Check out the new design

وه‌رگێڕانی ماناكانی قورئانی پیرۆز - وەرگێڕاوی کەنادی - بەشیر ميسوری * - پێڕستی وه‌رگێڕاوه‌كان


وه‌رگێڕانی ماناكان سوره‌تی: آل عمران   ئایه‌تی:
اَلَمْ تَرَ اِلَی الَّذِیْنَ اُوْتُوْا نَصِیْبًا مِّنَ الْكِتٰبِ یُدْعَوْنَ اِلٰی كِتٰبِ اللّٰهِ لِیَحْكُمَ بَیْنَهُمْ ثُمَّ یَتَوَلّٰی فَرِیْقٌ مِّنْهُمْ وَهُمْ مُّعْرِضُوْنَ ۟
ಗ್ರಂಥದಿAದ ಒಂದAಶವನ್ನು ನೀಡಲ್ಪಟ್ಟವರನ್ನು ನೀವು ನೋಡಲಿಲ್ಲವೇ? ಅವರ ನಡುವೆ ತೀರ್ಮಾನಕ್ಕಾಗಿ ಅಲ್ಲಾಹನ ಗ್ರಂಥದೆಡೆಗೆ ಅವರನ್ನು ಕರೆಯಲಾದರೆ, ತರುವಾಯ ಅವರಲ್ಲೊಂದು ಪಂಗಡವು ವಿಮುಖರಾಗಿ ಮರಳಿಬಿಡುತ್ತದೆ.
تەفسیرە عەرەبیەکان:
ذٰلِكَ بِاَنَّهُمْ قَالُوْا لَنْ تَمَسَّنَا النَّارُ اِلَّاۤ اَیَّامًا مَّعْدُوْدٰتٍ ۪— وَّغَرَّهُمْ فِیْ دِیْنِهِمْ مَّا كَانُوْا یَفْتَرُوْنَ ۟
(ಇವರ ಈ ವರ್ತನೆ) ಎಣಿಕೆಯ ಕೆಲವು ದಿನಗಳ ಹೊರತು ನರಕಾಗ್ನಿಯು ನಮ್ಮನ್ನು ಖಂಡಿತ ಸ್ಪರ್ಶಿಸದು ಎಂಬ ಅವರ ಹೇಳಿಕೆಯೇ ಇದಕ್ಕಿರುವ ಕಾರಣವಾಗಿದೆ. ಧರ್ಮದ ವಿಷಯದಲ್ಲಿ ಅವರ ಸ್ವರಚಿತವಾದಗಳು ಅವರನ್ನು ಮೋಸಕ್ಕೊಳಗಾಗಿಸಿವೆ.
تەفسیرە عەرەبیەکان:
فَكَیْفَ اِذَا جَمَعْنٰهُمْ لِیَوْمٍ لَّا رَیْبَ فِیْهِ ۫— وَوُفِّیَتْ كُلُّ نَفْسٍ مَّا كَسَبَتْ وَهُمْ لَا یُظْلَمُوْنَ ۟
ಒಂದು ದಿನವನ್ನು ಎದುರಿಸಲು ನಾವು ಅವರನ್ನು ಒಟ್ಟುಗೂಡಿಸಿದಾಗ ಆಕ್ರೋಶದ ಅವಸ್ಥೆಯು ಏನಾಗಬಹುದು? ಆ ದಿನದ ಆಗಮನದಲ್ಲಿ ಯಾವುದೇ ಸಂದೇಹವಿಲ್ಲ. ಅಂದು ಪ್ರತಿಯೊಬ್ಬನಿಗೂ ಅವನು ಮಾಡಿರುವುದನ್ನು ಪರಿಪೂರ್ಣವಾಗಿ ನೀಡಲಾಗುವುದು. ಅವರೊಂದಿಗೆ ಅನ್ಯಾಯವೆಸಗಲಾಗದು.
تەفسیرە عەرەبیەکان:
قُلِ اللّٰهُمَّ مٰلِكَ الْمُلْكِ تُؤْتِی الْمُلْكَ مَنْ تَشَآءُ وَتَنْزِعُ الْمُلْكَ مِمَّنْ تَشَآءُ ؗ— وَتُعِزُّ مَنْ تَشَآءُ وَتُذِلُّ مَنْ تَشَآءُ ؕ— بِیَدِكَ الْخَیْرُ ؕ— اِنَّكَ عَلٰی كُلِّ شَیْءٍ قَدِیْرٌ ۟
ಓ ಪೈಗಂಬರರೇ ಹೇಳಿರಿ; ಓ ಅಲ್ಲಾಹ್ ಸರ್ವಾಧಿಪತ್ಯದ ಒಡೆಯನೇ, ನೀನಿಚ್ಛಿಸುವವರಿಗೆ ಅಧಿಪತ್ಯವನ್ನು ನೀಡುವೆ ನೀನಿಚ್ಛಿಸುವವರಿಂದ ಅಧಿಪತ್ಯವನ್ನು ಕಸಿದುಕೊಳ್ಳುವೆ ನೀನಿಚ್ಛಿಸುವವರಿಗೆ ಸನ್ಮಾನ ಪ್ರತಾಪವನ್ನು ನೀಡುವೆ ಮತ್ತು ನೀನಿಚ್ಛಿಸುವವರಿಗೆ ನಿಂದ್ಯತೆಯನ್ನೀಡುವೆ. ನಿನ್ನ ಕೈಯಲ್ಲೇ ಸಕಲ ಒಳಿತುಗಳಿವೆ. ನಿಸ್ಸಂಶಯವಾಗಿಯು ನೀನು ಸಕಲ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನಾಗಿರುವೆ.
