وه‌رگێڕانی ماناكانی قورئانی پیرۆز - الترجمة الكنادية - بشير ميسوري * - پێڕستی وه‌رگێڕاوه‌كان


وه‌رگێڕانی ماناكان سوره‌تی: سورەتی ق   ئایه‌تی:

ಸೂರ ಕ್ವಾಫ್

قٓ ۫— وَالْقُرْاٰنِ الْمَجِیْدِ ۟ۚ
ಕಾಫ್, ಆದರಣೀಯ ಕುರ್‌ಆನಿನ ಆಣೆ,
تەفسیرە عەرەبیەکان:
بَلْ عَجِبُوْۤا اَنْ جَآءَهُمْ مُّنْذِرٌ مِّنْهُمْ فَقَالَ الْكٰفِرُوْنَ هٰذَا شَیْءٌ عَجِیْبٌ ۟ۚ
ಅವರ ಬಳಿ ಅವರಿಂದಲೇ ಮುನ್ನೆಚ್ಚರಿಗಾರನೊಬ್ಬನು ಬಂದಿರುವುದರಿAದ ಅವರು ಅಚ್ಚರಿಪಟ್ಟರು, ಸತ್ಯನಿಷೇಧಿಗಳು ಹೇಳುತ್ತಾರೆ ಇದೊಂದು ಆಶ್ಚರ್ಯಕರ ವಿಷಯವಾಗಿದೆ
تەفسیرە عەرەبیەکان:
ءَاِذَا مِتْنَا وَكُنَّا تُرَابًا ۚ— ذٰلِكَ رَجْعٌ بَعِیْدٌ ۟
ನಾವು ಮೃತಪಟ್ಟು ಮಣ್ಣಾದ ಬಳಿಕ? ಪುನಃ ಜೀವಂತಗೊಳಿಸಿ ಮರಳುವುದು ಬುದ್ಧಿಗೇ ವಿದೂರವಾಗಿದೆ.
تەفسیرە عەرەبیەکان:
قَدْ عَلِمْنَا مَا تَنْقُصُ الْاَرْضُ مِنْهُمْ ۚ— وَعِنْدَنَا كِتٰبٌ حَفِیْظٌ ۟
ಭೂಮಿಯು ಅವರ ಶರೀರಗಳಿಂದ ಏನನ್ನು ಕಡಿತಗೊಳಿಸುವುದೆಂದು ನಾವು ಬಲ್ಲೆವು ಮತ್ತು ನಮ್ಮ ಬಳಿ ಎಲ್ಲವನ್ನು ಸುರಕ್ಷಿತವಾಗಿರಿಸುವ ಗ್ರಂಥವಿದೆ.
تەفسیرە عەرەبیەکان:
بَلْ كَذَّبُوْا بِالْحَقِّ لَمَّا جَآءَهُمْ فَهُمْ فِیْۤ اَمْرٍ مَّرِیْجٍ ۟
ಸತ್ಯವು ಅವರ ಬಳಿಗೆ ಬಂದಾಗ ಅವರು ಅದನ್ನು ಸುಳ್ಳಾಗಿಸಿಬಿಟ್ಟರು ಆದ್ದರಿಂದ ಅವರು ಗೊಂದಲದಲ್ಲಿದ್ದಾರೆ.
تەفسیرە عەرەبیەکان:
اَفَلَمْ یَنْظُرُوْۤا اِلَی السَّمَآءِ فَوْقَهُمْ كَیْفَ بَنَیْنٰهَا وَزَیَّنّٰهَا وَمَا لَهَا مِنْ فُرُوْجٍ ۟
ತಮ್ಮ ಮೇಲ್ಭಾಗದಲ್ಲಿರುವ ಆಕಾಶದದತ್ತ ಅವರು ನೋಡಲಿಲ್ಲವೇ; ನಾವದನ್ನು ಹೇಗೆ ನಿರ್ಮಿಸಿದೆವು ಮತ್ತು ಅಲಂಕರಿಸಿದೆವೆAದು? ಅದಕ್ಕೆಯಾವ ಬಿರುಕೂಇಲ್ಲ.
