Check out the new design

وه‌رگێڕانی ماناكانی قورئانی پیرۆز - وەرگێڕاوی کەنادی - بەشیر ميسوری * - پێڕستی وه‌رگێڕاوه‌كان


وه‌رگێڕانی ماناكان سوره‌تی: القصص   ئایه‌تی:
وَمَا كُنْتَ بِجَانِبِ الْغَرْبِیِّ اِذْ قَضَیْنَاۤ اِلٰی مُوْسَی الْاَمْرَ وَمَا كُنْتَ مِنَ الشّٰهِدِیْنَ ۟ۙ
ಓ ಸಂದೇಶವಾಹಕರೇ ನಾವು ಮೂಸಾರವರಿಗೆ ಧರ್ಮ ಸಂದೇಶವನ್ನು ನೀಡಿದಾಗ ನೀವು ತೂರ್ ಪರ್ವತದ ಪಶ್ಚಿಮ ಭಾಗದಲ್ಲಿ ಇರಲಿಲ್ಲ. ಮತ್ತು ಸಾಕ್ಷö್ಯವಹಿಸುವವರಲ್ಲೂ ಸೇರಿರಲಿಲ್ಲ.
تەفسیرە عەرەبیەکان:
وَلٰكِنَّاۤ اَنْشَاْنَا قُرُوْنًا فَتَطَاوَلَ عَلَیْهِمُ الْعُمُرُ ۚ— وَمَا كُنْتَ ثَاوِیًا فِیْۤ اَهْلِ مَدْیَنَ تَتْلُوْا عَلَیْهِمْ اٰیٰتِنَا ۙ— وَلٰكِنَّا كُنَّا مُرْسِلِیْنَ ۟
ಇದಾದ ಬಳಿಕ ನಾವು ಅನೇಕ ಜನಾಂಗಗಳನ್ನು ಉಂಟು ಮಾಡಿದೆವು. ಅವರ ಮೇಲೆ ಸುಧೀರ್ಘ ಕಾಲಾವಧಿಯು ಗತಿಸಿಹೋಯಿತು, ಮತ್ತು ನೀವು ಮದ್‌ಯನ್‌ನವರಿಗೆ ನಮ್ಮ ಸೂಕ್ತಿಗಳನ್ನು ಓದಿ ಕೇಳಿಸಲು ಅವರ ಮಧ್ಯೆ ತಂಗಿರಲಿಲ್ಲ. ಆದರೆ ನಾವೇ (ಆ ಕಾಲದ) ಸುದ್ದಿಗಳನ್ನು ಕಳುಹಿಸಿ ಕೊಡುವವರಾಗಿದ್ದೇವೆ
تەفسیرە عەرەبیەکان:
وَمَا كُنْتَ بِجَانِبِ الطُّوْرِ اِذْ نَادَیْنَا وَلٰكِنْ رَّحْمَةً مِّنْ رَّبِّكَ لِتُنْذِرَ قَوْمًا مَّاۤ اَتٰىهُمْ مِّنْ نَّذِیْرٍ مِّنْ قَبْلِكَ لَعَلَّهُمْ یَتَذَكَّرُوْنَ ۟
ನಾವು ಮೂಸಾರವರನ್ನು ಕರೆದಾಗ ನೀವು ತೂರ್‌ನ ಬದಿಯಲ್ಲಿ ಇರಲಿಲ್ಲ. ಆದರೆ ಇದು ನಿಮ್ಮ ಪ್ರಭುವಿನ ಕಡೆಯ ಒಂದು ಕೃಪೆಯಾಗಿದೆ. ಇದೇಕೆಂದರೆ ನಿಮಗಿಂತ ಮೊದಲು ಮುನ್ನೆಚ್ಚರಿಕೆ ನೀಡುವವರಾರು ಬಾರದಿದ್ದ ಜನತೆಗೆ ಎಚ್ಚರಿಕೆ ನೀಡಲೆಂದಾಗಿದೆ. ಅವರು ಉಪದೇಶ ಸ್ವೀಕರಿಸಬಹುದು.
تەفسیرە عەرەبیەکان:
وَلَوْلَاۤ اَنْ تُصِیْبَهُمْ مُّصِیْبَةٌ بِمَا قَدَّمَتْ اَیْدِیْهِمْ فَیَقُوْلُوْا رَبَّنَا لَوْلَاۤ اَرْسَلْتَ اِلَیْنَا رَسُوْلًا فَنَتَّبِعَ اٰیٰتِكَ وَنَكُوْنَ مِنَ الْمُؤْمِنِیْنَ ۟
(ಅವರ ಜನಾಂಗ) ಸ್ವತಃ ಅವರ ಕೈಗಳು ಮುಂಚೆ ಮಾಡಿರುವ ಕರ್ಮಗಳ ಕಾರಣ ಅವರಿಗೆ ಯಾವುದಾದರೂ ವಿಪತ್ತು ತಟ್ಟಿದರೆ ಅವರಾಗ ಹೇಳುತ್ತಿದ್ದರು “ನಮ್ಮ ಪ್ರಭುವೇ, ನಮ್ಮೆಡೆಗೆ ಒಬ್ಬ ಸಂದೇಶವಾಹಕನನ್ನು ಯಾಕೆ ಕಳುಹಿಸಲಿಲ್ಲ? ಹಾಗಿದ್ದರೆ ನಾವು ನಿನ್ನ ಸೂಕ್ತಿಗಳನ್ನು ಅನುಸರಿಸುತ್ತಿದ್ದೆವು ಹಾಗು ಸತ್ಯವಿಶ್ವಾಸಿಗಳಲ್ಲಾಗುತ್ತಿದ್ದೆವು”.
