Check out the new design

വിശുദ്ധ ഖുർആൻ പരിഭാഷ - കന്നഡ പരിഭാഷ - ഹംസ പുത്തൂർ * - വിവർത്തനങ്ങളുടെ സൂചിക

PDF XML CSV Excel API
Please review the Terms and Policies

പരിഭാഷ അദ്ധ്യായം: ഹൂദ്   ആയത്ത്:
قَالَ یٰقَوْمِ اَرَءَیْتُمْ اِنْ كُنْتُ عَلٰی بَیِّنَةٍ مِّنْ رَّبِّیْ وَاٰتٰىنِیْ مِنْهُ رَحْمَةً فَمَنْ یَّنْصُرُنِیْ مِنَ اللّٰهِ اِنْ عَصَیْتُهٗ ۫— فَمَا تَزِیْدُوْنَنِیْ غَیْرَ تَخْسِیْرٍ ۟
ಸ್ವಾಲಿಹ್ ಹೇಳಿದರು: “ಓ ನನ್ನ ಜನರೇ! ನೀವು ಆಲೋಚಿಸಿ ನೋಡಿದ್ದೀರಾ? ನಾನು ನನ್ನ ಪರಿಪಾಲಕನ (ಅಲ್ಲಾಹನ) ಕಡೆಯ ಒಂದು ಸ್ಪಷ್ಟ ಆಧಾರದ ಮೇಲೆ ನಿಂತಿರುವಾಗ ಮತ್ತು ಅವನು ತನ್ನ ದಯೆಯನ್ನು ನನಗೆ ದಯಪಾಲಿಸಿರುವಾಗ, ನಾನು ಅವನು ಹೇಳಿದಂತೆ ಕೇಳದಿದ್ದರೆ ಅವನಿಂದ ನನ್ನನ್ನು ರಕ್ಷಿಸುವವರು ಯಾರು? ನೀವು ನನಗೆ ನಷ್ಟವನ್ನೇ ಹೆಚ್ಚಿಸುತ್ತಿದ್ದೀರಿ.
അറബി ഖുർആൻ വിവരണങ്ങൾ:
وَیٰقَوْمِ هٰذِهٖ نَاقَةُ اللّٰهِ لَكُمْ اٰیَةً فَذَرُوْهَا تَاْكُلْ فِیْۤ اَرْضِ اللّٰهِ وَلَا تَمَسُّوْهَا بِسُوْٓءٍ فَیَاْخُذَكُمْ عَذَابٌ قَرِیْبٌ ۟
ಓ ನನ್ನ ಜನರೇ! ಇದು ಅಲ್ಲಾಹನ ಒಂಟೆ. ಇದು ನಿಮಗೊಂದು ದೃಷ್ಟಾಂತವಾಗಿದೆ. ಆದ್ದರಿಂದ ಅದನ್ನು ಅಲ್ಲಾಹನ ಭೂಮಿಯಲ್ಲಿ ಮೇಯಲು ಬಿಟ್ಟುಬಿಡಿ. ಅದಕ್ಕೆ ಯಾವುದೇ ತೊಂದರೆ ಕೊಡಲು ಹೋಗಬೇಡಿ. ಕೊಟ್ಟರೆ ಸಮೀಪದಲ್ಲೇ ಇರುವ ಶಿಕ್ಷೆಯು ನಿಮ್ಮ ಮೇಲೆರಗುವುದು.”
അറബി ഖുർആൻ വിവരണങ്ങൾ:
فَعَقَرُوْهَا فَقَالَ تَمَتَّعُوْا فِیْ دَارِكُمْ ثَلٰثَةَ اَیَّامٍ ؕ— ذٰلِكَ وَعْدٌ غَیْرُ مَكْذُوْبٍ ۟
ಆದರೆ ಅವರು ಅದರ ಕಾಲುಗಳನ್ನು ಕಡಿದರು. ಆಗ ಸ್ವಾಲಿಹ್ ಹೇಳಿದರು: “ಮೂರು ದಿನಗಳವರೆಗೆ ನಿಮ್ಮ ಮನೆಗಳಲ್ಲಿ ಆನಂದವಾಗಿರಿ. ಇದು ಹುಸಿ ವಾಗ್ದಾನವಲ್ಲ.”
