Check out the new design

വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി * - വിവർത്തനങ്ങളുടെ സൂചിക


പരിഭാഷ അദ്ധ്യായം: യാസീൻ   ആയത്ത്:
اِنَّ اَصْحٰبَ الْجَنَّةِ الْیَوْمَ فِیْ شُغُلٍ فٰكِهُوْنَ ۟ۚ
ಅಂದು ಸ್ವರ್ಗವಾಸಿಗಳು ಸುಖಲೋಲುಪತೆಯಲ್ಲಿ ನಿರತರಾಗಿರುವರು.
അറബി ഖുർആൻ വിവരണങ്ങൾ:
هُمْ وَاَزْوَاجُهُمْ فِیْ ظِلٰلٍ عَلَی الْاَرَآىِٕكِ مُتَّكِـُٔوْنَ ۟ۚ
ಅವರು ಮತ್ತು ಅವರ ಪತ್ನಿಯರು ನೆರಳುಗಳಲ್ಲಿ ಅಲಂಕೃತವಾದ ಮಂಚಗಳ ಮೇಲೆ ದಿಂಬುಗಳಿಗೆ ಒರಗಿಕೊಂಡು ಕುಳಿತಿರುವರು.
അറബി ഖുർആൻ വിവരണങ്ങൾ:
لَهُمْ فِیْهَا فَاكِهَةٌ وَّلَهُمْ مَّا یَدَّعُوْنَ ۟ۚ
ಅಲ್ಲಿ ಅವರಿಗೆ ಹಣ್ಣು-ಹಂಪಲುಗಳಿರುವುವು ಮತ್ತು ಅವರು ಬಯಸುವುದೆಲ್ಲವೂ ಇರುವುದು.
അറബി ഖുർആൻ വിവരണങ്ങൾ:
سَلٰمٌ ۫— قَوْلًا مِّنْ رَّبٍّ رَّحِیْمٍ ۟
ಅವರಿಗೆ ಕರುಣಾನಿಧಿಯಾದ ಪ್ರಭುವಿನ ಕಡೆಯಿಂದ ‘ಸಲಾಮ್'( ಶಾಂತಿ) ಹೇಳಲಾಗುವುದು.
അറബി ഖുർആൻ വിവരണങ്ങൾ:
وَامْتَازُوا الْیَوْمَ اَیُّهَا الْمُجْرِمُوْنَ ۟
ಓ ಅಪರಾಧಿಗಳೇ!, ನೀವಿಂದು ಬೇರ್ಪಟ್ಟು ನಿಲ್ಲಿರಿ.
അറബി ഖുർആൻ വിവരണങ്ങൾ:
اَلَمْ اَعْهَدْ اِلَیْكُمْ یٰبَنِیْۤ اٰدَمَ اَنْ لَّا تَعْبُدُوا الشَّیْطٰنَ ۚ— اِنَّهٗ لَكُمْ عَدُوٌّ مُّبِیْنٌ ۟ۙ
ಓ ಆದಮ್ ಸಂತತಿಗಳೇ, ನೀವು ಶÉÊತಾನನನ್ನು ಆರಾಧಿಸಬಾರದೆಂದು ನಾನು ನಿಮ್ಮಲ್ಲಿ ಪ್ರತಿಜ್ಞೆ ಪಡೆದಿರಲಿಲ್ಲವೇ? ಖಂಡಿತವಾಗಿಯು ಅವನು ನಿಮ್ಮ ಪ್ರತ್ಯಕ್ಷ ಶತ್ರುವಾಗಿದ್ದಾನೆ.
അറബി ഖുർആൻ വിവരണങ്ങൾ:
وَّاَنِ اعْبُدُوْنِیْ ؔؕ— هٰذَا صِرَاطٌ مُّسْتَقِیْمٌ ۟
ಮತ್ತು ನನ್ನನ್ನು ಆರಾಧಿಸಿರಿ ಇದುವೇ ಖುಜುವಾದ ಮಾರ್ಗವಾಗಿದೆ.
അറബി ഖുർആൻ വിവരണങ്ങൾ:
وَلَقَدْ اَضَلَّ مِنْكُمْ جِبِلًّا كَثِیْرًا ؕ— اَفَلَمْ تَكُوْنُوْا تَعْقِلُوْنَ ۟
ನಿಸ್ಸಂಶಯವಾಗಿಯು ನಿಮ್ಮಲ್ಲಿ ಅನೇಕರನ್ನು ಅವನು ದಾರಿಗೆಡಿಸಿದ್ದಾನೆ. ಅದರೂ ನೀವು ಯೋಚಿಸುವುದಿಲ್ಲವೇ?
അറബി ഖുർആൻ വിവരണങ്ങൾ:
هٰذِهٖ جَهَنَّمُ الَّتِیْ كُنْتُمْ تُوْعَدُوْنَ ۟
ಇದುವೇ ನಿಮಗೆ ಮುನ್ನೆಚ್ಚರಿಕೆ ನೀಡಲಾಗುತ್ತಿದ್ದ ನರಕವಾಗಿದೆ.
അറബി ഖുർആൻ വിവരണങ്ങൾ:
اِصْلَوْهَا الْیَوْمَ بِمَا كُنْتُمْ تَكْفُرُوْنَ ۟
ನೀವು ನಿಮ್ಮ ಸತ್ಯನಿಷೇಧದ ಫಲವಾಗಿ ಅದರೊಳಗೆ ಪ್ರವೇಶಿಸಿರಿ.
അറബി ഖുർആൻ വിവരണങ്ങൾ:
اَلْیَوْمَ نَخْتِمُ عَلٰۤی اَفْوَاهِهِمْ وَتُكَلِّمُنَاۤ اَیْدِیْهِمْ وَتَشْهَدُ اَرْجُلُهُمْ بِمَا كَانُوْا یَكْسِبُوْنَ ۟
ಇಂದು ನಾವು ಅವರ ಬಾಯಿಗಳಿಗೆ ಮುದ್ರೆಯೊತ್ತುವೆವು ಮತ್ತು ಅವರ ಕÉÊಗಳು ನಮ್ಮೊಂದಿಗೆ ಮಾತನಾಡಲಿವೆ ಮತ್ತÄ ಅವರು ಮಾಡುತ್ತಿದ್ದಂತಹ ಕರ್ಮಗಳ ಕುರಿತು ಅವರ ಕಾಲುಗಳು ಸಾಕ್ಷಿವಹಿಸಲಿವೆ.
അറബി ഖുർആൻ വിവരണങ്ങൾ:
وَلَوْ نَشَآءُ لَطَمَسْنَا عَلٰۤی اَعْیُنِهِمْ فَاسْتَبَقُوا الصِّرَاطَ فَاَنّٰی یُبْصِرُوْنَ ۟
ನಾವು ಇಚ್ಚಿಸುತ್ತಿದ್ದರೆ ಅವರ ಕಣ್ಣುಗಳನ್ನು ಅಳಿಸಿಬಿಡುತ್ತಿದ್ದೆವು. ತರುವಾಯ ಅವರು ಮಾರ್ಗದಲ್ಲಿ ಮುನ್ನಡೆಯುತ್ತಿದ್ದರೆ ಅವರಿಗೆ ನೋಡಲು ಸಾಧ್ಯವಾಗುವುದಾದರೂ ಹೇಗೆ ?
അറബി ഖുർആൻ വിവരണങ്ങൾ:
وَلَوْ نَشَآءُ لَمَسَخْنٰهُمْ عَلٰی مَكَانَتِهِمْ فَمَا اسْتَطَاعُوْا مُضِیًّا وَّلَا یَرْجِعُوْنَ ۟۠
ಮತ್ತು ನಾವು ಇಚ್ಛಿಸುತ್ತಿದ್ದರೆ ಅವರ ಸ್ಥಳದಲ್ಲೇ ಅವರನ್ನು ವಿರೂಪಗೊಳಿಸಿ ಬಿಡುತ್ತಿದ್ದೆವು. ಅನಂತರ ಅವರಿಗೆ ಮುಂದೆ ಚಲಿಸಲಿಕ್ಕೂ, ಹಿಂದೆ ಮರಳಿ ಬರಲಿಕ್ಕೂ ಸಾಧ್ಯವಾಗುತ್ತಿರಲಿಲ್ಲ.
അറബി ഖുർആൻ വിവരണങ്ങൾ:
وَمَنْ نُّعَمِّرْهُ نُنَكِّسْهُ فِی الْخَلْقِ ؕ— اَفَلَا یَعْقِلُوْنَ ۟
ಯಾರಿಗೆ ನಾವು ದೀರ್ಘಾಯುಷ್ಯವನ್ನು ನೀಡುತ್ತೇವೋ ಅವನ ಪ್ರಕೃತಿಯನ್ನು ದೌರ್ಬಲ್ಯದೆಡೆಗೆ ಮರಳಿಸುವೆವು. ಹಾಗಿದ್ದೂ ಅವರು ಅರಿತುಕೊಳ್ಳುವುದಿಲ್ಲವೇ?
അറബി ഖുർആൻ വിവരണങ്ങൾ:
وَمَا عَلَّمْنٰهُ الشِّعْرَ وَمَا یَنْۢبَغِیْ لَهٗ ؕ— اِنْ هُوَ اِلَّا ذِكْرٌ وَّقُرْاٰنٌ مُّبِیْنٌ ۟ۙ
ನಾವು ಪೈಗಂಬರರಿಗೆ ಕವನವನ್ನು ಕಲಿಸಿಲ್ಲ. ಅದು ಅವರಿಗೆ ಭೂಷಣವೂ ಅಲ್ಲ. ಇದು ಒಂದು ಉಪದೇಶ ಮತ್ತು ಸÀ್ಪಷ್ಟ ಕುರ್‌ಆನ್ ಮಾತ್ರವಾಗಿದೆ.
അറബി ഖുർആൻ വിവരണങ്ങൾ:
لِّیُنْذِرَ مَنْ كَانَ حَیًّا وَّیَحِقَّ الْقَوْلُ عَلَی الْكٰفِرِیْنَ ۟
ಇದು ಜೀವಂತವಾಗಿರುವ ಪ್ರತಿಯೊಬ್ಬ ವ್ಯಕ್ತಿಗೆ ಎಚ್ಚರಿಕೆ ನೀಡಲೆಂದು ಮತ್ತು ಸತ್ಯನಿಷೇಧಿಗಳ ಮೇಲೆ ಶಿಕ್ಷೆಯ ವಚನ ಸಾಬೀತಾಗಲೆಂದಾಗಿದೆ.
അറബി ഖുർആൻ വിവരണങ്ങൾ:
 
പരിഭാഷ അദ്ധ്യായം: യാസീൻ
സൂറത്തുകളുടെ സൂചിക പേജ് നമ്പർ
 
വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി - വിവർത്തനങ്ങളുടെ സൂചിക

വിവർത്തനം - ശൈഖ് ബഷീർ മൈസൂരി. മർകസ് റുവാദ് തർജമയുടെ മേൽനോട്ടത്തിൽ വികസിപ്പിച്ചത്.

അടക്കുക