تەفسیرە عەرەبیەکان:
وَالْاَرْضَ مَدَدْنٰهَا وَاَلْقَیْنَا فِیْهَا رَوَاسِیَ وَاَنْۢبَتْنَا فِیْهَا مِنْ كُلِّ زَوْجٍ بَهِیْجٍ ۟ۙ
ಭೂಮಿಯನ್ನು ನಾವು ಹರಡಿಸಿದೆವು, ಅದರಲ್ಲಿ ಪರ್ವತಗಳನ್ನು ನಾಟಿದೆವು ಮತ್ತು ಅದರಲ್ಲಿ ಎಲ್ಲಾ ವಿಧದ ನಯನ ಮನೋಹರವಾದ ಸಸ್ಯಜೋಡಿಗಳನ್ನು ಬೆಳೆಸಿದೆವು.
تەفسیرە عەرەبیەکان:
تَبْصِرَةً وَّذِكْرٰی لِكُلِّ عَبْدٍ مُّنِیْبٍ ۟
ಇದೇಕೆಂದರೆ ಪ್ರತಿಯೊಬ್ಬ (ಸತ್ಯದೆಡೆಗೆ) ಮರಳುವ ದಾಸನಿಗೆ ಪಾಠ ಮತ್ತು ಉಪದೇಶವಾಗಲೆಂದಾಗಿದೆ.
تەفسیرە عەرەبیەکان:
وَنَزَّلْنَا مِنَ السَّمَآءِ مَآءً مُّبٰرَكًا فَاَنْۢبَتْنَا بِهٖ جَنّٰتٍ وَّحَبَّ الْحَصِیْدِ ۟ۙ
ನಾವು ಆಕಾಶದಿಂದ ಸಮೃದ್ಧಪೂರ್ಣ ನೀರನ್ನು ಸುರಿಸಿದೆವು ಮತ್ತು ಅದರ ಮೂಲಕ ತೋಟಗಳನ್ನು ಕೊಯ್ಲು ಮಾಡುವ ಧಾನ್ಯಗಳನ್ನೂ ಉತ್ಪಾದಿಸಿದೆವು.
تەفسیرە عەرەبیەکان:
وَالنَّخْلَ بٰسِقٰتٍ لَّهَا طَلْعٌ نَّضِیْدٌ ۟ۙ
ಮತ್ತು ದಟ್ಟ ಗೊಂಚಲುಗಳುಳ್ಳ ಎತ್ತರದ ಖರ್ಜೂರ ಮರಗಳನ್ನು ಉಂಟುಮಾಡಿದೆವು.
تەفسیرە عەرەبیەکان:
رِّزْقًا لِّلْعِبَادِ ۙ— وَاَحْیَیْنَا بِهٖ بَلْدَةً مَّیْتًا ؕ— كَذٰلِكَ الْخُرُوْجُ ۟
ಇದು ದಾಸರ ಜೀವನಾಧಾರಕ್ಕಾಗಿ (ಉಂಟುಮಾಡಿದೆವು) ಮತ್ತು ನೀರಿನಿಂದ ನಿರ್ಜೀವ ಭೂಮಿಯನ್ನು ಜೀವಂತಗೊಳಿಸಿದೆವು, ಇದೇ ಪ್ರಕಾರ ನಿಮಗೆ ಸಮಾಧಿಗಳಿಂದ ಹೊರಬರಲಿಕ್ಕಿದೆ.
تەفسیرە عەرەبیەکان:
كَذَّبَتْ قَبْلَهُمْ قَوْمُ نُوْحٍ وَّاَصْحٰبُ الرَّسِّ وَثَمُوْدُ ۟ۙ
ಇವರಿಗಿಂತ (ಮಕ್ಕಾದ ಬಹುದೇವಾರಾಧಕರಿಗಿಂತ) ಮೊದಲು ನೂಹರ ಜನಾಂಗ, ರಸ್ಸ್ನವರು ಮತ್ತು ಸಮೂದರು,
تەفسیرە عەرەبیەکان:
وَعَادٌ وَّفِرْعَوْنُ وَاِخْوَانُ لُوْطٍ ۟ۙ
ಮತ್ತು ಆದರು ಫಿರ್‌ಔನನು ಮತ್ತು ಲೂತರ ಸಹೋದರರು.
