Check out the new design

Kilniojo Korano reikšmių vertimas - Vertimas į kanadiečių k. - Bašyr Meisuri * - Vertimų turinys


Reikšmių vertimas Sūra: Ta-Ha   Aja (Korano eilutė):
قَالَ كَذٰلِكَ اَتَتْكَ اٰیٰتُنَا فَنَسِیْتَهَا ۚ— وَكَذٰلِكَ الْیَوْمَ تُنْسٰی ۟
ಆಗ ಅಲ್ಲಾಹನು ಹೇಳುವನು: ಇದೇ ಪ್ರಕಾರ ನಮ್ಮ ನಿದರ್ಶನಗಳು ನಿನ್ನ ಬಳಿ ಬಂದಾಗ ಅವುಗಳನ್ನು ನೀನು ಮರೆತು ಬಿಟ್ಟೆ
Tafsyrai arabų kalba:
وَكَذٰلِكَ نَجْزِیْ مَنْ اَسْرَفَ وَلَمْ یُؤْمِنْ بِاٰیٰتِ رَبِّهٖ ؕ— وَلَعَذَابُ الْاٰخِرَةِ اَشَدُّ وَاَبْقٰی ۟
ಇದೇ ಪ್ರಕಾರ ತನ್ನ ಪ್ರಭುವಿನ ದೃಷ್ಟಾಂತಗಳಲ್ಲಿ ವಿಶ್ವಾಸವಿರಿಸದವನಿಗೆ ನಾವು ಪ್ರತಿಫಲ ನೀಡುವೆವು ಮತ್ತು ನಿಸ್ಸಂಶಯವಾಗಿಯು ಪರಲೋಕದ ಯಾತನೆಯು ಅತ್ಯುಗ್ರವು, ಅತ್ಯಂತ ಶಾಶ್ವತವು ಆಗಿರುತ್ತದೆ.
Tafsyrai arabų kalba:
اَفَلَمْ یَهْدِ لَهُمْ كَمْ اَهْلَكْنَا قَبْلَهُمْ مِّنَ الْقُرُوْنِ یَمْشُوْنَ فِیْ مَسٰكِنِهِمْ ؕ— اِنَّ فِیْ ذٰلِكَ لَاٰیٰتٍ لِّاُولِی النُّهٰی ۟۠
ನಾವು ಇವರಿಗಿಂತ ಮುಂಚೆ ಅದೆಷ್ಟೋ ಜನಾಂಗಗಳನ್ನು ನಾಶ ಮಾಡಿದ್ದೇವೆ. ಮತ್ತು ಇವರು ಅವರ ನಾಡುಗಳಲ್ಲಿ ಸಂಚರಿಸುತ್ತಾರೆ. ಇದು ಅವರಿಗೆ ಸನ್ಮಾರ್ಗ ತೋರಲಿಲ್ಲವೇ?ನಿಶ್ಚಯವಾಗಿಯೂ ಇದರಲ್ಲಿ ಬುದ್ಧಿಶಾಲಿಗಳಿಗೆ ಅನೇಕ ನಿದರ್ಶನಗಳಿವೆ.
Tafsyrai arabų kalba:
وَلَوْلَا كَلِمَةٌ سَبَقَتْ مِنْ رَّبِّكَ لَكَانَ لِزَامًا وَّاَجَلٌ مُّسَمًّی ۟ؕ
(ಓ ಪೈಗಂಬರರೇ) ನಿಮ್ಮ ಪ್ರಭುವಿನಿಂದ ಮೊದಲೇ ನಿರ್ಧರಿತ ವಚನ ಮತ್ತು ನಿಶ್ಚಯಿಸಲಾದ ಕಾಲಾವಧಿ ಇಲ್ಲದಿರುತ್ತಿದ್ದರೆ ಆಗಲೇ (ಸತ್ಯನಿಷೇಧಿ ಖುರೈಶರ ಮೇಲೆ) ಯಾತನೆಯು ಎರಗಿಬಿಡುತ್ತಿತ್ತು.
Tafsyrai arabų kalba:
