وه‌رگێڕانی ماناكانی قورئانی پیرۆز - وەرگێڕاوی کەنادی * - پێڕستی وه‌رگێڕاوه‌كان

XML CSV Excel API
Please review the Terms and Policies

وه‌رگێڕانی ماناكان سوره‌تی: سورەتی غافر   ئایه‌تی:

ಸೂರ ಗಾಫಿರ್

حٰمٓ ۟ۚ
ಹಾ-ಮೀಮ್.
تەفسیرە عەرەبیەکان:
تَنْزِیْلُ الْكِتٰبِ مِنَ اللّٰهِ الْعَزِیْزِ الْعَلِیْمِ ۟ۙ
ಈ ಗ್ರಂಥವು ಪ್ರಬಲನು ಮತ್ತು ಸರ್ವಜ್ಞನಾದ ಅಲ್ಲಾಹನ ಕಡೆಯಿಂದ ಅವತೀರ್ಣವಾಗಿದೆ.
تەفسیرە عەرەبیەکان:
غَافِرِ الذَّنْۢبِ وَقَابِلِ التَّوْبِ شَدِیْدِ الْعِقَابِ ذِی الطَّوْلِ ؕ— لَاۤ اِلٰهَ اِلَّا هُوَ ؕ— اِلَیْهِ الْمَصِیْرُ ۟
ಅವನು ಪಾಪವನ್ನು ಕ್ಷಮಿಸುವವನು, ಪಶ್ಚಾತ್ತಾಪವನ್ನು ಸ್ವೀಕರಿಸುವವನು, ಕಠಿಣವಾಗಿ ಶಿಕ್ಷಿಸುವವನು ಮತ್ತು ಅಪಾರ ಸಾಮರ್ಥ್ಯವುಳ್ಳವನಾಗಿದ್ದಾನೆ. ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಗಮ್ಯಸ್ಥಾನವು ಅವನ ಬಳಿಗೇ ಆಗಿದೆ.
تەفسیرە عەرەبیەکان:
مَا یُجَادِلُ فِیْۤ اٰیٰتِ اللّٰهِ اِلَّا الَّذِیْنَ كَفَرُوْا فَلَا یَغْرُرْكَ تَقَلُّبُهُمْ فِی الْبِلَادِ ۟
ಅಲ್ಲಾಹನ ವಚನಗಳ ಬಗ್ಗೆ ಸತ್ಯನಿಷೇಧಿಗಳು ಮಾತ್ರ ತರ್ಕಿಸುತ್ತಾರೆ. ಅವರು ಊರುಗಳಲ್ಲಿ ಸ್ವೇಚ್ಛವಾಗಿ ವಿಹರಿಸುವುದು ನಿಮ್ಮನ್ನು ಮರುಳುಗೊಳಿಸದಿರಲಿ.
تەفسیرە عەرەبیەکان:
كَذَّبَتْ قَبْلَهُمْ قَوْمُ نُوْحٍ وَّالْاَحْزَابُ مِنْ بَعْدِهِمْ ۪— وَهَمَّتْ كُلُّ اُمَّةٍ بِرَسُوْلِهِمْ لِیَاْخُذُوْهُ وَجٰدَلُوْا بِالْبَاطِلِ لِیُدْحِضُوْا بِهِ الْحَقَّ فَاَخَذْتُهُمْ ۫— فَكَیْفَ كَانَ عِقَابِ ۟
ಅವರಿಗಿಂತ ಮೊದಲು ನೂಹರ ಜನರು ಮತ್ತು ಅವರ ನಂತರದ ಪಂಗಡಗಳು (ಪ್ರವಾದಿಗಳನ್ನು) ನಿಷೇಧಿಸಿದ್ದರು. ಎಲ್ಲಾ ಸಮುದಾಯಗಳ ಜನರೂ ತಮ್ಮ ಸಂದೇಶವಾಹಕರನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದರು. ಸತ್ಯವನ್ನು ನಾಶ ಮಾಡಲು ಅವರು ಅಸತ್ಯದ ಮೂಲಕ ತರ್ಕಿಸಿದರು. ಆದ್ದರಿಂದ ನಾನು ಅವರನ್ನು ಹಿಡಿದು ಶಿಕ್ಷಿಸಿದೆನು. ಆಗ ನನ್ನ ಶಿಕ್ಷೆಯು ಹೇಗಿತ್ತು!
تەفسیرە عەرەبیەکان:
وَكَذٰلِكَ حَقَّتْ كَلِمَتُ رَبِّكَ عَلَی الَّذِیْنَ كَفَرُوْۤا اَنَّهُمْ اَصْحٰبُ النَّارِ ۟
ಈ ರೀತಿ ಸತ್ಯನಿಷೇಧಿಗಳ ಮೇಲೆ ಅವರು ನರಕವಾಸಿಗಳು ಎಂಬ ತಮ್ಮ ಪರಿಪಾಲಕನ (ಅಲ್ಲಾಹನ) ವಚನವು ಖಾತ್ರಿಯಾಗಿ ಬಿಟ್ಟಿದೆ.
تەفسیرە عەرەبیەکان:
اَلَّذِیْنَ یَحْمِلُوْنَ الْعَرْشَ وَمَنْ حَوْلَهٗ یُسَبِّحُوْنَ بِحَمْدِ رَبِّهِمْ وَیُؤْمِنُوْنَ بِهٖ وَیَسْتَغْفِرُوْنَ لِلَّذِیْنَ اٰمَنُوْا ۚ— رَبَّنَا وَسِعْتَ كُلَّ شَیْءٍ رَّحْمَةً وَّعِلْمًا فَاغْفِرْ لِلَّذِیْنَ تَابُوْا وَاتَّبَعُوْا سَبِیْلَكَ وَقِهِمْ عَذَابَ الْجَحِیْمِ ۟
ಸಿಂಹಾಸನವನ್ನು ಹೊರುವವರು ಮತ್ತು ಅದರ ಸುತ್ತಲಲ್ಲಿರುವವರು (ದೇವದೂತರು‍ಗಳು) ಅವರ ಪರಿಪಾಲಕನನ್ನು (ಅಲ್ಲಾಹನನ್ನು) ಸ್ತುತಿಸುವುದರೊಂದಿಗೆ ಅವನ ಪರಿಶುದ್ಧಿಯನ್ನು ಕೊಂಡಾಡುತ್ತಾರೆ. ಅವರು ಅವನಲ್ಲಿ ವಿಶ್ವಾಸವಿಟ್ಟಿದ್ದಾರೆ ಮತ್ತು ಸತ್ಯವಿಶ್ವಾಸಿಗಳಿಗಾಗಿ ಕ್ಷಮೆಯಾಚನೆ ಮಾಡುತ್ತಾ ಪ್ರಾರ್ಥಿಸುತ್ತಾರೆ: “ನಮ್ಮ ಪರಿಪಾಲಕನೇ! ನೀನು ನಿನ್ನ ದಯೆ ಮತ್ತು ಜ್ಞಾನದ ಮೂಲಕ ಎಲ್ಲಾ ವಸ್ತುಗಳನ್ನು ಆವರಿಸಿಕೊಂಡಿರುವೆ. ಆದ್ದರಿಂದ ಪಶ್ಚಾತ್ತಾಪಪಡುವವರನ್ನು ಮತ್ತು ನಿನ್ನ ಮಾರ್ಗವನ್ನು ಹಿಂಬಾಲಿಸುವವರನ್ನು ಕ್ಷಮಿಸು. ಅವರನ್ನು ನರಕ ಶಿಕ್ಷೆಯಿಂದ ಪಾರು ಮಾಡು.
تەفسیرە عەرەبیەکان:
رَبَّنَا وَاَدْخِلْهُمْ جَنّٰتِ عَدْنِ ١لَّتِیْ وَعَدْتَّهُمْ وَمَنْ صَلَحَ مِنْ اٰبَآىِٕهِمْ وَاَزْوَاجِهِمْ وَذُرِّیّٰتِهِمْ ؕ— اِنَّكَ اَنْتَ الْعَزِیْزُ الْحَكِیْمُ ۟ۙ
ನಮ್ಮ ಪರಿಪಾಲಕನೇ! ನೀನು ಅವರನ್ನು, ಅವರ ಮಾತಾಪಿತರಲ್ಲಿ, ಪತ್ನಿಯರಲ್ಲಿ ಹಾಗೂ ಮಕ್ಕಳಲ್ಲಿರುವ ನೀತಿವಂತರನ್ನು ನೀನು ಅವರಿಗೆ ವಾಗ್ದಾನ ಮಾಡಿದ ಶಾಶ್ವತವಾಸಕ್ಕಿರುವ ಸ್ವರ್ಗಗಳಿಗೆ ಪ್ರವೇಶ ಮಾಡಿಸು. ನಿಶ್ಚಯವಾಗಿಯೂ ನೀನು ಪ್ರಬಲನು ಮತ್ತು ವಿವೇಕಪೂರ್ಣನಾಗಿರುವೆ.
تەفسیرە عەرەبیەکان:
وَقِهِمُ السَّیِّاٰتِ ؕ— وَمَنْ تَقِ السَّیِّاٰتِ یَوْمَىِٕذٍ فَقَدْ رَحِمْتَهٗ ؕ— وَذٰلِكَ هُوَ الْفَوْزُ الْعَظِیْمُ ۟۠
ಅವರನ್ನು ಕೆಡುಕುಗಳಿಂದ ರಕ್ಷಿಸು. ಆ ದಿನ ನೀನು ಯಾರನ್ನು ಕೆಡುಕುಗಳಿಂದ ರಕ್ಷಿಸುವೆಯೋ ಅವನಿಗೆ ನೀನು ಖಂಡಿತ ಕರುಣೆ ತೋರಿರುವೆ. ಅದೇ ಮಹಾ ಯಶಸ್ಸು.”
تەفسیرە عەرەبیەکان:
اِنَّ الَّذِیْنَ كَفَرُوْا یُنَادَوْنَ لَمَقْتُ اللّٰهِ اَكْبَرُ مِنْ مَّقْتِكُمْ اَنْفُسَكُمْ اِذْ تُدْعَوْنَ اِلَی الْاِیْمَانِ فَتَكْفُرُوْنَ ۟
ನಿಶ್ಚಯವಾಗಿಯೂ ಸತ್ಯನಿಷೇಧಿಗಳನ್ನು ಕರೆದು ಹೀಗೆ ಹೇಳಲಾಗುವುದು: “ನಿಮಗೆ ನಿಮ್ಮ ಮೇಲಿರುವ ಕೋಪಕ್ಕಿಂತಲೂ ಹೆಚ್ಚು ಕೋಪವು ನಿಮ್ಮನ್ನು ಸತ್ಯವಿಶ್ವಾಸದ ಕಡೆಗೆ ಕರೆಯಲಾಗುತ್ತಿದ್ದೂ ಸಹ ನೀವು ಸತ್ಯವನ್ನು ನಿಷೇಧಿಸುತ್ತಿದ್ದ ಸಂದರ್ಭ ಅಲ್ಲಾಹನಿಗೆ ನಿಮ್ಮ ಮೇಲಿತ್ತು.”
تەفسیرە عەرەبیەکان:
قَالُوْا رَبَّنَاۤ اَمَتَّنَا اثْنَتَیْنِ وَاَحْیَیْتَنَا اثْنَتَیْنِ فَاعْتَرَفْنَا بِذُنُوْبِنَا فَهَلْ اِلٰی خُرُوْجٍ مِّنْ سَبِیْلٍ ۟
ಅವರು ಹೇಳುವರು: “ನಮ್ಮ ಪರಿಪಾಲಕನೇ! ನೀನು ನಮ್ಮನ್ನು ಎರಡು ಬಾರಿ ಸಾವನ್ನಪ್ಪುವಂತೆ ಮಾಡಿದೆ ಮತ್ತು ನಮಗೆ ಎರಡು ಬಾರಿ ಜೀವವನ್ನು ನೀಡಿದೆ.[1] ನಾವು ನಮ್ಮ ತಪ್ಪುಗಳನ್ನು ಒಪ್ಪಿಕೊಂಡಿದ್ದೇವೆ. ಆದ್ದರಿಂದ ಹೊರಹೋಗಲು ಯಾವುದಾದರೂ ದಾರಿಯಿದೆಯೇ?”