تەفسیرە عەرەبیەکان:
وَّاَصْحٰبُ الْاَیْكَةِ وَقَوْمُ تُبَّعٍ ؕ— كُلٌّ كَذَّبَ الرُّسُلَ فَحَقَّ وَعِیْدِ ۟
ಐಕಾದವರು ಮತ್ತು ತುಬ್ಬಾ ಜನಾಂಗದವರೂ ಸಹ, ಅವರೆಲ್ಲರೂ ಸಂದೇಶವಾಹಕರನ್ನು ನಿಷೇಧಿಸಿದರು, ಕೊನೆಗೆ ಅವರ ಮೇಲೆ ನನ್ನ (ಶಿಕ್ಷೆಯ) ಎಚ್ಚರಿಕೆಯು ಸತ್ಯವಾಗಿಬಿಟ್ಟಿತು.
تەفسیرە عەرەبیەکان:
اَفَعَیِیْنَا بِالْخَلْقِ الْاَوَّلِ ؕ— بَلْ هُمْ فِیْ لَبْسٍ مِّنْ خَلْقٍ جَدِیْدٍ ۟۠
ಏನೂ ನಾವು ಮೊದಲ ಬಾರಿ ಸೃಷ್ಟಿಸುವ ಮೂಲಕ ದಣಿದುಬಿಟ್ಟಿದ್ದೇವೆ ? (ಇಲ್ಲ) ಆದರೂ ಅವರು ಹೊಸ ಸೃಷ್ಟಿಯ ಕುರಿತು ಸಂದೇಹದಲ್ಲಿದ್ದಾರೆ.
تەفسیرە عەرەبیەکان:
وَلَقَدْ خَلَقْنَا الْاِنْسَانَ وَنَعْلَمُ مَا تُوَسْوِسُ بِهٖ نَفْسُهٗ ۖۚ— وَنَحْنُ اَقْرَبُ اِلَیْهِ مِنْ حَبْلِ الْوَرِیْدِ ۟
ನಿಶ್ಚಯವಾಗಿಯೂ ನಾವು ಮಾನವನನ್ನು ಸೃಷ್ಟಿಸಿದ್ದೇವೆ, ಅವನ ಮನಸ್ಸಿನಲ್ಲಿ ಉದ್ಭವಿಸುವ ದುರ್ಭಾವನೆಗಳ ಬಗ್ಗೆ ನಾವು ಅರಿಯುತ್ತೇವೆ ಮತ್ತು ನಾವು ಅವನ ಕಂಠನಾಡಿಗಿAತಲೂ ಹೆಚ್ಚು ಸಮೀಪವಾಗಿದ್ದೇವೆ.
تەفسیرە عەرەبیەکان:
اِذْ یَتَلَقَّی الْمُتَلَقِّیٰنِ عَنِ الْیَمِیْنِ وَعَنِ الشِّمَالِ قَعِیْدٌ ۟
ಈರ್ವ (ಲೇಖಕ) ದೂತರು ಬಲಭಾಗ ಮತ್ತು ಎಡಭಾಗದಲ್ಲಿ ಕುಳಿತುಕೊಂಡು ಕರ್ಮಗಳನ್ನು ದಾಖಲಿಸುತ್ತಿರುವ ಸಂದರ್ಭ.
تەفسیرە عەرەبیەکان:
مَا یَلْفِظُ مِنْ قَوْلٍ اِلَّا لَدَیْهِ رَقِیْبٌ عَتِیْدٌ ۟
ಮಾನವನು ತನ್ನ ಬಾಯಿಂದ ಯಾವುದೇ ಮಾತು ಹೊರಡಿಸುವುದೇ ತಡ (ಬರೆಯಲು) ಅವನ ಬಳಿ ಒಬ್ಬದೇವದೂತನು ಸಿದ್ಧನಿರುತ್ತಾನೆ.
تەفسیرە عەرەبیەکان:
وَجَآءَتْ سَكْرَةُ الْمَوْتِ بِالْحَقِّ ؕ— ذٰلِكَ مَا كُنْتَ مِنْهُ تَحِیْدُ ۟
ಮರಣ ಸಂಕಟವು ಸತ್ಯಸಹಿತ ಬಂದುಬಿಟ್ಟಿದೆ, ನೀನು ಯಾವುದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀಯೋ ಅದುವೇ ಇದು,
تەفسیرە عەرەبیەکان:
وَنُفِخَ فِی الصُّوْرِ ؕ— ذٰلِكَ یَوْمُ الْوَعِیْدِ ۟
ಪ್ರಳಯದ ಕಹಳೆಯನ್ನು ಊದಲಾಗುವುದು (ಮತ್ತು ಹೀಗೆ ಹೇಳಲಾಗುವುದು) ಎಚ್ಚರಿಕೆ ನೀಡಲ್ಪಟ್ಟ ದಿನ ಇದುವೇ ಆಗಿದೆ.
