Check out the new design

വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി * - വിവർത്തനങ്ങളുടെ സൂചിക


പരിഭാഷ അദ്ധ്യായം: ന്നഹ്ൽ   ആയത്ത്:
اَلَّذِیْنَ كَفَرُوْا وَصَدُّوْا عَنْ سَبِیْلِ اللّٰهِ زِدْنٰهُمْ عَذَابًا فَوْقَ الْعَذَابِ بِمَا كَانُوْا یُفْسِدُوْنَ ۟
ಸತ್ಯನಿಷೇಧಿಸಿ, ಅಲ್ಲಾಹನ ಮಾರ್ಗದಿಂದ ತಡೆಯುತ್ತಿದ್ದವರಿಗೆ ಇಹದಲ್ಲಿ ಅವರು ಕ್ಷೆÆÃಭೆ ಹರಡಿದ್ದ ಫಲವಾಗಿ ನಾವು ಯಾತನೆಯ ಮೇಲೆ ಯಾತನೆಯನ್ನು ಹೆಚ್ಚಿಸುತ್ತಾ ಹೋಗುವೆವು.
അറബി ഖുർആൻ വിവരണങ്ങൾ:
وَیَوْمَ نَبْعَثُ فِیْ كُلِّ اُمَّةٍ شَهِیْدًا عَلَیْهِمْ مِّنْ اَنْفُسِهِمْ وَجِئْنَا بِكَ شَهِیْدًا عَلٰی هٰۤؤُلَآءِ ؕ— وَنَزَّلْنَا عَلَیْكَ الْكِتٰبَ تِبْیَانًا لِّكُلِّ شَیْءٍ وَّهُدًی وَّرَحْمَةً وَّبُشْرٰی لِلْمُسْلِمِیْنَ ۟۠
ನಾವು ಪ್ರತಿಯೊಂದು ಸಮುದಾಯದಿಂದ ಅವರ ವಿರುದ್ಧವೇ ಸಾಕ್ಷಿಯನ್ನು ನಿಲ್ಲಿಸುವ ದಿನ. ನಿಮ್ಮನ್ನು ಇವರೆಲ್ಲರ ಮೇಲೆ ಒಬ್ಬ ಸಾಕ್ಷಿಯನ್ನಾಗಿಸಿ ತರುವೆವು ಮತ್ತು ನಾವು ನಿಮ್ಮ ಮೇಲೆ ಈ ಗ್ರಂಥವನ್ನು ಎಲ್ಲಾ ವಿಷಯಗಳ ಸ್ಪಷ್ಟ ವಿವರಣೆಯಾಗಿ ಮತ್ತು ಶರಣಾಗುವವರಿಗೆ ಸನ್ಮಾರ್ಗವೂ, ಕಾರುಣ್ಯವೂ, ಸುವಾರ್ತೆಯೂ ಆಗಿ ಅವತೀರ್ಣಗೊಳಿಸಿರುತ್ತೇವೆ.
അറബി ഖുർആൻ വിവരണങ്ങൾ:
اِنَّ اللّٰهَ یَاْمُرُ بِالْعَدْلِ وَالْاِحْسَانِ وَاِیْتَآئِ ذِی الْقُرْبٰی وَیَنْهٰی عَنِ الْفَحْشَآءِ وَالْمُنْكَرِ وَالْبَغْیِ ۚ— یَعِظُكُمْ لَعَلَّكُمْ تَذَكَّرُوْنَ ۟
ಅಲ್ಲಾಹನು ನ್ಯಾಯ, ಪರೋಪಕಾರ ಹಾಗೂ ಆಪ್ತ ಸಂಬAಧಿಕರೊAದಿಗೆ ಔದಾರ್ಯ ತೋರುವ ಆದೇಶ ನೀಡುತ್ತಾನೆ ಮತ್ತು ನಿರ್ಲಜ್ಜೆಯ ಕೃತ್ಯಗಳಿಂದ, ಅಶ್ಲೀಲ ಕೃತ್ಯಗಳಿಂದ, ಅತಿಕ್ರಮ, ದೌರ್ಜನ್ಯದಿಂದಲೂ ನಿಮ್ಮನ್ನು ತಡಯುತ್ತಾನೆ. ನೀವು ಉಪದೇಶ ಸ್ವೀಕರಿಸುವವರಾಗಲು ಅವನು ನಿಮಗೆ ಉಪದೇಶಗಳನ್ನು ನೀಡುತ್ತಾನೆ.
അറബി ഖുർആൻ വിവരണങ്ങൾ:
وَاَوْفُوْا بِعَهْدِ اللّٰهِ اِذَا عٰهَدْتُّمْ وَلَا تَنْقُضُوا الْاَیْمَانَ بَعْدَ تَوْكِیْدِهَا وَقَدْ جَعَلْتُمُ اللّٰهَ عَلَیْكُمْ كَفِیْلًا ؕ— اِنَّ اللّٰهَ یَعْلَمُ مَا تَفْعَلُوْنَ ۟