تەفسیرە عەرەبیەکان:
تُوْلِجُ الَّیْلَ فِی النَّهَارِ وَتُوْلِجُ النَّهَارَ فِی الَّیْلِ ؗ— وَتُخْرِجُ الْحَیَّ مِنَ الْمَیِّتِ وَتُخْرِجُ الْمَیِّتَ مِنَ الْحَیِّ ؗ— وَتَرْزُقُ مَنْ تَشَآءُ بِغَیْرِ حِسَابٍ ۟
ನೀನೇ ರಾತ್ರಿಯನ್ನು ಹಗಲಿನೊಳಗೆ ಮತ್ತು ಹಗಲನ್ನು ರಾತ್ರಿಯೊಳಗೆ ಪ್ರವೇಶಗೊಳಿಸುವೆ. ನೀನು ನಿರ್ಜೀವಿಯಿಂದ ಜೀವಿಯನ್ನು ಹೊರತರುವೆ ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರತರುವೆ. ನೀನಿಚ್ಛಿಸುವವರಿಗೆ ಲೆಕ್ಕವಿಲ್ಲದ ಅನ್ನಾಧಾರ ನೀಡುವವನು ನೀನೆ ಆಗಿರುವೆ.
تەفسیرە عەرەبیەکان:
لَا یَتَّخِذِ الْمُؤْمِنُوْنَ الْكٰفِرِیْنَ اَوْلِیَآءَ مِنْ دُوْنِ الْمُؤْمِنِیْنَ ۚ— وَمَنْ یَّفْعَلْ ذٰلِكَ فَلَیْسَ مِنَ اللّٰهِ فِیْ شَیْءٍ اِلَّاۤ اَنْ تَتَّقُوْا مِنْهُمْ تُقٰىةً ؕ— وَیُحَذِّرُكُمُ اللّٰهُ نَفْسَهٗ ؕ— وَاِلَی اللّٰهِ الْمَصِیْرُ ۟
ಸತ್ಯವಿಶ್ವಾಸಿಗಳು ಸತ್ಯವಿಶ್ವಾಸಿಗಳ ವಿರುದ್ಧ ಸತ್ಯನಿಷೇಧಿಗಳನ್ನು ಮಿತ್ರರನ್ನಾಗಿ ಮಾಡಿಕೊಳ್ಳಬಾರದು ಮತ್ತು ಯಾರು ಹಾಗೆ ಮಾಡುತ್ತಾನೋ ಅವನಿಗೆ ಅಲ್ಲಾಹನೊಡನೆ ಯಾವ ಸಂಬAಧವಿಲ್ಲ. ಆದರೆ ಅವರ ಕೆಡುಕಿನಿಂದ ಹೇಗಾದರೂ ರಕ್ಷಣೆ ಪಡೆಯುವ ಉದ್ದೇಶವಿದ್ದರೆ ಬೇರೆ ವಿಚಾರ ಮತ್ತು ಅಲ್ಲಾಹನು ತನ್ನ ಬಗ್ಗೆ ನಿಮ್ಮನ್ನು ಎಚ್ಚರಿಸುತ್ತಾನೆ ಮತ್ತು ಅಲ್ಲಾಹನೆಡೆಗೇ ಮರಳುವಿಕೆಯಿರುವುದು.
تەفسیرە عەرەبیەکان:
قُلْ اِنْ تُخْفُوْا مَا فِیْ صُدُوْرِكُمْ اَوْ تُبْدُوْهُ یَعْلَمْهُ اللّٰهُ ؕ— وَیَعْلَمُ مَا فِی السَّمٰوٰتِ وَمَا فِی الْاَرْضِ ؕ— وَاللّٰهُ عَلٰی كُلِّ شَیْءٍ قَدِیْرٌ ۟
ಹೇಳಿರಿ: ನೀವು ನಿಮ್ಮ ಮನಸ್ಸಲ್ಲಿರುವ ವಿಚಾರಗಳನ್ನು ಬಚ್ಚಿಟ್ಟರೂ ಅಥವಾ ಬಹಿರಂಗಪಡಿಸಿದರೂ ಅಲ್ಲಾಹನು ಅರಿಯುತ್ತಾನೆ. ಭೂಮಿ, ಆಕಾಶಗಳಲ್ಲಿರುವುದೆಲ್ಲವನ್ನೂ ಅವನು ಬಲ್ಲನು ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳನಾಗಿದ್ದಾನೆ.
تەفسیرە عەرەبیەکان:
 
وه‌رگێڕانی ماناكان سوره‌تی: آل عمران
پێڕستی سوره‌ته‌كان ژمارەی پەڕە
 
وه‌رگێڕانی ماناكانی قورئانی پیرۆز - وەرگێڕاوی کەنادی - بەشیر ميسوری - پێڕستی وه‌رگێڕاوه‌كان

وەرگێڕان: شێخ بەشیر مەیسوری. پەرەیپێدراوە بە سەرپەرشتیاری ناوەندی ڕواد بۆ وەرگێڕان.

داخستن