Check out the new design

വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി * - വിവർത്തനങ്ങളുടെ സൂചിക


പരിഭാഷ അദ്ധ്യായം: സ്സ്വാഫ്ഫാത്ത്   ആയത്ത്:
مَا لَكُمْ لَا تَنَاصَرُوْنَ ۟
ನಿಮಗೇನಾಗಿದೆ: ನೀವು (ಈಗ) ಪರಸ್ಪರ ಸಹಾಯ ಮಾಡುತ್ತಿಲ್ಲವಲ್ಲ ?
അറബി ഖുർആൻ വിവരണങ്ങൾ:
بَلْ هُمُ الْیَوْمَ مُسْتَسْلِمُوْنَ ۟
ಅಲ್ಲ! ಅವರು ಇಂದು ಸಂಪೂರ್ಣ ಶರಣಾಗತರಾಗಿದ್ದಾರೆ.
അറബി ഖുർആൻ വിവരണങ്ങൾ:
وَاَقْبَلَ بَعْضُهُمْ عَلٰی بَعْضٍ یَّتَسَآءَلُوْنَ ۟
ಆ ಬಳಿಕ ಅವರು ಪರಸ್ಪರ ಮುಂದಾಗಿ ಪ್ರಶ್ನಿಸತೊಡಗುವರು.
അറബി ഖുർആൻ വിവരണങ്ങൾ:
قَالُوْۤا اِنَّكُمْ كُنْتُمْ تَاْتُوْنَنَا عَنِ الْیَمِیْنِ ۟
ನೀವು ನಮ್ಮ ಬಳಿಗೆ ಬಲಭಾಗದಿಂದ ಬರುತ್ತಿದ್ದಿರಲ್ಲವೇ ಎಂದು ಹೇಳುವರು.
അറബി ഖുർആൻ വിവരണങ്ങൾ:
قَالُوْا بَلْ لَّمْ تَكُوْنُوْا مُؤْمِنِیْنَ ۟ۚ
ಅವರು ಉತ್ತರಿಸುವರು ಅಲ್ಲ! ನೀವೇ ಸತ್ಯವಿಶ್ವಾಸಿಗಳಾಗಿರಲಿಲ್ಲ.
അറബി ഖുർആൻ വിവരണങ്ങൾ:
وَمَا كَانَ لَنَا عَلَیْكُمْ مِّنْ سُلْطٰنٍ ۚ— بَلْ كُنْتُمْ قَوْمًا طٰغِیْنَ ۟
ಮತ್ತು ನಿಮ್ಮ ಮೇಲೆ ನಮ್ಮ ಯಾವ ಬಲವಂತವೂ ಇರಲಿಲ್ಲ. ಬದಲಾಗಿ ನೀವು ಅತಿಕ್ರಮಿಸಿದ ಜನಾಂಗವಾಗಿದ್ದಿರಿ.
അറബി ഖുർആൻ വിവരണങ്ങൾ:
فَحَقَّ عَلَیْنَا قَوْلُ رَبِّنَاۤ ۖۗ— اِنَّا لَذَآىِٕقُوْنَ ۟
ಆದುದರಿಂದ ನಮ್ಮ ಮೇಲೆ ನಮ್ಮ ಪ್ರಭುವಿನ ವಚನವು ನಿಜವಾಗಿ ಬಿಟ್ಟಿದೆ. ಖಂಡಿತವಾಗಿಯೂ ನಾವು ಯಾತನೆಯನ್ನು ಸವಿಯಲೇ ಬೇಕು.
അറബി ഖുർആൻ വിവരണങ്ങൾ:
فَاَغْوَیْنٰكُمْ اِنَّا كُنَّا غٰوِیْنَ ۟
ಹೀಗೆ ನಾವು ನಿಮ್ಮನ್ನು ದಾರಿಗೆಡಿಸಿದ್ದೇವೆ. ಸ್ವತಃ ನಾವೂ ದಾರಿಗೆಟ್ಟವರಾಗಿದ್ದೆವು.
അറബി ഖുർആൻ വിവരണങ്ങൾ:
فَاِنَّهُمْ یَوْمَىِٕذٍ فِی الْعَذَابِ مُشْتَرِكُوْنَ ۟