[1] ಮೊದಲನೇ ಸಾವು ಎಂದರೆ ಜನನಕ್ಕೆ ಮುನ್ನ ಇದ್ದಂತಹ ನಿರ್ಜೀವ ಸ್ಥಿತಿ. ಎರಡನೇ ಸಾವು ಮನುಷ್ಯನ ಸ್ವಾಭಾವಿಕ ಮರಣ. ಮೊದಲನೇ ಜೀವನವು ಇಹಲೋಕ ಜೀವನ ಮತ್ತು ಎರಡನೇ ಜೀವನವು ಪರಲೋಕ ಜೀವನ.
تەفسیرە عەرەبیەکان:
ذٰلِكُمْ بِاَنَّهٗۤ اِذَا دُعِیَ اللّٰهُ وَحْدَهٗ كَفَرْتُمْ ۚ— وَاِنْ یُّشْرَكْ بِهٖ تُؤْمِنُوْا ؕ— فَالْحُكْمُ لِلّٰهِ الْعَلِیِّ الْكَبِیْرِ ۟
ಅದೇಕೆಂದರೆ, ಅಲ್ಲಾಹನೊಂದಿಗೆ ಮಾತ್ರ ಪ್ರಾರ್ಥಿಸಲಾದರೆ ನೀವು ನಿಷೇಧಿಸುತ್ತಿದ್ದಿರಿ ಮತ್ತು ಅವನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡಲಾದರೆ ನೀವು ವಿಶ್ವಾಸವಿಡುತ್ತಿದ್ದಿರಿ. ಆದರೆ (ಇಂದು) ತೀರ್ಪು ನೀಡುವ ಅಧಿಕಾರವು ಅತ್ಯುನ್ನತನು ಮತ್ತು ಸರ್ವಶ್ರೇಷ್ಠನಾದ ಅಲ್ಲಾಹನಿಗಾಗಿದೆ.
تەفسیرە عەرەبیەکان:
هُوَ الَّذِیْ یُرِیْكُمْ اٰیٰتِهٖ وَیُنَزِّلُ لَكُمْ مِّنَ السَّمَآءِ رِزْقًا ؕ— وَمَا یَتَذَكَّرُ اِلَّا مَنْ یُّنِیْبُ ۟
ಅವನು ತನ್ನ ದೃಷ್ಟಾಂತಗಳನ್ನು ನಿಮಗೆ ತೋರಿಸಿಕೊಡುತ್ತಾನೆ ಮತ್ತು ಆಕಾಶದಿಂದ ನಿಮಗೆ ಉಪಜೀವನವನ್ನು ಇಳಿಸಿಕೊಡುತ್ತಾನೆ. (ಅಲ್ಲಾಹನ ಕಡೆಗೆ) ಮರಳುವವರು ಮಾತ್ರ ಉಪದೇಶವನ್ನು ಸ್ವೀಕರಿಸುತ್ತಾರೆ.
تەفسیرە عەرەبیەکان:
فَادْعُوا اللّٰهَ مُخْلِصِیْنَ لَهُ الدِّیْنَ وَلَوْ كَرِهَ الْكٰفِرُوْنَ ۟
ನೀವು ಧರ್ಮವನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸಿ ಅವನನ್ನು ಕರೆದು ಪ್ರಾರ್ಥಿಸಿರಿ. ಸತ್ಯನಿಷೇಧಿಗಳು ಅಸಹ್ಯಪಟ್ಟರೂ ಸಹ.
تەفسیرە عەرەبیەکان:
رَفِیْعُ الدَّرَجٰتِ ذُو الْعَرْشِ ۚ— یُلْقِی الرُّوْحَ مِنْ اَمْرِهٖ عَلٰی مَنْ یَّشَآءُ مِنْ عِبَادِهٖ لِیُنْذِرَ یَوْمَ التَّلَاقِ ۟ۙ
ಅವನು ಉನ್ನತ ಪದವಿಗಳನ್ನು ಹೊಂದಿರುವವನು ಮತ್ತು ಸಿಂಹಾಸನದ ಒಡೆಯನಾಗಿದ್ದಾನೆ. ಅವನು ತನ್ನ ದಾಸರಲ್ಲಿ ಅವನು ಇಚ್ಛಿಸುವವರಿಗೆ ದೇವವಾಣಿಯನ್ನು ನೀಡುತ್ತಾನೆ. ಭೇಟಿಯ ದಿನದ ಬಗ್ಗೆ ಅವರು ಜನರಿಗೆ ಎಚ್ಚರಿಕೆ ನೀಡಲೆಂದು.
تەفسیرە عەرەبیەکان:
یَوْمَ هُمْ بَارِزُوْنَ ۚ۬— لَا یَخْفٰی عَلَی اللّٰهِ مِنْهُمْ شَیْءٌ ؕ— لِمَنِ الْمُلْكُ الْیَوْمَ ؕ— لِلّٰهِ الْوَاحِدِ الْقَهَّارِ ۟
ಜನರೆಲ್ಲರೂ ಬಯಲಿಗೆ ಬರುವ ದಿನ. ಅವರಿಗೆ ಸಂಬಂಧಿಸಿದ ಯಾವುದೇ ವಿಷಯವು ಅಲ್ಲಾಹನಿಂದ ಮರೆಯಾಗಿರುವುದಿಲ್ಲ. ಇಂದು ಸಾರ್ವಭೌಮತ್ವವು ಯಾರಿಗೆ? ಏಕೈಕನು ಮತ್ತು ಸರ್ವಾಧಿಕಾರಿಯಾದ ಅಲ್ಲಾಹನಿಗೆ.
تەفسیرە عەرەبیەکان:
اَلْیَوْمَ تُجْزٰی كُلُّ نَفْسٍ بِمَا كَسَبَتْ ؕ— لَا ظُلْمَ الْیَوْمَ ؕ— اِنَّ اللّٰهَ سَرِیْعُ الْحِسَابِ ۟
ಇಂದು ಪ್ರತಿಯೊಬ್ಬನಿಗೂ ಅವನು ಮಾಡಿದ ಕರ್ಮಗಳ ಪ್ರತಿಫಲವನ್ನು ನೀಡಲಾಗುವುದು. ಇಂದು ಯಾರಿಗೂ ಅನ್ಯಾಯವಾಗುವುದಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಅತಿವೇಗವಾಗಿ ವಿಚಾರಣೆ ಮಾಡುತ್ತಾನೆ.
تەفسیرە عەرەبیەکان:
وَاَنْذِرْهُمْ یَوْمَ الْاٰزِفَةِ اِذِ الْقُلُوْبُ لَدَی الْحَنَاجِرِ كٰظِمِیْنَ ؕ۬— مَا لِلظّٰلِمِیْنَ مِنْ حَمِیْمٍ وَّلَا شَفِیْعٍ یُّطَاعُ ۟ؕ
ಅವರಿಗೆ ಬಹಳ ಹತ್ತಿರವಾಗುವ ಆ ದಿನದ (ಪುನರುತ್ಥಾನ ದಿನದ) ಬಗ್ಗೆ ಎಚ್ಚರಿಕೆ ನೀಡಿರಿ. ಹೃದಯಗಳು ಗಂಟಲಿಗೆ ತಲುಪುವ ಮತ್ತು ಅವರೆಲ್ಲರೂ ನಿಶ್ಶಬ್ದರಾಗುವ ಸಂದರ್ಭ. ಅಕ್ರಮಿಗಳಿಗೆ ಯಾವುದೇ ಆಪ್ತಮಿತ್ರರು ಅಥವಾ ಅಂಗೀಕಾರಯೋಗ್ಯ ಶಿಫಾರಸು ಮಾಡುವವರು ಯಾರೂ ಇರಲಾರರು.
تەفسیرە عەرەبیەکان:
یَعْلَمُ خَآىِٕنَةَ الْاَعْیُنِ وَمَا تُخْفِی الصُّدُوْرُ ۟
ಅವನು ಕಣ್ಣುಗಳ ವಂಚನೆಯ ನೋಟಗಳನ್ನು ಮತ್ತು ಹೃದಯಗಳು ಬಚ್ಚಿಡುವುದನ್ನು ತಿಳಿಯುತ್ತಾನೆ.
تەفسیرە عەرەبیەکان:
وَاللّٰهُ یَقْضِیْ بِالْحَقِّ ؕ— وَالَّذِیْنَ یَدْعُوْنَ مِنْ دُوْنِهٖ لَا یَقْضُوْنَ بِشَیْءٍ ؕ— اِنَّ اللّٰهَ هُوَ السَّمِیْعُ الْبَصِیْرُ ۟۠
ಅಲ್ಲಾಹು ಸರಿಯಾದ ರೀತಿಯಲ್ಲಿ ತೀರ್ಪು ನೀಡುತ್ತಾನೆ. ಅವರು ಅವನನ್ನು ಬಿಟ್ಟು ಯಾರನ್ನು ಕರೆದು ಪ್ರಾರ್ಥಿಸುತ್ತಾರೋ ಅವರು ಯಾವುದೇ ವಿಷಯದಲ್ಲೂ ತೀರ್ಪು ನೀಡುವುದಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ನೋಡುವವನಾಗಿದ್ದಾನೆ.
تەفسیرە عەرەبیەکان:
اَوَلَمْ یَسِیْرُوْا فِی الْاَرْضِ فَیَنْظُرُوْا كَیْفَ كَانَ عَاقِبَةُ الَّذِیْنَ كَانُوْا مِنْ قَبْلِهِمْ ؕ— كَانُوْا هُمْ اَشَدَّ مِنْهُمْ قُوَّةً وَّاٰثَارًا فِی الْاَرْضِ فَاَخَذَهُمُ اللّٰهُ بِذُنُوْبِهِمْ ؕ— وَمَا كَانَ لَهُمْ مِّنَ اللّٰهِ مِنْ وَّاقٍ ۟
ಅವರು ಭೂಮಿಯಲ್ಲಿ ಸಂಚರಿಸಿ ಅವರಿಗಿಂತ ಮೊದಲಿನವರ ಅಂತ್ಯವು ಹೇಗಿತ್ತೆಂದು ನೋಡುವುದಿಲ್ಲವೇ? ಅವರು ಶಕ್ತಿ-ಸಾಮರ್ಥ್ಯದಲ್ಲಿ ಮತ್ತು ಭೂಮಿಯಲ್ಲಿ ಸ್ಮಾರಕಗಳನ್ನು ಬಿಟ್ಟುಹೋಗುವುದರಲ್ಲಿ ಇವರಿಗಿಂತ ಹೆಚ್ಚು ಶ್ರೇಷ್ಠರಾಗಿದ್ದರು. ಆದರೆ ಅವರು ಮಾಡಿದ ಪಾಪಗಳ ಕಾರಣದಿಂದ ಅಲ್ಲಾಹು ಅವರನ್ನು ಹಿಡಿದು ಶಿಕ್ಷಿಸಿದನು. ಅವರನ್ನು ಅಲ್ಲಾಹನ ಶಿಕ್ಷೆಯಿಂದ ರಕ್ಷಿಸುವವರು ಯಾರೂ ಇರಲಿಲ್ಲ.
