಗಿದೆ,
ಅರಬ್ಬಿ ವ್ಯಾಖ್ಯಾನಗಳು:
نَذِیْرًا لِّلْبَشَرِ ۟ۙ
ಮಾನವರಿಗೆ ಎಚ್ಚರಿಕೆ ನೀಡುವಂತಹದು.
ಅರಬ್ಬಿ ವ್ಯಾಖ್ಯಾನಗಳು:
لِمَنْ شَآءَ مِنْكُمْ اَنْ یَّتَقَدَّمَ اَوْ یَتَاَخَّرَ ۟ؕ
ನಿಮ್ಮ ಪೈಕಿ (ಸನ್ಮರ‍್ಗದಲ್ಲಿ) ಮುಂದೆ ಸಾಗಲು ಅಥವ ಹಿಂದೆ ಸರಿಯಲು ಇಚ್ಛಿಸುವವರಿಗೆ.
ಅರಬ್ಬಿ ವ್ಯಾಖ್ಯಾನಗಳು:
كُلُّ نَفْسٍ بِمَا كَسَبَتْ رَهِیْنَةٌ ۟ۙ
ಪ್ರತಿಯೊಬ್ಬ ವ್ಯಕ್ತಿಯೂ ತನ್ನ ರ‍್ಮಗಳ ಬದಲಿಗೆ ಅಡವಿಸಲ್ಪಟ್ಟಿದ್ದಾನೆ.
ಅರಬ್ಬಿ ವ್ಯಾಖ್ಯಾನಗಳು:
اِلَّاۤ اَصْحٰبَ الْیَمِیْنِ ۟ؕۛ
ಆದರೆ ಬಲಗಡೆಯವರ ಹೊರತು
ಅರಬ್ಬಿ ವ್ಯಾಖ್ಯಾನಗಳು:
فِیْ جَنّٰتٍ ۛ۫— یَتَسَآءَلُوْنَ ۟ۙ
ಅವರು ಸ್ರ‍್ಗೋದ್ಯಾನಗಳಲ್ಲಿ ಪರಸ್ಪರ ಪ್ರಶ್ನಿಸುವರು.
ಅರಬ್ಬಿ ವ್ಯಾಖ್ಯಾನಗಳು:
عَنِ الْمُجْرِمِیْنَ ۟ۙ
ಅಪರಾಧಿಗಳ ಕುರಿತು
ಅರಬ್ಬಿ ವ್ಯಾಖ್ಯಾನಗಳು:
مَا سَلَكَكُمْ فِیْ سَقَرَ ۟
ನಿಮ್ಮನ್ನು ನರಕಕ್ಕೆ ಒಯ್ದುದ್ದು ಯಾವುದು ?
ಅರಬ್ಬಿ ವ್ಯಾಖ್ಯಾನಗಳು:
قَالُوْا لَمْ نَكُ مِنَ الْمُصَلِّیْنَ ۟ۙ
ಅವರು ಉತ್ತರಿಸುವರು; ನಾವು ನಮಾಜ್ ಮಾಡುವವರಲ್ಲಾಗಿರಲಿಲ್ಲ.
ಅರಬ್ಬಿ ವ್ಯಾಖ್ಯಾನಗಳು:
وَلَمْ نَكُ نُطْعِمُ الْمِسْكِیْنَ ۟ۙ
ಮತ್ತು ನಾವು ನರ‍್ಗತಿಕರಿಗೆ ಉಣಿಸುತ್ತಿರಲಿಲ್ಲ.
ಅರಬ್ಬಿ ವ್ಯಾಖ್ಯಾನಗಳು:
وَكُنَّا نَخُوْضُ مَعَ الْخَآىِٕضِیْنَ ۟ۙ
ನಾವು ಸತ್ಯದ ವಿರುದ್ಧ ರ‍್ಕಿಸುವವರ ಜೊತೆ ಸೇರಿರ‍್ಕದಲ್ಲಿ ತಲ್ಲೀನರಾಗಿರುತ್ತಿದ್ದೆವು.
ಅರಬ್ಬಿ ವ್ಯಾಖ್ಯಾನಗಳು:
وَكُنَّا نُكَذِّبُ بِیَوْمِ الدِّیْنِ ۟ۙ
ಹಾಗು ನಾವು ಪ್ರತಿಫಲ ದಿನವನ್ನು ನಿಷೇಧಿಸುತ್ತಿದ್ದೆವು.
ಅರಬ್ಬಿ ವ್ಯಾಖ್ಯಾನಗಳು:
حَتّٰۤی اَتٰىنَا الْیَقِیْنُ ۟ؕ
ಕೊನೆಗೆ ಖಚಿತವಾದುದು(ಮರಣವು) ನಮಗೆ ಬಂದುಬಿಟ್ಟಿತು.