ನೀವು ಅಲ್ಲಾಹನೊಡನೆ ಕರಾರು ಮಾಡಿದ್ದರೆ ಅದನ್ನು ಪಾಲಿಸಿರಿ ಮತ್ತು ನೀವು ಮಾಡಿದ ಪ್ರಮಾಣಗಳನ್ನು ಅವುಗಳ ದೃಢೀಕರಣದ ನಂತರ ಉಲ್ಲಂಘಿಸಬೇಡಿರಿ. ವಸ್ತುತಃ ನೀವು ಅಲ್ಲಾಹನನ್ನು ನಿಮ್ಮ ಜಾಮೀನುದಾರನನ್ನಾಗಿ ನಿಶ್ಚಯಿಸಿಕೊಂಡಿರುವಿರಿ. ಖಂಡಿತವಾಗಿಯೂ ಅಲ್ಲಾಹನು ನೀವು ಮಾಡುತ್ತಿರುವುದೆಲ್ಲವನ್ನು ಅರಿಯುತ್ತಾನೆ.
അറബി ഖുർആൻ വിവരണങ്ങൾ:
وَلَا تَكُوْنُوْا كَالَّتِیْ نَقَضَتْ غَزْلَهَا مِنْ بَعْدِ قُوَّةٍ اَنْكَاثًا ؕ— تَتَّخِذُوْنَ اَیْمَانَكُمْ دَخَلًا بَیْنَكُمْ اَنْ تَكُوْنَ اُمَّةٌ هِیَ اَرْبٰی مِنْ اُمَّةٍ ؕ— اِنَّمَا یَبْلُوْكُمُ اللّٰهُ بِهٖ ؕ— وَلَیُبَیِّنَنَّ لَكُمْ یَوْمَ الْقِیٰمَةِ مَا كُنْتُمْ فِیْهِ تَخْتَلِفُوْنَ ۟
ತಾನು ನೂತ ನೂಲನ್ನು ಅದು ಗಟ್ಟಿಯಾದ ಬಳಿಕ ತುಂಡು ತುಂಡಾಗಿಸುವ ಒಬ್ಬಳಂತೆ ನೀವಾಗಬೇಡಿರಿ. ಒಂದು ಸಮುದಾಯವು ಇನ್ನೊಂದು ಸಮುದಾಯಕ್ಕಿಂತ ಜನಸಮೃದ್ಧವಾಗಲೆಂದು ನೀವು ನಿಮ್ಮ ಶಪಥಗಳನ್ನು ಪರಸ್ಪರರಿಗೆ ಮೋಸದ ಮಾರ್ಗವನ್ನಾಗಿ ಮಾಡುತ್ತೀರಿ. ವಾಸ್ತವದಲ್ಲಿ ಅಲ್ಲಾಹನು ಈ ಒಪ್ಪಂದದ ಮೂಲಕ ನಿಮ್ಮನ್ನು ಪರೀಕ್ಷಿಸುತ್ತಿದ್ದಾನೆ. ಖಂಡಿತವಾಗಿಯು ಅಲ್ಲಾಹನು ಪುನರುತ್ಥಾನದ ದಿನದಂದು ನೀವು ಭಿನ್ನತೆ ಹೊಂದಿರುವ ಪ್ರತಿಯೊಂದು ಸಂಗತಿಯನ್ನು ಸ್ಪಷ್ಟವಾಗಿ ವಿವರಿಸಿಕೊಡಲಿದ್ದಾನೆ.
അറബി ഖുർആൻ വിവരണങ്ങൾ:
وَلَوْ شَآءَ اللّٰهُ لَجَعَلَكُمْ اُمَّةً وَّاحِدَةً وَّلٰكِنْ یُّضِلُّ مَنْ یَّشَآءُ وَیَهْدِیْ مَنْ یَّشَآءُ ؕ— وَلَتُسْـَٔلُنَّ عَمَّا كُنْتُمْ تَعْمَلُوْنَ ۟
ಅಲ್ಲಾಹನು ಇಚ್ಛಿಸಿದ್ದರೆ ನಿಮ್ಮೆಲ್ಲರನ್ನು ಒಂದೇ ಜನಸಮುದಾಯವನ್ನಾಗಿ ಮಾಡುತ್ತಿದ್ದನು. ಆದರೆ ಅವನು ತಾನಿಚ್ಛಿಸಿದವರನ್ನು ದಾರಿಗೆಡಿಸುತ್ತಾನೆ. ಹಾಗೂ ತಾನಿಚ್ಛಿಸಿದವರಿಗೆ ಸನ್ಮಾರ್ಗವನ್ನು ನೀಡುತ್ತಾನೆ. ಖಂಡಿತವಾಗಿಯೂ ನೀವು ಮಾಡುತ್ತಿರುವುದರ ಕುರಿತು ವಿಚಾರಣೆಗೊಳಗಾಗಲಿದ್ದೀರಿ.
അറബി ഖുർആൻ വിവരണങ്ങൾ:
 
പരിഭാഷ അദ്ധ്യായം: ന്നഹ്ൽ
സൂറത്തുകളുടെ സൂചിക പേജ് നമ്പർ
 
വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി - വിവർത്തനങ്ങളുടെ സൂചിക

വിവർത്തനം - ശൈഖ് ബഷീർ മൈസൂരി. മർകസ് റുവാദ് തർജമയുടെ മേൽനോട്ടത്തിൽ വികസിപ്പിച്ചത്.

അടക്കുക