تەفسیرە عەرەبیەکان:
ذٰلِكَ بِاَنَّهُمْ كَانَتْ تَّاْتِیْهِمْ رُسُلُهُمْ بِالْبَیِّنٰتِ فَكَفَرُوْا فَاَخَذَهُمُ اللّٰهُ ؕ— اِنَّهٗ قَوِیٌّ شَدِیْدُ الْعِقَابِ ۟
ಅದೇಕೆಂದರೆ ಅವರ ಬಳಿಗೆ ಸಂದೇಶವಾಹಕರುಗಳು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಬರುತ್ತಿದ್ದರು. ಆದರೆ ಅವರು ನಿಷೇಧಿಸಿದರು. ಆದ್ದರಿಂದ ಅಲ್ಲಾಹು ಅವರನ್ನು ಹಿಡಿದು ಶಿಕ್ಷಿಸಿದನು. ನಿಶ್ಚಯವಾಗಿಯೂ ಅವನು ಮಹಾ ಶಕ್ತಿಶಾಲಿ ಮತ್ತು ಕಠಿಣವಾಗಿ ಶಿಕ್ಷಿಸುವವನಾಗಿದ್ದಾನೆ.
تەفسیرە عەرەبیەکان:
وَلَقَدْ اَرْسَلْنَا مُوْسٰی بِاٰیٰتِنَا وَسُلْطٰنٍ مُّبِیْنٍ ۟ۙ
ನಿಶ್ಚಯವಾಗಿಯೂ ನಾವು ಮೂಸಾರನ್ನು ನಮ್ಮ ವಚನಗಳೊಂದಿಗೆ ಮತ್ತು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಕಳುಹಿಸಿದ್ದೆವು.
تەفسیرە عەرەبیەکان:
اِلٰی فِرْعَوْنَ وَهَامٰنَ وَقَارُوْنَ فَقَالُوْا سٰحِرٌ كَذَّابٌ ۟
ಫರೋಹ, ಹಾಮಾನ್ ಮತ್ತು ಕಾರೂನನ ಬಳಿಗೆ. ಆದರೆ ಅವರು ಹೇಳಿದರು: “ಮಾಟಗಾರ ಮತ್ತು ಸುಳ್ಳುಗಾರ.”
تەفسیرە عەرەبیەکان:
فَلَمَّا جَآءَهُمْ بِالْحَقِّ مِنْ عِنْدِنَا قَالُوا اقْتُلُوْۤا اَبْنَآءَ الَّذِیْنَ اٰمَنُوْا مَعَهٗ وَاسْتَحْیُوْا نِسَآءَهُمْ ؕ— وَمَا كَیْدُ الْكٰفِرِیْنَ اِلَّا فِیْ ضَلٰلٍ ۟
ಅವರು (ಮೂಸಾ) ನಮ್ಮ ಕಡೆಯ ಸತ್ಯದೊಂದಿಗೆ ಅವರ ಬಳಿಗೆ ಬಂದಾಗ ಅವರು ಹೇಳಿದರು: “ಅವನ ಜೊತೆಗೆ ವಿಶ್ವಾಸವಿಟ್ಟವರ ಗಂಡುಮಕ್ಕಳನ್ನು ಕೊಲ್ಲಿರಿ ಮತ್ತು ಅವರ ಹೆಣ್ಣುಮಕ್ಕಳನ್ನು ಜೀವಂತ ಬಿಡಿ.” ಸತ್ಯನಿಷೇಧಿಗಳ ತಂತ್ರಗಾರಿಕೆಯು ಪ್ರಮಾದದಲ್ಲೇ ಇದೆ.
تەفسیرە عەرەبیەکان:
وَقَالَ فِرْعَوْنُ ذَرُوْنِیْۤ اَقْتُلْ مُوْسٰی وَلْیَدْعُ رَبَّهٗ ۚؕ— اِنِّیْۤ اَخَافُ اَنْ یُّبَدِّلَ دِیْنَكُمْ اَوْ اَنْ یُّظْهِرَ فِی الْاَرْضِ الْفَسَادَ ۟
ಫರೋಹ ಹೇಳಿದನು: “ನನ್ನನ್ನು ಬಿಡಿ! ನಾನು ಮೂಸಾನನ್ನು ಕೊಂದು ಬಿಡುತ್ತೇನೆ. ಅವನು ಅವನ ಪರಿಪಾಲಕನನ್ನು (ಅಲ್ಲಾಹನನ್ನು) ಕರೆಯಲಿ! ಅವನು ನಿಮ್ಮ ಧರ್ಮವನ್ನು ಬದಲಾಯಿಸಬಹುದು ಅಥವಾ ಭೂಮಿಯಲ್ಲಿ ಕಿಡಿಗೇಡಿತನ ಮಾಡಬಹುದು ಎಂದು ನನಗೆ ಭಯವಾಗುತ್ತಿದೆ.”
تەفسیرە عەرەبیەکان:
وَقَالَ مُوْسٰۤی اِنِّیْ عُذْتُ بِرَبِّیْ وَرَبِّكُمْ مِّنْ كُلِّ مُتَكَبِّرٍ لَّا یُؤْمِنُ بِیَوْمِ الْحِسَابِ ۟۠
ಮೂಸಾ ಹೇಳಿದರು: “ವಿಚಾರಣಾ ದಿನದಲ್ಲಿ ವಿಶ್ವಾಸವಿಡದ ಎಲ್ಲಾ ಅಹಂಕಾರಿಗಳ ವಿರುದ್ಧ ನಾನು ನನ್ನ ಮತ್ತು ನಿಮ್ಮ ಪರಿಪಾಲಕನೊಂದಿಗೆ (ಅಲ್ಲಾಹನೊಂದಿಗೆ) ಅಭಯ ಯಾಚಿಸುತ್ತೇನೆ.”
تەفسیرە عەرەبیەکان:
وَقَالَ رَجُلٌ مُّؤْمِنٌ ۖۗ— مِّنْ اٰلِ فِرْعَوْنَ یَكْتُمُ اِیْمَانَهٗۤ اَتَقْتُلُوْنَ رَجُلًا اَنْ یَّقُوْلَ رَبِّیَ اللّٰهُ وَقَدْ جَآءَكُمْ بِالْبَیِّنٰتِ مِنْ رَّبِّكُمْ ؕ— وَاِنْ یَّكُ كَاذِبًا فَعَلَیْهِ كَذِبُهٗ ۚ— وَاِنْ یَّكُ صَادِقًا یُّصِبْكُمْ بَعْضُ الَّذِیْ یَعِدُكُمْ ؕ— اِنَّ اللّٰهَ لَا یَهْدِیْ مَنْ هُوَ مُسْرِفٌ كَذَّابٌ ۟
ಫರೋಹ‍ನ ಜನರಲ್ಲಿ ಸೇರಿದ ಮತ್ತು ತನ್ನ ವಿಶ್ವಾಸವನ್ನು ಮುಚ್ಚಿಟ್ಟಿದ್ದ ಸತ್ಯವಿಶ್ವಾಸಿ ವ್ಯಕ್ತಿಯೊಬ್ಬರು ಹೇಳಿದರು: “ನನ್ನ ಪರಿಪಾಲಕ ಅಲ್ಲಾಹು ಎಂದು ಹೇಳುವ ಕಾರಣಕ್ಕಾಗಿ ನೀವು ಒಬ್ಬ ಮನುಷ್ಯನನ್ನು ಕೊಲ್ಲುತ್ತೀರಾ? ಅವರು ನಿಮ್ಮ ಬಳಿಗೆ ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಸ್ಪಷ್ಟ ಸಾಕ್ಷ್ಯಾಧಾರಗಳನ್ನು ತಂದಿದ್ದಾರೆ. ಅವರು ಸುಳ್ಳು ಹೇಳುತ್ತಿದ್ದರೆ ಅದರ ಪಾಪವು ಅವರಿಗೇ ಆಗಿದೆ. ಆದರೆ ಅವರು ಸತ್ಯ ಹೇಳುತ್ತಿದ್ದರೆ ಅವರು ನಿಮಗೆ ಎಚ್ಚರಿಕೆ ನೀಡುವ ಕೆಲವು ಸಂಗತಿಗಳು (ಶಿಕ್ಷೆಗಳು) ನಿಶ್ಚಯವಾಗಿಯೂ ನಿಮ್ಮ ಮೇಲೆ ಎರಗುವುದು. ನಿಶ್ಚಯವಾಗಿಯೂ ಅತಿರೇಕಿ ಮತ್ತು ಸುಳ್ಳನಾಗಿರುವ ಯಾರಿಗೂ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.
تەفسیرە عەرەبیەکان:
یٰقَوْمِ لَكُمُ الْمُلْكُ الْیَوْمَ ظٰهِرِیْنَ فِی الْاَرْضِ ؗ— فَمَنْ یَّنْصُرُنَا مِنْ بَاْسِ اللّٰهِ اِنْ جَآءَنَا ؕ— قَالَ فِرْعَوْنُ مَاۤ اُرِیْكُمْ اِلَّا مَاۤ اَرٰی وَمَاۤ اَهْدِیْكُمْ اِلَّا سَبِیْلَ الرَّشَادِ ۟
ಓ ನನ್ನ ಜನರೇ! ನೀವು ಭೂಮಿಯಲ್ಲಿ ಪ್ರಾಬಲ್ಯ ಪಡೆದಿರುವ ಕಾರಣ ಇಂದು ಇದರ ಸಾರ್ವಭೌಮತ್ವವು ನಿಮ್ಮ ವಶದಲ್ಲಿದೆ. ಆದರೆ ಅಲ್ಲಾಹನ ಶಿಕ್ಷೆ ನಮ್ಮ ಬಳಿಗೆ ಬಂದರೆ ನಮಗೆ ಸಹಾಯ ಮಾಡುವವರು ಯಾರು?” ಫರೋಹ ಹೇಳಿದನು: “ನಾನು ಸ್ವತಃ ನನಗಾಗಿ ಸರಿಯೆಂದು ಕಾಣುವ ಮಾರ್ಗವನ್ನೇ ನಿಮಗೆ ತಿಳಿಸುತ್ತಿದ್ದೇನೆ. ನಾನು ನಿಮಗೆ ಒಳಿತಿನ ಮಾರ್ಗವನ್ನೇ ತೋರಿಸಿಕೊಡುತ್ತಿದ್ದೇನೆ.”
تەفسیرە عەرەبیەکان:
وَقَالَ الَّذِیْۤ اٰمَنَ یٰقَوْمِ اِنِّیْۤ اَخَافُ عَلَیْكُمْ مِّثْلَ یَوْمِ الْاَحْزَابِ ۟ۙ
ಆ ಸತ್ಯವಿಶ್ವಾಸಿ ವ್ಯಕ್ತಿ ಹೇಳಿದರು: “ಓ ನನ್ನ ಜನರೇ! ಇತರ ಸಮುದಾಯಗಳಿಗೆ ಸಂಭವಿಸಿದ ಆ ದಿನವು (ಕೆಟ್ಟ ಶಿಕ್ಷೆ) ನಿಮಗೂ ಸಂಭವಿಸಬಹುದೆಂದು ನನಗೆ ಭಯವಾಗುತ್ತಿದೆ.
تەفسیرە عەرەبیەکان:
مِثْلَ دَاْبِ قَوْمِ نُوْحٍ وَّعَادٍ وَّثَمُوْدَ وَالَّذِیْنَ مِنْ بَعْدِهِمْ ؕ— وَمَا اللّٰهُ یُرِیْدُ ظُلْمًا لِّلْعِبَادِ ۟
ಅಂದರೆ ನೂಹರ ಜನರು, ಆದ್ ಗೋತ್ರ, ಸಮೂದ್ ಗೋತ್ರ ಮತ್ತು ಅವರ ನಂತರದವರ ಸ್ಥಿತಿಯಂತೆ. ಅಲ್ಲಾಹು ತನ್ನ ದಾಸರಿಗೆ ಯಾವುದೇ ರೀತಿಯ ಅನ್ಯಾಯ ಮಾಡಲು ಬಯಸುವುದಿಲ್ಲ.