تەفسیرە عەرەبیەکان:
وَجَآءَتْ كُلُّ نَفْسٍ مَّعَهَا سَآىِٕقٌ وَّشَهِیْدٌ ۟
ಪ್ರತಿಯೊಬ್ಬ ವ್ಯಕ್ತಿಯು ಓರ್ವ ಅಟ್ಟುವವ ಹಾಗು ಓರ್ವ ಸಾಕ್ಷಿಗಾರನಜೊತೆ ಬರುವನು.
تەفسیرە عەرەبیەکان:
لَقَدْ كُنْتَ فِیْ غَفْلَةٍ مِّنْ هٰذَا فَكَشَفْنَا عَنْكَ غِطَآءَكَ فَبَصَرُكَ الْیَوْمَ حَدِیْدٌ ۟
(ಹೇಳಲಾಗುವುದು) ಖಂಡಿತವಾಗಿಯೂ ನೀನು ಇದರ ಕುರಿತು ಅಲಕ್ಷö್ಯತೆಯಲ್ಲಿದ್ದೆ. ಆದರೆ ನಾವು ನಿನ್ನ ಮುಂದಿದ್ದ ತೆರೆಯನ್ನು ಸರಿಸಿಬಿಟ್ಟಿದ್ದೇವೆ, ಆದುದರಿಂದ ಇಂದು ನಿನ್ನ ದೃಷ್ಟಿಯು ತೀಕ್ಷ÷್ಣವಾಗಿಬಿಟ್ಟಿದೆ.
تەفسیرە عەرەبیەکان:
وَقَالَ قَرِیْنُهٗ هٰذَا مَا لَدَیَّ عَتِیْدٌ ۟ؕ
ಅವನ ಜೊತೆಗಾರ ದೇವದೂತ ಹೇಳುವನು; ನನ್ನ ಬಳಿಯಿದ್ದ ಅವನ ಕರ್ಮಪತ್ರ ಇಗೋ ಹಾಜರಿದೆ.
تەفسیرە عەرەبیەکان:
اَلْقِیَا فِیْ جَهَنَّمَ كُلَّ كَفَّارٍ عَنِیْدٍ ۟ۙ
ಪ್ರತಿಯೊಬ್ಬ ಆಜ್ಞೋಲ್ಲಂಘಕ ಸತ್ಯನಿಷೇಧಿಯನ್ನು ನೀವು ನರಕಾಗ್ನಿಗೆ ಎಸೆಯಿರಿ.
تەفسیرە عەرەبیەکان:
مَّنَّاعٍ لِّلْخَیْرِ مُعْتَدٍ مُّرِیْبِ ۟ۙ
ಅವನು ಒಳಿತಿನಿಂದ ತಡೆಯುವವನು, ಅತಿಕ್ರಮಿಯೂ ಹಾಗು (ಧರ್ಮದಲ್ಲಿ) ಸಂಶಯಗ್ರಸ್ತನಾಗಿದ್ದನು.
تەفسیرە عەرەبیەکان:
١لَّذِیْ جَعَلَ مَعَ اللّٰهِ اِلٰهًا اٰخَرَ فَاَلْقِیٰهُ فِی الْعَذَابِ الشَّدِیْدِ ۟
ಅವನು ಅಲ್ಲಾಹನೊಂದಿಗೆ ಇತರೆ ಆರಾಧ್ಯರನ್ನು ನಿಶ್ಚಯಿಸಿದ್ದನು, ಆದ್ದರಿಂದ ಅವನನ್ನು ನೀವು ಕಠಿಣ ಶಿಕ್ಷೆಗೆ ಹಾಕಿಬಿಡಿರಿ.
تەفسیرە عەرەبیەکان:
قَالَ قَرِیْنُهٗ رَبَّنَا مَاۤ اَطْغَیْتُهٗ وَلٰكِنْ كَانَ فِیْ ضَلٰلٍۢ بَعِیْدٍ ۟
ಅವನ ಸಹಚರ(ಶೈತಾನ)ನು ಹೇಳುವನು; ನಮ್ಮ ಪ್ರಭೂ! ನಾನವನನ್ನು ದಾರಿಗೆಡಿಸಿಲ್ಲ, ಆದರೆ ಸ್ವತಃ ಅವನೇ ದೂರವಾದ ದುರ್ಮಾರ್ಗದಲ್ಲಿದ್ದನು.
