ಪವಿತ್ರ ಕುರ್‌ಆನ್ ಅರ್ಥಾನುವಾದ - الترجمة الكنادية - بشير ميسوري * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ಸೂರ ಅಲ್ -ಅಅ್ ಲಾ   ಶ್ಲೋಕ:

ಸೂರ ಅಲ್ -ಅಅ್ ಲಾ

سَبِّحِ اسْمَ رَبِّكَ الْاَعْلَی ۟ۙ
ನೀವು ತಮ್ಮ ಅತ್ತುö್ಯನ್ನತನಾದ ಪ್ರಭುವಿನ ನಾಮದ ಪಾವಿತ್ರö್ಯವನ್ನು ಸ್ತುತಿಸಿರಿ.
ಅರಬ್ಬಿ ವ್ಯಾಖ್ಯಾನಗಳು:
الَّذِیْ خَلَقَ فَسَوّٰی ۟
ಅವನು (ಸಕಲವನ್ನು) ಸೃಷ್ಟಿಸಿದನು ಮತ್ತು (ಸಂತುಲಿತಗೊಳಿಸಿದನು.
ಅರಬ್ಬಿ ವ್ಯಾಖ್ಯಾನಗಳು:
وَالَّذِیْ قَدَّرَ فَهَدٰی ۟
ಅವನು ವಿಧಿಯನ್ನು ನಿಶ್ಚಯಿಸಿದನು ಅನಂತರ (ಅವುಗಳಿಗೆ ತಕ್ಕ) ಮರ‍್ಗರ‍್ಶನ ಮಾಡಿದನು.
ಅರಬ್ಬಿ ವ್ಯಾಖ್ಯಾನಗಳು:
وَالَّذِیْۤ اَخْرَجَ الْمَرْعٰی ۟
ಅವನೇ ಭೂಮಿಯಿಂದ ಮೇವನ್ನು ಹೊರತಂದನು.
ಅರಬ್ಬಿ ವ್ಯಾಖ್ಯಾನಗಳು:
فَجَعَلَهٗ غُثَآءً اَحْوٰی ۟ؕ
ಬಳಿಕ ಅದನ್ನು ಕರಿಯ ಕಸಕಡ್ಡಿಯನ್ನಾಗಿ ಮಾಡಿದನು.
ಅರಬ್ಬಿ ವ್ಯಾಖ್ಯಾನಗಳು:
سَنُقْرِئُكَ فَلَا تَنْسٰۤی ۟ۙ
ಓ ಪೈಗಂಬರರೇ ನಾವು ನಿಮಗೆ (ಕುರ್ಆನನ್ನು) ಓದಿಕೊಡುವೆವು. ಬಳಿಕ ನೀವು ಮರೆಯಲಾರಿರಿ.
ಅರಬ್ಬಿ ವ್ಯಾಖ್ಯಾನಗಳು:
اِلَّا مَا شَآءَ اللّٰهُ ؕ— اِنَّهٗ یَعْلَمُ الْجَهْرَ وَمَا یَخْفٰی ۟ؕ
ಆದರೆ ಅಲ್ಲಾಹನು ಇಚ್ಛಿಸುವುದರ ಹೊರತು. ಅವನು ಗೋಚರ ಮತ್ತು ಅಗೋಚರವನ್ನು ಬಲ್ಲವನು.
ಅರಬ್ಬಿ ವ್ಯಾಖ್ಯಾನಗಳು:
وَنُیَسِّرُكَ لِلْیُسْرٰی ۟ۚۖ
ನಾವು ನಿಮಗೆ ಸುಲಭ ಮರ‍್ಗವನ್ನು ಸುಗಮಗೊಳಿಸುವೆವು.
ಅರಬ್ಬಿ ವ್ಯಾಖ್ಯಾನಗಳು:
فَذَكِّرْ اِنْ نَّفَعَتِ الذِّكْرٰی ۟ؕ
ಆದ್ದರಿಂದ ಉಪದೇಶವು ಪ್ರಯೋಜನಕಾರಿ ಆಗುವುದಾದರೆ ನೀವು ಉಪದೇಶ ನೀಡಿರಿ.
ಅರಬ್ಬಿ ವ್ಯಾಖ್ಯಾನಗಳು:
سَیَذَّكَّرُ مَنْ یَّخْشٰی ۟ۙ
