Check out the new design

وه‌رگێڕانی ماناكانی قورئانی پیرۆز - وەرگێڕاوی کەنادی - بەشیر ميسوری * - پێڕستی وه‌رگێڕاوه‌كان


وه‌رگێڕانی ماناكان سوره‌تی: المؤمنون   ئایه‌تی:

ಅಲ್ -ಮುಅ್ ಮಿನೂನ್

قَدْ اَفْلَحَ الْمُؤْمِنُوْنَ ۟ۙ
ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು ಯಶಸ್ಸು ಹೊಂದಿದರು.
تەفسیرە عەرەبیەکان:
الَّذِیْنَ هُمْ فِیْ صَلَاتِهِمْ خٰشِعُوْنَ ۟ۙ
ಅವರು ತಮ್ಮ ನಮಾಜ಼್ನಲ್ಲಿ ಭಯಭಕ್ತಿಯನ್ನಿರಿಸಿಕೊಳ್ಳುತ್ತಾರೆ.
تەفسیرە عەرەبیەکان:
وَالَّذِیْنَ هُمْ عَنِ اللَّغْوِ مُعْرِضُوْنَ ۟ۙ
ಅವರು ವ್ಯರ್ಥ ಕಾರ್ಯದಿಂದ ವಿಮುಖರಾಗುತ್ತಾರೆ.
تەفسیرە عەرەبیەکان:
وَالَّذِیْنَ هُمْ لِلزَّكٰوةِ فٰعِلُوْنَ ۟ۙ
ಮತ್ತು ಅವರು ಝಕಾತ್ (ಕಡ್ಡಾಯ ದಾನವನ್ನು) ಪಾವತಿಸುವವರಾಗಿದ್ದಾರೆ.
تەفسیرە عەرەبیەکان:
وَالَّذِیْنَ هُمْ لِفُرُوْجِهِمْ حٰفِظُوْنَ ۟ۙ
ಮತ್ತು ಅವರು ತಮ್ಮ ಗುಪ್ತಾಂಗಗಳನ್ನು ರಕ್ಷಿಸುವವರಾಗಿದ್ದಾರೆ.
تەفسیرە عەرەبیەکان:
اِلَّا عَلٰۤی اَزْوَاجِهِمْ اَوْ مَا مَلَكَتْ اَیْمَانُهُمْ فَاِنَّهُمْ غَیْرُ مَلُوْمِیْنَ ۟ۚ
ಆದರೆ ತಮ್ಮ ಪತ್ನಿಯರ ಅಥವಾ ತಮ್ಮ ಅಧೀನದಲ್ಲಿರುವ ದಾಸಿಯ ಹೊರತು. ಖಂಡಿತವಾಗಿಯು ಅವರು ಆಕ್ಷೆಪರ್ಹರಲ್ಲ.
تەفسیرە عەرەبیەکان:
فَمَنِ ابْتَغٰی وَرَآءَ ذٰلِكَ فَاُولٰٓىِٕكَ هُمُ الْعٰدُوْنَ ۟ۚ
ಆದರೆ ಯಾರಾದರೂ ಇದರಾಚೆಗೆ ದಾಟಲು ಬಯಸಿದರೆ ಅವರೇ ಮಿತಿ ಮೀರಿದವರಾಗಿದ್ದಾರೆ.
تەفسیرە عەرەبیەکان:
وَالَّذِیْنَ هُمْ لِاَمٰنٰتِهِمْ وَعَهْدِهِمْ رٰعُوْنَ ۟ۙ
ಮತ್ತು ಅವರು ತಮ್ಮ ಅಮಾನತ್ತು ಹಾಗೂ ವಾಗ್ದಾನಗಳನ್ನು ಕಾಪಾಡುವವರಾಗಿದ್ದಾರೆ.
تەفسیرە عەرەبیەکان:
وَالَّذِیْنَ هُمْ عَلٰی صَلَوٰتِهِمْ یُحَافِظُوْنَ ۟ۘ
ಮತ್ತು ಅವರು ತಮ್ಮ ನಮಾಜ಼್ಗಳನ್ನು ಕ್ರಮಬದ್ಧವಾಗಿ ನಿರ್ವಹಿಸುವವರಾಗಿದ್ದಾರೆ.
تەفسیرە عەرەبیەکان:
اُولٰٓىِٕكَ هُمُ الْوٰرِثُوْنَ ۟ۙ
ಇವರೇ ವಾರೀಸುದಾರರು.
تەفسیرە عەرەبیەکان:
الَّذِیْنَ یَرِثُوْنَ الْفِرْدَوْسَ ؕ— هُمْ فِیْهَا خٰلِدُوْنَ ۟