تەفسیرە عەرەبیەکان:
قَالَ لَا تَخْتَصِمُوْا لَدَیَّ وَقَدْ قَدَّمْتُ اِلَیْكُمْ بِالْوَعِیْدِ ۟
ಅಲ್ಲಾಹನು ಹೇಳುವನು;ನೀವು ನನ್ನ ಮುಂದೆ ಜಗಳವಾಡಬೇಡಿರಿ, ನಾನಂತು ನಿಮಗೆ ಮೊದಲೇ ಶಿಕ್ಷೆಯ ಎಚ್ಚೆರಿಕೆ ನೀಡಿದ್ದೆನು.
تەفسیرە عەرەبیەکان:
مَا یُبَدَّلُ الْقَوْلُ لَدَیَّ وَمَاۤ اَنَا بِظَلَّامٍ لِّلْعَبِیْدِ ۟۠
ನನ್ನ ಬಳಿ ಮಾತು ಬದಲಾಗದು, ನಾನು ದಾಸರ ಮೇಲೆ ಒಂದಿಷ್ಟೂ ಅನ್ಯಾಯ ಮಾಡುವವನಲ್ಲ.
تەفسیرە عەرەبیەکان:
یَوْمَ نَقُوْلُ لِجَهَنَّمَ هَلِ امْتَلَاْتِ وَتَقُوْلُ هَلْ مِنْ مَّزِیْدٍ ۟
ಅಂದು ನಾವು ನರಕದೊಂದಿಗೆ ಹೇಳುವೆವು; ‘ನೀನು ತುಂಬಿಬಿಟ್ಟೆಯಾ?' ಆಗ ಅದು ‘ಇನ್ನಷ್ಟು ಇದೆಯೇ?' ಎಂದು ಕೇಳುವುದು.
تەفسیرە عەرەبیەکان:
وَاُزْلِفَتِ الْجَنَّةُ لِلْمُتَّقِیْنَ غَیْرَ بَعِیْدٍ ۟
ಭಯಭಕ್ತಿ ಪಾಲಿಸುವವರಿಗೆ ಸ್ವರ್ಗವನ್ನು ಅತ್ಯಂತ ಸಮೀಪಕ್ಕೆ ತರಲಾಗುವುದು, ಅದು ಸ್ವಲ್ಪವೂ ದೂರವಿರಲಾರದು,
تەفسیرە عەرەبیەکان:
هٰذَا مَا تُوْعَدُوْنَ لِكُلِّ اَوَّابٍ حَفِیْظٍ ۟ۚ
ನಿಮಗೆ ವಾಗ್ದಾನ ಮಾಡಲಾಗುತ್ತಿದ್ದುದು (ಸ್ವರ್ಗ) ಇದುವೇ ಆಗಿದೆ. ಇದು ಪಶ್ಚಾತಾಪ ಪಟ್ಟು ಮರಳುವ ಹಾಗೂ ಜಾಗರೂಕತೆ ವಹಿಸುತ್ತಿದ್ದ ಪ್ರತಿಯೊಬ್ಬ ವ್ಯಕ್ತಿಗಾಗಿದೆ.
تەفسیرە عەرەبیەکان:
مَنْ خَشِیَ الرَّحْمٰنَ بِالْغَیْبِ وَجَآءَ بِقَلْبٍ مُّنِیْبِ ۟ۙ
ಯಾರು ಪರಮದಯಾಮಯನನ್ನು ಕಣ್ಣಾರೆ ಕಾಣದೆ ಭಯಪಟ್ಟು ಮತ್ತು ಪಶ್ಚಾತಾಪ ಪಡುವ ಹೃದಯದೊಂದಿಗೆ ಮರಳಿದವನಿಗಾಗಿ.
تەفسیرە عەرەبیەکان:
١دْخُلُوْهَا بِسَلٰمٍ ؕ— ذٰلِكَ یَوْمُ الْخُلُوْدِ ۟
ನೀವು ಶಾಂತಿಯೊAದಿಗೆ ಅದರಲ್ಲಿ (ಸ್ವರ್ಗದಲ್ಲಿ) ಪ್ರವೇಶಿಸಿರಿ. ಇದು ಶಾಶ್ವತವಾದ (ಜೀವನದ) ದಿನವಾಗಿದೆ.