تەفسیرە عەرەبیەکان:
وَیٰقَوْمِ اِنِّیْۤ اَخَافُ عَلَیْكُمْ یَوْمَ التَّنَادِ ۟ۙ
ಓ ನನ್ನ ಜನರೇ! ನಿಶ್ಚಯವಾಗಿಯೂ ಜನರು ಮೊರೆಯಿಟ್ಟು ರೋದಿಸುವ ಆ ದಿನವನ್ನು ನಾನು ನಿಮ್ಮ ವಿಷಯದಲ್ಲಿ ಭಯಪಡುತ್ತೇನೆ.
تەفسیرە عەرەبیەکان:
یَوْمَ تُوَلُّوْنَ مُدْبِرِیْنَ ۚ— مَا لَكُمْ مِّنَ اللّٰهِ مِنْ عَاصِمٍ ۚ— وَمَنْ یُّضْلِلِ اللّٰهُ فَمَا لَهٗ مِنْ هَادٍ ۟
ಅಂದರೆ ನೀವು ಬೆನ್ನು ತೋರಿಸಿ ಓಡುವ ದಿನ! ನಿಮ್ಮನ್ನು ಅಲ್ಲಾಹನ ಶಿಕ್ಷೆಯಿಂದ ರಕ್ಷಿಸುವವರು ಯಾರೂ ಇರುವುದಿಲ್ಲ. ಅಲ್ಲಾಹು ಯಾರನ್ನಾದರೂ ದಾರಿತಪ್ಪಿಸಿದರೆ ನಂತರ ಅವನಿಗೆ ಸನ್ಮಾರ್ಗ ತೋರಿಸುವವರು ಯಾರೂ ಇಲ್ಲ.
تەفسیرە عەرەبیەکان:
وَلَقَدْ جَآءَكُمْ یُوْسُفُ مِنْ قَبْلُ بِالْبَیِّنٰتِ فَمَا زِلْتُمْ فِیْ شَكٍّ مِّمَّا جَآءَكُمْ بِهٖ ؕ— حَتّٰۤی اِذَا هَلَكَ قُلْتُمْ لَنْ یَّبْعَثَ اللّٰهُ مِنْ بَعْدِهٖ رَسُوْلًا ؕ— كَذٰلِكَ یُضِلُّ اللّٰهُ مَنْ هُوَ مُسْرِفٌ مُّرْتَابُ ۟ۚۖ
ಇದಕ್ಕೆ ಮೊದಲು ಯೂಸುಫರು ನಿಮ್ಮ ಬಳಿಗೆ ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಬಂದಿದ್ದರು. ಆದರೂ ಅವರು ನಿಮ್ಮ ಬಳಿಗೆ ತಂದ (ಸಾಕ್ಷ್ಯಾಧಾರಗಳ) ಬಗ್ಗೆ ನೀವು ಸಂದೇಹದಲ್ಲೇ ಇದ್ದಿರಿ. ಎಲ್ಲಿಯವರೆಗೆಂದರೆ ಅವರು ನಿಧನರಾದಾಗ, “ಇವರ ಬಳಿಕ ಅಲ್ಲಾಹು ಇನ್ನೊಬ್ಬ ಸಂದೇಶವಾಹಕರನ್ನು ಕಳುಹಿಸುವುದಿಲ್ಲ” ಎಂದು ನೀವು ಹೇಳಿದಿರಿ. ಈ ರೀತಿ ಅಲ್ಲಾಹು ಎಲ್ಲೆ ಮೀರಿದವರನ್ನು ಮತ್ತು ಸಂಶಯಗ್ರಸ್ಥರನ್ನು ದಾರಿತಪ್ಪಿಸುತ್ತಾನೆ.
تەفسیرە عەرەبیەکان:
١لَّذِیْنَ یُجَادِلُوْنَ فِیْۤ اٰیٰتِ اللّٰهِ بِغَیْرِ سُلْطٰنٍ اَتٰىهُمْ ؕ— كَبُرَ مَقْتًا عِنْدَ اللّٰهِ وَعِنْدَ الَّذِیْنَ اٰمَنُوْا ؕ— كَذٰلِكَ یَطْبَعُ اللّٰهُ عَلٰی كُلِّ قَلْبِ مُتَكَبِّرٍ جَبَّارٍ ۟
ಅವರು ತಮ್ಮ ಬಳಿಗೆ ಬಂದ ಯಾವುದೇ ಸ್ಪಷ್ಟ ಪುರಾವೆಯಿಲ್ಲದೆ ಅಲ್ಲಾಹನ ವಚನಗಳ ವಿಷಯದಲ್ಲಿ ತರ್ಕಿಸುವವರು. ಇದು ಅಲ್ಲಾಹನ ಬಳಿ ಮತ್ತು ಸತ್ಯವಿಶ್ವಾಸಿಗಳ ಬಳಿ ಮಹಾ ಅಸಂತೃಪ್ತಿಯ ವಿಷಯವಾಗಿದೆ. ಈ ರೀತಿ ಅಲ್ಲಾಹು ಎಲ್ಲಾ ಅಹಂಕಾರಿಗಳ ಮತ್ತು ಗರ್ವಿಷ್ಠರ ಹೃದಯಗಳಿಗೆ ಮೊಹರು ಹಾಕುತ್ತಾನೆ.
تەفسیرە عەرەبیەکان:
وَقَالَ فِرْعَوْنُ یٰهَامٰنُ ابْنِ لِیْ صَرْحًا لَّعَلِّیْۤ اَبْلُغُ الْاَسْبَابَ ۟ۙ
ಫರೋಹ ಹೇಳಿದನು: “ಓ ಹಾಮಾನ್! ನನಗೆ ಒಂದು ಗೋಪುರವನ್ನು ನಿರ್ಮಿಸಿಕೊಡು. ನಾನು ಆ ಬಾಗಿಲುಗಳಿಗೆ ತಲುಪುವುದಕ್ಕಾಗಿ.
تەفسیرە عەرەبیەکان:
اَسْبَابَ السَّمٰوٰتِ فَاَطَّلِعَ اِلٰۤی اِلٰهِ مُوْسٰی وَاِنِّیْ لَاَظُنُّهٗ كَاذِبًا ؕ— وَكَذٰلِكَ زُیِّنَ لِفِرْعَوْنَ سُوْٓءُ عَمَلِهٖ وَصُدَّ عَنِ السَّبِیْلِ ؕ— وَمَا كَیْدُ فِرْعَوْنَ اِلَّا فِیْ تَبَابٍ ۟۠
ಅಂದರೆ ಆಕಾಶಗಳ ಬಾಗಿಲುಗಳಿಗೆ. ನನಗೆ ಮೂಸಾನ ದೇವನನ್ನು ಇಣುಕಿ ನೋಡಬೇಕು. ನಿಶ್ಚಯವಾಗಿಯೂ ಅವನು ಸುಳ್ಳು ಹೇಳುತ್ತಿದ್ದಾನೆಂದು ನಾನು ಭಾವಿಸುತ್ತಿದ್ದೇನೆ.” ಈ ರೀತಿ ಫರೋಹ‍ನಿಗೆ ಅವನ ದುಷ್ಕೃತ್ಯವನ್ನು ಅಲಂಕರಿಸಿ ತೋರಿಸಲಾಗಿದೆ ಮತ್ತು ಅವನನ್ನು ನೇರ ಮಾರ್ಗದಿಂದ ತಡೆಯಲಾಗಿದೆ. ಫರೋಹನ (ಎಲ್ಲಾ) ತಂತ್ರಗಾರಿಕೆಗಳು ನಷ್ಟದಲ್ಲೇ ಇವೆ.
تەفسیرە عەرەبیەکان:
وَقَالَ الَّذِیْۤ اٰمَنَ یٰقَوْمِ اتَّبِعُوْنِ اَهْدِكُمْ سَبِیْلَ الرَّشَادِ ۟ۚ
ಆ ಸತ್ಯವಿಶ್ವಾಸಿ ವ್ಯಕ್ತಿ ಹೇಳಿದರು: “ಓ ನನ್ನ ಜನರೇ! ನನ್ನನ್ನು ಅನುಸರಿಸಿರಿ! ನಾನು ನಿಮಗೆ ಒಳಿತನ ಮಾರ್ಗವನ್ನು ತೋರಿಸುತ್ತೇನೆ.
تەفسیرە عەرەبیەکان:
یٰقَوْمِ اِنَّمَا هٰذِهِ الْحَیٰوةُ الدُّنْیَا مَتَاعٌ ؗ— وَّاِنَّ الْاٰخِرَةَ هِیَ دَارُ الْقَرَارِ ۟
ಓ ನನ್ನ ಜನರೇ! ಈ ಇಹಲೋಕ ಜೀವನವು ಒಂದು (ತಾತ್ಕಾಲಿಕ) ಆನಂದವಾಗಿದೆ. ನಿಶ್ಚಯವಾಗಿಯೂ ಶಾಶ್ವತ ವಾಸದ ಭವನವು ಪರಲೋಕವಾಗಿದೆ.
تەفسیرە عەرەبیەکان:
مَنْ عَمِلَ سَیِّئَةً فَلَا یُجْزٰۤی اِلَّا مِثْلَهَا ۚ— وَمَنْ عَمِلَ صَالِحًا مِّنْ ذَكَرٍ اَوْ اُ وَهُوَ مُؤْمِنٌ فَاُولٰٓىِٕكَ یَدْخُلُوْنَ الْجَنَّةَ یُرْزَقُوْنَ فِیْهَا بِغَیْرِ حِسَابٍ ۟
ಯಾರು ಒಂದು ಕೆಡುಕು ಮಾಡುತ್ತಾರೋ ಅವನಿಗೆ ಅದಕ್ಕೆ ಸಮಾನವಾದ ಪ್ರತಿಫಲವನ್ನೇ ನೀಡಲಾಗುತ್ತದೆ. ಆದರೆ ಯಾರು ಸತ್ಯವಿಶ್ವಾಸಿಯಾಗಿದ್ದು ಸತ್ಕರ್ಮವೆಸಗುತ್ತಾರೋ ಅವರು—ಪುರುಷರಾಗಿದ್ದರೂ ಸ್ತ್ರೀಯರಾಗಿದ್ದರೂ—ಸ್ವರ್ಗವನ್ನು ಪ್ರವೇಶಿಸುವರು. ಅಲ್ಲಿ ಅವರಿಗೆ ಲೆಕ್ಕವಿಲ್ಲದೆ ಉಪಜೀವನವನ್ನು ಒದಗಿಸಲಾಗುವುದು.
تەفسیرە عەرەبیەکان:
وَیٰقَوْمِ مَا لِیْۤ اَدْعُوْكُمْ اِلَی النَّجٰوةِ وَتَدْعُوْنَنِیْۤ اِلَی النَّارِ ۟ؕ
ಓ ನನ್ನ ಜನರೇ! ಇದೆಂತಹ ಸಂಗತಿ? ನಾನು ನಿಮ್ಮನ್ನು ಮೋಕ್ಷದ ಕಡೆಗೆ ಕರೆಯುತ್ತಿದ್ದೇನೆ. ಆದರೆ ನೀವು ನನ್ನನ್ನು ನರಕಕ್ಕೆ ಕರೆಯುತ್ತಿದ್ದೀರಿ!