അറബി ഖുർആൻ വിവരണങ്ങൾ:
فَلَمَّا جَآءَ اَمْرُنَا نَجَّیْنَا صٰلِحًا وَّالَّذِیْنَ اٰمَنُوْا مَعَهٗ بِرَحْمَةٍ مِّنَّا وَمِنْ خِزْیِ یَوْمِىِٕذٍ ؕ— اِنَّ رَبَّكَ هُوَ الْقَوِیُّ الْعَزِیْزُ ۟
ನಂತರ ನಮ್ಮ ಆಜ್ಞೆಯು ಬಂದಾಗ, ನಾವು ನಮ್ಮ ದಯೆಯಿಂದ ಸ್ವಾಲಿಹ್ ಮತ್ತು ಅವರ ಜೊತೆಯಲ್ಲಿದ್ದ ಸತ್ಯವಿಶ್ವಾಸಿಗಳನ್ನು ರಕ್ಷಿಸಿದೆವು. ಆ ದಿನದ ಅವಮಾನದಿಂದಲೂ ಅವರನ್ನು ರಕ್ಷಿಸಿದೆವು. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಶಕ್ತಿಶಾಲಿ ಮತ್ತು ಪ್ರಬಲನಾಗಿದ್ದಾನೆ.
അറബി ഖുർആൻ വിവരണങ്ങൾ:
وَاَخَذَ الَّذِیْنَ ظَلَمُوا الصَّیْحَةُ فَاَصْبَحُوْا فِیْ دِیَارِهِمْ جٰثِمِیْنَ ۟ۙ
ಆ ಅಕ್ರಮಿಗಳನ್ನು ಮಹಾ ಚೀತ್ಕಾರವು ಹಿಡಿದುಬಿಟ್ಟಿತು. ಅವರು ತಮ್ಮ ಮನೆಗಳಲ್ಲಿಯೇ ಬೋರಲು ಬಿದ್ದು ಸತ್ತರು.
അറബി ഖുർആൻ വിവരണങ്ങൾ:
كَاَنْ لَّمْ یَغْنَوْا فِیْهَا ؕ— اَلَاۤ اِنَّ ثَمُوْدَاۡ كَفَرُوْا رَبَّهُمْ ؕ— اَلَا بُعْدًا لِّثَمُوْدَ ۟۠
ಅವರು ಅಲ್ಲಿ ವಾಸಿಸಲೇ ಇಲ್ಲ ಎಂಬಂತೆ ನಾಶವಾದರು. ತಿಳಿಯಿರಿ! ನಿಶ್ಚಯವಾಗಿಯೂ ಸಮೂದ್ ಗೋತ್ರದವರು ಅವರ ಪರಿಪಾಲಕನ್ನು (ಅಲ್ಲಾಹನನ್ನು) ನಿಷೇಧಿಸಿದರು. ತಿಳಿಯಿರಿ! ಸಮೂದ್ ಗೋತ್ರದವರು (ಅಲ್ಲಾಹನ ದಯೆಯಿಂದ) ದೂರವಾದರು.
അറബി ഖുർആൻ വിവരണങ്ങൾ:
وَلَقَدْ جَآءَتْ رُسُلُنَاۤ اِبْرٰهِیْمَ بِالْبُشْرٰی قَالُوْا سَلٰمًا ؕ— قَالَ سَلٰمٌ فَمَا لَبِثَ اَنْ جَآءَ بِعِجْلٍ حَنِیْذٍ ۟
ನಮ್ಮ ದೂತರು ಇಬ್ರಾಹೀಮರ ಬಳಿಗೆ ಸುವಾರ್ತೆಯೊಂದಿಗೆ ಬಂದರು. ಅವರು (ದೂತರು) ಸಲಾಂ ಹೇಳಿದರು. ಇಬ್ರಾಹೀಮ್ ಸಲಾಂಗೆ ಉತ್ತರಿಸಿದರು. ನಂತರ ತಡಮಾಡದೆ ಒಂದು ಕರುವನ್ನು ಹುರಿದು ತಂದರು.
അറബി ഖുർആൻ വിവരണങ്ങൾ:
فَلَمَّا رَاٰۤ اَیْدِیَهُمْ لَا تَصِلُ اِلَیْهِ نَكِرَهُمْ وَاَوْجَسَ مِنْهُمْ خِیْفَةً ؕ— قَالُوْا لَا تَخَفْ اِنَّاۤ اُرْسِلْنَاۤ اِلٰی قَوْمِ لُوْطٍ ۟ؕ
ಆದರೆ ಅವರು (ದೂತರು) ತಮ್ಮ ಕೈಗಳನ್ನು ಅದರ ಕಡೆಗೆ ಚಾಚದಿರುವುದನ್ನು ಕಂಡಾಗ ಇಬ್ರಾಹೀಮ‌ರಿಗೆ ಅವರು ಅಪರಿಚಿತರಂತೆ ಭಾಸವಾಯಿತು ಮತ್ತು ಅವರ ಬಗ್ಗೆ ಗಾಬರಿಯಾಯಿತು.[1] ಅವರು (ದೂತರು) ಹೇಳಿದರು: “ಹೆದರಬೇಡಿ. ನಮ್ಮನ್ನು ಲೂತರ ಜನರ ಬಳಿಗೆ ಕಳುಹಿಸಲಾಗಿದೆ.”
[1] ದೇವದೂತರುಗಳು ಮನುಷ್ಯ ರೂಪದಲ್ಲಿ ಇಬ್ರಾಹೀಮರ (ಅವರ ಮೇಲೆ ಶಾಂತಿಯಿರಲಿ) ಬಳಿಗೆ ಬಂದಿದ್ದರು. ಇಬ್ರಾಹೀಂ (ಅವರ ಮೇಲೆ ಶಾಂತಿಯಿರಲಿ) ಅವರನ್ನು ಸತ್ಕರಿಸಿದರು. ಆದರೆ ಅವರು ಆಹಾರ ಸೇವಿಸದಿರುವುದನ್ನು ಕಂಡಾಗ ಇಬ್ರಾಹೀಮರಿಗೆ (ಅವರ ಮೇಲೆ ಶಾಂತಿಯಿರಲಿ) ಅವರು ಮನುಷ್ಯರಲ್ಲವೆಂದು ಸ್ಪಷ್ಟವಾಗಿ ಗಾಬರಿಯಾಯಿತು.
അറബി ഖുർആൻ വിവരണങ്ങൾ:
وَامْرَاَتُهٗ قَآىِٕمَةٌ فَضَحِكَتْ فَبَشَّرْنٰهَا بِاِسْحٰقَ ۙ— وَمِنْ وَّرَآءِ اِسْحٰقَ یَعْقُوْبَ ۟
ಅವರ ಹೆಂಡತಿ ಅಲ್ಲಿ ನಿಂತಿದ್ದರು. ಅವರು ಮುಗುಳ್ನಕ್ಕರು. ಆಗ ನಾವು ಅವರಿಗೆ ಇಸ್‍ಹಾಕರ (ಜನನದ) ಬಗ್ಗೆ ಮತ್ತು ಇಸ್‍ಹಾಕರ ಹಿಂದೆ ಯಾಕೂಬರ (ಜನನದ) ಬಗ್ಗೆ ಸುವಾರ್ತೆ ನೀಡಿದೆವು.[1]
[1] ಇಬ್ರಾಹೀಮರಿಗೆ (ಅವರ ಮೇಲೆ ಶಾಂತಿಯಿರಲಿ) ಇಬ್ಬರು ಮಕ್ಕಳು—ಇಸ್ಮಾಯೀಲ್ ಮತ್ತು ಇಸ್‌ಹಾಕ್. ಯಾಕೂಬ್ ಇಸ್‌ಹಾಕರ ಮಗ. ಇಸ್‌ಹಾಕರ ಹಿಂದೆ ಎಂದರೆ ಅವರ ವಂಶದಲ್ಲಿ ಎಂದರ್ಥ. (ಅವರೆಲ್ಲರ ಮೇಲೆ ಶಾಂತಿಯಿರಲಿ)
അറബി ഖുർആൻ വിവരണങ്ങൾ:
 
പരിഭാഷ അദ്ധ്യായം: ഹൂദ്
സൂറത്തുകളുടെ സൂചിക പേജ് നമ്പർ
 
വിശുദ്ധ ഖുർആൻ പരിഭാഷ - കന്നഡ പരിഭാഷ - ഹംസ പുത്തൂർ - വിവർത്തനങ്ങളുടെ സൂചിക

മുഹമ്മദ് ഹംസ ബതൂർ വിവർത്തനം ചെയ്തിരിക്കുന്നു. റുവാദൂത്തർജമ മർകസിൻ്റെ മേൽ നോട്ടത്തിലാണ് ഇത് വികസിപ്പിച്ചെടുത്തത്.

അടക്കുക