تەفسیرە عەرەبیەکان:
لَهُمْ مَّا یَشَآءُوْنَ فِیْهَا وَلَدَیْنَا مَزِیْدٌ ۟
ಅಲ್ಲಿ ಅವರು ಬಯಸುವುದೆಲ್ಲವೂ ಅವರಿಗೆ ಸಿಗುವುದು, (ಮಾತ್ರವಲ್ಲ) ನಮ್ಮ ಬಳಿ ಇನ್ನೂ ಅಧಿಕವಿದೆ.
تەفسیرە عەرەبیەکان:
وَكَمْ اَهْلَكْنَا قَبْلَهُمْ مِّنْ قَرْنٍ هُمْ اَشَدُّ مِنْهُمْ بَطْشًا فَنَقَّبُوْا فِی الْبِلَادِ ؕ— هَلْ مِنْ مَّحِیْصٍ ۟
ಮತ್ತು ಇವರಿಗಿಂತ ಮುಂಚೆಯೂ ನಾವು ಅದೆಷ್ಟೋ ಪೀಳಿಗೆಗಳನ್ನು ನಾಶ ಮಾಡಿದ್ದೇವೆ! ಅವರು ಇವರಿಗಿಂತ ಹೆಚ್ಚು ಬಲಶಾಲಿಗಳಾಗಿದ್ದರು, (ರಕ್ಷಣೆಗೆ) ಯಾವುದಾದರೂ ಅಭಯ ಸ್ಥಾನವಿದೆಯೇ ಎಂದು ಅವರು ನಾಡುಗಳನ್ನೆಲ್ಲಾ ಜಾಲಾಡಿದ್ದರು.
تەفسیرە عەرەبیەکان:
اِنَّ فِیْ ذٰلِكَ لَذِكْرٰی لِمَنْ كَانَ لَهٗ قَلْبٌ اَوْ اَلْقَی السَّمْعَ وَهُوَ شَهِیْدٌ ۟
ಇದರಲ್ಲಿ ಪ್ರತಿಯೊಬ್ಬ ಹೃದಯವುಳ್ಳ, ಲಕ್ಷಕೊಟ್ಟು ಕೇಳುವ ಮತ್ತು ಉಪಸ್ಥಿತನಿರುವವನಿಗೆ ಪಾಠವಿದೆ.
تەفسیرە عەرەبیەکان:
وَلَقَدْ خَلَقْنَا السَّمٰوٰتِ وَالْاَرْضَ وَمَا بَیْنَهُمَا فِیْ سِتَّةِ اَیَّامٍ ۖۗ— وَّمَا مَسَّنَا مِنْ لُّغُوْبٍ ۟
ನಿಶ್ಚಯವಾಗಿಯು ಆಕಾಶಗಳನ್ನು, ಭೂಮಿಯನ್ನು ಮತ್ತು ಅವುಗಳ ಮಧ್ಯೆ ಇರುವುದನ್ನು ನಾವು ಆರು ದಿನಗಳಲ್ಲಿ ಸೃಷ್ಟಿಸಿದ್ದೇವೆ, ನಮ್ಮನ್ನು ಯಾವ ದಣಿವು ಸ್ಪರ್ಶಿಸಲಿಲ್ಲ.
تەفسیرە عەرەبیەکان:
فَاصْبِرْ عَلٰی مَا یَقُوْلُوْنَ وَسَبِّحْ بِحَمْدِ رَبِّكَ قَبْلَ طُلُوْعِ الشَّمْسِ وَقَبْلَ الْغُرُوْبِ ۟ۚ
ಅದ್ದರಿಂದ (ಓ ಪೈಗಂಬರರೇ) ಅವರು ಆಡುವ ಮಾತುಗಳ ಕುರಿತು ಸಹನೆ ವಹಿಸಿರಿ ಮತ್ತು ಸೂರ್ಯೋದಯಕ್ಕೆ ಮುಂಚೆಯೂ, ಸೂರ್ಯಾಸ್ತಮಕ್ಕೆ ಮುಂಚೆಯೂ ನಿಮ್ಮ ಪ್ರಭುವಿನ ಪಾವಿತ್ರö್ಯವನ್ನು ಸ್ತುತಿಸಿರಿ.