تەفسیرە عەرەبیەکان:
تَدْعُوْنَنِیْ لِاَكْفُرَ بِاللّٰهِ وَاُشْرِكَ بِهٖ مَا لَیْسَ لِیْ بِهٖ عِلْمٌ ؗ— وَّاَنَا اَدْعُوْكُمْ اِلَی الْعَزِیْزِ الْغَفَّارِ ۟
ನಾನು ಅಲ್ಲಾಹನನ್ನು ನಿಷೇಧಿಸಲು ಮತ್ತು ನನಗೆ ಯಾವುದೇ ತಿಳುವಳಿಕೆಯಿಲ್ಲದ್ದನ್ನು ಅವನೊಂದಿಗೆ ಸಹಭಾಗಿಯನ್ನಾಗಿ ಮಾಡಲು ನೀವು ನನ್ನನ್ನು ಕರೆಯುತ್ತಿದ್ದೀರಿ! ಆದರೆ ನಾನು ನಿಮ್ಮನ್ನು ಪ್ರಬಲನು ಮತ್ತು ಕ್ಷಮಿಸುವವನಾದ ಅಲ್ಲಾಹನ ಕಡೆಗೆ ಕರೆಯುತ್ತಿದ್ದೇನೆ.
تەفسیرە عەرەبیەکان:
لَا جَرَمَ اَنَّمَا تَدْعُوْنَنِیْۤ اِلَیْهِ لَیْسَ لَهٗ دَعْوَةٌ فِی الدُّنْیَا وَلَا فِی الْاٰخِرَةِ وَاَنَّ مَرَدَّنَاۤ اِلَی اللّٰهِ وَاَنَّ الْمُسْرِفِیْنَ هُمْ اَصْحٰبُ النَّارِ ۟
ನೀವು ನನ್ನನ್ನು ಯಾವುದರ ಕಡೆಗೆ ಕರೆಯುತ್ತಿದ್ದೀರೋ ಅದು ಇಹಲೋಕದಲ್ಲಿ ಅಥವಾ ಪರಲೋಕದಲ್ಲಿ ಯಾವುದೇ ಪ್ರಾರ್ಥನೆಗೆ ಅರ್ಹವಲ್ಲ ಮತ್ತು ನಾವು ಮರಳಿ ಹೋಗಬೇಕಾದುದು ಅಲ್ಲಾಹನ ಬಳಿಗಾಗಿದೆ ಹಾಗೂ ಎಲ್ಲೆ ಮೀರಿದವರು ನರಕವಾಸಿಗಳಾಗಿದ್ದಾರೆ ಎಂಬುದು ದೃಢಪಟ್ಟ ವಿಷಯವಾಗಿದೆ.
تەفسیرە عەرەبیەکان:
فَسَتَذْكُرُوْنَ مَاۤ اَقُوْلُ لَكُمْ ؕ— وَاُفَوِّضُ اَمْرِیْۤ اِلَی اللّٰهِ ؕ— اِنَّ اللّٰهَ بَصِیْرٌ بِالْعِبَادِ ۟
ನಾನು (ಈಗ) ನಿಮ್ಮೊಂದಿಗೆ ಹೇಳುವ ಈ ವಿಷಯಗಳು ಮುಂದೆ ನಿಮಗೆ ನೆನಪಿಗೆ ಬರಲಿದೆ. ನಾನು ನನ್ನ ಕಾರ್ಯವನ್ನು ಅಲ್ಲಾಹನಿಗೆ ವಹಿಸಿಕೊಡುತ್ತೇನೆ. ನಿಶ್ಚಯವಾಗಿಯೂ ಅಲ್ಲಾಹು ದಾಸರನ್ನು ನೋಡುತ್ತಿದ್ದಾನೆ.”
تەفسیرە عەرەبیەکان:
فَوَقٰىهُ اللّٰهُ سَیِّاٰتِ مَا مَكَرُوْا وَحَاقَ بِاٰلِ فِرْعَوْنَ سُوْٓءُ الْعَذَابِ ۟ۚ
ಆದ್ದರಿಂದ ಅಲ್ಲಾಹು ಆ ವ್ಯಕ್ತಿಯನ್ನು ಅವರ ಎಲ್ಲಾ ತಂತ್ರಗಾರಿಕೆಗಳ ದುಷ್ಪರಿಣಾಮಗಳಿಂದ ರಕ್ಷಿಸಿದನು. ಫರೋಹನ ಜನರನ್ನು ಕಠೋರ ಶಿಕ್ಷೆಯು ಆವರಿಸಿಕೊಂಡಿತು.
تەفسیرە عەرەبیەکان:
اَلنَّارُ یُعْرَضُوْنَ عَلَیْهَا غُدُوًّا وَّعَشِیًّا ۚ— وَیَوْمَ تَقُوْمُ السَّاعَةُ ۫— اَدْخِلُوْۤا اٰلَ فِرْعَوْنَ اَشَدَّ الْعَذَابِ ۟
ನರಕಾಗ್ನಿ! ಬೆಳಿಗ್ಗೆ ಮತ್ತು ಸಂಜೆ ಅವರನ್ನು ಅದರ ಮುಂದೆ ಪ್ರದರ್ಶಿಸಲಾಗುವುದು.[1] ಅಂತ್ಯಸಮಯವು ಸಂಭವಿಸುವ ದಿನ “ಫರೋಹನ ಕುಟುಂಬವನ್ನು ಅತಿಕ್ರೂರ ಶಿಕ್ಷೆಗೆ ಹಾಕಿರಿ” (ಎಂದು ಆದೇಶಿಸಲಾಗುವುದು).
[1] ಬರ್ಝಕ್ (ಸತ್ತ ನಂತರ ಪುನರುತ್ಥಾನ ದಿನದ ತನಕವಿರುವ ಅವಧಿ) ನಲ್ಲಿ ಇವರಿಗೆ ದಿನನಿತ್ಯ ಬೆಳಗ್ಗೆ ಮತ್ತು ಸಂಜೆ ನರಕವನ್ನು ತೋರಿಸಲಾಗುವುದು. ಸಮಾಧಿಯಲ್ಲಿ ಸತ್ಯನಿಷೇಧಿಗಳನ್ನು ಶಿಕ್ಷಿಸಲಾಗುತ್ತದೆ ಎಂಬುದಕ್ಕೆ ಈ ವಚನವು ಪುರಾವೆಯಾಗಿದೆ.
تەفسیرە عەرەبیەکان:
وَاِذْ یَتَحَآجُّوْنَ فِی النَّارِ فَیَقُوْلُ الضُّعَفٰٓؤُا لِلَّذِیْنَ اسْتَكْبَرُوْۤا اِنَّا كُنَّا لَكُمْ تَبَعًا فَهَلْ اَنْتُمْ مُّغْنُوْنَ عَنَّا نَصِیْبًا مِّنَ النَّارِ ۟
ಅವರು ನರಕದಲ್ಲಿ ಪರಸ್ಪರ ತರ್ಕಿಸುವ ಸಂದರ್ಭ. ಆಗ ಬಲಹೀನರು ಅಹಂಕಾರಿಗಳೊಡನೆ ಹೇಳುವರು: “ನಿಶ್ಚಯವಾಗಿಯೂ ನಾವು ನಿಮ್ಮನ್ನು ಹಿಂಬಾಲಿಸಿದೆವು. ಆದ್ದರಿಂದ ನರಕ ಶಿಕ್ಷೆಯ ಒಂದು ಪಾಲನ್ನು ನಮ್ಮಿಂದ ದೂರೀಕರಿಸಲು ನಿಮಗೆ ಸಾಧ್ಯವೇ?”
تەفسیرە عەرەبیەکان:
قَالَ الَّذِیْنَ اسْتَكْبَرُوْۤا اِنَّا كُلٌّ فِیْهَاۤ اِنَّ اللّٰهَ قَدْ حَكَمَ بَیْنَ الْعِبَادِ ۟
ಅಹಂಕಾರಿಗಳು ಹೇಳುವರು: “ನಾವೆಲ್ಲರೂ ನರಕದಲ್ಲಿದ್ದೇವೆ. ನಿಶ್ಚಯವಾಗಿಯೂ ಅಲ್ಲಾಹು ಅವನ ದಾಸರ ನಡುವೆ ತೀರ್ಪು ನೀಡಿದ್ದಾನೆ!”
تەفسیرە عەرەبیەکان:
وَقَالَ الَّذِیْنَ فِی النَّارِ لِخَزَنَةِ جَهَنَّمَ ادْعُوْا رَبَّكُمْ یُخَفِّفْ عَنَّا یَوْمًا مِّنَ الْعَذَابِ ۟
ನರಕದಲ್ಲಿರುವವರು ನರಕದ ಕಾವಲುಗಾರರೊಡನೆ ಹೇಳುವರು: “ನೀವು ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿರಿ! ಅವನು ನಮಗೆ ಒಂದು ದಿನದ ಮಟ್ಟಿಗಾದರೂ ಶಿಕ್ಷೆಯಲ್ಲಿ ರಿಯಾಯಿತಿ ನೀಡಲಿ.”
تەفسیرە عەرەبیەکان:
قَالُوْۤا اَوَلَمْ تَكُ تَاْتِیْكُمْ رُسُلُكُمْ بِالْبَیِّنٰتِ ؕ— قَالُوْا بَلٰی ؕ— قَالُوْا فَادْعُوْا ۚ— وَمَا دُعٰٓؤُا الْكٰفِرِیْنَ اِلَّا فِیْ ضَلٰلٍ ۟۠
ಕಾವಲುಗಾರರು ಕೇಳುವರು: “ನಿಮ್ಮ ಬಳಿಗೆ ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಸಂದೇಶವಾಹಕರುಗಳು ಬಂದಿರಲಿಲ್ಲವೇ?” ಅವರು ಉತ್ತರಿಸುವರು: “ಹೌದು.” ಕಾವಲುಗಾರರು ಹೇಳುವರು: “ಹಾಗಾದರೆ ನೀವೇ ಕರೆದು ಪ್ರಾರ್ಥಿಸಿ. ಸತ್ಯನಿಷೇಧಿಗಳ ಪ್ರಾರ್ಥನೆಯು ವ್ಯರ್ಥವಲ್ಲದೆ ಇನ್ನೇನೂ ಅಲ್ಲ.”
تەفسیرە عەرەبیەکان:
اِنَّا لَنَنْصُرُ رُسُلَنَا وَالَّذِیْنَ اٰمَنُوْا فِی الْحَیٰوةِ الدُّنْیَا وَیَوْمَ یَقُوْمُ الْاَشْهَادُ ۟ۙ
ನಿಶ್ಚಯವಾಗಿಯೂ ನಾವು ನಮ್ಮ ಸಂದೇಶವಾಹಕರುಗಳಿಗೆ ಮತ್ತು ಸತ್ಯವಿಶ್ವಾಸಿಗಳಿಗೆ ಇಹಲೋಕದಲ್ಲೂ, ಸಾಕ್ಷಿಗಳು ಎದ್ದು ನಿಲ್ಲುವ ದಿನದಲ್ಲೂ (ಪುನರುತ್ಥಾನ ದಿನದಲ್ಲೂ) ಸಹಾಯ ಮಾಡುವೆವು.
تەفسیرە عەرەبیەکان:
یَوْمَ لَا یَنْفَعُ الظّٰلِمِیْنَ مَعْذِرَتُهُمْ وَلَهُمُ اللَّعْنَةُ وَلَهُمْ سُوْٓءُ الدَّارِ ۟
ಅಕ್ರಮಿಗಳಿಗೆ ಅವರ ನೆಪಗಳು ಉಪಕಾರ ಮಾಡದ ದಿನ! ಅವರಿಗೆ ಶಾಪವಿದೆ ಮತ್ತು ಅವರಿಗೆ ನಿಕೃಷ್ಟ ಭವನವಿದೆ.