فَاصْبِرْ عَلٰی مَا یَقُوْلُوْنَ وَسَبِّحْ بِحَمْدِ رَبِّكَ قَبْلَ طُلُوْعِ الشَّمْسِ وَقَبْلَ غُرُوْبِهَا ۚ— وَمِنْ اٰنَآئِ الَّیْلِ فَسَبِّحْ وَاَطْرَافَ النَّهَارِ لَعَلَّكَ تَرْضٰی ۟
ಅವರಾಡುವ ಮಾತುಗಳ ಬಗ್ಗೆ ಸಹನೆ ವಹಿಸಿರಿ ಮತ್ತು ಸೂರ್ಯೋದಯ ಹಾಗೂ ಸೂರ್ಯಾಸ್ತಮಯಕ್ಕೆ ಮೊದಲು ನಿಮ್ಮ ಪ್ರಭುವಿನ ಸ್ತುತಿಯೊಂದಿಗೆ ಪಾವಿತ್ರö್ಯವನ್ನು ಕೊಂಡಾಡಿರಿ.ರಾತ್ರಿಯ ವೇಳೆಗಳಲ್ಲಿಯು, ಹಗಲಿನ ಅಂಚುಗಳಲ್ಲಿಯು ಅವನ ಪರಿಶುದ್ಧತೆಯನ್ನು ಕೊಂಡಾಡಿರಿ. ನೀವು ಸಂತೃಪ್ತಿ ಪಡೆಯಬಹುದು.
Tafsyrai arabų kalba:
وَلَا تَمُدَّنَّ عَیْنَیْكَ اِلٰی مَا مَتَّعْنَا بِهٖۤ اَزْوَاجًا مِّنْهُمْ زَهْرَةَ الْحَیٰوةِ الدُّنْیَا ۙ۬— لِنَفْتِنَهُمْ فِیْهِ ؕ— وَرِزْقُ رَبِّكَ خَیْرٌ وَّاَبْقٰی ۟
ನಾವು ಸತ್ಯ ನಿಷೇಧಿಗಳ ಪೈಕಿ ವಿವಿಧ ಜನಾಂಗಗಳಿಗೆ ನೀಡಿದ ಸುಖಭೋಗ ಮತ್ತು ಐಹಿಕ ಜೀವನದ ವೈಭವದೆಡೆಗೆ ನೀವು ಕಣ್ಣೆತ್ತೂ ನೋಡಬೇಡಿ. ಅವುಗಳನ್ನು ನಾವು ಪರೀಕ್ಷಿಸಲಿಕ್ಕಾಗಿ ಅವರಿಗೆ ಕೊಟ್ಟಿದ್ದೇವೆ. ನಿಮಗೆ ನಿಮ್ಮ ಪ್ರಭುವಿನಿಂದ ನೀಡಲಾದುದೇ ಉತ್ತಮವೂ, ಅತ್ಯಂತ ಶಾಶ್ವತವೂ ಆಗಿದೆ.
Tafsyrai arabų kalba:
وَاْمُرْ اَهْلَكَ بِالصَّلٰوةِ وَاصْطَبِرْ عَلَیْهَا ؕ— لَا نَسْـَٔلُكَ رِزْقًا ؕ— نَحْنُ نَرْزُقُكَ ؕ— وَالْعَاقِبَةُ لِلتَّقْوٰی ۟
ನಿಮ್ಮ ಮನೆಯವರಿಗೆ ನಮಾಝ್‌ನ ಆದೇಶ ನೀಡಿರಿ ಮತ್ತು ನೀವು ಸಹ ಅದರಲ್ಲಿ ಸ್ಥಿರಚಿತ್ತರಾಗಿರಿ. ನಾವು ನಿಮ್ಮಿಂದ ಜೀವನಾಧಾರವನ್ನು ಕೇಳುತ್ತಿಲ್ಲ. ಬದಲಾಗಿ ಸ್ವತಃ ನಾವೇ ನಿಮಗೆ ಜೀವನಾಧಾರ ನೀಡುತ್ತೇವೆ ಮತ್ತು ಭಯಭಕ್ತಿಯುಳ್ಳವರಿಗೇ ಉತ್ತಮ ಪ್ರತಿಫಲವಿರುವುದು.
Tafsyrai arabų kalba:
وَقَالُوْا لَوْلَا یَاْتِیْنَا بِاٰیَةٍ مِّنْ رَّبِّهٖ ؕ— اَوَلَمْ تَاْتِهِمْ بَیِّنَةُ مَا فِی الصُّحُفِ الْاُوْلٰی ۟
ಈ ಪೈಗಂಬರ್ ತನ್ನ ಪ್ರಭುವಿನಿಂದ ನಮ್ಮಲ್ಲಿಗೆ ಯಾವುದೇ ದೃಷ್ಟಾಂತವನ್ನು ಏಕೆ ತರುವುದಿಲ್ಲ? ಎಂದು ಅವರು ಕೇಳುತ್ತಾರೆ. (ಅಲ್ಲಾಹನು ಹೇಳುತ್ತಾನೆ) ಅವರ ಬಳಿ ಹಿಂದಿನ ಗ್ರಂಥದಲ್ಲಿದ್ದAತಹ ಸುಸ್ಪಷ್ಟ ಪುರಾವೆಯು ತಲುಪಲಿಲ್ಲವೇ?
Tafsyrai arabų kalba:
وَلَوْ اَنَّاۤ اَهْلَكْنٰهُمْ بِعَذَابٍ مِّنْ قَبْلِهٖ لَقَالُوْا رَبَّنَا لَوْلَاۤ اَرْسَلْتَ اِلَیْنَا رَسُوْلًا فَنَتَّبِعَ اٰیٰتِكَ مِنْ قَبْلِ اَنْ نَّذِلَّ وَنَخْزٰی ۟
ಮತ್ತು ನಾವೇನಾದರೂ ಈ (ಕುರ್‌ಆನನ್ನು ಅವತೀರ್ಣಗೊಳಿಸುವುದಕ್ಕಿಂತ) ಮುಂಚೆಯೇ ಅವರನ್ನು ಯಾತನೆಯ ಮೂಲಕ ನಾಶ ಮಾಡಿರುತ್ತಿದ್ದರೆ ಖಂಡಿತವಾಗಿಯೂ ಅವರು ಹೇಳುತ್ತಿದ್ದರು: ನಮ್ಮ ಪ್ರಭು ನೀನೇಕೆ ನಮ್ಮೆಡೆಗೆ ಒಬ್ಬ ಸಂದೇಶವಾಹಕನನ್ನು ಕಳುಹಿಸಿ ಕೊಡಲಿಲ್ಲ? ನಾವು ಅಪಮಾನಿತರೂ ನಿಂದ್ಯರೂ ಆಗುವ ಮೊದಲು ನಿನ್ನ ಸೂಕ್ತಿಗಳನ್ನು ಅನುಸರಿಸುತ್ತಿದ್ದೆವು.
Tafsyrai arabų kalba:
قُلْ كُلٌّ مُّتَرَبِّصٌ فَتَرَبَّصُوْا ۚ— فَسَتَعْلَمُوْنَ مَنْ اَصْحٰبُ الصِّرَاطِ السَّوِیِّ وَمَنِ اهْتَدٰی ۟۠
ಹೇಳಿರಿ: ಪ್ರತಿಯೊಬ್ಬನೂ ಪರಿಣಾಮದ ನಿರೀಕ್ಷೆಯಲ್ಲಿರುವನು. ಇನ್ನು ನೀವೂ ನಿರೀಕ್ಷಿಸುತ್ತಿರಿ. ಯಾರು ಋಜು ಮಾರ್ಗದವರು ಮತ್ತು ಯಾರು ಸನ್ಮಾರ್ಗ ಪಡೆದವರೆಂದು ಸಧ್ಯವೇ ನೀವು ಅರಿತುಕೊಳ್ಳಲಿದ್ದೀರಿ.
Tafsyrai arabų kalba:
 
Reikšmių vertimas Sūra: Ta-Ha
Sūrų turinys Puslapio numeris
 
Kilniojo Korano reikšmių vertimas - Vertimas į kanadiečių k. - Bašyr Meisuri - Vertimų turinys

Išvertė šeichas Bašyr Meisuri. Sukurta prižiūrint Ruad vertimo centrui.

Uždaryti