Check out the new design

വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി * - വിവർത്തനങ്ങളുടെ സൂചിക


പരിഭാഷ അദ്ധ്യായം: ഇസ്റാഅ്   ആയത്ത്:
وَاِمَّا تُعْرِضَنَّ عَنْهُمُ ابْتِغَآءَ رَحْمَةٍ مِّنْ رَّبِّكَ تَرْجُوْهَا فَقُلْ لَّهُمْ قَوْلًا مَّیْسُوْرًا ۟
ನೀವು ನಿರೀಕ್ಷಿಸುತ್ತಿರುವಂತಹ ನಿಮ್ಮ ಪ್ರಭುವಿನ ಕಾರುಣ್ಯದ ಹಂಬಲದಿAದ ನಿಮಗೆ ಅವರಿಂದ (ನಿರ್ಗತಿಕ ಸಂಬAಧಿಕರಿAದ) ವಿಮುಖನಾಗಬೇಕಾಗಿ ಬಂದರೂ ನೀವು ಅವರೊಂದಿಗೆ ಮೃದುತ್ವದೊಂದಿಗೆ ಮಾತನಾಡಿರಿ.
അറബി ഖുർആൻ വിവരണങ്ങൾ:
وَلَا تَجْعَلْ یَدَكَ مَغْلُوْلَةً اِلٰی عُنُقِكَ وَلَا تَبْسُطْهَا كُلَّ الْبَسْطِ فَتَقْعُدَ مَلُوْمًا مَّحْسُوْرًا ۟
ನೀವು ನಿಮ್ಮ ಕೈಯನ್ನು (ಜಿಪುಣತನದಿಂದ) ನಿಮ್ಮ ಕೊರಳಿಗೆಸಟೆದುಕೊಳ್ಳಬೇಡಿ ಮತ್ತು ಅದನ್ನು ಸಂಪೂರ್ಣವಾಗಿ ತೆರೆದಿಡಬೇಡಿ. ಅನ್ಯಥಾ ನೀವು ನಿಂದಿಸಲ್ಪಟ್ಟವರಾಗಿಯೂ, ನಿಸ್ಸಹಾಯಕರಗಿಯೂ ಕುಳಿತಿರಬೇಕಾದಿತು.
അറബി ഖുർആൻ വിവരണങ്ങൾ:
اِنَّ رَبَّكَ یَبْسُطُ الرِّزْقَ لِمَنْ یَّشَآءُ وَیَقْدِرُ ؕ— اِنَّهٗ كَانَ بِعِبَادِهٖ خَبِیْرًا بَصِیْرًا ۟۠
ನಿಶ್ಚಯವಾಗಿಯು ನಿಮ್ಮ ಪ್ರಭುವು ತಾನಿಚ್ಛಿಸಿದವರಿಗೆ ಜೀವನಾಧಾರವನ್ನು ವಿಸ್ತರಿಸುತ್ತಾನೆ ಹಾಗೂ ತಾನಿಚ್ಛಿಸಿದವರಿಗೆ ಸಂಕುಚಿತಗೊಳಿಸುತ್ತಾನೆ. ನಿಜವಾಗಿಯು ಅವನು ತನ್ನ ದಾಸರ ವಿಚಾರದಲ್ಲಿ ಅರಿವುಳ್ಳವನು, ಚೆನ್ನಾಗಿ ನೋಡುವವನು ಆಗಿದ್ದಾನೆ.
അറബി ഖുർആൻ വിവരണങ്ങൾ:
وَلَا تَقْتُلُوْۤا اَوْلَادَكُمْ خَشْیَةَ اِمْلَاقٍ ؕ— نَحْنُ نَرْزُقُهُمْ وَاِیَّاكُمْ ؕ— اِنَّ قَتْلَهُمْ كَانَ خِطْاً كَبِیْرًا ۟