ಅರಬ್ಬಿ ವ್ಯಾಖ್ಯಾನಗಳು:
فَمَا تَنْفَعُهُمْ شَفَاعَةُ الشّٰفِعِیْنَ ۟ؕ
ಶಿಫಾರಸ್ಸು ಮಾಡುವವರ ಶಿಫಾರಸ್ಸು ಅಂದು ಅವರಿಗೆ ಯಾವ ಪ್ರಯೋಜನ ನೀಡದು.
ಅರಬ್ಬಿ ವ್ಯಾಖ್ಯಾನಗಳು:
فَمَا لَهُمْ عَنِ التَّذْكِرَةِ مُعْرِضِیْنَ ۟ۙ
ಅವರಿಗೇನಾಗಿಬಿಟ್ಟಿದೆ ? ಅವರು ಉದ್ಭೋಧೆಯಿಂದ ವಿಮುಖರಾಗುತ್ತಿದ್ದಾರೆ!
ಅರಬ್ಬಿ ವ್ಯಾಖ್ಯಾನಗಳು:
كَاَنَّهُمْ حُمُرٌ مُّسْتَنْفِرَةٌ ۟ۙ
50&51
ಅರಬ್ಬಿ ವ್ಯಾಖ್ಯಾನಗಳು:
فَرَّتْ مِنْ قَسْوَرَةٍ ۟ؕ
ಅವರ ಅವಸ್ಥೆಯು ಸಿಂಹವನ್ನು ಕಂಡು ಹೆದರಿ ಬೆಚ್ಚಿಬಿದ್ದು ಓಡಿಹೋದ ಕಾಡು ಕತ್ತೆಗಳೆಂಬಂತಿದೆ.
ಅರಬ್ಬಿ ವ್ಯಾಖ್ಯಾನಗಳು:
بَلْ یُرِیْدُ كُلُّ امْرِئٍ مِّنْهُمْ اَنْ یُّؤْتٰی صُحُفًا مُّنَشَّرَةً ۟ۙ
ವಾಸ್ತವದಲ್ಲಿ ಅವರ ಪೈಕಿ ಪ್ರತಿಯೊಬ್ಬನೂ ತನಗೆ ನೇರವಾಗಿ ತೆರೆದ ದೈವಿಕ ಗ್ರಂಥಗಳನ್ನು ನೀಡಬೇಕೆಂದು ಬಯಸುತ್ತಾನೆ.
ಅರಬ್ಬಿ ವ್ಯಾಖ್ಯಾನಗಳು:
كَلَّا ؕ— بَلْ لَّا یَخَافُوْنَ الْاٰخِرَةَ ۟ؕ
ಖಂಡಿತ ಇದು ಸಾಧ್ಯವಿಲ್ಲ (ವಾಸ್ತವದಲ್ಲಿ) ಅವರು ಅಂತ್ಯ ದಿನವನ್ನು ಭಯಪಡುವುದಿಲ್ಲ.
ಅರಬ್ಬಿ ವ್ಯಾಖ್ಯಾನಗಳು:
كَلَّاۤ اِنَّهٗ تَذْكِرَةٌ ۟ۚ
ವಾಸ್ತವವೇನೆಂದರೆ ಇದು (ಕುರ್ಆನ್) ಒಂದು ಉಪದೇಶವಾಗಿದೆ.
ಅರಬ್ಬಿ ವ್ಯಾಖ್ಯಾನಗಳು:
فَمَنْ شَآءَ ذَكَرَهٗ ۟ؕ
ಆದ್ದರಿಂದ ಇಚ್ಛಿಸುವವನು ಇದರಿಂದ ಉದ್ಭೋದೆ ಪಡೆಯಲಿ.
ಅರಬ್ಬಿ ವ್ಯಾಖ್ಯಾನಗಳು:
وَمَا یَذْكُرُوْنَ اِلَّاۤ اَنْ یَّشَآءَ اللّٰهُ ؕ— هُوَ اَهْلُ التَّقْوٰی وَاَهْلُ الْمَغْفِرَةِ ۟۠
ಅಲ್ಲಾಹನು ಇಚ್ಛಿಸದೇ ಅವರು (ಸತ್ಯನಿಷೇಧಿಗಳು) ಉದ್ಭೋದೆ ಪಡೆಯಲಾರರು. ಭಯ ಭಕ್ತಿಯಿರಿಸಿಕೊಳ್ಳಲು ಮತ್ತು ಕ್ಷಮೆ ನೀಡಲೂ ಅವನೇ ರ‍್ಹನಾಗಿದ್ದಾನೆ.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಸೂರ ಅಲ್ -ಮುದ್ದಸ್ಸಿರ್
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - الترجمة الكنادية - بشير ميسوري - ಅನುವಾದಗಳ ವಿಷಯಸೂಚಿ

ترجمة معاني القرآن الكريم إلى اللغة الكنادية ترجمها بشير ميسوري.

ಮುಚ್ಚಿ