ಆದ್ದರಿಂದ ಇಂದು ಅವರೆಲ್ಲರೂ ಯಾತನೆಯಲ್ಲಿ ಪಾಲುದಾರರಾಗಿರುವರು.
അറബി ഖുർആൻ വിവരണങ്ങൾ:
اِنَّا كَذٰلِكَ نَفْعَلُ بِالْمُجْرِمِیْنَ ۟
ಖಂಡಿತವಾಗಿಯು ನಾವು ಅಪರಾಧಿಗಳೊಂದಿಗೆ ಹೀಗೆ ಮಾಡುವೆವು.
അറബി ഖുർആൻ വിവരണങ്ങൾ:
اِنَّهُمْ كَانُوْۤا اِذَا قِیْلَ لَهُمْ لَاۤ اِلٰهَ اِلَّا اللّٰهُ یَسْتَكْبِرُوْنَ ۟ۙ
ಅಲ್ಲಾಹನ ಹೊರತು ಇನ್ನಾವ ಆರಾಧ್ಯನಿಲ್ಲ ಎಂದು ಅವರೊಂದಿಗೆ ಹೇಳಲಾದರೆ ಅವರು ದರ್ಪತೋರುತ್ತಿದ್ದರು.
അറബി ഖുർആൻ വിവരണങ്ങൾ:
وَیَقُوْلُوْنَ اَىِٕنَّا لَتَارِكُوْۤا اٰلِهَتِنَا لِشَاعِرٍ مَّجْنُوْنٍ ۟ؕ
ನಾವು ಒಬ್ಬ ಹುಚ್ಚು ಕವಿಗಾಗಿ ನಮ್ಮ ಆರಾಧ್ಯರನ್ನು ಬಿಟ್ಟು ಬಿಡಬೇಕೇ ? ಎಂದು ಹೇಳುತ್ತಿದ್ದರು.
അറബി ഖുർആൻ വിവരണങ്ങൾ:
بَلْ جَآءَ بِالْحَقِّ وَصَدَّقَ الْمُرْسَلِیْنَ ۟
ಹಾಗಲ್ಲ ಬದಲಾಗಿ ಪ್ರವಾದಿಯು ಸತ್ಯಧರ್ಮವನ್ನು ತಂದಿರುತ್ತಾರೆ ಮತ್ತು ಸಂದೇಶವಾಹಕರ ಸತ್ಯತೆಯನ್ನು ದೃಢೀಕರಿಸಿದ್ದಾರೆ.
അറബി ഖുർആൻ വിവരണങ്ങൾ:
اِنَّكُمْ لَذَآىِٕقُوا الْعَذَابِ الْاَلِیْمِ ۟ۚ
ಖಂಡಿತವಾಗಿಯೂ ನೀವು ವೇದನಾಜನಕ ಶಿಕ್ಷೆಯನ್ನು ಸವಿಯಲಿರುವಿರಿ.
അറബി ഖുർആൻ വിവരണങ്ങൾ:
وَمَا تُجْزَوْنَ اِلَّا مَا كُنْتُمْ تَعْمَلُوْنَ ۟ۙ
ನೀವು ಮಾಡುತ್ತಿದ್ದ ಕರ್ಮಗಳ ಫಲವನ್ನೇ ನಿಮಗೆ ನೀಡಲಾಗುವುದು.
അറബി ഖുർആൻ വിവരണങ്ങൾ:
اِلَّا عِبَادَ اللّٰهِ الْمُخْلَصِیْنَ ۟
ಅಲ್ಲಾಹನ ನಿಷ್ಟವಂತರಾದ ಆಯ್ದ ದಾಸರ ಹೊರತು.
അറബി ഖുർആൻ വിവരണങ്ങൾ:
اُولٰٓىِٕكَ لَهُمْ رِزْقٌ مَّعْلُوْمٌ ۟ۙ
ಅವರಿಗೆ ನಿಶ್ಚಿತ ಜೀವನಾಧಾರವಿರುವುದು.
അറബി ഖുർആൻ വിവരണങ്ങൾ:
فَوَاكِهُ ۚ— وَهُمْ مُّكْرَمُوْنَ ۟ۙ
ಹಣ್ಣು ಹಂಪಲುಗಳಿರುವುವು ಮತ್ತು ಅವರು ಆದರಣೀಯರೂ, ಮಾನ್ಯರೂ ಆಗಿರುವರು.
അറബി ഖുർആൻ വിവരണങ്ങൾ:
فِیْ جَنّٰتِ النَّعِیْمِ ۟ۙ
ಅನುಗ್ರಹಪೂರ್ಣ ಸ್ವರ್ಗೋದ್ಯಾನಗಳಲ್ಲಿ…..
അറബി ഖുർആൻ വിവരണങ്ങൾ:
عَلٰی سُرُرٍ مُّتَقٰبِلِیْنَ ۟
ಅಲಂಕೃತ ಮಂಚಗಳ ಮೇಲೆ ಎದುರು ಬದುರಾಗಿ ಕುಳಿತಿರುವರು.
അറബി ഖുർആൻ വിവരണങ്ങൾ:
یُطَافُ عَلَیْهِمْ بِكَاْسٍ مِّنْ مَّعِیْنٍ ۟ۙ
ಹರಿಯುತ್ತಿರುವ ಚಿಲುಮೆಯಿಂದ ಮದ್ಯದ, ಪಾನಪಾತ್ರೆಗಳನ್ನು ಅವರ ಸುತ್ತ ತರಲಾಗುವುದು.
അറബി ഖുർആൻ വിവരണങ്ങൾ:
بَیْضَآءَ لَذَّةٍ لِّلشّٰرِبِیْنَ ۟ۚ
ಅದು ಪರಿಶುದ್ಧವಾಗಿರುವುದು, ಕುಡಿಯುವವರಿಗೆ ರುಚಿಕರವಾಗಿರುವುದು.
അറബി ഖുർആൻ വിവരണങ്ങൾ:
لَا فِیْهَا غَوْلٌ وَّلَا هُمْ عَنْهَا یُنْزَفُوْنَ ۟
ಅದರಿಂದ ತಲೆ ಬೇನೆ ಉಂಟಾಗದು, ಮತ್ತು ಅದರಿಂದ ಅವರಿಗೆ ಅಮಲೇರಲಾರದು.
അറബി ഖുർആൻ വിവരണങ്ങൾ:
وَعِنْدَهُمْ قٰصِرٰتُ الطَّرْفِ عِیْنٌ ۟ۙ
ಮತ್ತು ಅವರ ಬಳಿ ದೃಷ್ಟಿ ತಗ್ಗಿಸಿರುವ, ದೊಡ್ಡ ಕಣ್ಣುಗಳುಳ್ಳ ಅಪ್ಸರೆಯರು ಇರುವರು.
അറബി ഖുർആൻ വിവരണങ്ങൾ:
كَاَنَّهُنَّ بَیْضٌ مَّكْنُوْنٌ ۟
ಅವರು ಬಚ್ಚಿಡಲಾದ ಮೊಟ್ಟೆಗಳಂತಿರುವರು.
അറബി ഖുർആൻ വിവരണങ്ങൾ:
فَاَقْبَلَ بَعْضُهُمْ عَلٰی بَعْضٍ یَّتَسَآءَلُوْنَ ۟
ಸ್ವರ್ಗವಾಸಿಗಳು ಒಬ್ಬರನ್ನೊಬ್ಬರು ಉದ್ದೇಶಿಸುತ್ತಾ ಕೇಳುವರು:
അറബി ഖുർആൻ വിവരണങ്ങൾ:
قَالَ قَآىِٕلٌ مِّنْهُمْ اِنِّیْ كَانَ لِیْ قَرِیْنٌ ۟ۙ
ಅವರಲ್ಲೊಬ್ಬನು ಹೇಳುವನು: (ಭೂ ಲೋಕದಲ್ಲಿ) ನನಗೊಬ್ಬ ಸಂಗಾತಿಯಿದ್ದನು.
അറബി ഖുർആൻ വിവരണങ്ങൾ:
 
പരിഭാഷ അദ്ധ്യായം: സ്സ്വാഫ്ഫാത്ത്
സൂറത്തുകളുടെ സൂചിക പേജ് നമ്പർ
 
വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി - വിവർത്തനങ്ങളുടെ സൂചിക

വിവർത്തനം - ശൈഖ് ബഷീർ മൈസൂരി. മർകസ് റുവാദ് തർജമയുടെ മേൽനോട്ടത്തിൽ വികസിപ്പിച്ചത്.

അടക്കുക