Check out the new design

Kilniojo Korano reikšmių vertimas - Vertimas į kanadiečių k. - Bašyr Meisuri * - Vertimų turinys


Reikšmių vertimas Sūra: Al-Bakara   Aja (Korano eilutė):
اِنَّ فِیْ خَلْقِ السَّمٰوٰتِ وَالْاَرْضِ وَاخْتِلَافِ الَّیْلِ وَالنَّهَارِ وَالْفُلْكِ الَّتِیْ تَجْرِیْ فِی الْبَحْرِ بِمَا یَنْفَعُ النَّاسَ وَمَاۤ اَنْزَلَ اللّٰهُ مِنَ السَّمَآءِ مِنْ مَّآءٍ فَاَحْیَا بِهِ الْاَرْضَ بَعْدَ مَوْتِهَا وَبَثَّ فِیْهَا مِنْ كُلِّ دَآبَّةٍ ۪— وَّتَصْرِیْفِ الرِّیٰحِ وَالسَّحَابِ الْمُسَخَّرِ بَیْنَ السَّمَآءِ وَالْاَرْضِ لَاٰیٰتٍ لِّقَوْمٍ یَّعْقِلُوْنَ ۟
ನಿಸ್ಸಂದೇಹವಾಗಿಯು ಆಕಾಶಗಳ ಹಾಗೂ ಭೂಮಿಯ ಸೃಷ್ಟಿಯಲ್ಲೂ, ರಾತ್ರಿ-ಹಗಲುಗಳ ಬದಲಾವಣೆಯಲ್ಲೂ, ಜನರಿಗೆ ಪ್ರಯೋಜನ ನೀಡುವಂತಹ ವಸ್ತುಗಳೊಂದಿಗೆ ಕಡಲಿನಲ್ಲಿ ಸಂಚರಿಸುತ್ತಿರುವ ಹಡಗುಗಳಲ್ಲೂ, ಆಕಾಶದಿಂದ ಅಲ್ಲಾಹನು ಮಳೆ ನೀರನ್ನು ಇಳಿಸಿ ಅದರ ಮೂಲಕ ನಿರ್ಜೀವ ಭೂಮಿಯನ್ನು ಜೀವಂತಗೊಳಿಸಿರುವುದರಲ್ಲೂ ಅದರಲ್ಲಿ ಸಕಲ ಜಾತಿಯ ಜೀವಗಳನ್ನು ಹಬ್ಬಿಸಿರುವುದರಲ್ಲೂ, ಮಾರುತಗಳ ಗತಿ ಬದಲಾವಣೆಗಳಲ್ಲೂ, ಆಕಾಶ ಮತ್ತು ಭೂಮಿಯ ನಡುವೆ ನಿಯಂತ್ರಿತವಾದ ಮೋಡಗಳಲ್ಲೂ ಬುದ್ಧಿಜೀವಿಗಳಿಗೆ ಅನೇಕ ದೃಷ್ಟಾಂತಗಳಿವೆ.
Tafsyrai arabų kalba:
وَمِنَ النَّاسِ مَنْ یَّتَّخِذُ مِنْ دُوْنِ اللّٰهِ اَنْدَادًا یُّحِبُّوْنَهُمْ كَحُبِّ اللّٰهِ ؕ— وَالَّذِیْنَ اٰمَنُوْۤا اَشَدُّ حُبًّا لِّلّٰهِ ؕ— وَلَوْ یَرَی الَّذِیْنَ ظَلَمُوْۤا اِذْ یَرَوْنَ الْعَذَابَ ۙ— اَنَّ الْقُوَّةَ لِلّٰهِ جَمِیْعًا ۙ— وَّاَنَّ اللّٰهَ شَدِیْدُ الْعَذَابِ ۟
ಅವರಲ್ಲಿ ಕೆಲವರು ಅಲ್ಲಾಹನ ಜೊತೆ ಇತರರನ್ನು (ಉಪದೇವತೆಗಳನ್ನು) ನಿಶ್ಚಯಿಸಿ ಅಲ್ಲಾಹನನ್ನು ಪ್ರೀತಿಸುವಂತೆ ಅವರನ್ನು ಪ್ರೀತಿಸುತ್ತಾರೆ. ಸತ್ಯವಿಶ್ವಾಸಿಗಳಂತು ಅಲ್ಲಾಹನ್ನು ಅತ್ಯಧಿಕ ಪ್ರೀತಿಸುತ್ತಾರೆ. ಈ ಅಕ್ರಮಿಗಳು ಅಲ್ಲಾಹನ ಶಿಕ್ಷೆಯನ್ನು ಕಾಣುವಾಗ ಶಕ್ತಿ ಸಾಮರ್ಥ್ಯವೆಲ್ಲವೂ ಅಲ್ಲಾಹನಿಗೆ ಮಾತ್ರವಿದೆ ಮತ್ತು ಅಲ್ಲಾಹನು ಉಗ್ರವಾಗಿ ಶಿಕ್ಷಿಸುವವನೆಂದು ದೃಢವಾಗುವುದು.
Tafsyrai arabų kalba:
اِذْ تَبَرَّاَ الَّذِیْنَ اتُّبِعُوْا مِنَ الَّذِیْنَ اتَّبَعُوْا وَرَاَوُا الْعَذَابَ وَتَقَطَّعَتْ بِهِمُ الْاَسْبَابُ ۟
(ಸತ್ಯನಿಷೇಧಿಗಳ) ನಾಯಕರು ತಮ್ಮ ಅನುಯಾಯಿಗಳಿಂದ ಅವಗಣಿಸುವಾಗ ಮತ್ತು ಅವರು ಯಾತನೆಯನ್ನು ಕಣ್ಣಾರೆ ಕಾಣುವ ಹಾಗೂ ಸಕಲ ಸಂಬAಧಗಳೂ ಮುರಿದುಹೋಗುವ ಸಂಧರ್ಭದಲ್ಲಿ.
Tafsyrai arabų kalba:
وَقَالَ الَّذِیْنَ اتَّبَعُوْا لَوْ اَنَّ لَنَا كَرَّةً فَنَتَبَرَّاَ مِنْهُمْ كَمَا تَبَرَّءُوْا مِنَّا ؕ— كَذٰلِكَ یُرِیْهِمُ اللّٰهُ اَعْمَالَهُمْ حَسَرٰتٍ عَلَیْهِمْ ؕ— وَمَا هُمْ بِخٰرِجِیْنَ مِنَ النَّارِ ۟۠
ಅನುಯಾಯಿಗಳು ಹೇಳುವರು; ನಮಗೆ ಭೂಲೋಕಕ್ಕೆ ಮರಳುವ ಅವಕಾಶವೇನಾದರು ಇರುತ್ತಿದ್ದರೆ ಅವರು ನಮ್ಮಿಂದ ಬೇಸರಗೊಂಡು ಕಡೆಗಣಿಸಿದಂತೆ ನಾವೂ ಸಹ ಅವರನ್ನು ಕಡೆಗಣಿಸುತ್ತಿದ್ದೇವು. ಇದೇ ಪ್ರಕಾರ ಅಲ್ಲಾಹನು ಅವರ ಕರ್ಮಗಳನ್ನು ಅವರಿಗೆ ಖೇದವಾಗಲೆಂದು ತೋರಿಸಿ ಕೊಡುವನು. ಮತ್ತು ಅವರು ನರಕಾಗ್ನಿಯಿಂದ ಎಂದೂ ಹೊರಹೋಗಲಾರರು.
Tafsyrai arabų kalba:
یٰۤاَیُّهَا النَّاسُ كُلُوْا مِمَّا فِی الْاَرْضِ حَلٰلًا طَیِّبًا ؗ— وَّلَا تَتَّبِعُوْا خُطُوٰتِ الشَّیْطٰنِ ؕ— اِنَّهٗ لَكُمْ عَدُوٌّ مُّبِیْنٌ ۟
ಓ ಜನರೇ, ಭೂಮಿಯಲ್ಲಿರುವ ಧರ್ಮಸಮ್ಮತ ಹಾಗೂ ಶುದ್ಧ ಆಹಾರವನ್ನು ಸೇವಿಸಿರಿ ಹಾಗೂ ಶೈತಾನನ ಹೆಜ್ಜೆಗಳನ್ನು ಅನುಸರಿಸಬೇಡಿರಿ. ಅವನು ನಿಮಗೆ ಪ್ರತ್ಯಕ್ಷ ಶತ್ರವಾಗಿದ್ದಾನೆ.
Tafsyrai arabų kalba:
اِنَّمَا یَاْمُرُكُمْ بِالسُّوْٓءِ وَالْفَحْشَآءِ وَاَنْ تَقُوْلُوْا عَلَی اللّٰهِ مَا لَا تَعْلَمُوْنَ ۟
ನಿಶ್ಚಯವಾಗಿಯೂ ಅವನಂತೂ ಪಾಪ ಮತ್ತು ಅಶ್ಲೀಲ ಕೃತ್ಯಗಳನ್ನು, ಹಾಗೂ ಅಲ್ಲಾಹನ ಬಗ್ಗೆ ನಿಮಗೆ ಜ್ಞಾನವಿಲ್ಲದ್ದನ್ನು (ಅದು ಅಲ್ಲಾಹನ ಆದೇಶವೆಂದು) ಹೇಳಲು ನಿಮಗೆ ಪ್ರಚೋದಿಸುತ್ತಾನೆ.
Tafsyrai arabų kalba:
 
Reikšmių vertimas Sūra: Al-Bakara
Sūrų turinys Puslapio numeris
 
Kilniojo Korano reikšmių vertimas - Vertimas į kanadiečių k. - Bašyr Meisuri - Vertimų turinys

Išvertė šeichas Bašyr Meisuri. Sukurta prižiūrint Ruad vertimo centrui.

Uždaryti