ನೀವು ನಿಮ್ಮ ಮಕ್ಕಳನ್ನು ದಾರಿದ್ರö್ಯದ ಭೀತಿಯಿಂದ ಕೊಲ್ಲಬೇಡಿರಿ. ನಾವು ಅವರಿಗೂ ಆಹಾರ ನೀಡುತ್ತೇವೆ ಮತ್ತು ನಿಮಗೂ ಸಹ ನಿಸ್ಸಂಶಯವಾಗಿಯು ಅವರನ್ನು ಕೊಲ್ಲುವುದು ಮಹಾಅಪರಾಧವಾಗಿದೆ.
അറബി ഖുർആൻ വിവരണങ്ങൾ:
وَلَا تَقْرَبُوا الزِّنٰۤی اِنَّهٗ كَانَ فَاحِشَةً ؕ— وَسَآءَ سَبِیْلًا ۟
ನೀವು ವ್ಯಾಭಿಚಾರದ ಸಮೀಪಕ್ಕೂ ಸುಳಿಯ ಬೇಡಿರಿ. ಏಕೆಂದರೆ ಅದು ಅಶ್ಲೀಲ ಕಾರ್ಯ ಮತ್ತು ಅತ್ಯಂತ ಕೆಟ್ಟ ಮಾರ್ಗವಾಗಿದೆ.
അറബി ഖുർആൻ വിവരണങ്ങൾ:
وَلَا تَقْتُلُوا النَّفْسَ الَّتِیْ حَرَّمَ اللّٰهُ اِلَّا بِالْحَقِّ ؕ— وَمَنْ قُتِلَ مَظْلُوْمًا فَقَدْ جَعَلْنَا لِوَلِیِّهٖ سُلْطٰنًا فَلَا یُسْرِفْ فِّی الْقَتْلِ ؕ— اِنَّهٗ كَانَ مَنْصُوْرًا ۟
ನೀವು ಅಲ್ಲಾಹನು ನಿಷಿದ್ಧಗೊಳಿಸಿರುವ ಜೀವವನ್ನು ಎಂದಿಗೂ ಅನ್ಯಾಯವಾಗಿ ವಧಿಸಬೇಡಿರಿ. ಇನ್ನು ಯಾರಾದರೂ ಅನ್ಯಾಯಕ್ಕೊಳಗಾಗಿ ವಧಿಸಲ್ಪಟ್ಟರೆ ನಾವು ಅವನ ವಾರೀಸುದಾರರಿಗೆ ಪ್ರತಿಕಾರದ ಅಧಿಕಾರ ಕೊಟ್ಟಿದ್ದೇವೆ. ಅದರೆ ಅವನು ಕೊಲ್ಲುವುದರಲ್ಲಿ ಅತಿಕ್ರಮವನ್ನು ತೋರದಿರಲಿ. ನಿಸ್ಸಂಶಯವಾಗಿಯೂ (ಪ್ರತೀಕಾರದ ಮೂಲಕ) ಅವನು ಸಹಾಯ ನೀಡಲ್ಪಟ್ಟಿದ್ದಾನೆ.
അറബി ഖുർആൻ വിവരണങ്ങൾ:
وَلَا تَقْرَبُوْا مَالَ الْیَتِیْمِ اِلَّا بِالَّتِیْ هِیَ اَحْسَنُ حَتّٰی یَبْلُغَ اَشُدَّهٗ ۪— وَاَوْفُوْا بِالْعَهْدِ ۚ— اِنَّ الْعَهْدَ كَانَ مَسْـُٔوْلًا ۟
ಅನಾಥನ ಸೊತ್ತನ್ನು ಅತ್ಯುತ್ತಮ ರೀತಿಯಲ್ಲೇ ಹೊರತು ಸಮೀಪಿಸಬೇಡಿರಿ. ಅವನು ಪ್ರಾಯಕ್ಕೆ ತಲುಪುವ ತನಕ ಮತ್ತು ನೀವು ಒಪ್ಪಂದವನ್ನು ಪೂರ್ತಿಗೊಳಿಸಿರಿ. ಖಂಡಿತವಾಗಿಯು ನೀವು ಒಪ್ಪಂದದ ಕುರಿತು ವಿಚಾರಿಸಲ್ಪಡುವಿರಿ.