تەفسیرە عەرەبیەکان:
فَلَمَّا جَآءَهُمُ الْحَقُّ مِنْ عِنْدِنَا قَالُوْا لَوْلَاۤ اُوْتِیَ مِثْلَ مَاۤ اُوْتِیَ مُوْسٰی ؕ— اَوَلَمْ یَكْفُرُوْا بِمَاۤ اُوْتِیَ مُوْسٰی مِنْ قَبْلُ ۚ— قَالُوْا سِحْرٰنِ تَظَاهَرَا ۫— وَقَالُوْۤا اِنَّا بِكُلٍّ كٰفِرُوْنَ ۟
ಅನಂತರ ಅವರ ಬಳಿ ನಮ್ಮ ಕಡೆಯಿಂದ ಸತ್ಯವು ಬಂದಾಗ ಅವರು ಹೇಳುತ್ತಾರೆ: ಮೂಸಾರಿಗೆ ನೀಡಲಾದಂತಹ ದುಷ್ಟಾಂತಗಳನ್ನು ಇವರಿಗೇಕೆ ನೀಡಲಾಗಿಲ್ಲ? ಸರಿ, ಇದಕ್ಕೆ ಮೊದಲು ಮೂಸಾರಿಗೆ ನೀಡಲಾಗಿದವುಗಳನ್ನು ಅವರು ನಿಷೇಧಿಸಲಿಲ್ಲವೇ? ಅವರು ಹೇಳಿದರು: ಎರಡೂ (ಕುರ್‌ಆನ್, ತೌರಾತ್) ಪರಸ್ಪರ ಸಮರ್ಥಿಸುತ್ತಿರುವ ಜಾದು ಆಗಿದೆ. ಮತ್ತು ನಾವು ಅವೆಲ್ಲವುಗಳ ನಿಷೇಧಿಗಳಾಗಿದ್ದೇವೆ.
تەفسیرە عەرەبیەکان:
قُلْ فَاْتُوْا بِكِتٰبٍ مِّنْ عِنْدِ اللّٰهِ هُوَ اَهْدٰی مِنْهُمَاۤ اَتَّبِعْهُ اِنْ كُنْتُمْ صٰدِقِیْنَ ۟
ಹೇಳಿರಿ: ನೀವು (ಮಕ್ಕಾದ ಬಹುದೇವರಾಧಕರು) ಇವೆರೆಡಕ್ಕಿಂತ ಹೆಚ್ಚು ಸನ್ಮಾರ್ಗದರ್ಶಿ ಯಾದಂತಹ ಗ್ರಂಥವನ್ನು ಅಲ್ಲಾಹನ ಬಳಿಯಿಂದ ತನ್ನಿರಿ. ನಾನು ಅದನ್ನು ಅನುಸರಿಸುವೆನು. ನೀವು ಸತ್ಯವಂತರಾಗಿದ್ದರೆ.
تەفسیرە عەرەبیەکان:
فَاِنْ لَّمْ یَسْتَجِیْبُوْا لَكَ فَاعْلَمْ اَنَّمَا یَتَّبِعُوْنَ اَهْوَآءَهُمْ ؕ— وَمَنْ اَضَلُّ مِمَّنِ اتَّبَعَ هَوٰىهُ بِغَیْرِ هُدًی مِّنَ اللّٰهِ ؕ— اِنَّ اللّٰهَ لَا یَهْدِی الْقَوْمَ الظّٰلِمِیْنَ ۟۠
ಇನ್ನು ಅವರು ನಿಮ್ಮ ಸವಾಲನ್ನು ಸ್ವೀಕರಿಸದಿದ್ದಲ್ಲಿ ಆಗ ನೀವು ತಿಳಿದುಕೊಳ್ಳಿ ಅವರಂತು ತಮ್ಮ ಸ್ವೇಚ್ಛೆಗಳನ್ನು ಅನುಸರಿಸುತ್ತಿದ್ದಾರೆ ಮತ್ತು ಅಲ್ಲಾಹನ ಮಾರ್ಗದರ್ಶನವಿಲ್ಲದೆ ತನ್ನ ಸ್ವೇಚ್ಛೆಯನ್ನು ಅನುಸರಿಸುವವನಿಗಿಂತ ಹೆಚ್ಚು ದಾರಿಗೆಟ್ಟವ ಇನ್ನರಿದ್ದಾನೆ? ನಿಸ್ಸಂದೇಹವಾಗಿಯೂ ಅಲ್ಲಾಹನು ಅಕ್ರಮಿ ಜನಾಂಗಕ್ಕೆ ಸನ್ಮಾರ್ಗವನ್ನು ಕರುಣಿಸುವುದಿಲ್ಲ.
تەفسیرە عەرەبیەکان:
 
وه‌رگێڕانی ماناكان سوره‌تی: القصص
پێڕستی سوره‌ته‌كان ژمارەی پەڕە
 
وه‌رگێڕانی ماناكانی قورئانی پیرۆز - وەرگێڕاوی کەنادی - بەشیر ميسوری - پێڕستی وه‌رگێڕاوه‌كان

وەرگێڕان: شێخ بەشیر مەیسوری. پەرەیپێدراوە بە سەرپەرشتیاری ناوەندی ڕواد بۆ وەرگێڕان.

داخستن