تەفسیرە عەرەبیەکان:
وَلَقَدْ اٰتَیْنَا مُوْسَی الْهُدٰی وَاَوْرَثْنَا بَنِیْۤ اِسْرَآءِیْلَ الْكِتٰبَ ۟ۙ
ನಾವು ಮೂಸಾರಿಗೆ ಸನ್ಮಾರ್ಗವನ್ನು ನೀಡಿದೆವು ಮತ್ತು ಇಸ್ರಾಯೇಲ್ ಮಕ್ಕಳನ್ನು ಗ್ರಂಥದ ವಾರಸುದಾರರಾಗಿ ಮಾಡಿದೆವು.
تەفسیرە عەرەبیەکان:
هُدًی وَّذِكْرٰی لِاُولِی الْاَلْبَابِ ۟
ಅದು ಬುದ್ಧಿವಂತರಿಗೆ ಸನ್ಮಾರ್ಗದರ್ಶಿ ಮತ್ತು ಉಪದೇಶವಾಗಿತ್ತು.
تەفسیرە عەرەبیەکان:
فَاصْبِرْ اِنَّ وَعْدَ اللّٰهِ حَقٌّ وَّاسْتَغْفِرْ لِذَنْۢبِكَ وَسَبِّحْ بِحَمْدِ رَبِّكَ بِالْعَشِیِّ وَالْاِبْكَارِ ۟
ಆದ್ದರಿಂದ ನೀವು ತಾಳ್ಮೆಯಿಂದಿರಿ. ನಿಶ್ಚಯವಾಗಿಯೂ ಅಲ್ಲಾಹನ ವಾಗ್ದಾನವು ಸತ್ಯವಾಗಿದೆ. ನಿಮ್ಮ ತಪ್ಪಿಗಾಗಿ ಕ್ಷಮೆಯಾಚಿಸಿರಿ. ಸಂಜೆ ಹಾಗೂ ಮುಂಜಾನೆ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ತುತಿಸುತ್ತಾ ಅವರ ಪರಿಶುದ್ಧಿಯನ್ನು ಕೊಂಡಾಡಿರಿ.
تەفسیرە عەرەبیەکان:
اِنَّ الَّذِیْنَ یُجَادِلُوْنَ فِیْۤ اٰیٰتِ اللّٰهِ بِغَیْرِ سُلْطٰنٍ اَتٰىهُمْ ۙ— اِنْ فِیْ صُدُوْرِهِمْ اِلَّا كِبْرٌ مَّا هُمْ بِبَالِغِیْهِ ۚ— فَاسْتَعِذْ بِاللّٰهِ ؕ— اِنَّهٗ هُوَ السَّمِیْعُ الْبَصِیْرُ ۟
ನಿಶ್ಚಯವಾಗಿಯೂ ತಮ್ಮ ಬಳಿಗೆ ಬಂದ ಯಾವುದೇ ಸ್ಪಷ್ಟ ಪುರಾವೆಯಿಲ್ಲದೆ ಅಲ್ಲಾಹನ ವಚನಗಳ ವಿಷಯದಲ್ಲಿ ತರ್ಕಿಸುವವರು ಯಾರೋ ಅವರ ಹೃದಯಗಳಲ್ಲಿ ಅಹಂಕಾರವಲ್ಲದೆ ಬೇರೇನೂ ಇಲ್ಲ. ಅವರು ಅಲ್ಲಿಗೆ ತಲುಪುವುದೂ ಇಲ್ಲ.[1] ಆದ್ದರಿಂದ ನೀವು ಅಲ್ಲಾಹನಲ್ಲಿ ಅಭಯ ಯಾಚಿಸಿರಿ. ನಿಶ್ಚಯವಾಗಿಯೂ ಅವನು ಎಲ್ಲವನ್ನು ಕೇಳುವವನು ಮತ್ತು ನೋಡುವವನಾಗಿದ್ದಾನೆ.
[1] ಅಂದರೆ ಸತ್ಯವು ನಾಶವಾಗಬೇಕು ಮತ್ತು ಅಸತ್ಯವು ರಾರಾಜಿಸಬೇಕೆಂಬ ಅವರ ಉದ್ದೇಶವು ಈಡೇರುವುದಿಲ್ಲ.
تەفسیرە عەرەبیەکان:
لَخَلْقُ السَّمٰوٰتِ وَالْاَرْضِ اَكْبَرُ مِنْ خَلْقِ النَّاسِ وَلٰكِنَّ اَكْثَرَ النَّاسِ لَا یَعْلَمُوْنَ ۟
ನಿಶ್ಚಯವಾಗಿಯೂ ಭೂಮ್ಯಾಕಾಶಗಳ ಸೃಷ್ಟಿಯು ಮನುಷ್ಯನನ್ನು ಸೃಷ್ಟಿಸುವುದಕ್ಕಿಂತಲೂ ಎಷ್ಟೋ ದೊಡ್ಡದಾಗಿದೆ. ಆದರೆ ಜನರಲ್ಲಿ ಹೆಚ್ಚಿನವರು ಅರ್ಥಮಾಡಿಕೊಳ್ಳುವುದಿಲ್ಲ.
تەفسیرە عەرەبیەکان:
وَمَا یَسْتَوِی الْاَعْمٰی وَالْبَصِیْرُ ۙ۬— وَالَّذِیْنَ اٰمَنُوْا وَعَمِلُوا الصّٰلِحٰتِ وَلَا الْمُسِیْٓءُ ؕ— قَلِیْلًا مَّا تَتَذَكَّرُوْنَ ۟
ಕಣ್ಣು ಕಾಣುವವನು ಮತ್ತು ಕಣ್ಣು ಕಾಣದವನು ಸಮಾನರಲ್ಲ. ಸತ್ಯವಿಶ್ವಾಸವಿಟ್ಟು ಸತ್ಕರ್ಮವೆಸಗಿದವರು ಮತ್ತು ದುಷ್ಕರ್ಮವೆಸಗಿದವರು ಸಮಾನರಲ್ಲ. ನೀವು ಸ್ವಲ್ಪವೇ ಉಪದೇಶವನ್ನು ಸ್ವೀಕರಿಸುತ್ತೀರಿ.
تەفسیرە عەرەبیەکان:
اِنَّ السَّاعَةَ لَاٰتِیَةٌ لَّا رَیْبَ فِیْهَا ؗ— وَلٰكِنَّ اَكْثَرَ النَّاسِ لَا یُؤْمِنُوْنَ ۟
ನಿಶ್ಚಯವಾಗಿಯೂ ಅಂತ್ಯಸಮಯವು ಬಂದೇ ಬರುತ್ತದೆ. ಅದರಲ್ಲಿ ಸಂಶಯವೇ ಇಲ್ಲ. ಆದರೆ ಜನರಲ್ಲಿ ಹೆಚ್ಚಿನವರು ವಿಶ್ವಾಸವಿಡುವುದಿಲ್ಲ.
تەفسیرە عەرەبیەکان:
وَقَالَ رَبُّكُمُ ادْعُوْنِیْۤ اَسْتَجِبْ لَكُمْ ؕ— اِنَّ الَّذِیْنَ یَسْتَكْبِرُوْنَ عَنْ عِبَادَتِیْ سَیَدْخُلُوْنَ جَهَنَّمَ دٰخِرِیْنَ ۟۠
ನಿಮ್ಮ ಪರಿಪಾಲಕನು (ಅಲ್ಲಾಹು) ಹೇಳಿದ್ದಾನೆ: “ನೀವು ನನ್ನನ್ನು ಕರೆದು ಪ್ರಾರ್ಥಿಸಿರಿ. ನಾನು ನಿಮಗೆ ಉತ್ತರ ನೀಡುತ್ತೇನೆ. ನಿಶ್ಚಯವಾಗಿಯೂ ನನ್ನನ್ನು ಆರಾಧಿಸುವ ವಿಷಯದಲ್ಲಿ ಅಹಂಕಾರ ತೋರುವವರು ಯಾರೋ ಅವರು ಸದ್ಯವೇ ಅವಮಾನಿತರಾಗಿ ನರಕವನ್ನು ಪ್ರವೇಶಿಸುವರು.”[1]
[1] ಪ್ರಾರ್ಥನೆ ಆರಾಧನೆಯಾಗಿದೆ ಮತ್ತು ಅದು ಅಲ್ಲಾಹನಿಗೆ ಮಾತ್ರ ಸಲ್ಲತಕ್ಕದ್ದೆಂದು ಈ ವಚನವು ತಿಳಿಸುತ್ತದೆ.
تەفسیرە عەرەبیەکان:
اَللّٰهُ الَّذِیْ جَعَلَ لَكُمُ الَّیْلَ لِتَسْكُنُوْا فِیْهِ وَالنَّهَارَ مُبْصِرًا ؕ— اِنَّ اللّٰهَ لَذُوْ فَضْلٍ عَلَی النَّاسِ وَلٰكِنَّ اَكْثَرَ النَّاسِ لَا یَشْكُرُوْنَ ۟
ಅಲ್ಲಾಹು ನಿಮಗೆ ರಾತ್ರಿಯನ್ನು ವಿಶ್ರಾಂತಿ ಪಡೆಯಲು ಮತ್ತು ಹಗಲನ್ನು ಪ್ರಕಾಶಮಾನವಾಗಿ ಮಾಡಿಕೊಟ್ಟನು. ನಿಶ್ಚಯವಾಗಿಯೂ ಅಲ್ಲಾಹನಿಗೆ ಜನರೊಡನೆ ಅತ್ಯಂತ ಔದಾರ್ಯವಿದೆ. ಆದರೆ ಜನರಲ್ಲಿ ಹೆಚ್ಚಿನವರು ಕೃತಜ್ಞರಾಗುವುದಿಲ್ಲ.
تەفسیرە عەرەبیەکان:
ذٰلِكُمُ اللّٰهُ رَبُّكُمْ خَالِقُ كُلِّ شَیْءٍ ۘ— لَاۤ اِلٰهَ اِلَّا هُوَ ؗ— فَاَنّٰی تُؤْفَكُوْنَ ۟
ಅವನೇ ನಿಮ್ಮ ಪರಿಪಾಲಕನಾದ ಅಲ್ಲಾಹು. ಅವನು ಎಲ್ಲಾ ವಸ್ತುಗಳ ಸೃಷ್ಟಿಕರ್ತನು. ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಆದರೂ ನೀವು (ಸನ್ಮಾರ್ಗದಿಂದ) ತಪ್ಪಿಸಲ್ಪಡುವುದು ಹೇಗೆ?
تەفسیرە عەرەبیەکان:
كَذٰلِكَ یُؤْفَكُ الَّذِیْنَ كَانُوْا بِاٰیٰتِ اللّٰهِ یَجْحَدُوْنَ ۟
ಈ ರೀತಿ ಅಲ್ಲಾಹನ ವಚನಗಳನ್ನು ನಿಷೇಧಿಸಿದವರು (ಸನ್ಮಾರ್ಗದಿಂದ) ತಪ್ಪಿ ಹೋಗುತ್ತಿದ್ದಾರೆ.