അറബി ഖുർആൻ വിവരണങ്ങൾ:
وَاَوْفُوا الْكَیْلَ اِذَا كِلْتُمْ وَزِنُوْا بِالْقِسْطَاسِ الْمُسْتَقِیْمِ ؕ— ذٰلِكَ خَیْرٌ وَّاَحْسَنُ تَاْوِیْلًا ۟
ನೀವು ಅಳೆದು ಕೊಡುವಾಗ ಪರಿಪೂರ್ಣವಾಗಿ ಅಳೆಯಿರಿ ಮತ್ತು ಸಮತೋಲನವುಳ್ಳ ತಕ್ಕಡಿಯಿಂದ ತೂಕ ಮಾಡಿರಿ ಇದುವೇ ಉತ್ತಮ ಮತ್ತು ಪರಿಣಾಮದ ದೃಷ್ಟಿಯಿಂದಲೂ ಅತ್ಯುತ್ತಮವಾಗಿದೆ.
അറബി ഖുർആൻ വിവരണങ്ങൾ:
وَلَا تَقْفُ مَا لَیْسَ لَكَ بِهٖ عِلْمٌ ؕ— اِنَّ السَّمْعَ وَالْبَصَرَ وَالْفُؤَادَ كُلُّ اُولٰٓىِٕكَ كَانَ عَنْهُ مَسْـُٔوْلًا ۟
ನಿಮಗೆ ಅರಿವಿಲ್ಲದಂತಹ ವಿಚಾರವನ್ನು ಹಿಂಬಾಲಿಸದಿರಿ. ಏಕೆಂದರೆ ಕಿವಿ, ಕಣ್ಣು ಹಾಗೂ ಹೃದಯ ಪ್ರತಿಯೊಂದರ ಬಗ್ಗೆ ಪ್ರಶ್ನಿಸಲಾಗುವುದು.
അറബി ഖുർആൻ വിവരണങ്ങൾ:
وَلَا تَمْشِ فِی الْاَرْضِ مَرَحًا ۚ— اِنَّكَ لَنْ تَخْرِقَ الْاَرْضَ وَلَنْ تَبْلُغَ الْجِبَالَ طُوْلًا ۟
ನೀವು ಭೂಮಿಯಲ್ಲಿ ದರ್ಪದಿಂದ ನಡೆಯದಿರಿ. ನೀವು ಭೂಮಿಯನ್ನು ಸೀಳಲಾರಿರಿ. ಮತ್ತು ಎತ್ತರದಲ್ಲಿ ಪರ್ವತಗಳನ್ನೂ ತಲುಪಲಾರಿರಿ.
അറബി ഖുർആൻ വിവരണങ്ങൾ:
كُلُّ ذٰلِكَ كَانَ سَیِّئُهٗ عِنْدَ رَبِّكَ مَكْرُوْهًا ۟
ಈ ಎಲ್ಲಾ ಕೆಡುಕುಗಳು ನಿಮ್ಮ ಪ್ರಭುವಿನ ಬಳಿ ಅತ್ಯಂತ ಅಪ್ರಿಯವಾಗಿವೆ.
അറബി ഖുർആൻ വിവരണങ്ങൾ:
 
പരിഭാഷ അദ്ധ്യായം: ഇസ്റാഅ്
സൂറത്തുകളുടെ സൂചിക പേജ് നമ്പർ
 
വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി - വിവർത്തനങ്ങളുടെ സൂചിക

വിവർത്തനം - ശൈഖ് ബഷീർ മൈസൂരി. മർകസ് റുവാദ് തർജമയുടെ മേൽനോട്ടത്തിൽ വികസിപ്പിച്ചത്.

അടക്കുക