ಅವರು ಫಿರ್‌ದೌಸ್ (ಮಹೋನ್ನತ ಸ್ವರ್ಗ) ಅನ್ನು ವಾರೀಸು ಪಡೆಯುವರು. ಅದರಲ್ಲಿ ಅವರು ಶಾಶ್ವತವಾಗಿರುವರು.
تەفسیرە عەرەبیەکان:
وَلَقَدْ خَلَقْنَا الْاِنْسَانَ مِنْ سُلٰلَةٍ مِّنْ طِیْنٍ ۟ۚ
ನಿಶ್ಚಯವಾಗಿಯೂ ನಾವು ಮನುಷ್ಯನನ್ನು ಆವೆಮಣ್ಣಿನ ಸತ್ವದಿಂದ ಸೃಷ್ಟಿಸಿರುತ್ತೇವೆ.
تەفسیرە عەرەبیەکان:
ثُمَّ جَعَلْنٰهُ نُطْفَةً فِیْ قَرَارٍ مَّكِیْنٍ ۪۟
ನಂತರ ನಾವು ಅವನನ್ನು ವೀರ್ಯಾಣುವನ್ನಾಗಿ ಮಾಡಿ, ಸುಭದ್ರವಾದ ನೆಲೆಯಲ್ಲಿರಿಸಿದೆವು.
تەفسیرە عەرەبیەکان:
ثُمَّ خَلَقْنَا النُّطْفَةَ عَلَقَةً فَخَلَقْنَا الْعَلَقَةَ مُضْغَةً فَخَلَقْنَا الْمُضْغَةَ عِظٰمًا فَكَسَوْنَا الْعِظٰمَ لَحْمًا ۗ— ثُمَّ اَنْشَاْنٰهُ خَلْقًا اٰخَرَ ؕ— فَتَبٰرَكَ اللّٰهُ اَحْسَنُ الْخٰلِقِیْنَ ۟ؕ
ನಂತರ ನಾವು ವೀರ್ಯವನ್ನು ರಕ್ತ ಪಿಂಡವನ್ನಾಗಿ ಮಾಡಿದೆವು. ಅನಂತರ ನಾವು ರಕ್ತಪಿಂಡವನ್ನು ಮಾಂಸ ಪಿಂಡವನ್ನಾಗಿ ಮಾಡಿದೆವು ಮತ್ತು ಮಾಂಸ ಪಿಂಡವನ್ನು ಎಲುಬನ್ನಾಗಿ ಮಾಡಿದೆವು. ಬಳಿಕ ಎಲುಬುಗಳನ್ನು ಮಾಂಸದಿAದ ಹೊದಿಸಿದೆವು. ತರುವಾಯ ನಾವು ಅವನನ್ನು ಬೇರೊಂದು ಸೃಷ್ಟಿಯನ್ನಾಗಿ ಸೃಷ್ಟಿಸಿದೆವು. ಹಾಗೆಯೇ ಸೃಷ್ಟಿಸುವವರಲ್ಲಿ ಅತ್ಯುತ್ತಮನಾದ ಅಲ್ಲಾಹನು ಮಹಾ ಮಂಗಳಮಯನು.
تەفسیرە عەرەبیەکان:
ثُمَّ اِنَّكُمْ بَعْدَ ذٰلِكَ لَمَیِّتُوْنَ ۟ؕ
ಇದರ ಬಳಿಕ ನೀವು ಖಂಡಿತ ಮರಣ ಹೊಂದುವಿರಿ.
تەفسیرە عەرەبیەکان:
ثُمَّ اِنَّكُمْ یَوْمَ الْقِیٰمَةِ تُبْعَثُوْنَ ۟
ನಂತರ ಪುನರುತ್ಥಾನದ ದಿನದಂದು ಖಂಡಿತ ನೀವು ಎಬ್ಬಿಸಲಾಗುವಿರಿ.
تەفسیرە عەرەبیەکان:
وَلَقَدْ خَلَقْنَا فَوْقَكُمْ سَبْعَ طَرَآىِٕقَ ۖۗ— وَمَا كُنَّا عَنِ الْخَلْقِ غٰفِلِیْنَ ۟
ನಾವು ನಿಮ್ಮ ಮೇಲೆ ಹಂತ ಹಂತವಾಗಿ ಏಳು ಆಕಾಶ ಪಥಗಳನ್ನು ಸೃಷ್ಟಿಸಿದ್ದೇವೆ ಹಾಗೂ ನಾವು ಸೃಷ್ಟಿಗಳ ಕುರಿತು ಅಲಕ್ಷö್ಯರಾಗಿಲ್ಲ.
تەفسیرە عەرەبیەکان:
 
وه‌رگێڕانی ماناكان سوره‌تی: المؤمنون
پێڕستی سوره‌ته‌كان ژمارەی پەڕە
 
وه‌رگێڕانی ماناكانی قورئانی پیرۆز - وەرگێڕاوی کەنادی - بەشیر ميسوری - پێڕستی وه‌رگێڕاوه‌كان

وەرگێڕان: شێخ بەشیر مەیسوری. پەرەیپێدراوە بە سەرپەرشتیاری ناوەندی ڕواد بۆ وەرگێڕان.

داخستن