تەفسیرە عەرەبیەکان:
اَللّٰهُ الَّذِیْ جَعَلَ لَكُمُ الْاَرْضَ قَرَارًا وَّالسَّمَآءَ بِنَآءً وَّصَوَّرَكُمْ فَاَحْسَنَ صُوَرَكُمْ وَرَزَقَكُمْ مِّنَ الطَّیِّبٰتِ ؕ— ذٰلِكُمُ اللّٰهُ رَبُّكُمْ ۖۚ— فَتَبٰرَكَ اللّٰهُ رَبُّ الْعٰلَمِیْنَ ۟
ಅಲ್ಲಾಹು ನಿಮಗೋಸ್ಕರ ಭೂಮಿಯನ್ನು ವಾಸಸ್ಥಳವನ್ನಾಗಿ ಮತ್ತು ಆಕಾಶವನ್ನು ಮೇಲ್ಛಾವಣಿಯನ್ನಾಗಿ ಮಾಡಿಕೊಟ್ಟನು. ಅವನು ನಿಮಗೆ ರೂಪವನ್ನು ನೀಡಿದನು. ನಂತರ ನಿಮ್ಮ ರೂಪಗಳನ್ನು ಉತ್ತಮಗೊಳಿಸಿದನು. ಅವನು ನಿಮಗೆ ಉಪಜೀವನವಾಗಿ ಅತ್ಯುತ್ತಮ ವಸ್ತುಗಳನ್ನು ಒದಗಿಸಿದನು. ಅವನೇ ನಿಮ್ಮ ಪರಿಪಾಲಕವಾದ ಅಲ್ಲಾಹು. ಆದ್ದರಿಂದ ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹು ಸಮೃದ್ಧಪೂರ್ಣನಾಗಿದ್ದಾನೆ.
تەفسیرە عەرەبیەکان:
هُوَ الْحَیُّ لَاۤ اِلٰهَ اِلَّا هُوَ فَادْعُوْهُ مُخْلِصِیْنَ لَهُ الدِّیْنَ ؕ— اَلْحَمْدُ لِلّٰهِ رَبِّ الْعٰلَمِیْنَ ۟
ಅವನು ಜೀವಂತವಿರುವವನು. ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಆದ್ದರಿಂದ ನಿಷ್ಕಂಳಕವಾಗಿ ಅವನನ್ನು ಆರಾಧಿಸುತ್ತಾ ಅವನನ್ನು ಕರೆದು ಪ್ರಾರ್ಥಿಸಿರಿ. ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ.
تەفسیرە عەرەبیەکان:
قُلْ اِنِّیْ نُهِیْتُ اَنْ اَعْبُدَ الَّذِیْنَ تَدْعُوْنَ مِنْ دُوْنِ اللّٰهِ لَمَّا جَآءَنِیَ الْبَیِّنٰتُ مِنْ رَّبِّیْ ؗ— وَاُمِرْتُ اَنْ اُسْلِمَ لِرَبِّ الْعٰلَمِیْنَ ۟
ಹೇಳಿರಿ: “ನನ್ನ ಪರಿಪಾಲಕನ (ಅಲ್ಲಾಹನ) ಕಡೆಯಿಂದ ನನಗೆ ಸಾಕ್ಷ್ಯಾಧಾರಗಳು ತಲುಪಿರುವುದರಿಂದ, ಅಲ್ಲಾಹನನ್ನು ಬಿಟ್ಟು ನೀವು ಕರೆದು ಪ್ರಾರ್ಥಿಸುತ್ತಿರುವ ದೇವರುಗಳನ್ನು ಆರಾಧಿಸಬಾರದೆಂದು ನನಗೆ ವಿರೋಧಿಸಲಾಗಿದೆ. ಸರ್ವಲೋಕಗಳ ಪರಿಪಾಲಕನಿಗೆ (ಅಲ್ಲಾಹನಿಗೆ) ಶರಣಾಗಬೇಕೆಂದು ನನಗೆ ಆಜ್ಞಾಪಿಸಲಾಗಿದೆ.”
تەفسیرە عەرەبیەکان:
هُوَ الَّذِیْ خَلَقَكُمْ مِّنْ تُرَابٍ ثُمَّ مِنْ نُّطْفَةٍ ثُمَّ مِنْ عَلَقَةٍ ثُمَّ یُخْرِجُكُمْ طِفْلًا ثُمَّ لِتَبْلُغُوْۤا اَشُدَّكُمْ ثُمَّ لِتَكُوْنُوْا شُیُوْخًا ۚ— وَمِنْكُمْ مَّنْ یُّتَوَفّٰی مِنْ قَبْلُ وَلِتَبْلُغُوْۤا اَجَلًا مُّسَمًّی وَّلَعَلَّكُمْ تَعْقِلُوْنَ ۟
ಅವನೇ ನಿಮ್ಮನ್ನು ಮಣ್ಣಿನಿಂದ, ನಂತರ ವೀರ್ಯದಿಂದ, ನಂತರ ಭ್ರೂಣದಿಂದ ಸೃಷ್ಟಿಸಿದವನು. ನಂತರ ಅವನು ನಿಮ್ಮನ್ನು ಒಂದು ಶಿಶುವನ್ನಾಗಿ ಹೊರತರುವನು. ನಂತರ ನೀವು ನಿಮ್ಮ ಪೂರ್ಣ ಯೌವನವನ್ನು ತಲುಪಿ, ನಂತರ ನೀವು ಮುದುಕರಾಗುವುದಕ್ಕಾಗಿ (ಅವನು ನಿಮ್ಮನ್ನು ಬೆಳೆಸುತ್ತಾನೆ). ನಿಮ್ಮಲ್ಲಿ ಕೆಲವರು ಇದಕ್ಕೆ ಮೊದಲೇ ಮರಣವನ್ನಪ್ಪುತ್ತಾರೆ. ನೀವು ನಿಮ್ಮ ನಿಶ್ಚಿತ ಅವಧಿಯನ್ನು ತಲುಪುವುದಕ್ಕಾಗಿ (ಅವನು ನಿಮ್ಮನ್ನು ಬಿಟ್ಟುಬಿಡುತ್ತಾನೆ). ನೀವು ಆಲೋಚಿಸುವುದಕ್ಕಾಗಿ.
تەفسیرە عەرەبیەکان:
هُوَ الَّذِیْ یُحْیٖ وَیُمِیْتُ ۚ— فَاِذَا قَضٰۤی اَمْرًا فَاِنَّمَا یَقُوْلُ لَهٗ كُنْ فَیَكُوْنُ ۟۠
ಅವನೇ ಜೀವ ಮತ್ತು ಮರಣವನ್ನು ನೀಡುವವನು. ಅವನು ಒಂದು ವಿಷಯವನ್ನು ತೀರ್ಮಾನಿಸಿದರೆ, ಅದರೊಂದಿಗೆ “ಉಂಟಾಗು” ಎನ್ನುತ್ತಾನೆ. ತಕ್ಷಣ ಅದು ಉಂಟಾಗುತ್ತದೆ!
تەفسیرە عەرەبیەکان:
اَلَمْ تَرَ اِلَی الَّذِیْنَ یُجَادِلُوْنَ فِیْۤ اٰیٰتِ اللّٰهِ ؕ— اَنّٰی یُصْرَفُوْنَ ۟ۙۛ
ಅಲ್ಲಾಹನ ವಚನಗಳ ವಿಷಯದಲ್ಲಿ ತರ್ಕಿಸುವವರನ್ನು ನೀವು ನೋಡಿಲ್ಲವೇ? ಅವರು ತಿರುಗಿಸಲ್ಪಡುತ್ತಿರುವುದು ಹೇಗೆ?
تەفسیرە عەرەبیەکان:
الَّذِیْنَ كَذَّبُوْا بِالْكِتٰبِ وَبِمَاۤ اَرْسَلْنَا بِهٖ رُسُلَنَا ۛ۫— فَسَوْفَ یَعْلَمُوْنَ ۟ۙ
ಅವರು ಗ್ರಂಥವನ್ನು ಮತ್ತು ನಾವು ನಮ್ಮ ಸಂದೇಶವಾಹಕರೊಡನೆ ಕಳುಹಿಸಿರುವುದನ್ನು ನಿಷೇಧಿಸಿದ್ದಾರೆ. ಅವರು ಸದ್ಯವೇ ತಿಳಿಯುವರು.
تەفسیرە عەرەبیەکان:
اِذِ الْاَغْلٰلُ فِیْۤ اَعْنَاقِهِمْ وَالسَّلٰسِلُ ؕ— یُسْحَبُوْنَ ۟ۙ
ಅವರ ಕೊರಳುಗಳಲ್ಲಿ ಬೇಡಿಗಳು ಮತ್ತು ಸಂಕೋಲೆಗಳಿರುವ ಸ್ಥಿತಿಯಲ್ಲಿ ಅವರನ್ನು ಎಳೆದೊಯ್ಯಲಾಗುವುದು.
تەفسیرە عەرەبیەکان:
فِی الْحَمِیْمِ ۙ۬— ثُمَّ فِی النَّارِ یُسْجَرُوْنَ ۟ۚ
ಕುದಿಯುವ ನೀರಿನಲ್ಲಿ. ನಂತರ ಅವರನ್ನು ನರಕಾಗ್ನಿಯಲ್ಲಿ ಉರಿಸಲಾಗುವುದು.
تەفسیرە عەرەبیەکان:
ثُمَّ قِیْلَ لَهُمْ اَیْنَ مَا كُنْتُمْ تُشْرِكُوْنَ ۟ۙ
ನಂತರ ಅವರೊಂದಿಗೆ ಕೇಳಲಾಗುವುದು: “ನೀವು (ಅಲ್ಲಾಹನಿಗೆ) ಸಹಭಾಗಿಗಳನ್ನಾಗಿ ಮಾಡಿದವರು (ನಿಮ್ಮ ದೇವರುಗಳು) ಎಲ್ಲಿದ್ದಾರೆ?
تەفسیرە عەرەبیەکان:
مِنْ دُوْنِ اللّٰهِ ؕ— قَالُوْا ضَلُّوْا عَنَّا بَلْ لَّمْ نَكُنْ نَّدْعُوْا مِنْ قَبْلُ شَیْـًٔا ؕ— كَذٰلِكَ یُضِلُّ اللّٰهُ الْكٰفِرِیْنَ ۟
ಅಲ್ಲಾಹನನ್ನು ಬಿಟ್ಟು.” ಅವರು ಹೇಳುವರು: “ಅವರು ನಮ್ಮನ್ನು ತೊರೆದಿದ್ದಾರೆ. ಅಲ್ಲ, ವಾಸ್ತವವಾಗಿ ನಾವು ಇದಕ್ಕೆ ಮೊದಲು ಯಾರನ್ನೂ ಕರೆದು ಪ್ರಾರ್ಥಿಸುತ್ತಿರಲಿಲ್ಲ.” ಈ ರೀತಿ ಅಲ್ಲಾಹು ಸತ್ಯನಿಷೇಧಿಗಳನ್ನು ದಾರಿತಪ್ಪಿಸುವನು.
تەفسیرە عەرەبیەکان:
ذٰلِكُمْ بِمَا كُنْتُمْ تَفْرَحُوْنَ فِی الْاَرْضِ بِغَیْرِ الْحَقِّ وَبِمَا كُنْتُمْ تَمْرَحُوْنَ ۟ۚ
(ಅವರೊಡನೆ ಹೇಳಲಾಗುವುದು): “ಈ ಶಿಕ್ಷೆಯು ಏಕೆಂದರೆ ನೀವು ಭೂಮಿಯಲ್ಲಿ ಅನ್ಯಾಯವಾಗಿ ಮೆರೆಯುತ್ತಿದ್ದಿರಿ ಮತ್ತು ಅಹಂಕಾರದಿಂದ ವರ್ತಿಸುತ್ತಿದ್ದಿರಿ.
تەفسیرە عەرەبیەکان:
اُدْخُلُوْۤا اَبْوَابَ جَهَنَّمَ خٰلِدِیْنَ فِیْهَا ۚ— فَبِئْسَ مَثْوَی الْمُتَكَبِّرِیْنَ ۟
ನರಕದ ಬಾಗಿಲುಗಳನ್ನು ಅದರಲ್ಲಿ ಶಾಶ್ವತವಾಗಿ ವಾಸಿಸುವುದಕ್ಕಾಗಿ ಪ್ರವೇಶಿಸಿರಿ. ಅಹಂಕಾರಿಗಳ ವಾಸಸ್ಥಳವು ಬಹಳ ನಿಕೃಷ್ಟವಾಗಿದೆ!”