تەفسیرە عەرەبیەکان:
وَمِنَ الَّیْلِ فَسَبِّحْهُ وَاَدْبَارَ السُّجُوْدِ ۟
ರಾತ್ರಿಯ ಸಮಯದಲ್ಲೂ, ಸಾಷ್ಟಾಂಗವೆರಗಿದ ನಂತರವೂ ಅವನ ಪಾವಿತ್ರö್ಯವನ್ನು ಕೊಂಡಾಡಿರಿ.
تەفسیرە عەرەبیەکان:
وَاسْتَمِعْ یَوْمَ یُنَادِ الْمُنَادِ مِنْ مَّكَانٍ قَرِیْبٍ ۟ۙ
ಗಮನವಿಟ್ಟು ಕೇಳಿರಿ; ಅಂದು ಒಬ್ಬ ಕೂಗಿ ಕರೆಯುವಾತನು ಅತಿ ಸಮೀಪದಿಂದಲೇ ಕೂಗಿಕರೆಯುವನು.
تەفسیرە عەرەبیەکان:
یَّوْمَ یَسْمَعُوْنَ الصَّیْحَةَ بِالْحَقِّ ؕ— ذٰلِكَ یَوْمُ الْخُرُوْجِ ۟
ಅಂದು ಆ ಘೋರ ಆರ್ಭಟವನ್ನು ( ಕಹಳೆಯನ್ನು) ಅವರು ಕೇಳುವರು, ಅದು (ಸಮಾಧಿಗಳಿಂದ) ಹೊರಬರುವ ದಿನವಾಗಿರುವುದು.
تەفسیرە عەرەبیەکان:
اِنَّا نَحْنُ نُحْیٖ وَنُمِیْتُ وَاِلَیْنَا الْمَصِیْرُ ۟ۙ
ಖಂಡಿತವಾಗಿಯೂ ನಾವೇ ಜೀವಂತಗೊಳಿಸುತ್ತೇವೆ ಮತ್ತು ಮರಣಕೊಡುತ್ತೇವೆ, ಕೊನೆಗೆ ನಮ್ಮೆಡೆಗೆ ಮರಳಬೇಕಾಗಿದೆ.
تەفسیرە عەرەبیەکان:
یَوْمَ تَشَقَّقُ الْاَرْضُ عَنْهُمْ سِرَاعًا ؕ— ذٰلِكَ حَشْرٌ عَلَیْنَا یَسِیْرٌ ۟
ಅಂದು ಭೂಮಿಯು ಅವರಿಂದ ಬಿರಿಯುವುದು ಮತ್ತು ಅವರು ಅದರಿಂದ ಹೊರಬಂದು, ವೇಗವಾಗಿ ಓಡುತ್ತಿರುವರು, ಈ ಒಟ್ಟು ಸೇರಿಸುವಿಕೆಯು ನಮ್ಮ ಪಾಲಿಗೆ ಅತ್ಯಂತ ಸುಲಭವಾಗಿದೆ,
تەفسیرە عەرەبیەکان:
نَحْنُ اَعْلَمُ بِمَا یَقُوْلُوْنَ وَمَاۤ اَنْتَ عَلَیْهِمْ بِجَبَّارٍ ۫— فَذَكِّرْ بِالْقُرْاٰنِ مَنْ یَّخَافُ وَعِیْدِ ۟۠
ಅವರು ಹೇಳುತ್ತಿರುವುದನ್ನು ನಾವು ಚೆನ್ನಾಗಿ ಅರಿತಿದ್ದೇವೆ ಮತ್ತು ಅವರ ಮೇಲೆ ಬಲವಂತ ಮಾಡುವವರಲ್ಲ, ಆದ್ದರಿಂದ ನನ್ನ ಎಚ್ಚರಿಕೆಯನ್ನು ಭಯಪಡುವವರಿಗೆ ತಾವು ಕುರ್‌ಆನಿನ ಮೂಲಕ ಉಪದೇಶ ನೀಡಿರಿ.
تەفسیرە عەرەبیەکان:
 
وه‌رگێڕانی ماناكان سوره‌تی: سورەتی ق
پێڕستی سوره‌ته‌كان ژمارەی پەڕە
 
وه‌رگێڕانی ماناكانی قورئانی پیرۆز - الترجمة الكنادية - بشير ميسوري - پێڕستی وه‌رگێڕاوه‌كان

ترجمة معاني القرآن الكريم إلى اللغة الكنادية ترجمها بشير ميسوري.

داخستن