ಭಯಭಕ್ತಿಯುಳ್ಳವನು ಉಪದೇಶವನ್ನು ಸ್ವೀಕರಿಸುವನು.
ಅರಬ್ಬಿ ವ್ಯಾಖ್ಯಾನಗಳು:
وَیَتَجَنَّبُهَا الْاَشْقَی ۟ۙ
ಹತಭಾಗ್ಯನು ಅದರಿಂದ ದೂರ ಉಳಿಯುವನು.
ಅರಬ್ಬಿ ವ್ಯಾಖ್ಯಾನಗಳು:
الَّذِیْ یَصْلَی النَّارَ الْكُبْرٰی ۟ۚ
ಅವನು ಮಹಾ ಅಗ್ನಿಯಲ್ಲಿ ಪ್ರವೇಶಿಸುವನು.
ಅರಬ್ಬಿ ವ್ಯಾಖ್ಯಾನಗಳು:
ثُمَّ لَا یَمُوْتُ فِیْهَا وَلَا یَحْیٰی ۟ؕ
ಅನಂತರ ಅವನು ಅಲ್ಲಿ ಸಾಯುವುದೂ ಇಲ್ಲ, ಬದುಕುವುದೂ ಇಲ್ಲ,
ಅರಬ್ಬಿ ವ್ಯಾಖ್ಯಾನಗಳು:
قَدْ اَفْلَحَ مَنْ تَزَكّٰی ۟ۙ
ನಿಸ್ಸಂಶಯವಾಗಿಯೂ (ಸತ್ಯ ನಿಷೇಧದಿಂದ) ಪರಿಶುದ್ಧನಾದವನು ಯಶಸ್ಸುಗಳಿಸಿದನು.
ಅರಬ್ಬಿ ವ್ಯಾಖ್ಯಾನಗಳು:
وَذَكَرَ اسْمَ رَبِّهٖ فَصَلّٰی ۟ؕ
ಅವನು ತನ್ನ ಪ್ರಭುವಿನ ನಾಮವನ್ನು ಸ್ಮರಿಸಿದನು ಮತ್ತು ನಮಾಜ್ ನರ‍್ವಹಿಸಿದನು.
ಅರಬ್ಬಿ ವ್ಯಾಖ್ಯಾನಗಳು:
بَلْ تُؤْثِرُوْنَ الْحَیٰوةَ الدُّنْیَا ۟ۚۖ
ಆದರೆ ನೀವು ಐಹಿಕ ಜೀವನಕ್ಕೆಆದ್ಯತೆ ನೀಡುತ್ತೀರಿ.
ಅರಬ್ಬಿ ವ್ಯಾಖ್ಯಾನಗಳು:
وَالْاٰخِرَةُ خَیْرٌ وَّاَبْقٰی ۟ؕ
ಆದರೆ ಪರಲೋಕವು ಅತ್ತುö್ಯತ್ತಮವೂ, ಶಾಶ್ವತವೂ ಆಗಿದೆ.
ಅರಬ್ಬಿ ವ್ಯಾಖ್ಯಾನಗಳು:
اِنَّ هٰذَا لَفِی الصُّحُفِ الْاُوْلٰی ۟ۙ
ವಾಸ್ತವದಲ್ಲಿ ಈ ವಿಚಾರಗಳು ಪರ‍್ವ ಗ್ರಂಥಗಳಲ್ಲೂ ಇದ್ದವು.
ಅರಬ್ಬಿ ವ್ಯಾಖ್ಯಾನಗಳು:
صُحُفِ اِبْرٰهِیْمَ وَمُوْسٰی ۟۠
ಅಂದರೆ ಇಬ್ರಾಹೀಮ್ ಮತ್ತು ಮೂಸಾರ ಗ್ರಂಥಗಳಲ್ಲಿ.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಸೂರ ಅಲ್ -ಅಅ್ ಲಾ
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - الترجمة الكنادية - بشير ميسوري - ಅನುವಾದಗಳ ವಿಷಯಸೂಚಿ

ترجمة معاني القرآن الكريم إلى اللغة الكنادية ترجمها بشير ميسوري.

ಮುಚ್ಚಿ