تەفسیرە عەرەبیەکان:
فَاصْبِرْ اِنَّ وَعْدَ اللّٰهِ حَقٌّ ۚ— فَاِمَّا نُرِیَنَّكَ بَعْضَ الَّذِیْ نَعِدُهُمْ اَوْ نَتَوَفَّیَنَّكَ فَاِلَیْنَا یُرْجَعُوْنَ ۟
ನೀವು ತಾಳ್ಮೆಯಿಂದಿರಿ. ನಿಶ್ಚಯವಾಗಿಯೂ ಅಲ್ಲಾಹನ ವಾಗ್ದಾನವು ಸತ್ಯವಾಗಿದೆ. ನಾವು ಅವರಿಗೆ ವಾಗ್ದಾನ ಮಾಡುವ ಶಿಕ್ಷೆಗಳಲ್ಲಿ ಕೆಲವನ್ನು ನಾವು ನಿಮಗೆ ತೋರಿಸಿಕೊಟ್ಟರೂ ಅಥವಾ (ಅದಕ್ಕಿಂತ ಮೊದಲೇ) ನಾವು ನಿಮ್ಮನ್ನು ಮೃತಪಡಿಸಿದರೂ ಅವರು ಮರಳಿ ಬರುವುದು ನಮ್ಮ ಬಳಿಗೇ ಆಗಿದೆ.
تەفسیرە عەرەبیەکان:
وَلَقَدْ اَرْسَلْنَا رُسُلًا مِّنْ قَبْلِكَ مِنْهُمْ مَّنْ قَصَصْنَا عَلَیْكَ وَمِنْهُمْ مَّنْ لَّمْ نَقْصُصْ عَلَیْكَ ؕ— وَمَا كَانَ لِرَسُوْلٍ اَنْ یَّاْتِیَ بِاٰیَةٍ اِلَّا بِاِذْنِ اللّٰهِ ۚ— فَاِذَا جَآءَ اَمْرُ اللّٰهِ قُضِیَ بِالْحَقِّ وَخَسِرَ هُنَالِكَ الْمُبْطِلُوْنَ ۟۠
ನಿಮಗಿಂತ ಮುಂಚೆ ನಾವು ಅನೇಕ ಸಂದೇಶವಾಹಕರುಗಳನ್ನು ಕಳುಹಿಸಿದ್ದೇವೆ. ಅವರಲ್ಲಿ ಕೆಲವರ (ಸಮಾಚಾರಗಳನ್ನು) ನಾವು ನಿಮಗೆ ವಿವರಿಸಿದ್ದೇವೆ. ಅವರಲ್ಲಿ ಬೇರೆ ಕೆಲವರ ಬಗ್ಗೆ ನಾವು ನಿಮಗೆ ವಿವರಿಸಿಲ್ಲ. ಅಲ್ಲಾಹನ ಅಪ್ಪಣೆಯಿಲ್ಲದೆ ಒಂದು ದೃಷ್ಟಾಂತವನ್ನು ತರಲು ಯಾವುದೇ ಸಂದೇಶವಾಹಕರಿಗೂ ಸಾಧ್ಯವಿಲ್ಲ. ನಂತರ ಅಲ್ಲಾಹನ ಆಜ್ಞೆ ಬರುವಾಗ ನ್ಯಾಯಯುತವಾಗಿ ತೀರ್ಪು ನೀಡಲಾಗುವುದು. ಅಲ್ಲಿ ಮಿಥ್ಯವಾದಿಗಳು ನಷ್ಟ ಹೊಂದಿದವರಾಗುವರು.
تەفسیرە عەرەبیەکان:
اَللّٰهُ الَّذِیْ جَعَلَ لَكُمُ الْاَنْعَامَ لِتَرْكَبُوْا مِنْهَا وَمِنْهَا تَاْكُلُوْنَ ۟ؗ
ನಿಮಗಾಗಿ ಜಾನುವಾರುಗಳನ್ನು ಸೃಷ್ಟಿಸಿದವನು ಅಲ್ಲಾಹು. ಅವುಗಳಲ್ಲಿ ಕೆಲವು ಪ್ರಾಣಿಗಳ ಮೇಲೆ ನೀವು ಸವಾರಿ ಮಾಡುತ್ತೀರಿ ಮತ್ತು ಅವುಗಳಲ್ಲಿ ಕೆಲವನ್ನು ನೀವು ತಿನ್ನುತ್ತೀರಿ.
تەفسیرە عەرەبیەکان:
وَلَكُمْ فِیْهَا مَنَافِعُ وَلِتَبْلُغُوْا عَلَیْهَا حَاجَةً فِیْ صُدُوْرِكُمْ وَعَلَیْهَا وَعَلَی الْفُلْكِ تُحْمَلُوْنَ ۟ؕ
ಅವುಗಳಲ್ಲಿ ನಿಮಗೆ ಇನ್ನೂ ಅನೇಕ ಉಪಯೋಗಗಳಿವೆ. ನೀವು ಅವುಗಳ ಮೇಲೆ ಸವಾರಿ ಮಾಡಿ ನಿಮ್ಮ ಮನಸ್ಸಿನಲ್ಲಿರುವ ಅಗತ್ಯಗಳನ್ನು ತಲುಪುತ್ತೀರಿ. ನಿಮ್ಮನ್ನು ಅವುಗಳ ಬೆನ್ನುಗಳಲ್ಲೂ, ನಾವೆಗಳಲ್ಲೂ ಸಾಗಿಸಲಾಗುತ್ತಿದೆ.
تەفسیرە عەرەبیەکان:
وَیُرِیْكُمْ اٰیٰتِهٖ ۖۗ— فَاَیَّ اٰیٰتِ اللّٰهِ تُنْكِرُوْنَ ۟
ಅವನು ನಿಮಗೆ ಅವನ ದೃಷ್ಟಾಂತಗಳನ್ನು ತೋರಿಸಿಕೊಡುತ್ತಾನೆ. ಅಲ್ಲಾಹನ ದೃಷ್ಟಾಂತಗಳಲ್ಲಿ ಯಾವುದನ್ನು ನೀವು ನಿಷೇಧಿಸುತ್ತೀರಿ?
تەفسیرە عەرەبیەکان:
اَفَلَمْ یَسِیْرُوْا فِی الْاَرْضِ فَیَنْظُرُوْا كَیْفَ كَانَ عَاقِبَةُ الَّذِیْنَ مِنْ قَبْلِهِمْ ؕ— كَانُوْۤا اَكْثَرَ مِنْهُمْ وَاَشَدَّ قُوَّةً وَّاٰثَارًا فِی الْاَرْضِ فَمَاۤ اَغْنٰی عَنْهُمْ مَّا كَانُوْا یَكْسِبُوْنَ ۟
ಅವರು ಭೂಮಿಯಲ್ಲಿ ಸಂಚರಿಸಿ ಅವರಿಗಿಂತ ಮೊದಲಿನವರ ಅಂತ್ಯವು ಹೇಗಿತ್ತೆಂದು ನೋಡುವುದಿಲ್ಲವೇ? ಅವರು ಜನಸಂಖ್ಯೆಯಲ್ಲಿ ಇವರಿಗಿಂತ ಹೆಚ್ಚಿದ್ದರು ಮತ್ತು ಶಕ್ತಿ-ಸಾಮರ್ಥ್ಯದಲ್ಲಿ ಹಾಗೂ ಭೂಮಿಯಲ್ಲಿ ಸ್ಮಾರಕಗಳನ್ನು ಬಿಟ್ಟುಹೋಗುವುದರಲ್ಲಿ ಇವರಿಗಿಂತ ಹೆಚ್ಚು ಶ್ರೇಷ್ಠರಾಗಿದ್ದರು. ಆದರೆ ಅವರ ಯಾವುದೇ ಕೆಲಸಗಳು ಅವರ ಉಪಯೋಗಕ್ಕೆ ಬರಲಿಲ್ಲ.
تەفسیرە عەرەبیەکان:
فَلَمَّا جَآءَتْهُمْ رُسُلُهُمْ بِالْبَیِّنٰتِ فَرِحُوْا بِمَا عِنْدَهُمْ مِّنَ الْعِلْمِ وَحَاقَ بِهِمْ مَّا كَانُوْا بِهٖ یَسْتَهْزِءُوْنَ ۟
ಅವರ ಸಂದೇಶವಾಹಕರುಗಳು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಅವರ ಬಳಿಗೆ ಬಂದಾಗ, ಅವರು ತಮ್ಮ ಬಳಿಯಿರುವ ಜ್ಞಾನದ ಬಗ್ಗೆ ಹಿಗ್ಗುತ್ತಿದ್ದರು. ಕೊನೆಗೆ ಅವರು ಯಾವುದನ್ನು ತಮಾಷೆ ಮಾಡುತ್ತಿದ್ದರೋ ಆ ಶಿಕ್ಷೆಯು ಅವರನ್ನು ಆವರಿಸಿಕೊಂಡಿತು.
تەفسیرە عەرەبیەکان:
فَلَمَّا رَاَوْا بَاْسَنَا قَالُوْۤا اٰمَنَّا بِاللّٰهِ وَحْدَهٗ وَكَفَرْنَا بِمَا كُنَّا بِهٖ مُشْرِكِیْنَ ۟
ನಮ್ಮ ಶಿಕ್ಷೆಯನ್ನು ಕಂಡಾಗ ಅವರು ಹೇಳಿದರು: “ನಾವು ಅಲ್ಲಾಹನಲ್ಲಿ ಮಾತ್ರ ವಿಶ್ವಾಸವಿಟ್ಟಿದ್ದೇವೆ ಮತ್ತು ಅವನೊಡನೆ ಸಹಭಾಗಿಯನ್ನಾಗಿ ಮಾಡುತ್ತಿದ್ದ (ಎಲ್ಲಾ ದೇವರುಗಳನ್ನು) ನಿಷೇಧಿಸಿದ್ದೇವೆ.”
تەفسیرە عەرەبیەکان:
فَلَمْ یَكُ یَنْفَعُهُمْ اِیْمَانُهُمْ لَمَّا رَاَوْا بَاْسَنَا ؕ— سُنَّتَ اللّٰهِ الَّتِیْ قَدْ خَلَتْ فِیْ عِبَادِهٖ ۚ— وَخَسِرَ هُنَالِكَ الْكٰفِرُوْنَ ۟۠
ಆದರೆ ನಮ್ಮ ಶಿಕ್ಷೆಯನ್ನು ಕಂಡಾಗ ಅವರ ಆ ವಿಶ್ವಾಸವು ಅವರಿಗೆ ಪ್ರಯೋಜನವಾಗಲಿಲ್ಲ. ಇದು ಅಲ್ಲಾಹು ತನ್ನ ದಾಸರ ವಿಷಯದಲ್ಲಿ ಅನುಸರಿಸಿಕೊಂಡು ಬಂದ ಕ್ರಮವಾಗಿದೆ. ಅಲ್ಲಿ ಸತ್ಯನಿಷೇಧಿಗಳೇ ನಷ್ಟ ಹೊಂದಿದರು.
تەفسیرە عەرەبیەکان:
 
وه‌رگێڕانی ماناكان سوره‌تی: سورەتی غافر
پێڕستی سوره‌ته‌كان ژمارەی پەڕە
 
وه‌رگێڕانی ماناكانی قورئانی پیرۆز - وەرگێڕاوی کەنادی - پێڕستی وه‌رگێڕاوه‌كان

وەرگێڕاوی ماناکانی قورئانی پیرۆز بۆ زمانی کەنادی، وەرگێڕان: موحەمەد حەمزە بتور.

داخستن